• Home
 • »
 • News
 • »
 • national-international
 • »
 • Doctor Suspended: ಎಂಬಿಬಿಎಸ್ ವೈದ್ಯನನ್ನು 3 ತಿಂಗಳು ಅಮಾನತ್ತು ಮಾಡಿದ ವೈದ್ಯಕೀಯ ಆಯೋಗ! ಕಾರಣ?

Doctor Suspended: ಎಂಬಿಬಿಎಸ್ ವೈದ್ಯನನ್ನು 3 ತಿಂಗಳು ಅಮಾನತ್ತು ಮಾಡಿದ ವೈದ್ಯಕೀಯ ಆಯೋಗ! ಕಾರಣ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಮ್ಮೆ ಕೆಲ ಚಿಕಿತ್ಸೆಗೆಂದು ನಿಗದಿಪಡಿಸಲಾದ ನಿರ್ದಿಷ್ಟ ತರಬೇತಿಯಿಲ್ಲದೆ ಆ ಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಬಹುದು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರನ್ನು ಅಮಾನತ್ತು ಮಾಡಿರುವ ಘಟನೆ ದೂರದ ರಾಯಪುರದಿಂದ ವರದಿಯಾಗಿದೆ.

 • News18 Kannada
 • 2-MIN READ
 • Last Updated :
 • Chhattisgarh, India
 • Share this:

ವೈದ್ಯಕೀಯ ವೃತ್ತಿ (Medical Profession) ಎಂಬುದು ಬಲು ಮಹತ್ವದ್ದಾಗಿರುತ್ತದೆ. ಇಲ್ಲಿ ಅಧ್ಯಯನವನ್ನು (Study) ಸರಿಯಾಗಿ ಹಾಗೂ ಬೇಕಾದ ವಿಷಯದಲ್ಲಿ ಸ್ಪಷ್ಟವಾಗಿ ಮಾಡಬೇಕು, ಅಂದಾಗಲೇ ವೈದ್ಯನಾದವ (Doctor) ಯಾವ ರೀತಿ ಶಾರೀರಿಕ ಪರೀಕ್ಷೆಗಳನ್ನು ಮಾಡಬಹುದು, ಹೇಗೆ ಚಿಕಿತ್ಸೆ (Treatment) ನೀಡಬಹುದು ಮುಂತಾದ ವಿಷಯಗಳ ಬಗ್ಗೆ ಸಮರ್ಪಕ ಜ್ಞಾನ (Adequate knowledge) ಪಡೆಯುತ್ತಾರೆ. ಕೆಲವೊಮ್ಮೆ ಕೆಲ ಚಿಕಿತ್ಸೆಗೆಂದು ನಿಗದಿಪಡಿಸಲಾದ ನಿರ್ದಿಷ್ಟ ತರಬೇತಿಯಿಲ್ಲದೆ (Training) ಆ ಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಬಹುದು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರನ್ನು ಅಮಾನತ್ತು (Suspension)  ಮಾಡಿರುವ ಘಟನೆ ದೂರದ ರಾಯಪುರದಿಂದ (Raipur) ವರದಿಯಾಗಿದೆ.


ವೈದ್ಯನನ್ನು ಅಮಾನತ್ತು ಮಾಡಲು ಕಾರಣವೇನು?
ಛತ್ತೀಸಗಡ್ ವೈದ್ಯಕೀಯ ಆಯೋಗವು, ವೈದ್ಯರೊಬ್ಬರು ನಿರ್ದಿಷ್ಟ ನೋಂದಣಿ ಅಗತ್ಯವಿರುವ ಅರವಳಿಕೆ ಮದ್ದು ನೀಡುವ ತರಬೇತಿಯನ್ನು ಪಡೆಯದೆಯೇ ಅದನ್ನು ರೋಗಿಗಳಿಗೆ ಬಳಸುತ್ತಿದ್ದುದು ಕಂಡುಬಂದಿದ್ದರಿಂದ ಅವರನ್ನು ಮೂರು ತಿಂಗಳುಗಳ ಕಾಲ ವೈದ್ಯಕೀಯ ವೃತ್ತಿ ಅಭ್ಯಾಸ ಮಾಡದಂತೆ ಅಮಾನತ್ತು ಮಾಡಿದೆ. ಈ ಆದೇಶವನ್ನು ಛತ್ತೀಸಗಡ್ ವೈದ್ಯಕೀಯ ಆಯೋಗದ ಅಧ್ಯಕ್ಷರಾದ ಭೀಮ್ ಸಿಂಗ್ ಅವರು ಹೊರಡಿಸಿದ್ದಾರೆ.


ಇದನ್ನೂ ಓದಿ: Shocking: 40 ವರ್ಷದ ಮಹಿಳೆ ಮೇಲೆ ಐವರು ಪುರುಷರಿಂದ 2 ದಿನ ಗ್ಯಾಂಗ್ ರೇಪ್


ವೈದ್ಯಕೀಯ ಆಯೋಗವು ಈ ಕುರಿತು ಜಾರಿ ಮಾಡಿರುವ ತನ್ನ ಪ್ರಕಟಣೆಯಲ್ಲಿ, ವೈದ್ಯರು ಎಂಬಿಬಿಎಸ್ ಪದವೀಧರರಾಗಿದ್ದರೂ ಸಹ ಅರವಳಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಹೆಚ್ಚುವರಿ ಅರ್ಹತಾ ತರಬೇತಿಯನ್ನು ಹೊಂದಿಲ್ಲ. ಹಾಗಾಗಿ ಅವರನ್ನು ಅಕ್ಟೋಬರ್ 11, 2022 ರಿಂದ ಮುಂದಿನ ವರ್ಷದ ಜನವರಿ 11, 2023ರವರೆಗೆ ವೈದ್ಯಕೀಯ ಸೇವೆ ಸಲ್ಲಿಸದಂತೆ ಪರವಾನಗಿಯನ್ನು ಅಮಾನತ್ತುಗೊಳಿಸಿದೆ. ಅಮಾನತ್ತುಗೊಂಡಿರುವ ವೈದ್ಯರು ದಲ್ಲಿ-ರಾಜಹಾರಾದಲ್ಲಿರುವ ಶಾಹೀದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆನ್ನಲಾಗಿದೆ.


ಈ ಹಿಂದೆಯೂ ಇಂಥದ್ದೇ ಒಂದು ಘಟನೆ ನಡೆದಿತ್ತು 
ಮಾಧ್ಯಮದ ವರದಿಯಂತೆ ಈ ಸೌಲಭ್ಯ ಕೇಂದ್ರದ ಇನ್ನೊಬ್ಬ ವೈದಯರನ್ನೂ ಸಹ ಇದೇ ರೀತಿಯಾಗಿ ಮೂರು ತಿಂಗಳುಗಳ ಕಾಲ ಅಮಾನತ್ತು ಮಾಡಲಾಗಿದೆ. ಆ ವೈದ್ಯರೂ ಸಹ ಅವಶ್ಯಕವಾದ ಅರ್ಹತಾ ದಾಖಲೆಗಳಿಲ್ಲದೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಒಟ್ಟಾರೆ ಈ ಪ್ರಕರಣಕ್ಕೆ ಸಂಬಂಧವಾಗಿ ಹೇಳಬೇಕೆಂದರೆ ಮೂರು ವರ್ಷಗಳ ಹಿಂದೆ ಶಾಹೀದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಅಸು ನೀಗಿದ್ದರು. ಆ ರೋಗಿಯ ಸಂಬಂಧಿಕರು ಆಸ್ಪತ್ರೆಯ ವೈದ್ಯರುಗಳ ಅಸಮರ್ಥತೆ ಹಾಗೂ ನಿರ್ಲಕ್ಷತೆಯ ಮೇಲೆ ಆರೋಪ ಮಾಡಿ ಈ ಬಗ್ಗೆ ನ್ಯಾಯ ಒದಗಿಸುವಂತೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು.


ವರದಿಯೊಂದರ ಪ್ರಕಾರ, ರೋಗಿಯೊಬ್ಬರನ್ನು ಚಿಕಿತ್ಸೆಗೆಂದು 12ನೇ ಡಿಸೆಂಬರ್ 2019 ರಂದು ಈ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತದನಂತರ ರೋಗಿಗೆ ಆಪರೇಷನ್ ನೆರವೇರಿಸಿ ಕೆಲ ಸಮಯದಲ್ಲೇ ಪ್ರಜ್ಞೆ ಬರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಹಾಗಾಗದೆ ರೋಗಿ ಅಸು ನೀಗಿದರು. ಇದರಿಂದ ಕುಪಿತರಾದ ರೋಗಿಯ ಸಂಬಂಧಿಕರು ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಹಾಗಾಗಿ ಈ ಪ್ರಕರಣವು ಸಾಕಷ್ಟು ಬಿಸಿ ಏರಿಸಿತು ಎನ್ನಲಾಗಿದೆ.


ಇದನ್ನೂ ಓದಿ: Bilkis Bano: ಬಿಲ್ಕಿಸ್ ಬಾನೋ ಪ್ರಕರಣದ 11 ದೋಷಿಗಳ ಬಿಡುಗಡೆ ಮಾಡಿದ್ದೇಕೆ? ಸುಪ್ರೀಂಗೆ ಕಾರಣ ಕೊಟ್ಟ ಗುಜರಾತ್ ಸರ್ಕಾರ


ತದನಂತ ರಾಜ್ಯದ ವೈದ್ಯಕೀಯ ಆಯೋಗವು 2022 ರಲ್ಲಿ ಸಭೆ ನಡೆಸಿದಾಗ ಆಸ್ಪತ್ರೆಯ ವೈದ್ಯರು ಅರವಳಿಕೆ ನೀಡಲು ಬೇಕಾಗಿರುವ ನಿಗದಿತ ಅರ್ಹತಾ ತರಬೇತಿಯಿರದೆ ಅದನ್ನು ನೆರವೇರಿಸಿರುವುದಕ್ಕೆ ವೈದ್ಯರನ್ನು ತಪ್ಪಿತಸ್ಥರನ್ನಾಗಿ ಪರಿಗಣಿಸಿತು ಹಾಗೂ ಅದಕ್ಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಆಯೋಗದ ಸೆಕ್ಷನ್ ಅನುಸಾರವಾಗಿ ಆ ವೈದ್ಯನ ಮೇಲೆ ಶಿಸ್ತು ಕ್ರಮ ಜರುಗಿಸಿದೆ ಎಂದು ಈಗ ವರದಿಯಾಗಿದೆ.


ವೈದ್ಯರು ತೋರಿದ್ದ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುವಂತೆ ಮನವಿ
ಇದಕ್ಕೂ ಮುಂಚೆ ಛತ್ತೀಸಗಡ್ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ಶಿರೋಮಣಿ ಮಾಥೂರ್ ಅವರನ್ನು ರೋಗಿಯ ಸಂಬಂಧಿಕರು ಭೇಟಿ ಮಾಡಿ ವೈದ್ಯರಿಬ್ಬರು ತೋರಿದ್ದ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೆಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಈ ಸಂದರ್ಭದಲ್ಲಿ ಅಸು ನೀಗಿದ ರೋಗಿಯ ತಂದೆಯು ಮಾತನಾಡುತ್ತ ಆಪರೆಷನ್ ಮಾಡುವ ಮುಂಚೆ ತಮ್ಮ ಮಗನ ಆರೋಗ್ಯವು ಸ್ಥಿರವಾಗಿತ್ತು ಹಾಗೂ ತದನಂತರ ವ್ಯತಿರಿಕ್ತ ಆರೋಗ್ಯ ಪರಿಸ್ಥಿತಿ ಉಂಟಾಗಿ ತಮ್ಮ ಮಗ ಅಸುನೀಗಿರುವುದಾಗಿಯೂ ವೈದ್ಯರು ತಪ್ಪಾದ ಚಿಕಿತ್ಸೆ ನೀಡಿದ್ದರ ಪರಿಣಾಮದಿಂದಲೇ ಹೀಗಾಯಿತು ಎಂದು ದೂರಿದ್ದರೆನ್ನಲಾಗಿದೆ.

Published by:Ashwini Prabhu
First published: