ದೆಹಲಿ ಅಗ್ನಿ ದುರಂತದಲ್ಲಿ ಜೀವದ ಹಂಗು ತೊರೆದು 11 ಜನರನ್ನು ರಕ್ಷಿಸಿದ ರಿಯಲ್ ಹಿರೋ; ಗೃಹ ಸಚಿವರಿಂದ ಶ್ಲಾಘನೆ

ರಾಜೇಶ್ ಶುಕ್ಲಾ ನಿಜವಾದ ಹಿರೋ. ಘಟನಾ ಸ್ಥಳಕ್ಕೆ ಮೊದಲಿಗೆ ಅವರೊಬ್ಬರೇ ಬಂದು 11 ಜನರ ಜೀವ ಕಾಪಾಡಿದ್ದಾರೆ. ಅವರ ಮೂಳೆಗೆ ಪೆಟ್ಟುಬೀಳುವವರೆಗೂ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಧೈರ್ಯಶಾಲಿ ನಾಯಕನಿಗೆ ನನ್ನದೊಂದು ನಮಸ್ಕಾರ ಎಂದು ಸಚಿವ ಸತ್ಯೇಂದ್ರ ಜೈನ್ ಟ್ವೀಟ್ ಮಾಡಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ಅವರನ್ನು ಭೇಟಿಯಾದ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್.

ಅಗ್ನಿ ಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ಅವರನ್ನು ಭೇಟಿಯಾದ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್.

  • Share this:
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಝಾನ್ಸಿರಾಣಿ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಗೋದಾಮಿನ ಬಹುಮಹಡಿ ಕಟ್ಟಡದಲ್ಲಿ ಇಂದು ಸಂಭವಿಸಿದ ಅಗ್ನಿ ದುರಂತಕ್ಕೆ 43 ಮಂದಿ ಸಾವನ್ನಪ್ಪಿ, 21 ಜನ ಗಂಭೀರ ಗಾಯಕ್ಕೆ ತುತ್ತಾದ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತೋರಿದ ಧೈರ್ಯ, ಸಾಹಸದಿಂದಾಗಿ 11 ಮಂದಿ ಬದುಕುಳಿದಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳಲ್ಲಿ ರಾಜೇಶ್ ಶುಕ್ಲಾ ಎಂಬುವವರು ಮೊದಲು ಬೆಂಕಿ ಕೆನ್ನಾಲಿಗೆಗೆ ಸಿಲುಕಿದ್ದ ಕಟ್ಟಡದೊಳಗೆ ಮೊದಲು ನುಗ್ಗಿದ್ದಾರೆ. ಬಳಿಕ 11 ಜನರನ್ನು ಕಟ್ಟಡದೊಳಗಿದ್ದವರನ್ನು ಹೊರಗೆ ಕರೆತಂದಿದ್ದಾರೆ. ಅವರಿಗೆಲ್ಲಾ ಬೆಂಕಿಯಿಂದಾಗಿ ಸಣ್ಣಪುಟ್ಟ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆ ವೇಳೆ  ರಾಜೇಶ್ ಶುಕ್ಲಾ ಅವರ ಕಾಲಿಗೂ ಗಾಯವಾಗಿದೆ. ಸದ್ಯ ಗಾಯಾಗಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್​ ಅವರು ರಾಜೇಶ್ ಶುಕ್ಲಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ರಾಜೇಶ್ ಶುಕ್ಲಾ ನಿಜವಾದ ಹಿರೋ. ಘಟನಾ ಸ್ಥಳಕ್ಕೆ ಮೊದಲಿಗೆ ಅವರೊಬ್ಬರೇ ಬಂದು 11 ಜನರ ಜೀವ ಕಾಪಾಡಿದ್ದಾರೆ. ಅವರ ಮೂಳೆಗೆ ಪೆಟ್ಟುಬೀಳುವವರೆಗೂ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಧೈರ್ಯಶಾಲಿ ನಾಯಕನಿಗೆ ನನ್ನದೊಂದು ನಮಸ್ಕಾರ ಎಂದು ಸಚಿವ ಸತ್ಯೇಂದ್ರ ಜೈನ್ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ದೆಹಲಿ ಬೆಂಕಿ ದುರಂತಕ್ಕೆ 43 ಬಲಿ; ಶೋಕ ಸಾಗರದಲ್ಲಿ ಭಾರತ, ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಕೇಜ್ರಿವಾಲ್

First published: