KV Ramani: ತಮ್ಮ ಸಂಪತ್ತಿನ 80% ಭಾಗವನ್ನು ಶಿರಡಿ ಸಾಯಿ ಬಾಬಾಗೆ ದೇಣಿಗೆ ನೀಡಿದ ಲೋಕೋಪಕಾರಿ ಕೆ.ವಿ ರಮಣಿ..!

ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಕ್ಕಾಗಿ ನಾನು ಒಂದು ರೂಪಾಯಿ ತೆಗೆದುಕೊಳ್ಳಲು ಬಯಸುವುದಿಲ್ಲ. ಬದಲಿಗೆ ಶಿಕ್ಷಣ ವ್ಯವಸ್ಥೆಯನ್ನು ಯಶಸ್ವಿಗೊಳಿಸಲು ಇನ್ನಷ್ಟು ನೆರವನ್ನು ನೀಡಲು ಬಯಸುತ್ತೇನೆ ಎಂದು ರಮಣಿ ಹೇಳುತ್ತಾರೆ.

ಕೆ.ವಿ.ರಮಣಿ

ಕೆ.ವಿ.ರಮಣಿ

  • Share this:
ನಾಸ್ಕಾಮ್‌ನ ಸಹ-ಸಂಸ್ಥಾಪಕ ಹಾಗೂ ಸಾಫ್ಟ್‌ವೇರ್ ಉದ್ಯಮಿ(Software Businessman) ಕೆವಿ ರಮಣಿ(KV Ramani)ಯವರು 2004ರಲ್ಲಿ ತಮ್ಮ ಸಂಸ್ಥೆಗಳಾದ ಫ್ಯೂಚರ್ ಸಾಫ್ಟ್‌ವೇರ್(Future Software) ಮತ್ತು ಹ್ಯೂಸ್ ಸಾಫ್ಟ್‌ವೇರ್‌ನಿಂದ ನಿರ್ಗಮಿಸುವ ಸಮಯದಲ್ಲಿ ಅಸಾಮಾನ್ಯ ಕಾರ್ಯವೊಂದನ್ನು ಮಾಡಿದರು. ತಮ್ಮ ಕುಟುಂಬಕ್ಕಾಗಿ 12% ಆಸ್ತಿ ಮಾತ್ರವೇ ಇರಿಸಿ 85%ದಷ್ಟು ಸ್ವತ್ತುಗಳನ್ನು ತಾವೇ ಸ್ಥಾಪಿಸಿದ ಶ್ರೀ ಸಾಯಿ ಟ್ರಸ್ಟ್‌(Shri Sai Trust)ಗೆ ದೇಣಿಗೆಯಾಗಿ ನೀಡಿದರು. ಅಂದಿನ ದಿನಗಳಲ್ಲಿ ಘಟಕದ ಮೌಲ್ಯವು 325-350 ಕೋಟಿ ರೂ. ಬೆಲೆಯದ್ದಾಗಿತ್ತು. ಈ ಟ್ರಸ್ಟ್ ಇಲ್ಲಿಯವರೆಗೆ ಯಾವುದೇ ದೇಣಿಗೆ ಪಡೆದುಕೊಂಡಿಲ್ಲ. ಇದು ಮೊದಲ ಪೀಳಿಗೆಯ ಪದವೀಧರರಾದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. ಜೊತೆಗೆ ತುರ್ತು ವೈದ್ಯಕೀಯ(Medical Emergency) ನೆರವಿರುವ 4,000 ಜನರಿಗೆ ಬೆಂಬಲ ನೀಡುತ್ತದೆ. ಅಂತೆಯೇ ಭಾರತ(India)ದಾದ್ಯಂತ ದಿನವೊಂದಕ್ಕೆ ಸುಮಾರು 5,000 ಜನರಿಗೆ ಊಟ ನೀಡುತ್ತದೆ. ದೇಶಾದ್ಯಂತ ಈ ಟ್ರಸ್ಟ್ ಸರಿ ಸುಮಾರು 450 ಸಾಯಿ ಆಲಯಗಳಿಗೆ ಧನಸಹಾಯ ಮಾಡಿದೆ.

70ರ ಹರೆಯದ ವಾಣಿಜ್ಯೋದ್ಯಮಿ ಹಾಗೂ ಲೋಕೋಪಕಾರಿ ಕೆ.ವಿ ರಮಣಿಯವರು ಇದೀಗ ತಮ್ಮ ಮುಂದಿನ ಧ್ಯೇಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಸಾಯಿ ವಿಶ್ವವಿದ್ಯಾನಿಲಯದ ಸಂಸ್ಥಾಪಕ-ಕುಲಪತಿಯಾಗಿರುವ ರಮಣಿಯವರು 2021ರಲ್ಲಿ ಆರಂಭಿಸಿದ ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ವಿಶ್ವವಿದ್ಯಾನಿಲಯವಾಗಿದೆ. ಚೆನ್ನೈನ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿರುವ ಈ ವಿಶ್ವವಿದ್ಯಾನಿಲಯವು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡುವುದರ ಜೊತೆಗೆ ಪ್ರಗತಿಪರ ಕಲೆ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳಲ್ಲೂ ಪದವಿ ಶಿಕ್ಷಣ ನೀಡುತ್ತದೆ.

ರಮಣಿಯವರು ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರದ ರೂಪದಲ್ಲಿ ನೋಡದೇ ಸೇವೆಯನ್ನಾಗಿ ಪರಿಗಣಿಸಿದ್ದಾರೆ. ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಕ್ಕಾಗಿ ನಾನು ಒಂದು ರೂಪಾಯಿ ತೆಗೆದುಕೊಳ್ಳಲು ಬಯಸುವುದಿಲ್ಲ. ಬದಲಿಗೆ ಶಿಕ್ಷಣ ವ್ಯವಸ್ಥೆಯನ್ನು ಯಶಸ್ವಿಗೊಳಿಸಲು ಇನ್ನಷ್ಟು ನೆರವನ್ನು ನೀಡಲು ಬಯಸುತ್ತೇನೆ ಎಂದು ರಮಣಿ ಹೇಳುತ್ತಾರೆ. ವಿಶ್ವವಿದ್ಯಾನಿಲಯದ ಕುರಿತು ಅವರು ಹೊಂದಿರುವ ವಿಚಾರಗಳು, ಭಾರತವು ಈ ಕ್ಷೇತ್ರದಲ್ಲಿ ಏಕೆ ಹಿಂದಿದೆ ಹಾಗೂ ಆಧ್ಯಾತ್ಮಿಕತೆಯು ಅವರನ್ನು ಹೇಗೆ ಬೆಂಬಲಿಸುತ್ತದೆ ಮೊದಲಾದ ಅಂಶಗಳನ್ನು ಮನಿಕಂಟ್ರೋಲ್‌ನೊಂದಿಗೆ (Moneycontrol) ಹಂಚಿಕೊಂಡಿದ್ದಾರೆ. ಆಯ್ದಭಾಗಗಳು ಇಲ್ಲಿವೆ.

ಹಲವಾರು ವರ್ಷಗಳ ನಂತರ ಸಾಯಿ ವಿಶ್ವವಿದ್ಯಾಲಯವು ಅಂತಿಮವಾಗಿ ಕಾರ್ಯರೂಪಕ್ಕೆ ಬಂದಿದೆ. ಅದು ಹೇಗೆ ಪ್ರಾರಂಭವಾಯಿತು?

ಭಾರತಕ್ಕೆ ಉನ್ನತ ಶಿಕ್ಷಣ ಕ್ಚೇತ್ರದಲ್ಲಿ ಪ್ರಮುಖ ಸುಧಾರಣೆ ನಡೆಸುವ ನಿಟ್ಟಿನಲ್ಲಿ ಸಾಯಿ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲಾಗಿದೆ. ಸ್ವಾತಂತ್ರ್ಯದ ನಂತರ ಕಳೆದ 75 ವರ್ಷಗಳಲ್ಲಿ, ಸ್ವಾತಂತ್ರ್ಯದ ನಂತರ, ನಾವು ವಿಶ್ವದ ಅಗ್ರ 50ರಲ್ಲಿ ಒಂದು ಭಾರತೀಯ ವಿಶ್ವವಿದ್ಯಾಲಯ ಹೊಂದಿಲ್ಲ. ಮೊದಲನೆಯದು ಟಾಪ್ 150ರಲ್ಲಿ ಬರುತ್ತದೆ ಎಂದು ನಾನು ಭಾವಿಸುತ್ತೇನೆ.

ಈ ವರ್ಷ 55,000 ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್‌ಗೆ ವಿದ್ಯಾರ್ಥಿ ವೀಸಾ ನೀಡಲಾಯಿತು. ಇದುವರೆಗಿನ ಅತ್ಯಧಿಕ ಸಂಖ್ಯೆ ಇದಾಗಿದೆ. ವಿದೇಶಕ್ಕೆ ಹೋಗುವ ವಿದ್ಯಾರ್ಥಿಯು ವರ್ಷಕ್ಕೆ ಸುಮಾರು 25 ರಿಂದ 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾನೆ. ಅಂದರೆ ವರ್ಷಕ್ಕೆ 13,000 ಕೋಟಿ ವಿದೇಶಿ ವಿನಿಮಯದ ಹೊರಹರಿವು ಇದರಿಂದ ಉಂಟಾಗುತ್ತಿದೆ. ನಮ್ಮ ಯುವಕರ ಅಗತ್ಯತೆಗಳಿಗೆ ನಾವು ಗಮನ ಹರಿಸದೆಯೇ ಎಲ್ಲದರಲ್ಲೂ ದೋಷ ಹುಡುಕುವುದು ತಪ್ಪು ಎಂಬುದು ರಮಣಿಯವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:Cooking Oil Price Drop: ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬಂಪರ್ ಕೊಡುಗೆ..!

ಜಾಗತಿಕ ಶ್ರೇಷ್ಠತೆಯ ವಿಶ್ವವಿದ್ಯಾನಿಲಯ ರಚಿಸುವ ಕುರಿತು ನೀವು ಮಾತನಾಡುವಾಗ, ನೀವು ವಿಭಿನ್ನವಾಗಿ ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? ಡೇಟಾ ಸೈನ್ಸ್ ಕೋರ್ಸ್‌ಗಳು ಮತ್ತು ಇಂಟಿಗ್ರೇಟೆಡ್ ಡಿಗ್ರಿಗಳ ಪ್ರಸ್ತಾವನೆಯೊಂದಿಗೆ ಭಾರತದಲ್ಲಿರುವ ಉನ್ನತ ಶಿಕ್ಷಣ ವ್ಯವಸ್ಥೆಯು ಇದೀಗ ಆನ್‌ಲೈನ್ ಕಲಿಕೆ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿಂದ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ನಿರ್ಧಾರಗಳೇನು?

ಹೆಚ್ಚಿನ ವಿದ್ಯಾರ್ಥಿಗಳು ಇಂದು ವಿದೇಶಕ್ಕೆ ಹೋಗಲು ಪ್ರೇರಣೆ ಪಡೆಯುತ್ತಿದ್ದಾರೆ. ಅಂಕೆ ಸಂಖ್ಯೆಗಳ ಪ್ರಕಾರ ವಿದೇಶದಲ್ಲಿರುವ ಮೂರನೇ ಅಥವಾ ನಾಲ್ಕನೇ ಭಾಗದಷ್ಟು ವಿದ್ಯಾರ್ಥಿಗಳು ಅಧ್ಯಾಪಕರು ಚೀನಾ ಹಾಗೂ ಭಾರತದವರಾಗಿದ್ದಾರೆ. ಜನರು ಹೆಚ್ಚು ವಿದೇಶಕ್ಕೆ ಏಕೆ ಹೋಗುತ್ತಿದ್ದಾರೆ ಎಂಬ ಅಂಶವನ್ನು ನಾವು ಮನಗಾಣಬೇಕು. ಅಲ್ಲಿ ಕಲಿಕೆಯ ವಾತಾವರಣ ಸಂಪೂರ್ಣ ಭಿನ್ನವಾಗಿದೆ ಎಂದು ರಮಣಿ ಹೇಳುತ್ತಾರೆ.

ನಿಮ್ಮ ಸಂಸ್ಥೆಯಲ್ಲಿ ವಿಭಿನ್ನವಾಗಿ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿರ್ಮಿಸುತ್ತಿದ್ದೀರಿ?

ನಾವು ಒಂದೇ ಕಟ್ಟಡ ನಿರ್ಮಿಸಿ ವಿಶ್ವವಿದ್ಯಾಲಯ ಎಂದು ಹೇಳುತ್ತಿಲ್ಲ. ಮುಂದಿನ ಏಳು ವರ್ಷಗಳಲ್ಲಿ ತಮಿಳುನಾಡು ಸರ್ಕಾರದ ಆದೇಶದಂತೆ 100 ಎಕರೆ ಭೂಮಿಯಲ್ಲಿ ಸುಮಾರು 25 ಲಕ್ಷ ಚದರ ಅಡಿಗಳಲ್ಲಿ ಸಂಸ್ಥೆಯನ್ನು ನಿರ್ಮಿಸಲಿದ್ದೇವೆ. ವಿಶ್ವವಿದ್ಯಾನಿಲಯಕ್ಕೆ ಪ್ರವರ್ತಕರು ಅಥವಾ ಸಂಸ್ಥಾಪಕರ ಹೆಸರನ್ನು ಇಡಲಾಗಿಲ್ಲ. ಇದಕ್ಕೆ ಸಾಯಿ (ಭಾರತೀಯ ಆಧ್ಯಾತ್ಮಿಕ ಗುರು) ಎಂದು ಹೆಸರಿಡಲಾಗಿದೆ.

ಮೊದಲ ಸೆಮಿಸ್ಟರ್‌ನಲ್ಲಿ ಫೌಂಡೇಶನ್ ಕೋರ್ಸ್ ಹೊಂದಿದ್ದೇವೆ, ಅಲ್ಲಿ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಚಿಂತನೆ, ತಾರ್ಕಿಕ ಚಿಂತನೆ ಮತ್ತು ನಂತರ ಕಂಪ್ಯೂಟರ್ ಕೌಶಲ್ಯಗಳಂತಹ ತಾಂತ್ರಿಕ ಕೌಶಲ್ಯಗಳು, ನಂತರ ಸಂವಹನ ಕೌಶಲ್ಯಗಳು, ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ್ಯಗಳನ್ನು ಕಲಿಯುತ್ತಾರೆ.

ಶಿಕ್ಷಣವನ್ನು ಬೆಂಬಲಿಸಲು ಅನೇಕ ಕೈಗಾರಿಕೋದ್ಯಮಿಗಳು ಹಾಗೂ ಉದ್ಯಮಿಗಳು ಒಗ್ಗೂಡುತ್ತಿದ್ದಾರೆ. ಶಿವ್ ನಾಡಾರ್ ಕೂಡ ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳಿಗೆ ಬೆಂಬಲ ನೀಡಿದ್ದಾರೆ. ಇದರ ಕುರಿತು ನಿಮ್ಮ ಆಲೋಚನೆಗಳೇನು?

ಭಾರತದಲ್ಲಿರುವ ಅನೇಕ ಖಾಸಗಿ ಕೈಗಾರಿಕೋದ್ಯಮಿಗಳು ತಮ್ಮ ತಮ್ಮ ಸಂಪತ್ತನ್ನು ವೈವಿಧ್ಯಮ ರೀತಿಗಳಲ್ಲಿ ವಿನಿಯೋಗಿಸುತ್ತಿದ್ದಾರೆ. ಯಶಸ್ವಿ ಉದ್ಯಮಿಗಳು ಈ ದೇಶ, ಮೂಲಸೌಕರ್ಯ ಮತ್ತು ಭಾರತದ ಮಾನವ ಬಂಡವಾಳ ಅಭಿವೃದ್ಧಿಪಡಿಸುವಲ್ಲಿ ಬಹಳ ಹೂಡಿಕೆ ಮಾಡುತ್ತಾರೆ. ಈ ಉದ್ಯಮಿಗಳಲ್ಲಿ ಬಹಳಷ್ಟು ಜನರು ಶಿಕ್ಷಣ ಕ್ಷೇತ್ರಕ್ಕೂ ದೇಣಿಗೆ ನೀಡಿದ್ದಾರೆ.

ಸಾಯಿ ವಿಶ್ವವಿದ್ಯಾನಿಲಯ ಬೆಂಬಲಿಸುವ ಕಾರ್ಪೊರೇಟ್ ನಾಯಕರುಗಳ ಕುರಿತು ನಮಗೆ ವಿವರ ನೀಡಬಲ್ಲಿರಾ? ಅವರು ಎಷ್ಟು ಹಣ ಹಾಕಿದ್ದಾರೆ ಮತ್ತು ನಿಮ್ಮ ಇತರ ಆರ್ಥಿಕ ಮೂಲಗಳು ಯಾವುವು? ಆ ಶುಲ್ಕಗಳ ಹೊರತಾಗಿ ವಿಶ್ವವಿದ್ಯಾನಿಲಯ ನಡೆಸಲು ನೀವು ಹೇಗೆ ಹಣವನ್ನು ಸಂಗ್ರಹಿಸುತ್ತೀರಿ?

ಆರ್ಥಿಕ ನೆರವಿನ ಕುರಿತು ಮಾತನಾಡುವ ಮೊದಲು ನಾನು ಮಂಡಳಿಯ ಸಂವಿಧಾನದ ಕುರಿತು ಮಾತನಾಡಬೇಕಾಗುತ್ತದೆ. ಇಲ್ಲಿರುವವರು ನನಗೆ ಸಲಹೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ. ಅದೇ ರೀತಿ ನಾವು ಎಲ್ಲಿ ಪ್ರಗತಿ ಸಾಧಿಸಬಹುದು ಎಂಬುದನ್ನು ಕಂಡುಕೊಳ್ಳಲು ವಿದೇಶಕ್ಕೆ ಪ್ರಯಾಣ ಮಾಡಲು ಬಯಸುತ್ತೇನೆ. ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರ ಬಳಿ ಸಲಹೆಗಳನ್ನು ವಿನಂತಿಸಿದ್ದು ಅವರು US, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ ವಿಶ್ವಾದ್ಯಂತ ಕನಿಷ್ಠ 5 ಅಥವಾ 6 ಐವಿ ಲೀಗ್ ಶಾಲೆಗಳ ಮಂಡಳಿಯಲ್ಲಿದ್ದಾರೆ. ಈ ಮೂಲಕ ನಾವು ಸಾಯಿ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಉತ್ತಮ ಅಭ್ಯಾಸ ಪಡೆಯಬಹುದು. ಅದೇ ರೀತಿ ಮಣಿಪಾಲದ ಮೋಹನ್‌ದಾಸ್ ಪೈ ಅವರ ಬಳಿ ಕೂಡ ಮಾರ್ಗದರ್ಶಗಳನ್ನು ಕೇಳಿರುವೆ. ಮೋಹನ್‌ದಾಸ್ ಪೈಯವರು ಭಾರತೀಯ ಉನ್ನತ ಶಿಕ್ಷಣದ ಕುರಿತು ಹೆಚ್ಚಿನ ಅನುಭವ ಪಡೆದುಕೊಂಡಿದ್ದಾರೆ. ಇದರ ನಂತರವೇ ಕಾನೂನು ಶಾಲೆ ಆರಂಭಿಸಿದೆವು. ಭಾರತದ ಪ್ರತಿ ವಲಯದಲ್ಲಿ ಮತ್ತು ಹೆಚ್ಚಿನ ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಹೊಂದಲು ಪ್ರಯತ್ನಿಸುತ್ತಿದ್ದೇವೆ.

US ವಿಶ್ವವಿದ್ಯಾನಿಲಯಗಳು ದತ್ತಿ ಮತ್ತು ಪಿಂಚಣಿ ನಿಧಿಗಳು ಮತ್ತು ಖಾಸಗಿ ಲೋಕೋಪಕಾರದ ಪ್ರಯೋಜನ ಹೊಂದಿವೆ. ಹಾಗಾಗಿ ಸಾಯಿ ವಿಶ್ವವಿದ್ಯಾನಿಲಯದ ವಿಷಯದಲ್ಲಿ, ಈ ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯದ ಚಾಲನೆಯನ್ನು ನೀವು ಹೇಗೆ ನಿರ್ವಹಿಸಲಿದ್ದೀರಿ?

ಮುಂದಿನ 7 ವರ್ಷಗಳ ನಿಖರವಾದ ಯೋಜನೆಯ ಕುರಿತು ನಮಗೆ ಮಾಹಿತಿ ಇದೆ ಮತ್ತು 7 ವರ್ಷಗಳ ಅಂತ್ಯದ ವೇಳೆಗೆ ನಾವು ಎಲ್ಲಾ ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತೇವೆ. ವಿಶ್ವವಿದ್ಯಾನಿಲಯ ನಿರ್ಮಿಸಲು 750 ಕೋಟಿ ರೂಪಾಯಿ ವೆಚ್ಚವಾಗಿದೆ, ಅದರಲ್ಲಿ 300 ಕೋಟಿ ರೂಪಾಯಿಗಳು ನಾನು ಸ್ಥಾಪಿಸಿದ ಟ್ರಸ್ಟ್‌ನಿಂದ ಬರುತ್ತವೆ.

ನೀವು ಹೇಳಿದ 300 ಕೋಟಿ ರೂ. ಇದು 20 ವರ್ಷಗಳ ಹಿಂದೆ ನೀವು ಸ್ಥಾಪಿಸಿದ ಟ್ರಸ್ಟ್‌ನಿಂದ ಬಂದಿದೆಯೇ?

2004ರಲ್ಲಿ ನನ್ನ ವ್ಯವಹಾರ ಸಂಸ್ಥೆಗಳಾದ ಫ್ಯೂಚರ್ ಸಾಫ್ಟ್‌ವೇರ್ ಮತ್ತು ಹ್ಯೂಸ್ ಸಾಫ್ಟ್‌ವೇರ್‌ನಿಂದ ನಿರ್ಗಮಿಸಿದೆ. ನಾನು ನನ್ನ ಕುಟುಂಬಕ್ಕಾಗಿ ಸುಮಾರು 12% ಇಟ್ಟುಕೊಂಡಿದ್ದೇನೆ. 85%ಕ್ಕಿಂತ ಹೆಚ್ಚು ಹಣವನ್ನು ನಾನು ಶ್ರೀ ಸಾಯಿ ಟ್ರಸ್ಟ್‌ಗೆ ಘಟಕ ರೂಪದಲ್ಲಿ ನೀಡಿದ್ದೇನೆ. ಈ ಘಟಕದ ಒಟ್ಟು ಮೌಲ್ಯ ಆ ಸಮಯದಲ್ಲೇ ಸುಮಾರು 325-350 ಕೋಟಿ ರೂ. ಆಗಿತ್ತು.

ಘಟಕವು ಒಂದು ರೀತಿಯ ದತ್ತಿಯಂತೆ ಕೆಲಸ ಮಾಡುತ್ತದೆ. ಅಲ್ಲಿ ನೀವು ಹಣ ಹೂಡಿಕೆ ಮಾಡುತ್ತೀರಾ?

ಹೌದು. ಹಾಗಾಗಿ ಘಟಕ ದತ್ತಿಯಾಗಿದೆ. ಘಟಕದಿಂದ ಬರುವ ಬಡ್ಡಿಯು ಹೂಡಿಕೆಯಾಗಿದೆ ಮತ್ತು ಇದು ಭಾರತದಾದ್ಯಂತ 450 ಸಾಯಿ ದೇವಾಲಯಗಳನ್ನು ನಿರ್ಮಿಸಲು 23 ವರ್ಷಗಳಿಂದ ಪಾವತಿಸುತ್ತಿದೆ, ವಿದ್ಯಾರ್ಥಿವೇತನಗಳು, ತುರ್ತು ವೈದ್ಯಕೀಯ ಆರೈಕೆ ಮತ್ತು ಭಾರತದಾದ್ಯಂತ ಊಟದ ಸೌಲಭ್ಯಗಳನ್ನು ಒದಗಿಸುತ್ತಿದೆ.

ನಮ್ಮ ಮೊದಲ ಯೋಜನೆ ಸಂವಹನ ಸಾಫ್ಟ್‌ವೇರ್ ಆಗಿತ್ತು. ಆ ದಿನಗಳಲ್ಲಿ ಜನರು ನಮ್ಮನ್ನು ನೋಡಿ ನಗುತ್ತಿದ್ದರು ಮತ್ತು ನಾವು ಹುಚ್ಚರು ಎಂದು ಆಡಿಕೊಳ್ಳುತ್ತಿದ್ದರು. ಆಗ ಭಾರತದಲ್ಲಿ ಹಲವು ನಿರ್ಬಂಧಗಳಿದ್ದವು. ಕಂಪ್ಯೂಟರ್ ಸಿಗುವುದಕ್ಕೂ 2 ವರ್ಷ ಬೇಕಾಯಿತು. ಹಾಗಾಗಿ ಇದೊಂದು ಅಸಾಮಾನ್ಯ ಕಾರ್ಯವಾಗಿದೆ ಮತ್ತು ಇದನ್ನು ಸಾಧಿಸಿ ಅದರಲ್ಲಿ ನಾವು ಯಶಸ್ಸು ಪಡೆದುಕೊಂಡಿದ್ದೇವೆ.

ಇದನ್ನೂ ಓದಿ:Banned Firecrackers: ದೀಪಾವಳಿ ಹಬ್ಬಕ್ಕೆ ಯಾವ ರಾಜ್ಯಗಳು ಪಟಾಕಿ ಸಿಡಿಸುವುದನ್ನು ನಿಷೇಧಿಸಿವೆ? ಇಲ್ಲಿದೆ ಲಿಸ್ಟ್

ನಿಮ್ಮನ್ನು ಪ್ರೇರೇಪಿಸುವ ಅಂಶಗಳಾವುವು?

ನನ್ನ ಸರಳ ಜೀವನಶೈಲಿಗೆ ಪ್ರೇರಣೆ ಶಿರಡಿ ಸಾಯಿಬಾಬಾ. ನನ್ನ 23ನೇ ವಯಸ್ಸಿನಲ್ಲಿ ಬಾಬಾ ನನ್ನ ಜೀವನಕ್ಕೆ ಬಂದ ಆದರ್ಶ ಗುರುವಾಗಿದ್ದಾರೆ. 47 ವರ್ಷಗಳಿಂದ ನಾನು ಸಾಯಿ ಬಾಬಾನ ಭಕ್ತನಾಗಿದ್ದೇನೆ. ನನ್ನ ಎಲ್ಲಾ ಸಾಧನೆಗೆ ಬೆಂಬಲವಾಗಿ ಸಾಯಿ ನನ್ನ ಹಿಂದೆ ಇದ್ದಾರೆ.

ಸಂಪತ್ತು ಹಣ ಈ ಕುರಿತು ನಿಮ್ಮ ವಿಚಾರಗಳೇನು?

ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಹಣ ಬೇಕೇ ಬೇಕು. ನಿಮ್ಮ ಐಷಾರಾಮಿ ಜೀವನ ಅಗತ್ಯತೆಗಳನ್ನು ಪೂರೈಸಲು ಹಣವನ್ನು ಖರ್ಚುಮಾಡಬೇಕು ಹಾಗೂ ಅದಕ್ಕಾಗಿ ದುಡಿಯಬೇಕು. ಆದರೆ ಅದಕ್ಕೂ ಮಿಗಿಲಾಗಿ ಹಣ ಸಂಪಾದನೆ ಎಂಬುದು ಅತ್ಯಂತ ಕೆಟ್ಟದ್ದಾಗಿದೆ. ಹಣದಿಂದ ದುರಾಸೆ ಉಂಟಾಗುತ್ತದೆ. ಹಾಗಾಗಿ ಈ ದುರಾಸೆ ಬರುವ ಮೊದಲೇ ನಮಗೆ ನಾವೇ ಕಡಿವಾಣ ಹಾಕಿಕೊಳ್ಳಬೇಕು. ನೀವು ಸಂಪಾದಿಸಿದ ಹಣ ನಿಮ್ಮನ್ನು ರಕ್ಷಿಸುತ್ತದೆ. ಆದರೆ ಇದೇ ಹಣ ಮಿತಿಮೀರಿದಾಗ ನೀವು ಅದನ್ನು ಕಾಯಬೇಕಾಗುತ್ತದೆ ಹಾಗೂ ಸಂರಕ್ಷಿಸಬೇಕಾಗುತ್ತದೆ.

   
Published by:Latha CG
First published: