ಭೋಪಾಲ್(ಜ.26): ಮಧ್ಯಪ್ರದೇಶದ (Madhya Pradesh) ಶಿಯೋಪುರ್ ಜಿಲ್ಲೆಯಿಂದ ಪ್ರಮುಖ ಸುದ್ದಿಯೊಂದು ವರದಿಯಾಗಿದೆ. ಇಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ನಮೀಬಿಯಾದಿಂದ (Namibia) ತರಲಾದ 8 ಹೆಣ್ಣು ಚಿರತೆಗಳಲ್ಲಿ (Cheetah) ಒಂದು ಅಸ್ವಸ್ಥಗೊಂಡಿದೆ. ಕಳೆದ ಎರಡು ದಿನಗಳಿಂದ ಕಿಡ್ನಿ ಸೋಂಕು, ನಿರ್ಜಲೀಕರಣ (ಅತಿಸಾರ) ಇದೆ. ಅವರ ದೇಹದಲ್ಲಿ ನೀರಿನ ಕೊರತೆಯಿದೆ ಎನ್ನಲಾಗಿದೆ. ಈ ಮಾಹಿತಿ ಸಿಕ್ಕ ತಕ್ಷಣ ಕುಣೋ ಅರಣ್ಯ ವಿಭಾಗದ ಅಧಿಕಾರಿಗಳು (Forest Department Officers)ಎಚ್ಚೆತ್ತಿದ್ದಾರೆ. ಹೆಣ್ಣು ಚಿರತೆಯ ಚಿಕಿತ್ಸೆಗಾಗಿ ಭೋಪಾಲ್ ವನ್ ವಿಹಾರ್ ತಂಡ ಆಗಮಿಸಿದೆ. ವೈದ್ಯರು ಅದನ್ನು ತಮ್ಮ ಮೇಲ್ವಿಚಾರಣೆಯಲ್ಲಿ ಇರಿಸಿದ್ದಾರೆ.
ಮಾಹಿತಿ ಪ್ರಕಾರ 5 ವರ್ಷದ ಈ ಹೆಣ್ಣು ಚಿರತೆಯ ಹೆಸರು ಶಾಶಾ. ಅದನ್ನು ಕುನೊದ ದೊಡ್ಡ ಆವರಣದಲ್ಲಿ ಇರಿಸಲಾಗಿದೆ. ಭೋಪಾಲ್ ವನ್ ವಿಹಾರ್ ತಂಡವು ಶಾಶಾಗೆ ಡ್ರಿಪ್ ಮತ್ತು ಅನೇಕ ಅಗತ್ಯ ಚುಚ್ಚುಮದ್ದನ್ನು ಹಾಕಿದೆ. ಆ ನಂತರ ಅದರ ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದೆ. ಆದರೆ, ಅದು ಇನ್ನೂ ಸಂಪೂರ್ಣವಾಗಿ ಗುಣಮುಖವಾಗದ ಆಗದ ಕಾರಣ, ವೈದ್ಯರು ಅದನ್ನು ತಮ್ಮ ಮೇಲ್ವಿಚಾರಣೆಯಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ: Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ
ಪ್ರಧಾನಿ ತಮ್ಮ ಜನ್ಮದಿನದಂದು ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದ್ದರು
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣದಲ್ಲಿ ಬಿಡುಗಡೆಗೊಳಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ 72 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪ್ರಧಾನಿ ಮೋದಿ ಅವರು ಚಿರತೆಗಳ ಚಿತ್ರಗಳನ್ನು ಸಹ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅವರು ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆಗೊಳಿಸಿದ್ದರು. 1952 ರಲ್ಲಿ ಭಾರತದಲ್ಲಿ ಚಿರತೆಗಳು ನಿರ್ನಾಮವಾಗಿದೆ ಎಂದು ಘೋಷಿಸಲಾಗಿತ್ತು ಎಂಬುವುದು ಉಲ್ಲೇಖನೀಯ.
ಇದನ್ನೂ ಓದಿ: Cheetah: ಭಾರತಕ್ಕೆ ಚೀತಾ ತಂದ ಈ ಪ್ರಮುಖ ಜೀವಶಾಸ್ತ್ರಜ್ಞಗೆ ಅಗೌರವದ ಆರೋಪ
ವಿಶೇಷ ವಿಮಾನದ ಮೂಲಕ ಚಿರತೆಗಳನ್ನು ತರಲಾಯಿತು
ಭಾರತದಲ್ಲಿ ಚಿರತೆಗಳು ನಾಶವಾದ ಏಳು ದಶಕಗಳ ನಂತರ, ಅವುಗಳನ್ನು ಮತ್ತೆ ದೇಶದಲ್ಲಿ ಪುನರ್ವಸತಿ ಮಾಡಲು ಯೋಜನೆಯನ್ನು ಸಿದ್ಧಪಡಿಸಲಾಯಿತು. ಈ ಯೋಜನೆಯಡಿಯಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನ್ನು ತಲುಪಿದ್ದವು. ಅವುಗಳನ್ನು ವಿಶೇಷ ವಿಮಾನದ ಮೂಲಕ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ತಂದು, ಬಳಿಕ ಹೆಲಿಕಾಪ್ಟರ್ಗಳ ಮೂಲಕ ಶಿಯೋಪುರ್ ಜಿಲ್ಲೆಗೆ ಕರೆತರಲಾಯಿತು.
ಕುನೋ ರಾಷ್ಟ್ರೀಯ ಉದ್ಯಾನವನವು ವಿಂಧ್ಯಾಚಲ ಬೆಟ್ಟಗಳ ಉತ್ತರ ಭಾಗದಲ್ಲಿದೆ. ಇದು 344 ಚದರ ಕಿಲೋಮೀಟರ್ಗಳಲ್ಲಿ ಹರಡಿದೆ. ದೇಶದ ಕೊನೆಯ ಚಿರತೆ 1947 ರಲ್ಲಿ ಕೊರಿಯಾ ಜಿಲ್ಲೆಯಲ್ಲಿ ಸಾವನ್ನಪ್ಪಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ