ನವದೆಹಲಿ(ಡಿ.07): ರಾಜಧಾನಿ ದೆಹಲಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ (MCD Elections) ಫಲಿತಾಂಶ ಬಹುತೇಕ ನಿರ್ಧಾರವಾಗಿದೆ. ಇದುವರೆಗಿನ ಟ್ರೆಂಡ್ಗಳ ಪ್ರಕಾರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಜಯಭೇರಿ ಬಾರಿಸುತ್ತಿದೆ. ಆದಾಗ್ಯೂ, ಭಾರತೀಯ ಜನತಾ ಪಕ್ಷವು (BJP) ಪಟ್ಟುಬಿಡದೆ ಸ್ಪರ್ಧೆ ನೀಡುತ್ತಿರುವುದನ್ನು ಕಾಣಬಹುದು. ಇನ್ನೇನು ಕೆಲವೇ ಗಂಟೆಗಳಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ನ ಚಿತ್ರಣ ಸ್ಪಷ್ಟವಾಗಲಿದೆ. ಈ ಬಾರಿ, ಕೋಟ್ಯಾಧಿಪತಿ ಅಭ್ಯರ್ಥಿಗಳು ನಾಗರಿಕ ಚುನಾವಣೆಯಲ್ಲಿ ಹೇಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೋ, ಅದೇ ರೀತಿ ತಮ್ಮ ಹೆಸರಲ್ಲಿ 1 ರೂಪಾಯಿಯೂ ಆಸ್ತಿ ಹೊಂದಿರದ ಇಬ್ಬರು ಅಭ್ಯರ್ಥಿಗಳು ಎಲ್ಲರ ಗಮನ ಸೆಳೆದಿದ್ದಾರೆ.
2022ರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ 1,349 ಅಭ್ಯರ್ಥಿಗಳ ಸರಾಸರಿ ಆಸ್ತಿ 2 ಕೋಟಿ ರೂ. ಈ ನಡುವೆ ಅತ್ಯಂತ ಶ್ರೀಮಂತ ಅಭ್ಯರ್ಥಿಗಳ ಫಲಿತಾಂಶದ ಮೇಲೆ ಜನರು ಹೇಗೆ ಒಂದು ದೃಷ್ಟಿ ಇಟ್ಟಿದ್ದಾರೋ, ಅದೇ ರೀತಿಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳ ಫಲಿತಾಂಶವೂ ಇವರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್ ಪ್ಲಾನ್!
ಒಂದೇ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು
ಶೂನ್ಯ ಆಸ್ತಿ ಹೊಂದಿರುವ ಇಬ್ಬರೂ ಅಭ್ಯರ್ಥಿಗಳು ಒಂದೇ ಜಿಲ್ಲೆಯವರು
ಅಂತಹ ಇಬ್ಬರು ಅಭ್ಯರ್ಥಿಗಳು 2022 ರ MCD ಚುನಾವಣೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದಾರೆ. ಅವರ ಒಟ್ಟು ಆಸ್ತಿ ಶೂನ್ಯ ರೂಪಾಯಿ. ನೈಋತ್ಯ ಜಿಲ್ಲೆಯ ಕಕ್ರೋಲಾ ವಾರ್ಡ್ 123 ರ ಅಭ್ಯರ್ಥಿ ರೀಟಾ ಅವರಲ್ಲಿ ಒಬ್ಬರು. ಚುನಾವಣಾ ಅಫಿಡವಿಟ್ನಲ್ಲಿ ಸ್ವತಂತ್ರ ಅಭ್ಯರ್ಥಿ ರೀಟಾ ತಮ್ಮ ಒಟ್ಟು ಆಸ್ತಿಯನ್ನು ಶೂನ್ಯ ಎಂದು ತೋರಿಸಿದ್ದಾರೆ. ಇದೇ ವೇಳೆ ಇದೇ ಜಿಲ್ಲೆಯ 130ನೇ ವಾರ್ಡ್ ದ್ವಾರಕಾ-ಸಿಯಿಂದ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಬೀನಾದೇವಿ ಅವರ ಬಳಿಯೂ ಆಸ್ತಿ ಎಂದು ಒಂದು ರೂಪಾಯಿಯೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಪ್ರಹ್ಲಾಲ್ ರಾಣಾ ಅವರು ಪುರುಷ ಅಭ್ಯರ್ಥಿಗಳ ಪೈಕಿ ಕನಿಷ್ಠ ಆಸ್ತಿಯನ್ನು ತೋರಿಸಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ, ದೆಹಲಿ ಸೆಂಟ್ರಲ್ ಜಿಲ್ಲೆಯ ಶಾಸ್ತ್ರಿನಗರ ವಾರ್ಡ್ 70 ರ ಅಭ್ಯರ್ಥಿ ರಾಣಾ ಅವರು ಒಟ್ಟು 2,517 ರೂ ಆಸ್ತಿ ಹೊಂದಿದ್ದಾರೆ, ಇದು ಮಾತ್ರವಲ್ಲದೆ 3,07,000 ರೂ ಸಾಲವನ್ನೂ ಹೊಂದಿದ್ದಾರೆ.
ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!
8ನೇ ತೇರ್ಗಡೆಯಾದ ರಾಮ್ ದೇವ್ ಬಳಿ 66 ಕೋಟಿ ಮೌಲ್ಯಕ್ಕೂ ಹೆಚ್ಚು ಆಸ್ತಿ
2022 ರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಶ್ರೀಮಂತ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದಾದರೆ, ದೆಹಲಿ ಸೆಂಟ್ರಲ್ನ 79 ಬಲ್ಲಿಮಾರನ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಬಿಜೆಪಿ ಅಭ್ಯರ್ಥಿ ರಾಮ್ ದೇವ್ ಶರ್ಮಾ ಅವರ ಹೆಸರು ಅಗ್ರಸ್ಥಾನದಲ್ಲಿದೆ. ಚುನಾವಣಾ ಅಫಿಡವಿಟ್ ಪ್ರಕಾರ ಅವರ ಒಟ್ಟು ಆಸ್ತಿ 66.90 ಕೋಟಿ ರೂ. 55 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಆಸ್ತಿ ಹೊಂದಿದೆ. ಅವರಿಗೆ 26 ಮನೆಗಳು, 4 ವಾಣಿಜ್ಯ ಆಸ್ತಿಗಳಿವೆ. 8ನೇ ತೇರ್ಗಡೆಯಾಗಿರುವ ರಾಮ್ ದೇವ್ ಶರ್ಮಾ ಅವರು 2020-21ನೇ ಹಣಕಾಸು ವರ್ಷದಲ್ಲಿ 55 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರು. ಅದೇ ಸಮಯದಲ್ಲಿ, ಹೋಮಿಯೋಪತಿ ವೈದ್ಯೆ ನಂದಿನಿ ಶರ್ಮಾ ಅವರು ದಕ್ಷಿಣ ದೆಹಲಿಯ 149 ಮಾಳವೀಯಾ ನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ, ಅವರ ಒಟ್ಟು ಆಸ್ತಿ 49.84 ಕೋಟಿ ರೂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ