Heart Surgery: ಕೃತಕ ಹೃದಯದಲ್ಲಿಯೇ ಸತತ ಐದು ವರ್ಷಗಳಿಂದ ಬದುಕುತ್ತಿರುವ ಏಕೈಕ ಮಹಿಳೆ ಇವರು!

ಸೆಲ್ವಾ ಹುಸೇನ್

ಸೆಲ್ವಾ ಹುಸೇನ್

2017ರ ಜೂನ್ ತಿಂಗಳ ಒಂದು ದಿನ ಉಸಿರಾಟದ ತೊಂದರೆಗೆ ಒಳಗಾದ ಸೆಲ್ವಾ ಎಸ್ಸೆಕ್ಸ್ ನ ಕ್ಲೇಹಾಲ್‍ನಲ್ಲಿರುವ ತನ್ನ ಕುಟುಂಬ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಗೆ ಪಡೆಯಲು ಮುಂದಾದರು. ಆಗ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಆಕೆ ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದರು.

ಮುಂದೆ ಓದಿ ...
  • Share this:

ಹೃದಯ (Heart) ಎಂಬುದು ಮಾನವನ ಬದುಕಿನ ಅವಿಭಾಜ್ಯ ಅಂಗ. ಹೃದಯ ನಿಂತರೆ ಬದುಕೇ ನಿಂತಂತೆ. ಆದರೆ ಅದೇ ಹೃದಯ ಕೃತಕವಾಗಿದ್ದರೆ? ಆ ವ್ಯಕ್ತಿಯ ಬದುಕು ಹೇಗಿದ್ದೀತು? ದಿನವೂ ಭಯದಲ್ಲೇ ಜೀವಿಸಬೇಕಾದೀತು. ಆದರೆ ಇಲ್ಲೊಬ್ಬ ಮಹಿಳೆ (Women) ಕೃತಕ ಹೃದಯದಲ್ಲೇ (Artificial Heart) ಬದುಕು ಸವೆಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಬದುಕನ್ನು ಮತ್ತಷ್ಟು ಉತ್ಸಾಹದಿಂದ ಕಳೆಯುತ್ತಿದ್ದಾರೆ. ಹೌದು, ಆ ಮಹಿಳೆಯೇ ಸೆಲ್ವಾ ಹುಸೇನ್. ಇವರು ಲಂಡನ್‍ನಲ್ಲಿ (London) ನೆಲೆ ನಿಂತಿದ್ದು, ಕೃತಕ ಹೃದಯದಲ್ಲಿ ಬದುಕುತ್ತಿರುವ ಲಂಡನ್‍ನ ಮೊದಲ ಮಹಿಳೆ ಕೂಡ ಆಗಿದ್ದಾರೆ. 2017ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ (Heart Surgery) ಒಳಗಾದ ಅವರು ಸತತ ಐದು ವರ್ಷಗಳಿಂದ ಆರು ಕೆ.ಜಿ ತೂಕವಿರುವ ಕೃತಕ ಹೃದಯವಿರುವ ಬ್ಯಾಗನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಬದುಕುತ್ತಿದ್ದಾರೆ.


ಬ್ಯಾಗ್‍ನಲ್ಲಿ ಏನೇನಿದೆ?


ಬ್ಯಾಗ್‍ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‍ಗಳ ಮೂಲಕ ಗಾಳಿಯನ್ನು ಪಂಪ್ ಮಾಡುತ್ತದೆ. ಅದು ಅವಳ ಕೃತಕ ಹೃದಯ ಕೋಣೆಗಳಿಗೆ ಶಕ್ತಿ ನೀಡುತ್ತದೆ, ಈ ಮೂಲಕ ದೇಹದಲ್ಲೆಲ್ಲಾ ರಕ್ತ ಸಂಚಾರಗೊಳ್ಳುತ್ತದೆ. ಈ ರೀತಿಯಾಗಿ ಸತತ ಐದು ವರ್ಷಗಳಿಂದ ಬದುಕುತ್ತಿದ್ದಾರೆ. 2017ರ ಜೂನ್ ತಿಂಗಳ ಒಂದು ದಿನ ಉಸಿರಾಟದ ತೊಂದರೆಗೆ ಒಳಗಾದ ಸೆಲ್ವಾ ಎಸ್ಸೆಕ್ಸ್ ನ ಕ್ಲೇಹಾಲ್‍ನಲ್ಲಿರುವ ತನ್ನ ಕುಟುಂಬ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಗೆ ಪಡೆಯಲು ಮುಂದಾದರು. ಆಗ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಆಕೆ ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದರು.


ಸಾಂದರ್ಭಿಕ ಚಿತ್ರ


ಸಾವು ಬದುಕಿನ ನಡುವೆಯೂ ಬದುಕಿದರು!


ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಸೆಲ್ವಾ ಅವರ ಜೀವ ಉಳಿಸಲು ಹರಸಾಹಸ ಪಡುತ್ತಿದ್ದ ವೈದ್ಯರು ನಾಲ್ಕು ದಿನಗಳ ನಂತರ ಆಕೆಯನ್ನು ಹರ್‍ಫೀಲ್ಡ್ ಆಸ್ಪತ್ರೆಗೆ ಸಾಗಿಸಿದರು. ರಕ್ತ ಸಂಚಾರಕ್ಕೆ ಸಹಾಯ ಮಾಡುವ ಪಂಪ್ ದುರ್ಬಲವಾಗಿದ್ದ ಕಾರಣ ಆಕೆ ಬಹಳಷ್ಟು ಅಸ್ವಸ್ಥಳಾಗಿದ್ದರು. ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಸಾಧ್ಯವಾಗದಷ್ಟು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರ ಪತಿಯು ಕೂಡ ಕೃತಕ ಹೃದಯ ಅಳವಡಿಸುವ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡ ಬಳಿಕ ಕೃತಕ ಹೃದಯವನ್ನು ಅಳವಡಿಸಲಾಯಿತು.


ವೈದ್ಯರು ಅವರ ನಿಜವಾದ ಹೃದಯವನ್ನು ತೆಗೆದುಹಾಕಿ ಅದರ ಬದಲು ಕೃತಕ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಯಿತು. ಅಂದಿನಿಂದ ಇಂದಿನವರೆಗೂ ನಿತ್ಯವೂ ಕೃತಕ ಹೃದಯ ಕೆಲಸ ಮಾಡಲು ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಹೆಗಲ ಮೇಲೆ ಹೊತ್ತು ತಿರುಗುತ್ತಾ ಜೀವಿಸುತ್ತಿದ್ದಾರೆ.


ಎರಡು ಬ್ಯಾಕಪ್?


ಅಕಸ್ಮಾತ್ ಒಂದು ವಿಫಲವಾದರೆ ಮತ್ತೊಂದು ಇರಲಿ ಎಂಬಂತೆ ಬೆನ್ನಿನ ಮೇಲೆ ಮತ್ತೊಂದನ್ನು ಒಯ್ಯುತ್ತಾರೆ. ಏನಾದರೂ ತುರ್ತು ಪರಿಸ್ಥಿತಿ ಎದುರಾದಲ್ಲಿ, ಅವರನ್ನು ಬ್ಯಾಕಪ್ ಯಂತ್ರಕ್ಕೆ ಸಂಪರ್ಕಿಸಲು ಅವರಿಗೆ ಕೇವಲ 90 ಸೆಕೆಂಡುಗಳು ಮಾತ್ರ ಇರುತ್ತವೆ. ಹಾಗಾಗಿ ಆಕೆಯ ಪತಿ ಅಥವಾ ಯಾರಾದರೊಬ್ಬರು ಯಾವಾಗಲೂ ಸೆಲ್ವಾ ಅವರೊಂದಿಗೆ ಇರಲೇಬೇಕಾಗುತ್ತದೆ. ಕೃತಕ ಹೃದಯವು ಅವರ ದೇಹಕ್ಕೆ ನಿಮಿಷಕ್ಕೆ 138 ಬಡಿತಗಳ ಲಯದಲ್ಲಿ ರಕ್ತವನ್ನು ಸಂಚಾರವಾಗುವಂತೆ ಮಾಡುತ್ತದೆ. ಇದರಿಂದ ಅವರ ಎದೆ ಕಂಪಿಸುತ್ತದೆ. ಅವರ ಬೆನ್ನಿನ ಮೇಲಿರುವ ಮೋಟಾರ್ ನಿರಂತರವಾಗಿ ಪಂಪ್ ಮಾಡುತ್ತಲೇ ಇರುತ್ತದೆ.


ಕಾರ್ಯನಿರ್ವಹಣೆ ಹೇಗೆ?


ಸೆಲ್ವಾ ಹೊತ್ತಿರುವ ಬ್ಯಾಗ್‍ಗೆ ಎರಡು ದೊಡ್ಡ ಪ್ಲಾಸ್ಟಿಕ್ ಟ್ಯೂಬ್‍ಗಳು ಸಂಪರ್ಕ ಕಲ್ಪಿಸಲಾಗಿರುತ್ತದೆ. ಇದು ಅವರ ಹೊಟ್ಟೆಯ ಮೂಲಕ ಅವರ ದೇಹವನ್ನು ಪ್ರವೇಶಿಸಿ ಎದೆಯವರೆಗೂ ಇರುತ್ತವೆ. ನಂತರ ಅವರು ಅವರ ಎದೆಯೊಳಗೆ ಗಾಳಿಯಿಂದ ತುಂಬಿದ ಎರಡು ಬಲೂನ್‍ಗಳನ್ನು ಜೋಡಿಸಿರುತ್ತಾರೆ. ಅದು ಅವರ ದೇಹಕ್ಕೆಲ್ಲಾ ರಕ್ತ ಸಂಚಾರ ಮಾಡುವ ನೈಜ ಹೃದಯದ ಕೋಣೆಗಳಂತೆ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: Blockages In Heart: ಹೃದಯ ನಾಳಗಳಲ್ಲಿನ ಅಡೆತಡೆಗಳನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ; 'ಪರಿಧಮನಿ ಬೈಪಾಸ್ ಗ್ರಾಫ್ಟಿಂಗ್' ಬಗ್ಗೆ ಕಂಪ್ಲೀಟ್ ಡಿಟೇಲ್ಸ್


ಎಷ್ಟು ವೆಚ್ಚ? ಎಷ್ಟು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ?


ಅಮೆರಿಕದ ಕಂಪನಿಯೊಂದು 86,000 ಪೌಂಡ್ (88.72 ಲಕ್ಷ ರೂ.) ವೆಚ್ಚದ ಕೃತಕ ಹೃದಯವನ್ನು ತಯಾರಿಸಿದ್ದು, ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಸೆಲ್ವಾ ಅವರ ದೇಹದೊಳಗೆ ಕೃತಕ ಹೃದಯವನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆಯನ್ನು ಡಾ.ಡಯಾನಾ ಗಾರ್ಸಿಯಾ ಸಾಯೆಜ್ ನಿರ್ವಹಿಸಿದರು ಮತ್ತು ಹೇರ್‍ಫೀಲ್ಡ್‍ನ ಕಸಿ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಆಂಡ್ರೆ ಸೈಮನ್ ಸಹಾಯ ಮಾಡಿದರು.

top videos
    First published: