• Home
  • »
  • News
  • »
  • national-international
  • »
  • McDonald's: ಮೆಕ್‌ಡೊನಾಲ್ಡ್ಸ್ ಇಂಡಿಯಾ ಕಂಪನಿಯ ಹೊಸ ಮೈಲಿಗಲ್ಲು! ಇಲ್ಲಿದೆ ವಿವರ

McDonald's: ಮೆಕ್‌ಡೊನಾಲ್ಡ್ಸ್ ಇಂಡಿಯಾ ಕಂಪನಿಯ ಹೊಸ ಮೈಲಿಗಲ್ಲು! ಇಲ್ಲಿದೆ ವಿವರ

ಮೆಕ್‌ಡೊನಾಲ್ಡ್ಸ್

ಮೆಕ್‌ಡೊನಾಲ್ಡ್ಸ್

ಭಾರತ ದೇಶದಲ್ಲಿ ಮಹಿಳೆಯರು ಎಲ್ಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಮೆಕ್‌ಡೊನಾಲ್ಡ್ಸ್ ಇಂಡಿಯಾ ಕಂಪನಿಯ ನೈಜ ಉದ್ದೇಶ ಆಗಿರುವುದರಿಂದ ಈ ರೀತಿಯ ಹೊಸ ಕಾರ್ಯಕ್ಕೆ ಈ ಕಂಪನಿಯು ಕೈ ಹಾಕಿದೆ. ಅದು ಯಾವ ಕೆಲಸ ಇರಬಹುದು ಎಂದು ನಿಮಗೆ ಗೊಂದಲವಾಗ್ತಿದೀಯಾ ಬನ್ನಿ ಮುಂದೆ ಓದಿ.

ಮುಂದೆ ಓದಿ ...
  • Share this:

ಈ ಪುರುಷ ಪ್ರಧಾನ ಸಮಾಜದಲ್ಲಿ ಕಷ್ಟವಾದ ಕೆಲಸಗಳನ್ನು (Work) ನಾವು ಮಾತ್ರ ಮಾಡಲು ಸಾಧ್ಯ ಎಂದು ತಿಳಿದಿರುವ ಪುರುಷರಿಗೆ (Men) ಮಹಿಳೆಯರು (Women) ಈ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಪುರುಷರು ಹೌದು ಮಹಿಳೆಯರು ಕೂಡ ನಮ್ಮಷ್ಟೆ ಬಲಿಷ್ಠತೆ- ಶಕ್ತಿ-ಸಾಮರ್ಥ್ಯಗಳನ್ನು ಹೊಂದಿದ್ದಾರೆ ಎಂದು ತಮ್ಮ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೆ. ಭಾರತ ದೇಶದಲ್ಲಿ ಮಹಿಳೆಯರು ಎಲ್ಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಮೆಕ್‌ಡೊನಾಲ್ಡ್ಸ್  ಇಂಡಿಯಾ ಕಂಪನಿಯ (McDonald's India Company) ನೈಜ ಉದ್ದೇಶ ಆಗಿರುವುದರಿಂದ ಈ ರೀತಿಯ ಹೊಸ ಕಾರ್ಯಕ್ಕೆ ಈ ಕಂಪನಿಯು ಕೈ ಹಾಕಿದೆ. ಅದು ಯಾವ ಕೆಲಸ ಇರಬಹುದು ಎಂದು ನಿಮಗೆ ಗೊಂದಲವಾಗ್ತಿದೀಯಾ ಬನ್ನಿ ಮುಂದೆ ಓದಿ.


ಮೊದಲ ವುಮೆನ್ ಡ್ರೈವ್-ಥ್ರೂ ರೆಸ್ಟೋರೆಂಟ್
ಮೆಕ್‌ಡೊನಾಲ್ಡ್ಸ್ ಇಂಡಿಯಾ ಕಂಪನಿಯು ಗುಜರಾತ್‌ನಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿಯಲ್ಲಿ ಮೊದಲ ಮಹಿಳಾ ಡ್ರೈವ್-ಥ್ರೂ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ. ಇದು ಮೆಕ್‌ಡೊನಾಲ್ಡ್ಸ್‌ನ ಮೊದಲ ಆಲ್-ವುಮೆನ್ ಡ್ರೈವ್-ಥ್ರೂ ರೆಸ್ಟೋರೆಂಟ್ ಆಗಿದ್ದು, ಇದನ್ನು ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ನಿರ್ವಹಣೆ ಮಾಡುತ್ತದೆ. ಈ ಕಂಪನಿಯು ಮೆಕ್‌ಡೊನಾಲ್ಡ್ಸ್ ಇಂಡಿಯಾದ ಫ್ರ್ಯಾಂಚೈಸ್ ಪಾಲುದಾರ ಕಂಪನಿ ಆಗಿದೆ.


ಇದನ್ನೂ ಓದಿ: Salary: ಈ ಕಾಯ್ದೆ ಜಾರಿಗೆ ಬಂದ್ರೆ ಕೆಲಸ ತೊರೆದ ಎರಡೇ ದಿನಗಳಲ್ಲಿ ಸಂಪೂರ್ಣ ವೇತನದ ಪಾವತಿ ಗ್ಯಾರೆಂಟಿ!


ಮೆಕ್‌ಡೊನಾಲ್ಡ್ ಇಂಡಿಯಾ ಗುರುವಾರ ಗುಜರಾತ್‌ನ ಏಕ್ತಾ ನಗರದಲ್ಲಿ ತನ್ನ ಮೊದಲ ಆಲ್ ವುಮೆನ್ ಡ್ರೈವ್-ಥ್ರೂ ರೆಸ್ಟೋರೆಂಟ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಮ್ಯಾಕ್‌ಡೊನಾಲ್ಡ್ಸ್ ಇಂಡಿಯಾದ ಫ್ರ್ಯಾಂಚೈಸ್ ಪಾಲುದಾರರಾಗಿರುವ ವೆಸ್ಟ್‌ಲೈಫ್ ಡೆವಲಪ್‌ಮೆಂಟ್ಈ ಹೊಸ ರೆಸ್ಟೋರೆಂಟ್ ಅನ್ನು ನಿರ್ವಹಣೆ ಮಾಡಲು ಸಹಿ ಹಾಕಿದೆ. ಈ ರೆಸ್ಟೋರೆಂಟ್ ಸ್ಟ್ಯಾಚ್ಯೂ ಆಫ್ ಯೂನಿಟಿಯ ಸಮೀಪದಲ್ಲಿದೆ.


ಕೆಲಸಕ್ಕೆ 28 ಮಹಿಳೆಯರ ನೇಮಕ 
ಈ ಡ್ರೈವ್-ಥ್ರೂ ರೆಸ್ಟೋರೆಂಟ್ ಅನ್ನು ನಡೆಸಲು, ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ಕಂಪನಿಯು ನಗರದ ಹತ್ತಿರದ ಹಳ್ಳಿಗಳಲ್ಲಿ ಒಟ್ಟು 28 ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ ಎಂದು ಫ್ರಾಂಚೈಸ್ ಪಾಲುದಾರರು ಪತ್ರಿಕೆ ವರದಿಯಲ್ಲಿ ತಿಳಿಸಿದೆ.


ಈ ಬಗ್ಗೆ ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ಮುಖ್ಯಸ್ಥೆ ಸ್ಮಿತಾ ಜಟಿಯಾ ಹೇಳಿದ್ದೇನು?
ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ಮುಖ್ಯಸ್ಥೆ ಸ್ಮಿತಾ ಜಟಿಯಾ ಅವರು, "ಏಕತಾ ನಗರದಲ್ಲಿ ನಮ್ಮ ಮೊದಲ ಮಹಿಳಾ ಉದ್ಯೋಗಿಗಳ ನೇತೃತ್ವದ ಡ್ರೈವ್-ಥ್ರೂ ರೆಸ್ಟೋರೆಂಟ್ ಅನ್ನು ಪ್ರತಿಷ್ಠಿತ ಸ್ಟ್ಯಾಚ್ಯೂ ಆಫ್ ಯೂನಿಟಿಯಲ್ಲಿ ಪ್ರಾರಂಭಿಸುವುದು ನಮಗೆ ಅತ್ಯಂತ ಗೌರವದ ವಿಷಯವಾಗಿದೆ" ಎಂದು ಹೇಳಿದರು.


ಈ ಕಾರ್ಯವನ್ನು ದೇಶದ ಎಲ್ಲ ಕಡೆ ಪ್ರಾರಂಭಿಸುವ ಉದ್ದೇಶ ನಾವೂ ಹೊಂದಿದ್ದೇವೆ. ಈ ಸ್ಧಳದಲ್ಲಿ ಹೆಚ್ಚಿನ ಮಹಿಳೆಯರನ್ನು ಕಾರ್ಯಪಡೆಗೆ ತರುವ ಮೂಲಕ ವೈವಿಧ್ಯತೆ ಮತ್ತು ಈ ಕೆಲಸದಲ್ಲಿ ಪಾಲ್ಗೊಳ್ಳುವುದನ್ನು ನಾವು ಬಯಸುತ್ತೇವೆ ಮತ್ತು ಹಿಂದುಳಿದ ಮತ್ತು ಮಹಿಳಾ ಸಮುದಾಯಗಳನ್ನು ಪೋಷಿಸುವ ಅವಕಾಶವನ್ನೂ ನಮ್ಮ ಬದ್ಧತೆಯನ್ನು ಬಲಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ ಎಂದೂ ಪತ್ರಿಕಾ ವರದಿಯಲ್ಲಿ ತಿಳಿಸಲಾಗಿದೆ.


ಇಲ್ಲಿ ಕಾರ್ಯವಿಧಾನ ಹೇಗಿರುತ್ತದೆ
ಇಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ದಿನನಿತ್ಯ ಬೇಕಾಗುವ ಅಗತ್ಯಗಳು, ಅವರಿಗೆ ಸೂಕ್ತ ಸುರಕ್ಷತೆ, ನೈರ್ಮಲ್ಯತೆ ಮತ್ತು ಇತರ ರೆಸ್ಟೋರೆಂಟ್ ಕಾರ್ಯವಿಧಾನಗಳ ಕುರಿತು ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳ ಪ್ರಕಾರ ಈ ರೆಸ್ಟೊರೆಂಟ್‌ನ ಎಲ್ಲ ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇನ್ನು ಹೆಚ್ಚಿನ ತಾಂತ್ರಿಕ ತರಬೇತಿಯನ್ನು ಹಂತ- ಹಂತವಾಗಿ ಮಹಿಳಾ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.


ಇದನ್ನೂ ಓದಿ:  Multilayer Farming: ಬಹುಪದರ ಕೃಷಿ ಪದ್ಧತಿ ಅಳವಡಿಸಿಕೊಂಡ ಪ್ರಶಸ್ತಿ ವಿಜೇತ ರೈತ: ವರ್ಷಕ್ಕೆ ಇವರ ಆದಾಯ ಎಷ್ಟು ಗೊತ್ತಾ?


ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ತನ್ನ ಅಂಗಸಂಸ್ಥೆಯಾದ ಹಾರ್ಡ್‌ಕ್ಯಾಸಲ್ ರೆಸ್ಟೊರೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಭಾರತದ ಪಶ್ಚಿಮ ಮತ್ತು ದಕ್ಷಿಣ ಮಾರುಕಟ್ಟೆಗಳಲ್ಲಿ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳನ್ನು ಹೊಂದಲು ಮತ್ತು ನಿರ್ವಹಿಸಲು ಫ್ರ್ಯಾಂಚೈಸ್ ಅನ್ನು ಹೊಂದಿದೆ. ಇದು 47 ನಗರಗಳಲ್ಲಿ 326 ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತದೆ.


ಈ ರೀತಿಯ ರೆಸ್ಟೊರೆಂಟ್ ಗಳನ್ನು ಆರಂಭಿಸುವುದು ಅದರಲ್ಲೂ ಮಹಿಳಾ ಸಿಬ್ಬಂದಿಗಳನ್ನು ಕೆಲಸಕ್ಕೆ ತೆಗೆದುಕೊಂಡು ಉತ್ತಮ ತರಬೇತಿ ನೀಡುವುದು ನಿಜಕ್ಕೂ ಭಾರತದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎಂಬ ಸಂಗತಿ ಹೆಚ್ಚು ಖುಷಿಯನ್ನು ನೀಡುತ್ತದೆ.

Published by:Ashwini Prabhu
First published: