Kabul Airport Blasts : ಶಾಂತಿಯುತ ಅಫ್ಘಾನ್​ ಅನ್ನು ಭಾರತ ಬಯಸುತ್ತದೆ; ವಿದೇಶಾಂಗ ಸಚಿವಾಲಯ

ಈಗಾಗಲೇ ಆರು ವಿಮಾನಗಳ ಮೂಲಕ 550ಕ್ಕೂ ಹೆಚ್ಚು ಮಂದಿಯನ್ನು ಅಫ್ಘಾನ್​ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ

 • Share this:
  ನವದೆಹಲಿ (ಆ. 27): ಅಫ್ಘಾನಿಸ್ತಾನ (Afghanistan) ದಿಂದ ಭಾರತಕ್ಕೆ (india) ಮರಳಲು ಇಚ್ಛಿಸಿದ ಬಹುತೇಕ ಭಾರತೀಯರನ್ನು ದೇಶಕ್ಕೆ ಮರಳಿ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ( Ministry of External Affairs spokesperson  Arindam Bagchi ) ತಿಳಿಸಿದ್ದಾರೆ. ಕಾಬೂಲ್​ ನಡೆದ ಬಾಂಬ್​ ಸ್ಪೋಟದ (kabul Bomb blast) ಬಳಿಕ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ಶಾಂತಿಯುತ ಅಫ್ಘಾನಿಸ್ತಾನವನ್ನು ಬಯಸುತ್ತದೆ.  ಕಾಬೂಲ್​ನಲ್ಲಿ ಭದ್ರತಾ ಬೆದರಿಕೆ ನಡುವೆ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಈಗಾಗಲೇ ಆರು ವಿಮಾನಗಳ ಮೂಲಕ 550ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 260 ಮಂದಿ ರಾಯಭಾರ ಕಚೇರಿ ಮತ್ತು ಇತರೆ ಸಿಬ್ಬಂದಿಗಳು ಇದ್ದಾರೆ ಎಂದು ಅವರು ತಿಳಿಸಿದರು.

  ಅಫ್ಘಾನ್​ನಲ್ಲಿರುವ ಬಹುತೇಕ ಭಾರತೀಯರು ದೇಶಕ್ಕೆ ಮರಳುವ ಇಚ್ಛ ವ್ಯಕ್ತಪಡಿಸಿದ್ದಾರೆ. ಅವರನ್ನು ಶೀಘ್ರದಲ್ಲಿಯೇ ಮರಳಿ ಕರೆ ತರುವ ಪ್ರಯತ್ನ ನಡೆಸಲಾಗುವುದು. ಆದರೆ, ಕೆಲವರ ನಿಖರ ಮಾಹಿತಿ ಸಿಗುತ್ತಿಲ್ಲ ಎಂದರು.

  ಅಫ್ಘಾನ್​ನಿಂದ ಮರಳಿದವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲಾಗುವುದು ಮತ್ತು ಅವರನ್ನು ತುರ್ತು ವೀಸಾದ ಮೇಲೆ ಇರಿಸಲಾಗಿದ್ದು, ಇದು ಆರು ತಿಂಗಳ ಕಾಲ ಮಾನ್ಯತೆ ಅವಧಿ ಹೊಂದಿರಲಿದೆ. ಅವಧಿ ಮುಗಿದ ಬಳಿಕ ಮತ್ತೆ ಪುನರ್​ನವೀಕರಿಸಲಾಗುವುದು  ಎಂದು ಹೇಳಿದರು

  ಅಫ್ಘಾನ್​ನಿಂದೆ ಭಾರತ ಅನೇಕ ನಾಗರೀಕರನ್ನು ಸ್ಥಳಾಂತರಿಸಿದ್ದು, ಇದರಲ್ಲಿ ಬಹುತೇಕರು ಸಿಖ್ಖರು ಮತ್ತಿ ಹಿಂದೂಗಳು ಇದ್ದಾರೆ. ನಮ್ಮ ಮೂಲ ಗುರಿ ಏನಿದ್ದರೂ ಅಲ್ಲಿನವರನ್ನು ಸ್ಥಳಾಂತರಿಸುವುದಾಗಿದೆ. ನಮ್ಮ ಪರವಾಗಿ ನಿಂತ ಅಫ್ಘಾನರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಅವರು ಇದೇ ವೇಳೆ ತಿಳಿಸಿದರು

  ಅಫ್ಘಾನ್​ ಪರಿಸ್ಥಿತಿ ಸದ್ಯ ಅನಿಶ್ಚಿತವಾಗಿದೆ, ಜನರ ಸುರಕ್ಷತೆ ಮತ್ತು ಕಾಳಜಿ ಪ್ರಾಥಮಿಕ ಕಳಜಿಯಾಗಿದೆ. ಪ್ರಸ್ತುತ, ಕಾಬೂಲ್‌ನಲ್ಲಿ ಸರ್ಕಾರ ರಚಿಸುವ ಯಾವುದೇ ಘಟಕದ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು

  ಅಫ್ಘಾನಿಸ್ತಾನ ಪರಿಸ್ಥಿತಿಯ ಕುರಿತು ರಷ್ಯಾದೊಂದಿಗೆ ಚರಚೆ ನಡೆಸಲಾಗಿದೆ. ಚಾನಲ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಸಂಭಾಷಣೆ ನಡೆಸಿದ್ದಾರೆ ಎಂದು ತಿಳಿಸಿದರು

  ಇದನ್ನು ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ 3ನೇ ಸ್ಫೋಟ; ಪಾಕ್ ಬಾಂಬರ್ ಬಂಧನ!

  100ಕ್ಕೂ ಹೆಚ್ಚು ಅಫ್ಘಾನ್​ ಸಿಖ್​​ ಮತ್ತು ಹಿಂದೂಗಳು ಭಾರತಕ್ಕೆ ಪ್ರಯಾಣ ಬೆಳೆಸಲು ತಾಲಿಬಾನ್​ಗಳು ವಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ಕಳೆದ ರಾತ್ರಿ 40 ಮಂದಿ ಪ್ರಯಾಣಿಸಬೇಕಿತ್ತು. ಆದರೆ, ಅಲ್ಲಿನ ನಡೆದ ಘಟನೆಯಿಂದ ಅವರು ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗಿಲ್ಲ. ನಮ್ಮ ವಿಮಾನ ಅವರಿಲ್ಲದೇ ವಾಪಸ್ಸಾಗಿದೆ ಎಂದರು.

  ಕಾಬೂಲ್​ ವಿಮಾನ ನಿಲ್ದಾಣದಲ್ಲಿ ನಡೆದ ಅವಳಿ ಸ್ಪೋಟದಲ್ಲಿ ಸುಮಾರು 103 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.  ಈ ದಾಳಿಯ ಹೊಣೆಯನ್ನು ಐಸಿಸ್​-ಕೆ(ಇಸ್ಲಾಮಿಕ್​ ಸ್ಟೇಟ್​​​-ISIS) ಹೊತ್ತುಕೊಂಡಿದೆ. ಗುರುವಾರ ಸಂಜೆ ಕಾಬೂಲ್​​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಒಂದು ಸ್ಪೋಟ ಸಂಭವಿಸಿತ್ತು. ಬಳಿಕ ರಾತ್ರಿಯೇ ಮತ್ತೊಂದು ಸ್ಪೋಟ ಸಂಭವಿಸಿತ್ತು. ಇದರಲ್ಲಿ ಅಮೆರಿಕ ಮಿಲಿಟರಿ ಸಿಬ್ಬಂದಿ(US military personnel) ಹಾಗೂ ಅನೇಕ ಸೇವಾ ಸಿಬ್ಬಂದಿ ಸೇರಿದಂತೆ ಸುಮಾರು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: