Ukraine: ಭಾರತೀಯರ ಸ್ಥಳಾಂತರಕ್ಕೆ ಉಕ್ರೇನ್ ಗಡಿಗೆ ತಂಡ ಕಳುಹಿಸಿದ ಕೇಂದ್ರ; ಸಂಪರ್ಕಿಸಲು ಎಲ್ಲಾ ಫೋನ್ ನಂಬರ್ಸ್ ಇಲ್ಲಿದೆ

ತಂಡಗಳನ್ನು ಉಕ್ರೇನ್​ನೊಂದಿಗೆ ಗಡಿ ಹಂಚಿಕೊಂಡಿರುವ ಹಂಗೇರಿ, ಪೋಲೆಂಡ್, ಸ್ಲೋವಾಕ್ ಗಣರಾಜ್ಯ ಮತ್ತು ರೊಮೇನಿಯಾದಲ್ಲಿ ಗಡಿಗಳಿಗೆ ಕಳುಹಿಸಿದೆ. ಅಲ್ಲಿ ಸಹಾಯ ಬೇಕಾದವರು ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ

ರಾಯಿಟರ್ಸ್​​ ಚಿತ್ರ

ರಾಯಿಟರ್ಸ್​​ ಚಿತ್ರ

  • Share this:
    ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಯುದ್ಧ ಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಂಬಂಧ ತಿಳಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಉಕ್ರೇನ್​ನಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 20000 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದು, ಅವರ ಕಾಳಜಿಗೆ ಸರ್ಕಾರ ಮುಂದಾಗಿದೆ. ಉಕ್ರೇನ್‌ನಲ್ಲಿ ಉಭಯ ದೇಶಗಳ ನಡುವಿನ ವಿನಿಮಯ ಕಾರ್ಯಕ್ರಮಗಳ ಭಾಗವಾಗಿ ವಿವಿಧ ಶೈಕ್ಷಣಿಕ ಕೋರ್ಸ್‌ಗಳನ್ನು ಅವರು ಮಾಡುತ್ತಿದ್ದು, ಈಗಾಗಲೇ ಅವರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.

    ಮುಚ್ಚಿದ ವಾಯು ಪ್ರದೇಶ 

    ಎರಡನೇ ದಿನದ ಯುದ್ಧ ಭಾರತದ ಪೋಷಕರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಉಕ್ರೇನ್​ನಲ್ಲಿರುವ ತಮ್ಮ ಮಕ್ಕಳ ಸ್ಥಿತಿಗತಿ ಏನಾಗಿದೆ ಎಂಬ ಕಳವಳ ಮೂಡಿದ್ದು, ಅವರ ಸುರಕ್ಷಿತ ವಾಪಸ್ಸಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೊರೆ ಹೋಗಿದೆ.
    ಇನ್ನು ವಾಯು ಪ್ರದೇಶಗಳು ಮುಚ್ಚಿರುವ ಹಿನ್ನಲೆ ಪರ್ಯಾಯ ಮಾರ್ಗಗಳ ಮೂಲಕ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಸಾಗರ ಮಾರ್ಗದ ಮೂಲಕ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಭಾರತೀಯ ಸ್ಥಳಾಂತರಿಸುವ ತಂಡಗಳು ರೊಮೇನಿಯನ್ ಗಡಿಯನ್ನು ತಲುಪಿವೆ, ಉಕ್ರೇನ್ ರಾಜಧಾನಿ ಕೈವ್‌ನಿಂದ ಸರಿಸುಮಾರು 12 ಗಂಟೆಗಳ ಪಯಣ ಇದಾಗಿದೆ. ಅಲ್ಲಿಂ ವಿದ್ಯಾರ್ಥಿಗಳು ಬುಚಾರೆಸ್ಟ್‌ನಲ್ಲಿ ವಿಮಾನಗಳನ್ನು ಏರಲಿದ್ದಾರೆ.

    ಭಾರತೀಯರ ಸಹಾಯಕ್ಕೆ ನಿಯಂತ್ರಣ ಕೊಠಡಿ

    ನಾಳೆ ಉಕ್ರೇನ್‌ನಿಂದ ಭಾರತೀಯರನ್ನು ಬುಚಾರೆಸ್ಟ್ ಮೂಲಕ ಸಾಗಿಸಲು ಏರ್ ಇಂಡಿಯಾ 2 ವಿಮಾನಗಳನ್ನು ಕಳುಹಿಸಲಿದೆ. ಭಾರತೀಯ ವಿದೇಶಾಂಗ ಸಚಿವಾಲಯವು ವಿದ್ಯಾರ್ಥಿಗಳು ಮತ್ತು ಇತರ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

    ಇದನ್ನು ಓದಿ: ಇಂದು ಭಾರತದ ಸಹಾಯ ಬೇಡುತ್ತಿರುವ ಉಕ್ರೇನ್ 22 ವರ್ಷದ ಹಿಂದೆ ಭಾರತವನ್ನೇ ವಿರೋಧ ಮಾಡಿತ್ತು!

    ಗಡಿಗಳಲ್ಲಿ ಭಾರತೀಯ ತಂಡ

    ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತೀಯ ಪ್ರಜೆಗಳನ್ನು ಸ್ಥಳಾಂತರ ಮಾಡಲು ತನ್ನ ತಂಡಗಳನ್ನು ಉಕ್ರೇನ್​ನೊಂದಿಗೆ ಗಡಿ ಹಂಚಿಕೊಂಡಿರುವ ಹಂಗೇರಿ, ಪೋಲೆಂಡ್, ಸ್ಲೋವಾಕ್ ಗಣರಾಜ್ಯ ಮತ್ತು ರೊಮೇನಿಯಾದಲ್ಲಿ ಗಡಿಗಳಿಗೆ ಕಳುಹಿಸಿದೆ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಗಡಿ ಪ್ರದೇಶಗಳಲ್ಲಿ ಶಿಬಿರವನ್ನು ಸ್ಥಾಪಿಸಲು ಈ ನಾಲ್ಕು ದೇಶಗಳಲ್ಲಿನ ತನ್ನ ಸಹವರ್ತಿಗಳೊಂದಿಗೆ ಮಾತನಾಡಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನು ಓದಿ: ವಿವಿಧ ದೇಶಗಳ ಕಟ್ಟಡದ ಮೇಲೆ ಉಕ್ರೇನ್​ ಧ್ವಜದ ಬಣ್ಣದ ಬೆಳಕು; ಒಗ್ಗಟ್ಟಿನ ಮಂತ್ರ ಜಪಿಸಿದ ರಾಷ್ಟ್ರಗಳು

    ಉಕ್ರೇನ್‌ನ ಜಕಾರ್‌ಪಾಟಿಯಾ ಒಬ್ಲಾಸ್ಟ್‌ನ ಉಜ್ಹೋರೋಡ್ ಎದುರು ಜಹೋನಿ ಗಡಿ ಪೋಸ್ಟ್‌ಗೆ ತಂಡವು ಸಾಗುತ್ತಿದ್ದು ತಂಡದ ಸದಸ್ಯರ ಸಂಖ್ಯೆ ಹೀಗಿದೆ
    ಎಸ್. ರಾಮ್​​ ಜಿ
    ಮೊಬೈಲ್: +36305199944
    ವಾಟ್ಸಾಪ್: +917395983990
    ಅಂಕುರ್
    ಮೊಬೈಲ್ ಮತ್ತು ವಾಟ್ಸಾಪ್: +36308644597
    ಮೋಹಿತ್ ನಾಗ್ಪಾಲ್
    ಮೊಬೈಲ್: +36302286566
    ವಾಟ್ಸಾಪ್: +918950493059
    ಪೋಲೆಂಡ್: ಉಕ್ರೇನ್‌ನೊಂದಿಗಿನ ಕ್ರಾಕೋವಿಕ್ ಭೂ ಗಡಿಯತ್ತ ಸಾಗುತ್ತಿರುವ ತಂಡ
    ಪಂಕಜ್ ಗಾರ್ಗ್
    ಮೊಬೈಲ್: +48660460814 / +48606700105
    ಸ್ಲೋವಾಕ್ ರಿಪಬ್ಲಿಕ್: ತಂಡವು ಉಕ್ರೇನ್‌ನೊಂದಿಗೆ ವೈಸ್ ನೆಮೆಕೆ ಭೂ ಗಡಿಯತ್ತ ಸಾಗುತ್ತಿದೆ
    ಮನೋಜ್ ಕುಮಾರ್
    ಮೊಬೈಲ್: +421908025212
    ಶ್ರೀಮತಿ ಇವಾನ್ ಕೊಜಿಂಕಾ
    ಮೊಬೈಲ್: +421908458724
    ರೊಮೇನಿಯಾ: ಉಕ್ರೇನ್‌ನೊಂದಿಗಿನ ಸುಸೇವಾ ಭೂ ಗಡಿಗೆ ತಂಡವು ದಾರಿಯಲ್ಲಿದೆ
    ಗೌಶುಲ್ ಅನ್ಸಾರಿ
    ಮೊಬೈಲ್: +40731347728
    ಉದ್ದೇಶ ಪ್ರಿಯದರ್ಶಿ
    ಮೊಬೈಲ್: +40724382287
    ಆಂಡ್ರಾ ಹರಿಯೊನೊವ್
    ಮೊಬೈಲ್: +40763528454
    ಮಾರಿಯಸ್ ಸಿಮಾ
    ಮೊಬೈಲ್: +40722220823

    ಭಾರತೀಯ ವಾಯುಪಡೆಯ (ಐಎಎಫ್) ವಿಮಾನಗಳು ಸಿದ್ಧವಾಗಿವೆ, ಒಂದು ವೇಳೆ ಸ್ಥಳಾಂತರಿಸಲು ಅವುಗಳನ್ನು ಸೇವೆಗೆ ಒತ್ತುವ ಅಗತ್ಯವಿದ್ದರೆ ತಕ್ಷಣಕ್ಕೆ ಕಾರ್ಯಾಚರಣೆ ಮಾಡಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಕ್ಷಣಾ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದೆ. ಏರ್‌ಲಿಫ್ಟ್‌ಗೆ ವ್ಯವಸ್ಥೆ ಮಾಡಬೇಕೆಂದು ನಾವು ಅವರಿಗೆ ಹೇಳಿದ್ದೇವೆ. ಆ ಸಂದರ್ಭದಲ್ಲಿ, IAF ವಾಣಿಜ್ಯ ವಿಮಾನಗಳೊಂದಿಗೆ ಕಾರ್ಯಾಚರಣೆ ನಡೆಸಲಿದ್ದು, ಈ ಸಂಬಂಧ ಕೂಡ ಚರ್ಚೆ ನಡೆಸಲಾಗುವುದು
    Published by:Seema R
    First published: