ಮಾತನಾಡಲು ನಿರಾಕರಿಸಿದಕ್ಕೆ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ನರರಾಕ್ಷಸ

news18
Updated:August 21, 2018, 5:32 PM IST
ಮಾತನಾಡಲು ನಿರಾಕರಿಸಿದಕ್ಕೆ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ನರರಾಕ್ಷಸ
news18
Updated: August 21, 2018, 5:32 PM IST
ನ್ಯೂಸ್​ 18 

ಲಕ್ನೋ (ಆ.21): ತನ್ನೊಂದಿಗೆ ಮಾತನಾಡಲು ನಿರಾಕರಿಸಿದಕ್ಕೆ ಶಾಲಾ ಬಾಲಕಿಯನ್ನು ಯುವಕನೋರ್ವ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಮಿರತ್​ನಲ್ಲಿ ನಡೆದಿದೆ.

ಬಾಲಕಿ ಕೊಚಿಂಗ್​ ಕ್ಲಾಸ್​ಗೆ ಹೋಗುವಾಗ ಆಕೆಯನ್ನು ಯುವಕನೊಬ್ಬ ಹಿಂಬಾಲಿಸುತ್ತ ಪೀಡಿಸುತ್ತಿದ್ದ.  ಅಲ್ಲದೇ  ಆಕೆಗೆ ಮೊಬೈಲ್​ ನಂಬರ್​ಅನ್ನು ಬಲವಂತವಾಗಿ ಪಡೆದಿದ್ದು, ರಾತ್ರಿ ಕರೆ ಮಾಡುವುದಾಗಿ ತಿಳಿಸಿದ್ದರು. ರಾತ್ರಿ ಆ ಹಿಂಬಾಲಕರು ಕರೆ ಮಾಡಿದ್ದು, ಬಾಲಕಿ ಅವರ ಕರೆಯನ್ನು ಸ್ವೀಕರಿಸಿಲ್ಲ. ಇದರಿಂದ ಕುಪಿತಗೊಂಡ ಯುವಕರು ರಾತ್ರಿಯೇ ಮನೆಗೆ ನುಗ್ಗಿ ಆಕೆಯನ್ನು ಜೀವಂತವಾಗಿ ದಹಿಸಿದ್ದಾರೆ ಎಂದು ಬಾಲಕಿ ತಂದೆ ತಿಳಿಸಿದ್ದಾರೆ

ತಕ್ಷಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ದೆಹಲಿಗೆ ಆಕೆಯನ್ನು ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು.

ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿ  ದೂರು ನೀಡಿದ್ದರು.  ಘಟನೆ ಕುರಿತು ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಖಂಡಿಸಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಮಹಿಳೆಯರರ ಸುರಕ್ಷತೆ ಕಾಪಾಡುವಲ್ಲಿ ಸರ್ಕಾರ ಸೋತಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಸರ್ಕಾರ ವಕ್ತಾರ ಶ್ರೀಕಾಂತ್​ ಶರ್ಮ, ಮಿರತ್​ ಘಟನೆ ದುರುದೃಷ್ಟವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ