• Home
  • »
  • News
  • »
  • national-international
  • »
  • Fake Jobs: ಉದ್ಯೋಗಗಳ ಹೆಸರಿನಲ್ಲಿ ಯುವಕರಿಗೆ ವಂಚನೆ; ನಕಲಿ ಉದ್ಯೋಗ ಜಾಲದ ವಿರುದ್ಧ ಎಚ್ಚರವಾಗಿರಲು MEA ಕರೆ

Fake Jobs: ಉದ್ಯೋಗಗಳ ಹೆಸರಿನಲ್ಲಿ ಯುವಕರಿಗೆ ವಂಚನೆ; ನಕಲಿ ಉದ್ಯೋಗ ಜಾಲದ ವಿರುದ್ಧ ಎಚ್ಚರವಾಗಿರಲು MEA ಕರೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

MEA ತಿಳಿಸಿರುವಂತೆ ಉದ್ಯೋಗಾಂಕ್ಷಿಗಳನ್ನು ಅಕ್ರಮವಾಗಿ ವಿವಿಧ ದೇಶಗಳಿಗೆ ರವಾನಿಸಲಾಗುತ್ತಿದ್ದು ಹೆಚ್ಚಾಗಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗಿದೆ ಎಂಬುದು ವರದಿಯಾಗಿದೆ. ಉದ್ಯೋಗದ ಹೆಸರಿನಲ್ಲಿ ಬಲಿಪಶುಗಳನ್ನು ಬಂಧಿಸಿ ಹಿಂಸಾತ್ಮಕವಾಗಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದೆ.

ಮುಂದೆ ಓದಿ ...
  • Share this:

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೆಪ್ಟೆಂಬರ್ 24 ರಂದು ಐಟಿ ಉದ್ಯಮದಲ್ಲಿ ಕೌಶಲ್ಯಪೂರ್ಣ ಯುವಕರನ್ನು ಗುರಿಯಾಗಿಸುವ "ನಕಲಿ ಉದ್ಯೋಗ ಜಾಲದ" ವಿರುದ್ಧ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಪ್ರಕಟಣೆಯ ಪ್ರಕಾರ ದುಬೈ (Dubai) ಹಾಗೂ ಭಾರತ (India) ಮೂಲದ ಏಜೆಂಟರು ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸಿಕೊಂಡು ಥಾಯ್ಲೆಂಡ್‌ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗಗಳ ಹೆಸರಿನಲ್ಲಿ ಉದ್ಯೋಗಾಂಕ್ಷಿಗಳನ್ನು (job seeker) ವಂಚಿಸುತ್ತಿದ್ದಾರೆ ಎಂದು ಸೂಚಿಸಿದೆ. MEA ತಿಳಿಸಿರುವಂತೆ ಉದ್ಯೋಗಾಂಕ್ಷಿಗಳನ್ನು ಅಕ್ರಮವಾಗಿ ವಿವಿಧ ದೇಶಗಳಿಗೆ ರವಾನಿಸಲಾಗುತ್ತಿದ್ದು ಹೆಚ್ಚಾಗಿ ಮ್ಯಾನ್ಮಾರ್‌ಗೆ (Myanmar) ಕರೆದೊಯ್ಯಲಾಗಿದೆ ಎಂಬುದು ವರದಿಯಾಗಿದೆ. ಉದ್ಯೋಗದ ಹೆಸರಿನಲ್ಲಿ ಬಲಿಪಶುಗಳನ್ನು ಬಂಧಿಸಿ ಹಿಂಸಾತ್ಮಕವಾಗಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದೆ.


ಹಗರಣದಲ್ಲಿ ಐಟಿ ಸಂಸ್ಥೆಗಳೇ ಪ್ರಧಾನವಾಗಿವೆ
ಸಚಿವಾಲಯವು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಿರುವಂತೆ ಸಂಶಯಾತ್ಮಕ ಐಟಿ ಸಂಸ್ಥೆಗಳು ಈ ಜಾಲದಲ್ಲಿರುವಂತೆ ತೋರುತ್ತಿದ್ದು ಕಾಲ್ ಸೆಂಟರ್ ಹಗರಣ ಮತ್ತು ಕ್ರಿಪ್ಟೋಕರೆನ್ಸಿ ವಂಚನೆಯು ಈ ನಕಲಿ ಉದ್ಯೋಗ ಜಾಲವನ್ನು ನಡೆಸುತ್ತಿದ್ದು ಥೈಲ್ಯಾಂಡ್‌ನಲ್ಲಿ ಡಿಜಿಟಲ್ ಸೇಲ್ಸ್ ಹಾಗೂ ಮಾರ್ಕೆಂಟ್ ಅಧಿಕಾರಿಗಳ ಹುದ್ದೆಗಾಗಿ ಭಾರತೀಯ ಯುವಕರನ್ನು ಆಕರ್ಷಿಸಿ ಉನ್ನತ ಸಂಬಳದ ಆದಾಯದ ಆಮಿಷವನ್ನೊಡ್ಡುತ್ತಿದೆ. ಇಂತಹ ನಕಲಿ ಉದ್ಯೋಗ ನಿದರ್ಶನಗಳನ್ನು ಇತ್ತೀಚೆಗೆ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿರುವ ಸಚಿವಾಲಯದ ಗಮನಕ್ಕೆ ತರಲಾಗಿದೆ.


ಐಟಿ ಕೌಶಲ್ಯವನ್ನರಿತ ಯುವಜನರೇ ಹೆಚ್ಚು ಟಾರ್ಗೆಟ್
ಈ ಜಾಲಕ್ಕೆ ಹೆಚ್ಚಾಗಿ ಸಿಲುಕಿಕೊಳ್ಳುತ್ತಿರುವ ಐಟಿ ಕೌಶಲ್ಯವನ್ನರಿತ ಯುವಕರಾಗಿದ್ದು ಸಾಮಾಜಿಕ ಮಾಧ್ಯಮ ಅಂತೆಯೇ ದುಬೈ ಹಾಗೂ ಭಾರತೀಯ ಮೂಲದ ಏಜೆಂಟ್‌ಗಳಿಂದ ಸಂಪರ್ಕಗೊಳ್ಳುತ್ತಾರೆ ಎಂದು ಪ್ರಕಟಣೆ ಉಲ್ಲೇಖಿಸಿದೆ.


ಇದನ್ನೂ ಓದಿ: Explained: ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದ್ಯಾ ತೈವಾನ್‌ ಮೇಲಿನ ಚೀನಾದ ಆಕ್ರಮಣ


ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಹಾಗೂ ಇತರ ಮೂಲಗಳಲ್ಲಿ ಇಂತಹ ನಕಲಿ ಉದ್ಯೋಗ ಆಫರ್‌ಗಳ ಜಾಹೀರಾತು ಪ್ರಸಾರಗೊಳ್ಳುತ್ತಿದ್ದು ಭಾರತೀಯರು ಇಂತಹ ಜಾಲದಲ್ಲಿ ಸಿಲುಕಿಕೊಳ್ಳಲದಂತೆ ಸಚಿವಾಲಯ ಎಚ್ಚರಿಕೆ ನೀಡಿದೆ. ಉದ್ಯೋಗ ಉದ್ದೇಶಗಳಿಗಾಗಿ ಪ್ರವಾಸಿ/ಭೇಟಿ ವೀಸಾದಲ್ಲಿ ಪ್ರಯಾಣಿಸುವ ಮುನ್ನ ಭಾರತೀಯರು ವಿದೇಶದಲ್ಲಿರುವ ಸಂಸ್ಥೆಗಳ ಮೂಲಕ ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸಬೇಕು ಹಾಗೂ ಯಾವುದೇ ಉದ್ಯೋಗ ಪ್ರಸ್ತಾಪವನ್ನು ತೆಗೆದುಕೊಳ್ಳುವ ಮೊದಲು ನೇಮಕಾತಿ ಏಜೆಂಟ್‌ಗಳು ಮತ್ತು ಯಾವುದೇ ಕಂಪನಿಯ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.


ಮಯನ್ಮಾರ್‌ಗೆ ಕರೆತರಲಾಗುತ್ತಿದೆ
ಉದ್ಯೋಗವಕಾಶಗಳ ಹೆಸರಿನಲ್ಲಿ ಅದೆಷ್ಟೋ ಭಾರತೀಯರನ್ನು ಕಾನೂನು ಬಾಹಿರವಾಗಿ ಮಯನ್ಮಾರ್‌ಗೆ ಕರೆತರುತ್ತಿದ್ದು ಅವರನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳುತ್ತಿದೆ. ಥೈಲ್ಯಾಂಡ್‌ನಲ್ಲಿ ಉದ್ಯೋಗವಕಾಶಗಳನ್ನು ಸ್ವೀಕರಿಸುವ ಮುನ್ನ ಸೂಕ್ತ ನಿಯಮಾವಳಿಗಳನ್ನು ಪಾಲಿಸಬೇಕು ಎಂಬುದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ


ಸಚಿವಾಲಯದ ವಕ್ತಾರರಾದ ಅರಿಂಧಮ್ ಬಗಾಚಿ ತಿಳಿಸಿರುವಂತೆ ಡಿಜಿಟಲ್ ಮೋಸ ಹಾಗೂ ಕ್ರಿಪ್ಟೋ ಹಗರಣಗಳಲ್ಲಿ ಐಟಿ ಕಂಪೆನಿಗಳು ತೊಡಗಿಕೊಂಡಿವೆ. ಈ ಮೋಸಗಾರರು ಥೈಲ್ಯಾಂಡ್‌ನಲ್ಲಿ ವಿಫುಲ ಉದ್ಯೋಗವಕಾಶಗಳ ಹೆಸರಿನಲ್ಲಿ ಭಾರತೀಯ ಯುವಜನತೆಯನ್ನು ಆಕರ್ಷಿಸುತ್ತಿವೆ ಎಂದು ತಿಳಿಸಿದ್ದಾರೆ. ಇಂತಹ ಐಟಿ ಕಂಪೆನಿಗಳು ದುಬೈ, ಬ್ಯಾಂಕಾಕ್ ಹಾಗೂ ಭಾರತದಲ್ಲಿ ಏಜೆಂಟ್‌ಗಳನ್ನು ಹೊಂದಿದ್ದಾರೆ.


ಉದ್ಯೋಗ ಆಫರ್‌ ಸ್ವೀಕರಿಸುವ ಮುನ್ನ ಪರಿಶೀಲಿಸಿ
ಹೆಚ್ಚಿನ ವೇತನ ಹಾಗೂ ಥೈಲ್ಯಾಂಡ್‌ನಲ್ಲಿ ಉನ್ನತ ಹುದ್ದೆ ಮೊದಲಾದ ಜಾಹೀರಾತುಗಳಿಗೆ ಬಲಿಯಾಗಿ ಯುವ ಜನರು ಇಂತಹ ಹಗರಣಗಳಿಗೆ ಸಿಕ್ಕಿಬೀಳುತ್ತಿದ್ದಾರೆ ಎಂದು ಅರಿಂಧಮ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಸಾಮಾಜಿಕ ತಾಣದಲ್ಲಿ ಇಂತಹ ಯಾವುದೇ ಉದ್ಯೋಗ ಮಾಹಿತಿ ಬಂದಲ್ಲಿ ಅದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಹಾಗೆಯೇ ಇಂತಹ ಉದ್ಯೋಗಗಳ ನೆಪವೊಡ್ಡಿ ಸಂಪರ್ಕಿಸುವ ಏಜೆಂಟ್‌ಗಳೊಂದಿಗೆ ವ್ಯವಹರಿಸುವಾಗ ಕೂಡ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Iran: ಮಗಳನ್ನೇ ಮದುವೆಯಾಗಬಹುದು ತಂದೆ, ಹೆಣ್ಮಕ್ಕಳ ಜೀವನ ನರಕವಾಗಿಸಿದ ಇರಾನ್​ನ ವಿಚಿತ್ರ ಕಾನೂನುಗಳು!


ಮಯನ್ಮಾರ್ ಸಮೀಪದ ಮೈವಾಡ್ಡಿಗೆ ಯುವಕರನ್ನು ಕರೆದೊಯ್ಯಲಾಗುತ್ತಿದ್ದು ಇಲ್ಲಿರುವ ಸ್ಥಳೀಯ ಭದ್ರತೆಯಿಂದಾಗಿ ಪ್ರವೇಶ ದುಸ್ಸಾಧ್ಯವಾಗಿದೆ. ಅದಾಗ್ಯೂ ದೇಶದ ಯೋಜನೆಯಿಂದಾಗಿ ಕೆಲವು ಯುವಕರನ್ನು ರಕ್ಷಿಸಲು ನಮಗೆ ಸಾಧ್ಯವಾಗಿದೆ ಹಾಗೂ ಇನ್ನಷ್ಟು ಯುವಜನರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅರಿಂಧಮ್ ತಿಳಿಸಿದ್ದಾರೆ.

Published by:Ashwini Prabhu
First published: