ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆ: ಅಮೆರಿಕಾ ಮಾರುಕಟ್ಟೆಯಿಂದ ಭಾರತ ಮೂಲದ ಎಂಡಿಎಚ್ ಮಸಾಲಾ ಉತ್ಪನ್ನಗಳು ಹಿಂದಕ್ಕೆ

ದೆಹಲಿ-ಹರಿಯಾಣ ಭಾಗದ ಗುರುಗ್ರಾಮದ ಆರ್-ಪ್ಯೂರ್ ಆಗ್ರೋ ಪ್ರಾಡಕ್ಟ್ಸ್ ಸಂಸ್ಥೆ ತಯಾರಿಸುವ ಎಂಡಿಎಚ್ ಮಸಾಲ ಪದಾರ್ಥಗಳನ್ನು ಈ ಹಿಂದೆಯೂ ಅಮೆರಿಕದಲ್ಲಿ ಹಲವು ಬಾರಿ ನಿರ್ಬಂಧಿಸಲಾಗಿತ್ತು.

news18
Updated:September 11, 2019, 6:02 PM IST
ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆ: ಅಮೆರಿಕಾ ಮಾರುಕಟ್ಟೆಯಿಂದ ಭಾರತ ಮೂಲದ ಎಂಡಿಎಚ್ ಮಸಾಲಾ ಉತ್ಪನ್ನಗಳು ಹಿಂದಕ್ಕೆ
ಎಂಡಿಎಚ್ ಸಾಂಬಾರ್ ಮಸಾಲ
  • News18
  • Last Updated: September 11, 2019, 6:02 PM IST
  • Share this:
ನವದೆಹಲಿ(ಸೆ. 11): ಭಾರತ ಮೂಲದ ಎಂಡಿಹೆಚ್ ಸಂಸ್ಥೆಯು ತನ್ನ ಸಾಂಬಾರ್ ಮಸಾಲ ಪದಾರ್ಥಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹಿಂಪಡೆದುಕೊಂಡಿದೆ. ಎಂಡಿಹೆಚ್ ಸಾಂಬಾರ್ ಮಸಲಾ ಪದಾರ್ಥದಲ್ಲಿ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದ್ದದ್ದನ್ನ ಅಮೆರಿಕದ ಆಹಾರ ನಿಯಂತ್ರಕ ಸಂಸ್ಥೆ ಪತ್ತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಉತ್ಪನ್ನಗಳ ವಿತರಕರು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ.

ಕ್ಯಾಲಿಫೋರ್ನಿಯಾ ರಾಜ್ಯದ ಉತ್ತರ ಭಾಗದ ಪ್ರದೇಶಗಳ ಮಳಿಗೆಗಳಲ್ಲಿದ್ದ ಎಂಡಿಎಚ್ ಮಸಲಾ ಪದಾರ್ಥಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಇದ್ದದ್ದು ಕಂಡು ಬಂದಿತ್ತು. ಆ ಪ್ರದೇಶಗಳ ಮಳಿಗೆಗಳಿಂದ ಈ ಉತ್ಪನ್ನಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಆಟೋಮೊಬೈಲ್​ ಉದ್ಯಮ ಕುಸಿತಕ್ಕೆ ಓಲಾ-ಊಬರ್​ ಕಾರಣ ಎಂಬ ವಿತ್ತ ಸಚಿವೆಯ ವ್ಯಾಖ್ಯಾನ ತಪ್ಪು ಎಂದ ನಿತಿನ್​ ಗಡ್ಕರಿ

ಏನಿದು ಸಾಲ್ಮೋನೆಲ್ಲಾ?

ಸಾಲ್ಮೋನೆಲ್ಲಾ ಎಂಬುದು ಒಂದು ಜಾತಿಯ ಬ್ಯಾಕ್ಟೀರಿಯಾ ಆಗಿದೆ. ಆಹಾರಗಳ ಮೂಲಕ ಪಸರಿಸುವ ಸೋಂಕು ಇದಾಗಿದೆ. ಸಾಲ್ಮೋನೆಲ್ಲೋಸಿಸ್ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆ ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಇದು 4-7 ದಿನಗಳವರೆಗೆ ಬಾಧೆ ಕೊಡುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೂ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಆಹಾರ ಉತ್ಪನ್ನಗಳ ಪರೀಕ್ಷೆಯಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಇರುವಿಕೆಯೂ ಇದೆ.

ಇದನ್ನೂ ಓದಿ: ಅಂತರ್ಜಾತಿ ಹಾಗೂ ಅಂತರ್​ ಧರ್ಮೀಯ ವಿವಾಹಗಳು ಸಮಾಜವಾದಕ್ಕೆ ಪೂರಕ; ಸುಪ್ರೀಂ ಕೋರ್ಟ್​ ಅಭಿಮತ

ಹರಿಯಾಣ ಮೂಲದ ಆರ್-ಪ್ಯೂರ್ ಆಗ್ರೋ ಪ್ರಾಡಕ್ಟ್ಸ್ ಸಂಸ್ಥೆಯು ಎಂಡಿಹೆಚ್ ಉತ್ಪನ್ನಗಳನ್ನು ತಯಾರಿಸುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಕೆಲ ಭಾಗಗಳಲ್ಲಿ ಇದರ ಉತ್ಪನ್ನಗಳ ಮಾರಾಟವಾಗುತ್ತದೆ. ಭಾರತದ ಎಲ್ಲ ಕಡೆಯೂ ಇವು ಲಭ್ಯವಿವೆ. ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಇರುವ ಅದರ ಮಸಾಲ ಪದಾರ್ಥಗಳು ಭಾರತದ ಮಾರುಕಟ್ಟೆಯಲ್ಲೂ ಇದೆಯಾ ಎಂಬುದು ಗೊತ್ತಿಲ್ಲ.ಇದೇ ವೇಳೆ, ಅಮೆರಿಕದಲ್ಲಿ ಎಂಡಿಎಚ್ ಮಲಾಸ ಪದಾರ್ಥಗಳ ಆಮದನ್ನು ತಡೆದಿರುವ ಅನೇಕ ಉದಾಹರಣೆಗಳು ಬಹಳಷ್ಟಿವೆ. 2016ರಿಂದ 2018ರವರೆಗೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ವಿಚಾರವಾಗಿಯೇ ಎಂಡಿಹೆಚ್ ಮಸಾಲ ಪದಾರ್ಥಗಳ ಆಮದನ್ನು ನಿಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಆದರೂ ಕೂಡ ಸಂಸ್ಥೆಯು ಎಚ್ಚೆತ್ತುಕೊಳ್ಳದಿರುವುದು ಅಚ್ಚರಿ ತಂದಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading