Mission Paani: ರಾಜಸ್ಥಾನದ ನೂರಾರು ಹಳ್ಳಿಗಳಲ್ಲಿನ ಜಲ ಬಿಕ್ಕಟ್ಟಿಗೆ ಅಂತ್ಯ ಹಾಡಿದ ಹೋರಾಟಗಾರ್ತಿ ಅಮಲಾ ರೂಯ

2000-2005ರ ನಡುವಿನಲ್ಲಿ ಆಕಾರ್​ ಚಾರಿಟಬಲ್​ ಟ್ರಸ್ಟ್​  200 ಕುಡಿಯಿವ ನೀರಿನ ಕುಂಡಗಳನ್ನು ನಿರ್ಮಿಸಿದೆ. ಈ ಕುಂಡಗಳು ಬರುವ ಮಳೆಯಿಂದ ಒಂದು ವರ್ಷಕ್ಕೆ ಒಂದು ಕೋಟಿ ಲೀಟರ್​ ಕುಡಿಯುವ ನೀರನ್ನು ಸಂಗ್ರಹಿಸುತ್ತವೆ. ಅದೂ ಸರ್ಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಂತಹ ಕುಗ್ರಾಮಗಳಲ್ಲಿ. ಈ ಪ್ರದೇಶಗಳಲ್ಲಿ ಚೆಕ್​ ಡ್ಯಾಮ್​ ನಿರ್ಮಿಸಲು ಹಳ್ಳಿಯ ಜನರೂ ಸಹ ಶೇ 25ರಷ್ಟು ವೆಚ್ಚವನ್ನು ಭರಿಸಿದ್ದಾರಂತೆ.

ಅಮಲಾ ರೂಯ

ಅಮಲಾ ರೂಯ

  • Share this:
ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಲ್ಲಿ ರಾಜಸ್ತಾನ ಸಹ ಒಂದು. ಮನುಷ್ಯ ಹಾಗೂ ಯಾವುದೇ ಜೀವಿಗಳು ಆಹಾರವಿಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಇದೇ ಕಾರಣದಿಂದ ಕುಡಿಯುವ ನೀರನ್ನು ಜೀವ ಜಲ ಎಂದೇ ಕರೆಯಲಾಗುತ್ತದೆ. ಸದ್ಯ ಇರುವ ನೀರಿನ ಅಭಾವದಿಂದಾಗಿ ಇರುವ ಜಲಮೂಲಗಳ ಸಂರಕ್ಷಣೆ, ನೀರಿನ ದುರ್ಬಳಕೆ ತಡೆಯುವುದು ಬಹಳ ಮುಖ್ಯ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಸುಸ್ಥಿರತೆ  ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲೂ ಕೊರೋನಾದಿಂದಾಗಿ ಎದುರಾಗಿರುವ ಸಂಕಷ್ಟದ ಕಾಲದಲ್ಲಿ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾದ ನೀರಿನ ಸಂರಕ್ಷಣೆಗೆ  ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ದೇಶದ ಎಷ್ಟೋ ರಾಜ್ಯಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಅದರಲ್ಲಿ ರಾಜಸ್ತಾನ ಸಹ ಒಂದು. ಈ ರಾಜ್ಯದಲ್ಲಿ ಕುಡಿಯುವ ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. 

ರಾಜಸ್ತಾನದಲ್ಲಿ 1998ರಲ್ಲಿ ಕಾಣಿಸಿಕೊಂಡಿದ್ದ ಬರಗಾಲ ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅಮಲಾ ರೂಯ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಇದು ನೀರಿನ ಕೊರತೆ ನೀಗಿಸುವ ಪರಿಹಾರಗಳತ್ತ ಗಮನ ಹರಿಸುವಂತೆ ಮಾಡಿತ್ತು. ಈ ವಿಷಯವಾಗಿ ಸಾಕಷ್ಟು ಕೆಲಸ ಮಾಡಿದ ಅಮಲಾ ರೂಯ ಕಡೆಗೆ ಆಕಾರ್​ ಚಾರಿಟಬಲ್​ ಟ್ರಸ್ಟ್​ ಸ್ಥಾಪಿಸಿದರು.

mission pani
ಸಾಂದರ್ಭಿಕ ಚಿತ್ರ.


ಆಕಾರ್​ ಚಾರಿಟಬಲ್​ ಟ್ರಸ್ಟ್​ ನೀರಿನ ಸಮಸ್ಯೆ ಎದುರಿಸುತ್ತಿರುವ ಹಾಗೂ ಬರದಲ್ಲಿ ನಲುಗುತ್ತಿರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಂಗ್ರಹಣೆಗಾಗಿ ಚೆಕ್​ ಡ್ಯಾಮ್​ ನಿರ್ಮಾಣದ ಕಾರ್ಯದಲ್ಲಿ ನಿರತವಾಗಿದೆ.

2000-2005ರ ನಡುವಿನಲ್ಲಿ ಆಕಾರ್​ ಚಾರಿಟಬಲ್​ ಟ್ರಸ್ಟ್​  200 ಕುಡಿಯಿವ ನೀರಿನ ಕುಂಡಗಳನ್ನು ನಿರ್ಮಿಸಿದೆ. ಈ ಕುಂಡಗಳು ಬರುವ ಮಳೆಯಿಂದ ಒಂದು ವರ್ಷಕ್ಕೆ ಒಂದು ಕೋಟಿ ಲೀಟರ್​ ಕುಡಿಯುವ ನೀರನ್ನು ಸಂಗ್ರಹಿಸುತ್ತವೆ. ಅದೂ ಸರ್ಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಂತಹ ಕುಗ್ರಾಮಗಳಲ್ಲಿ. ಈ ಪ್ರದೇಶಗಳಲ್ಲಿ ಚೆಕ್​ ಡ್ಯಾಮ್​ ನಿರ್ಮಿಸಲು ಹಳ್ಳಿಯ ಜನರೂ ಸಹ ಶೇ 25ರಷ್ಟು ವೆಚ್ಚವನ್ನು ಭರಿಸಿದ್ದಾರಂತೆ.

ಇದನ್ನೂ ಓದಿ: RRR Climax Shooting: ಆರಂಭವಾಯ್ತು ಆರ್​ಆರ್​ಆರ್​ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ: ರಿಲೀಸ್​ ಬಗ್ಗೆ ಮಾಹಿತಿ ಕೊಟ್ಟ ಚಿತ್ರತಂಡ..!

2006-2018ರ ವರೆಗೆ ರಾಜಸ್ತಾನದಲ್ಲಿ ಆಕಾರ್​ ಚಾರಿಟಬಲ್​ ಟ್ರಸ್ಟ್​ 317 ಚೆಕ್​ ಡ್ಯಾಮ್​ಗಳನ್ನು ನಿರ್ಮಿಸಿದೆ. ನೇರವಾಗಿ ಇದರ ಪ್ರಯೋಜನವನ್ನು 182 ಹಳ್ಳಿಗಳುವ ಪಡೆಯುತ್ತಿವೆ. ಇನ್ನು ನೀರಿನ ಸಮಸ್ಯೆ ನೀಗುತ್ತಿದ್ದಂತೆಯೇ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅಲ್ಲಿನ ಜರನ್ನು ಬಡತನ ರೇಖೆಯಿಂದ ಮೇಲೆತ್ತಲು ಸಹಾಯವಾಗಿದೆ ಎನ್ನುವುದು ಅಮಲಾ ರೂಯ ಅವರ ಅಭಿಪ್ರಾಯ.

mission pani11
ಮಿಷನ್ ಪಾನಿ.


ಒಟ್ಟಾರೆ 4,82,900 ಜನರು ನೇವಾಗಿ ಹಾಗೂ ಪರೋಕ್ಷವಾಗಿ ಈ ಚೆಕ್​ ಡ್ಯಾಮ್​ಗಳಿಂದ ಪ್ರಯೋಜನ ಪಡೆದಿದ್ದಾರೆ.  ಈ ಚೆಕ್​ ಡ್ಯಾಮ್​ಗಳ ನಿರ್ಮಾಣದ ಪ್ರಾಜೆಕ್ಟ್​ಗೆ 11 ಕೋಟಿ ಪ್ರಾಯೋಜಕರಿಂದ ಸಿಕ್ಕರೆ, 4.7 ಕೋಟಿ ಹಣವನ್ನು ಹಳ್ಳಿಯ ಜನರು ನೀಡಿದ್ದಾರೆ.

ಚೆಕ್​ ಡ್ಯಾಮ್​ಗಳ ನಿರ್ಮಾಣದಿಂದ ಹಳ್ಳಿಯ ಮಹಿಳೆಯರು ಕಿ.ಮೀ ಗಟ್ಟಲೆ ದೂರ ನಡೆದುಕೊಂಡು ಹೋಗಿ ಕುಡಿಯುವ ನೀರು ತರುವಂತಿಲ್ಲ. ಜೊತೆಗೆ ಈ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಜಾನುವಾರ ಸಾಕಣೆಯಂತಹ ಕೆಲಗಳೂ ಯಾವುದೇ ಆತಂಕವಿಲ್ಲದೆ ನಡೆಯುತ್ತಿವೆ. ಇದರಿಂದಾಗಿ ಈ ಪ್ರದೇಶಗಳಲ್ಲಿನ ಆರ್ಥಿಕತೆಯೂ ಅಭಿವೃದ್ಧಿಯಾಗುತ್ತಿದೆ.

ಇದನ್ನೂಓದಿ: Sara Ali Khan: ಮಾಲ್ಡೀವ್ಸ್​ನ ಕಡಲ ಕಿನಾರೆಯಲ್ಲಿ ಸಾರಾ ಅಲಿ ಖಾನ್ ಹಾಟ್​​ ಫೋಟೋಶೂಟ್​..!

ಈ ಹಳ್ಳಿಗಲ್ಲಿ ಪ್ರಾಜೆಕ್ಟ್​ ಪೂರ್ಣಗೊಂಡ ನಂತರ ಸ್ಥಳೀಯರ ವಾರ್ಷಿಕ ನಿವ್ವಳ ಆದಾಯ 500 ಕೋಟಿಯಷ್ಟು ಆಗಿದೆ ಎನ್ನುತ್ತಾರೆ ಆಕಾರ್​ ಚಾರಿಟಬಲ್​ ಟ್ರಸ್ಟ್​ನವರು. ಈಗ ನಿಜಕ್ಕೂ ರಾಜಸ್ತಾನದ ಈ ಹಳ್ಳಿಗಳಲ್ಲಿ ಕಷ್ಟದ ದಿನಗಳು ದೂರಾಗಿವೆಯಂತೆ.

Https://www.news18.com/mission-paani/ ಅನ್ನು ಪರಿಶೀಲಿಸಿ, ಮತ್ತು ವಿಶೇಷ ವ್ಯಕ್ತಿಗಳೊಂದಿಗೆ 8 ಗಂಟೆಗಳ ಕಾಲ ಪ್ರಸಾರವಾದ ಮಿಷನ್ ಪಾನಿ ವಾಟರ್‌ಥಾನ್‌ಗೆ ನೀವು ಸೇರಿಕೊಳ್ಳಿ. ನೀರನ್ನು ಸಂರಕ್ಷಿಸುವ ಈ ಹೋರಾಟದಲ್ಲಿ ನೀವೂ ಭಾಗಿಯಾಗಿ ಅಲ್ಲದೆ, ನೀರಿನ ಸಂರಕ್ಷಣೆಗಾಗಿ ಎಲ್ಲರೊಂದಿಗೆ ಪ್ರತಿಜ್ಞೆ ಮಾಡಿ.
Published by:Anitha E
First published: