Russia-Ukraine War: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?

ಯುದ್ಧ ಶುರುವಾಗುತ್ತಿದ್ದಂತೆ ನಮ್ಮ ಜೀವ ಉಳಿದ್ರೆ ಸಾಕಪ್ಪ ಅಂತ ಅದೆಷ್ಟೋ ಜನ ಉಕ್ರೇನ್ ತೊರೆಯುತ್ತಿ್ದ್ದಾರೆ. ಆದ್ರೆ ಉಕ್ರೇನಿಯನ್ ಕುಟುಂಬದೊಂದಿಗೆ ಪೇಯಿಂಗ್ ಗೆಸ್ಟ್ ಆಗಿ ಜೀವನ ನಡೆಸುತ್ತಿರುವ ಈ ಹುಡುಗಿ ಕಷ್ಟದ ಸಮಯದಲ್ಲಿ ಆ ಕುಟುಂಬದೊಂದಿಗೆ ಇರಲು ನಿರ್ಧರಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಷ್ಯಾ ಮತ್ತು ಉಕ್ರೇನ್ (Russia and Ukraine) ನಡುವೆ ನಡೆಯುತ್ತಿರುವ ಯುದ್ಧದಲ್ಲಿ (War) ಸಾವಿರಾರು ಭಾರತೀಯ ವಿದ್ಯಾರ್ಥಿಗಳು (Students) ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಭಾರತ (India) ಸರ್ಕಾರ ಪ್ರಯತ್ನ ನಡೆಸುತ್ತಿದೆ. ಭಾರತೀಯ ಮಕ್ಕಳು ಕೂಡ ಆದಷ್ಟು ಬೇಗ ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹರಿಯಾಣದ 17 ವರ್ಷದ ನೇಹಾ (Neha) ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಉಕ್ರೇನಿಯನ್ ಕುಟುಂಬದೊಂದಿಗೆ ಪೇಯಿಂಗ್ ಗೆಸ್ಟ್ ಆಗಿ ಜೀವನ ನಡೆಸುತ್ತಿರುವ ನೇಹಾ ಕಷ್ಟದ ಸಮಯದಲ್ಲಿ ಆ ಕುಟುಂಬದೊಂದಿಗೆ ಇರಲು ನಿರ್ಧರಿಸಿದ್ದಾರೆ. ದಿ ಟ್ರಿಬ್ಯೂನ್‌ನ ಸುದ್ದಿ ಪ್ರಕಾರ, ನೇಹಾ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿರುವ ಮನೆಯ ಮಾಲೀಕರು ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಸೇನೆಯಲ್ಲಿ ತನ್ನ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

    ಸತ್ತರೂ ಸರಿ ಕುಟುಂಬ ಬಿಟ್ಟು ಬರಲಾರೆ

    ಇಂತಹ ಪರಿಸ್ಥಿತಿಯಲ್ಲಿ ಯೋಧನ ಮೂವರು ಮಕ್ಕಳು ಮತ್ತು ಆತನ ಪತ್ನಿಯನ್ನು ನೋಡಿಕೊಳ್ಳುತ್ತಿರುವ ನೇಹಾ ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಹರ್ಯಾಣದ ಚರ್ಖಿ ದಾದ್ರಿಯಲ್ಲಿ ವಾಸವಾಗಿರುವ ಶಿಕ್ಷಕಿಯೊಬ್ಬರ ಪುತ್ರಿಯಾಗಿರುವ ನೇಹಾ, ನಾನು ಬದುಕಿರಲಿ, ಇಲ್ಲದಿರಲಿ ಈ ಮಕ್ಕಳನ್ನು ಮತ್ತು ಅವರ ತಾಯಿಯನ್ನು ಇಂತಹ ಪರಿಸ್ಥಿತಿಯಲ್ಲಿ ಬಿಟ್ಟು ಬರುವುದಿಲ್ಲ ಎಂದು ತನ್ನ ತಾಯಿಗೆ ಹೇಳಿದ್ದಾಳೆ.

    ಬಂಕರ್ ನಲ್ಲಿ ವಾಸಿಸುತ್ತಿರುವ ಕುಟುಂಬದೊಂದಿಗೆ ಭಾರತದ ಹುಡುಗಿ ನೇಹಾ

    ನೇಹಾ ಉಕ್ರೇನ್ ಕುಟುಂಬದೊಂದಿಗೆ ಬಾಡಿಗೆಗೆ  ಇದ್ದಾರೆ. ಕಳೆದ ವರ್ಷ ನೇಹಾ ಉಕ್ರೇನ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ. ಪ್ರಸ್ತುತ ಹರಿಯಾಣ ಮೂಲದ 17 ವರ್ಷದ ನೇಹಾ, ಉಕ್ರೇನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಸದ್ಯ ಮನೆಯ ಮಾಲೀಕ ಸೇನೆಗೆ ಹೋಗಿದ್ದು, ಆತನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಬಂಕರ್‌ನಲ್ಲಿ ವಾಸಿಸುತ್ತಿದ್ದಾಳೆ.

    ಇದನ್ನೂ ಓದಿ: ಉಕ್ರೇನ್ ಮೇಲೆ ಫಾದರ್ ಆಫ್ ಆಲ್ ಬಾಂಬ್ಸ್​ ಪ್ರಯೋಗ ಮಾಡುತ್ತಾ ರಷ್ಯಾ..?

    ಮನೆಯಲ್ಲಿ ನಡೆದ ಸಂಭಾಷಣೆಯಲ್ಲಿ ನೇಹಾ ಹೇಳಿದ್ದರ ಪ್ರಕಾರ, ನಾವು ಹೊರಗೆ ಸ್ಫೋಟದ ಸದ್ದು ಕೇಳುತ್ತಲೇ ಇರುತ್ತೇವೆ. ಆದರೆ ಇಲ್ಲಿಯವರೆಗೆ ನಾವು ಚೆನ್ನಾಗಿದ್ದೇವೆ ಎಂದು ಹೇಳಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿನಿ ನೇಹಾ, ಹಾಸ್ಟೆಲ್ ಸಿಗದ ಕಾರಣ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಎಂಜಿನಿಯರ್ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ನೇಹಾ ಅವರ ತಾಯಿಯ ಆಪ್ತ ಸ್ನೇಹಿತೆ ಸವಿತಾ ಜಾಖರ್ ವಿವರಿಸಿದ್ದಾರೆ. 'ನೇಹಾ ಮನೆಯ ಮಾಲೀಕರ ಮಕ್ಕಳೊಂದಿಗೆ ತುಂಬಾ ಹಚ್ಚಿಕೊಂಡಿದ್ದಾಳೆ.

    ಸಂಕಷ್ಟದಲ್ಲಿ ಕುಟುಂಬವನ್ನು ಬಿಟ್ಟು ಬರದಿರಲು ನೇಹಾ ನಿರ್ಧಾರ

    ಯುದ್ಧದ ಕಾರಣ ದೇಶ ತೊರೆಯುವಂತೆ ನೇಹಾಗೆ ಸಲಹೆ ನೀಡಲಾಗಿತ್ತು. ನೇಹಾಳ ತಾಯಿ ಮಗಳಿಗೆ ದೇಶಕ್ಕೆ ಬರಲು ಎಲ್ಲಾ ವ್ಯವಸ್ಥೆ ಮಾಡಿದ್ದರು ಆದರೆ ನೇಹಾ ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ನೇಹಾಗೆ ರೊಮೇನಿಯಾಗೆ ಹೋಗಲು ಅವಕಾಶ ಸಿಕ್ಕಿತು. ಆದರೆ ನೇಹಾ ಇಂತಹ ಪರಿಸ್ಥಿತಿಯಲ್ಲಿ ಯುದ್ಧ ಭೀತಿಯಲ್ಲಿ ತೊಳಲಾಡುತ್ತಿರುವ ಕುಟುಂಬದ ಜೊತೆಗೆ ಇರಲು ಬಯಸಿದ್ದಾರೆ ಎಂದು ಸವಿತಾ ಹರ್ಯಾಣದ ಜಜ್ಜರ್ ಜಿಲ್ಲೆಯ ಝಾನ್ಸ್ವಾ ಗ್ರಾಮದ ಶಿಕ್ಷಕಿ ಹೇಳಿದ್ದಾರೆ.

    ಸಂಕಷ್ಟದ ಸಮಯದಲ್ಲಿ ನೇಹಾ ಸ್ಥಿತಪ್ರಜ್ಞೆ

    ಪ್ರಸ್ತುತ ಡೆನ್ಮಾರ್ಕ್ ಕೋಪನ್ ಹ್ಯಾಗನ್ ನಲ್ಲಿ ವಾಸಿಸುತ್ತಿರುವ ಫ್ರೆಂಚ್ ಪ್ರಜೆ ಸವಿತಾ, ನೇಹಾ ಅವರ ತಾಯಿಯ ಸ್ನೇಹಿತೆ ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಸವಿತಾ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಯಾಗಿದೆ, ವಿಚಿತ್ರವಾದ ಚಡಪಡಿಕೆ ಇದೆ. ಇಡೀ ರಾತ್ರಿ ನಿದ್ರೆ ಮಾಡಲಿಲ್ಲ. ಅತ್ಯಂತ ಆಪ್ತ ಸ್ನೇಹಿತನ 17 ವರ್ಷದ ಮಗಳು ಕೀವ್‌ನಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

    ನೇಹಾಳ ದಿಟ್ಟ ನಿರ್ಧಾರ

    ಇದನ್ನೂ ಓದಿ: ರಷ್ಯಾ ಸೇನೆ ತಡೆಯಲು ತನ್ನನ್ನೇ ತಾನು ಸ್ಪೋಟಿಸಿಕೊಂಡ ಯೋಧ; ಇದು ಉಕ್ರೇನಿಯನ್ನರ ದೇಶಪ್ರೇಮ

    ಹಾಸ್ಟೆಲ್‌ನಲ್ಲಿ ಸ್ಥಳಾವಕಾಶವಿಲ್ಲ. ಆದ್ದರಿಂದ ನೇಹಾ ಮನೆಯೊಂದರಲಲಿ ಬಾಡಿಗೆಗೆ ಇದ್ದರು. ಮೂರು ಮಕ್ಕಳ ಸುಂದರವಾದ ಕುಟುಂಬ ಅದು. ಮಕ್ಕಳ ತಂದೆ ಸೇನೆಗೆ ಸೇರುವ ಹಿಂದಿನ ದಿನ ತಾಯಿ ಮೂರು ಮಕ್ಕಳೊಂದಿಗೆ ಬಂಕರ್‌ನಲ್ಲಿ ವಾಸಿಸುತ್ತಿದ್ದಾರೆ. ನನ್ನ ಗೆಳತಿಯ ಮಗಳು ನೇಹಾ ಅವರ ಜೊತೆ ಇದ್ದಾಳೆ.

    ನನ್ನ ಸ್ನೇಹಿತೆ ತುಂಬಾ ಕಷ್ಟಪಟ್ಟು ಅವಳನ್ನು ರಾಯಭಾರ ಕಚೇರಿಯಿಂದ ಹೊರತರಲು ಪ್ರಯತ್ನಿಸಿದಳು. ಆದರೆ ಹುಡುಗಿ ಮೂರು ಮಕ್ಕಳನ್ನು ಮತ್ತು ಅವರ ತಾಯಿಯನ್ನು ಅಂತಹ ಕಷ್ಟದ ಸಮಯದಲ್ಲಿ ಒಬ್ಬಂಟಿಯಾಗಿ ಬಿಟ್ಟು ಹಿಂತಿರುಗಲು ಬಯಸುವುದಿಲ್ಲ ಎಂದಿದ್ದಾಳೆ.
    Published by:renukadariyannavar
    First published: