ಆರ್​ಬಿಎಸ್​ ಮಾಜಿ ಮುಖ್ಯಸ್ಥೆ,ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ನಿಧನ

G Hareeshkumar | news18
Updated:January 12, 2019, 10:07 AM IST
ಆರ್​ಬಿಎಸ್​ ಮಾಜಿ ಮುಖ್ಯಸ್ಥೆ,ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ನಿಧನ
G Hareeshkumar | news18
Updated: January 12, 2019, 10:07 AM IST
ನವದೆಹಲಿ/ಮುಂಬೈ (ಜ.12) :  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆಮ್​ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಸ್ಕಾಟ್ಲೆಂಡ್​ನ ರಾಯಲ್ ಬ್ಯಾಂಕ್ ನ್ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು. ನಂತರ ಬ್ಯಾಂಕ್​ನ್ನು ತೊರೆದ ಆಮ್​ ಆದ್ಮಿ ಪಕ್ಷವನ್ನು ಸೇರಿದ ಮೀರಾ ಅವರು, 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

 ಇದನ್ನೂ ಓದಿ :  ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಸೇರಿ ಇಬ್ಬರಿಗೆ ಸುಪ್ರೀಂ ಭಡ್ತಿ ನೀಡಲು ಕೊಲೀಜಿಯಂ ಶಿಫಾರಸು
 57 ವರ್ಷದ ಮೀರಾ ಸನ್ಯಾಲ್ ನಿಧನಕ್ಕೆ ಆಮ್​ ಆದ್ಮಿ ಪಕ್ಷ ತೀವ್ರ ಸಂತಾಪ ಸೂಚಿಸಿದ್ದು, ಉತ್ತಮ ಹೃದಯದ ಮೀರಾ ಸನ್ಯಾಲ್ ಅವರು ಇನ್ನಿಲ್ಲ. ಆದರೆ ಅವರ ನೆನಪು  ಮಾತ್ರ ಶಾಶ್ವತವಾಗಿ ನಮ್ಮ ಹೃದಯದಲ್ಲಿ ಉಳಿಯುತ್ತದೆ ಎಂದು ಟ್ವೀಟ್  ಮಾಡಿದೆ.


We are deeply saddened by this loss, @meerasanyal a good heart has stopped beating, a good soul ascended to heaven. Her memories will forever remain in our hearts.
May she rest in peace! #RIP pic.twitter.com/LGGygwQmHi

Loading...

ಕೊಚ್ಚಿಯ ಮೂಲದವರಾದ ಮೀರಾ ಅವರು, ರಾಜಕೀಯಕ್ಕೆ ಸೇರುವ ಮುನ್ನ  ಬ್ಯಾಂಕಿಂಗ್ ಕ್ಷೇತ್ರದಲ್ಲಿ 30 ವರ್ಷ ಕೆಲಸವನ್ನು ಮಾಡಿದ್ದರು. ಏಷ್ಯಾ ಎಬಿಎನ್​ ಅಮ್ರೋ  ಕಾರ್ಪೊರೇಟ್ ಹಾಗೂ ಹಣಕಾಸು ಸಂಸ್ಥೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ದೆಹಲಿಯ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸಂತಾಪವನ್ನು ಸೂಚಿಸಿದ್ದು, ಮೀರಾ ಸನ್ಯಾಲ್ ದಿಢೀರ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಯಿತು ಎಂದು ಟ್ವೀಟ್ ಮಾಡಿದ್ದಾರೆ.
 I am deeply saddened to hear about
the passing away of Meera Sanyal.
The country has lost a sharp economic brain and a gentle soul. May she rest in peace!


ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲನ್ನು ಕಂಡಿದ್ದರು. ಮೀರಾ ಸನ್ಯಾಲ್ ಅವರು ದಿ ಬಿಗ್  ರಿವರ್ಸ್​ ; ಹೌ ಡೆಮೊನೈಸೇಷನ್ ನಾಕ್ಡ್ ಇಂಡಿಯಾ ಔಟ್ ಎಂಬ ಪುಸ್ತಕವನ್ನು ಸಹ ಬರೆದಿದ್ದರು.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ