10 ವರ್ಷಗಳ ಕಾಲ ಹುಡುಗನ ವೇಷ ಧರಿಸಿ ತಾಲಿಬಾನಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿಟ್ಟ ಹುಡುಗಿ ನಾದಿಯಾ ಗುಲಾಂ..!

ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳನ್ನು, ಷರತ್ತುಗಳನ್ನು ಹೇರಿರುವ ಈ ನಾಡಿನಲ್ಲಿ ನಾದಿಯಾ ಗುಲಾಂ 10 ವರ್ಷಗಳ ಕಾಲ ಹುಡುಗನ ವೇಷ ಧರಿಸಿ ತಾಲಿಬಾನಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ಬುರ್ಖಾ ಹಿಜಾಬ್ ಇಲ್ಲದೆಯೇ ತಾಲಿಬಾನಿಗಳ ಎದುರು ತಿರುಗಾಡುತ್ತಿದ್ದರು.

ನಾದಿಯಾ ಗುಲಾಂ

ನಾದಿಯಾ ಗುಲಾಂ

  • Share this:

ಅಪ್ಘನ್ ನೆಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿಡಿರುವ ತಾಲಿಬಾನಿಗಳ ದಬ್ಬಾಳಿಕೆಗೆ ಸಂಪೂರ್ಣ ವಿಶ್ವವೇ ಬೆಚ್ಚಿಬಿದ್ದಿದೆ. ಏನೂ ಮಾಡಲು ಹೇಸದ ಈ ಪಾತಕಿಗಳ ಕ್ರೌರ್ಯದ ಕತೆಗಳು ಬಿಚ್ಚಿಕೊಳ್ಳುತ್ತಲೇ ಇದೆ. ನಾವು ಯಾರಿಗೂ ಏನೂ ಹಾನಿ ಮಾಡುವುದಿಲ್ಲ ಎಂದು ಹೇಳಿಕೊಂಡೇ ಅಪ್ಘಾನಿಸ್ತಾನದಲ್ಲಿ ರಕ್ತದ ಕೋಡಿಯನ್ನೇ ಹರಿಸುತ್ತಿದ್ದಾರೆ. ಅಪ್ಘಾನಿಸ್ತಾನದ ಪ್ರಜೆಗಳು ನಮ್ಮ ಆಳ್ವಿಕೆಯಲ್ಲಿ ನೆಮ್ಮದಿಯಾಗಿ ಇರಬಹುದೆಂದು ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಕ್ರೂರಿಗಳ ಆಡಳಿತದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅಪ್ಘನ್ ಪ್ರಜೆಗಳು ಸಿಕ್ಕಸಿಕ್ಕ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ತಾವು ಯಾವ ದೇಶಕ್ಕೆ ಹೋಗುತ್ತಿದ್ದೇವೆ, ಮುಂದಿನ ನಮ್ಮ ಬದುಕು ಹೇಗಿರುತ್ತದೆ ಎಂಬ ಯೋಚನೆ ಮಾಡದೆ ಇಲ್ಲಿಂದ ಕಾಲ್ಕಿತ್ತರೆ ಸಾಕು ಎಲ್ಲಿಯಾದರೂ ಬದುಕಬಹುದು ಎಂಬ ಭರವಸೆಯಿಂದ ತಮ್ಮ ತಾಯ್ನಾಡನ್ನು ತೊರೆಯುತ್ತಿದ್ದಾರೆ.


ಇನ್ನು ಕೆಲವು ಅಪ್ಘನ್ ಪ್ರಜೆಗಳು ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ತಾಲಿಬಾನಿಗಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ತಾಲಿಬಾನಿಗಳಿಗೆ ಹೆದರಿ ನಮ್ಮ ನೆಲ ತೊರೆಯುವುದಿಲ್ಲ. ಬದಲಿಗೆ ತಾಲಿಬಾನಿಗಳನ್ನೇ ಇಲ್ಲಿಂದ ಪಲಾಯನಗೈಯ್ಯುವಂತೆ ಮಾಡುತ್ತೇವೆಂಬ ಪಣ ತೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ತಾಲಿಬಾನಿಗಳ ವಿರುದ್ಧ ಕೆಲವು ವ್ಯಕ್ತಿಗಳು ನಡೆಸಿದ ಸಾಹಸದ ಕಥೆಗಳು ಇತಿಹಾಸದಿಂದ ಹೊರಬರುತ್ತಿವೆ.


ತಾಲಿಬಾನ್ ಆಡಳಿತದಲ್ಲಿ ಮಹಿಳೆಯರನ್ನು ಕನಿಷ್ಠ ಮನುಷ್ಯರು ಎಂಬಂತೆಯೂ ನೋಡದೇ ವಿಕೃತ ನಿಯಮಗಳನ್ನು ಹೇರುತ್ತಾರೆ. ಕಲ್ಲಿನಿಂದ ಹೊಡೆದು ಸಾಯಿಸುವುದು, ಬೆರಳು ಕತ್ತರಿಸುವುದು, ಛಡಿಯೇಟಿನ ಶಿಕ್ಷೆ ಹೀಗೆ ಮಹಿಳೆಯರಿಗೆ ನೀಡುವ ಶಿಕ್ಷೆಗಳನ್ನು ನೋಡಿದಾಗ ತಾಲಿಬಾನಿಗಳು ನಿಜವಾಗಲೂ ಮನುಷ್ಯರೇ ಎಂದು ಮನದಲ್ಲಿ ಮೂಡುತ್ತದೆ. ಆದರೆ ಇದೇ ತಾಲಿಬಾನಿಗಳನ್ನು ಮೂರ್ಖರನ್ನಾಗಿಸಿ ತನ್ನ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟ ಮಹಿಳೆಯೊಬ್ಬರ ಕಥೆಯೇ ಇಂದು ಪ್ರತಿಯೊಬ್ಬರಿಗೆ ಸ್ಫೂರ್ತಿಯಾಗಿದೆ. ನಾದಿಯಾ ಗುಲಾಂ ಎಂಬ ದಿಟ್ಟ ಹೆಣ್ಣುಮಗಳದ್ದು.


ಇದನ್ನೂ ಓದಿ:10 ವರ್ಷಗಳ ಕಾಲ ಹುಡುಗನ ವೇಷ ಧರಿಸಿ ತಾಲಿಬಾನಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿಟ್ಟ ಹುಡುಗಿ ನಾದಿಯಾ ಗುಲಾಂ..!

ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳನ್ನು, ಷರತ್ತುಗಳನ್ನು ಹೇರಿರುವ ಈ ನಾಡಿನಲ್ಲಿ ನಾದಿಯಾ ಗುಲಾಂ 10 ವರ್ಷಗಳ ಕಾಲ ಹುಡುಗನ ವೇಷ ಧರಿಸಿ ತಾಲಿಬಾನಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ಬುರ್ಖಾ ಹಿಜಾಬ್ ಇಲ್ಲದೆಯೇ ತಾಲಿಬಾನಿಗಳ ಎದುರು ತಿರುಗಾಡುತ್ತಿದ್ದರು. ತನ್ನ ಕುಟುಂಬವನ್ನು ಪೋಷಿಸುವುದಕ್ಕಾಗಿ ನಾದಿಯಾ ಪ್ರಾಣಕ್ಕೆ ಅಪಾಯವಿರುವ ನಿರ್ಧಾರವನ್ನು ಕೈಗೊಂಡಿದ್ದರು.


ಅಪ್ಘಾನಿಸ್ತಾನದ ಪ್ರಜೆಯಾಗಿದ್ದ ನಾದಿಯಾ ತಾಲಿಬಾನಿಗಳ ಹದ್ದುಬಸ್ತಿನ ಆಡಳಿತದಲ್ಲಿ ಹೆದರಿಕೊಂಡೇ ಕಾಲಕಳೆಯುವ ಸ್ಥಿತಿಯಲ್ಲಿದ್ದರು. ತಾಲಿಬಾನ್ ಆಡಳಿತದ ಸಮಯದಲ್ಲಿ ಎಲ್ಲಾ ಮಹಿಳೆಯರಿಗೆ ಶಿಕ್ಷಣದ ಹಕ್ಕು ಇಲ್ಲವೇ ಉದ್ಯೋಗಕ್ಕೆ ತೆರಳುವ ಹಕ್ಕನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ತನ್ನ ಕುಟುಂಬ ನೋಡಿಕೊಳ್ಳುವ ಸಲುವಾಗಿ ನಾದಿಯಾ ಪ್ರತಿ ಕ್ಷಣ ಹೆದರಿಕೆಯೊಂದಿಗೆ ಕಾಲ ಕಳೆಯಬೇಕಾಗಿತ್ತು. ತನ್ನ 8ನೇ ವಯಸ್ಸಿನಲ್ಲಿ ಆಕೆಯ ಮನೆಯ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಈ ಸಮಯದಲ್ಲಿ ಆಕೆಯ ಸಹೋದರ ಮೃತಪಟ್ಟನು.


ಈ ಬೆಳವಣಿಗೆಗಳನ್ನು ಅರಿತುಕೊಳ್ಳುತ್ತಿದ್ದ ನಾದಿಯಾ ತಾಲಿಬಾನಿಗಳನ್ನು ವಿರೋಧಿಸಿ ಬದುಕುವ ನಿರ್ಧಾರಕ್ಕೆ ಬಂದರು. ಅದಕ್ಕಾಗಿ ಉಪಾಯವಾಗಿ ಮಟ್ಟಹಾಕಬೇಕೆಂಬ ಯೋಜನೆಯನ್ನು ಮುಂದಿಟ್ಟುಕೊಂಡು ಹುಡುಗನ ವೇಷ ಧರಿಸಿದರು. ನಾದಿಯಾ ತೆಗೆದುಕೊಂಡ ನಿರ್ಧಾರ ಸುಲಭದ್ದಾಗಿರಲಿಲ್ಲ. ಆಕೆ ಪ್ರತೀ ಬಾರಿಯೂ ಅಪಾಯ ಎದುರಿಸಬೇಕಾಗಿತ್ತು. ನಾದಿಯಾ ತಮ್ಮ 11ರ ಹರೆಯದಲ್ಲಿ ಹುಡುಗನ ವೇಷ ಧರಿಸತೊಡಗಿದರು. ಕುಟುಂಬದ ರಕ್ಷಣೆಯಲ್ಲಿರಬೇಕಾಗಿದ್ದ ಪುಟ್ಟ ಹುಡುಗಿಯೊಬ್ಬಳು ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುವ ತೀರ್ಮಾನಕ್ಕೆ ಬಂದಿದ್ದರು. ಅದೃಷ್ಟ ಆಕೆಯ ಜೊತೆ ಇದ್ದುದರಿಂದ ಪ್ರತೀ ಬಾರಿಯೂ ಆಕೆಯ ವೇಷ ಕಳಚಿಕೊಳ್ಳುವ ಮೊದಲೇ ಬಚಾವಾಗುತ್ತಿದ್ದರು.


ಇದನ್ನೂ ಓದಿ:Actor Doddana: ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ; ಇನ್ನೂ 3 ದಿನ ಚಿಕಿತ್ಸೆ ಮುಂದುವರಿಕೆ

ಹುಡುಗರಂತೆಯೇ ವೇಷ ತೊಟ್ಟುಕೊಂಡು ಅವರಂತೆಯೇ ಹಾವ ಭಾವಗಳನ್ನು ಕಲಿತುಕೊಂಡು ಅವರಂತೆಯೇ ಮಾತನಾಡುತ್ತಲೇ ನಾದಿಯಾ ತಾನೊಬ್ಬಳು ಹುಡುಗಿ ಎಂಬುದನ್ನೇ ಮರೆತುಬಿಟ್ಟರು. ಬರೋಬ್ಬರಿ 10 ವರ್ಷಗಳ ಕಾಲ ನಾದಿಯಾ ತನ್ನ ಕುಟುಂಬವನ್ನು ಪೋಷಿಸುವುದಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಆಕೆಯ ಅದೃಷ್ಟವೋ ಎಂಬಂತೆ ಎನ್‌ಜಿಒ ಆಕೆಗೆ ದೇಶದಿಂದ ಹೊರಬರಲು ಸಹಾಯ ಮಾಡಿತು. ಪ್ರಸ್ತುತ ಅಪ್ಘನ್ ನಿರಾಶ್ರಿತರಾಗಿ ಸ್ಪೇನ್‌ನಲ್ಲಿ ನೆಲೆಸಿರುವ ನಾದಿಯಾ ಪತ್ರಕರ್ತರಾದ ಅಗ್ನೆಸ್ ರಾಟ್ಜರ್‌ನ ಸಹಯೋಗದೊಂದಿಗೆ ತಮ್ಮ ಜೀವನವನ್ನು ಆಧರಿಸಿ ದ ಸೀಕ್ರೇಟ್ ಆಫ್ ಮೈ ಟರ್ಬನ್ (ನನ್ನ ರೂಮಾಲಿನ ರಹಸ್ಯ) ಎಂಬ ಪುಸ್ತಕ ಬರೆದಿದ್ದಾರೆ.

Published by:Latha CG
First published: