ರೈಲುಗಳಲ್ಲಿ ಊಟ-ತಿಂಡಿ ಬೆಲೆ ಏರಿಕೆ; ಹೊಸ ದರ ಎಷ್ಟು ಗೊತ್ತೇ?

ಪ್ರಮುಖವಾಗಿ ರಾಜಧಾನಿ ಎಕ್ಸ್​​ಪ್ರೆಸ್​​, ಶತಾಬ್ದಿ ಸೂಪರ್ ಫಾಸ್ಟ್​ ಎಕ್ಸ್​ಪ್ರೆಸ್​, ಡೂರಾಂಟೋ ರೈಲುಗಳಲ್ಲಿ ಊಟ, ತಿಂಡಿ, ಕಾಫಿ, ಟೀ ದರವನ್ನು ಹೆಚ್ಚಿಸಲಾಗಿದ್ದು, ಇಂದು ರೈಲ್ವೆ ಮಂಡಳಿ ಘೋಷಣೆ ಮಾಡಿದೆ.

Latha CG | news18-kannada
Updated:November 15, 2019, 4:31 PM IST
ರೈಲುಗಳಲ್ಲಿ ಊಟ-ತಿಂಡಿ ಬೆಲೆ ಏರಿಕೆ; ಹೊಸ ದರ ಎಷ್ಟು ಗೊತ್ತೇ?
ಊಟ
  • Share this:
ನವದೆಹಲಿ(ನ.15): ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ರೈಲ್ವೆ ಮಂಡಳಿ ಮುಂದಾಗಿದೆ. ಅಂದರೆ ರೈಲ್ವೆ ಟಿಕೆಟ್​ ದರವನ್ನು ಏರಿಕೆ ಮಾಡಿಲ್ಲ. ಬದಲಾಗಿ ರೈಲುಗಳಲ್ಲಿ ಊಟ-ತಿಂಡಿ, ಕಾಫಿ-ಟೀ ದರವನ್ನು ಹೆಚ್ಚು ಮಾಡಿದೆ. ಇನ್ಮುಂದೆ ಪ್ರಯಾಣಿಕರು ರೈಲಿನಲ್ಲಿ ಅಧಿಕ ಹಣ ನೀಡಿ ಊಟ-ತಿಂಡಿ ಖರೀದಿಸಬೇಕಾದ ಅನಿವಾರ್ಯತೆ  ಎದುರಾಗಿದೆ.

ಪ್ರಮುಖವಾಗಿ ರಾಜಧಾನಿ ಎಕ್ಸ್​​ಪ್ರೆಸ್​​, ಶತಾಬ್ದಿ ಸೂಪರ್ ಫಾಸ್ಟ್​ ಎಕ್ಸ್​ಪ್ರೆಸ್​, ಡೂರಾಂಟೋ ರೈಲುಗಳಲ್ಲಿ ಊಟ, ತಿಂಡಿ, ಕಾಫಿ, ಟೀ ದರವನ್ನು ಹೆಚ್ಚಿಸಲಾಗಿದ್ದು, ಇಂದು ರೈಲ್ವೆ ಮಂಡಳಿ ಘೋಷಣೆ ಮಾಡಿದೆ.

ರಾಜ್ಯಾದ್ಯಂತ ಕನಕ ಜಯಂತಿ ಆಚರಣೆ: ‘ಜಾತಿ ವಿರುದ್ಧ ದನಿಯೆತ್ತಿದ ದಾಸರ ಹಾದಿಯಲ್ಲಿ ಸಾಗೋಣ‘ ಎಂದ ಗಣ್ಯರು

ಒಂದು ಕಪ್​ ಟೀಗೆ ಮೊದಲು 29 ರೂ.ಇತ್ತು. ಈಗ 6 ರೂ.ಹೆಚ್ಚಿಸಲಾಗಿದ್ದು, 35 ರೂ. ಆಗಿದೆ. ಇನ್ನು, ಒಂದು ತಿಂಡಿಯ ಬೆಲೆ 140 ರೂಪಾಯಿ ಆಗಿದ್ದು, 7 ರೂ.ಹೆಚ್ಚಿಸಲಾಗಿದೆ. ಒಂದು ಊಟದ ಬೆಲೆ ಇನ್ನೂ ಹೆಚ್ಚಾಗಿದೆ. ಬರೋಬ್ಬರಿ 245 ರೂ. ಕೊಟ್ಟು ಊಟ ಖರೀದಿಸಬೇಕಾಗಿದೆ. ಊಟದ ದರದಲ್ಲಿ 15ರೂ.ಹೆಚ್ಚಿಗೆ ಮಾಡಲಾಗಿದೆ.

ಜೊತೆಗೆ, ದ್ವಿತೀಯ ದರ್ಜೆ ಎಸಿ ಕೋಚ್​, ತೃತೀಯ ದರ್ಜೆ ಎಸಿ ಕೋಚ್ ಮತ್ತು ಚೇರ್​ ಕಾರ್ ರೈಲುಗಳಲ್ಲೂ ಊಟದ ದರವನ್ನು ಏರಿಕೆ ಮಾಡಲಾಗಿದೆ. ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಂದು ಕಪ್ ಟೀ ಗೆ 20ರೂ, ನಿಗದಿ ಮಾಡಲಾಗಿದೆ. ಮೊದಲು 15 ರೂ. ಇತ್ತು. ಒಂದು ತಿಂಡಿಯ ಬೆಲೆ 105 ರೂ.ಗಳಾಗಿದ್ದು, 8 ರೂಪಾಯಿ ಹೆಚ್ಚಿಸಲಾಗಿದೆ. ಊಟದ ಬೆಲೆ 185 ರೂ.ಗಳಾಗಿದ್ದು, 10 ರೂ.ಗಳಷ್ಟು ಏರಿಕೆ ಮಾಡಲಾಗಿದೆ.

ಇಷ್ಟೇ ಅಲ್ಲದೇ, ರೈಲುಗಳಲ್ಲಿ ಪ್ರಾದೇಶಿಕ ರುಚಿ ಹೊಂದಿರುವ ತಿಂಡಿಗಳನ್ನು ಪರಿಚಯಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಜನರ ನಂಬಿಕೆ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಡಿಕೆ ಶಿವಕುಮಾರ್​​ಎಸಿ ಕೋಚ್​​ ಹಾಗೂ ಸೂಪರ್​ ಫಾಸ್ಟ್​ ಎಕ್ಸ್​​ಪ್ರೆಸ್​ ರೈಲುಗಳಲ್ಲಿ ಮಾತ್ರ ಬೆಲೆ ಏರಿಕೆ ದರವನ್ನು ಕಾಣಬಹುದಾಗಿದೆ. ಹೀಗಾಗಿ ಉಳಿದ ಸಾಮಾನ್ಯ ರೈಲುಗಳಲ್ಲಿ ಊಟ-ತಿಂಡಿಗಳಲ್ಲಿ ಯಾವುದೇ ಬೆಲೆ ಏರಿಕೆ ಇರುವುದಿಲ್ಲ.

First published: November 15, 2019, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading