• Home
  • »
  • News
  • »
  • national-international
  • »
  • MCD Mayor Election: ಬಿಜೆಪಿ-ಆಪ್ ಸದಸ್ಯರ ಕಿತ್ತಾಟದಿಂದ ದೆಹಲಿ ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆ!

MCD Mayor Election: ಬಿಜೆಪಿ-ಆಪ್ ಸದಸ್ಯರ ಕಿತ್ತಾಟದಿಂದ ದೆಹಲಿ ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆ!

ಮಂಗಳವಾರವೂ ಸ್ಥಗಿತಗೊಂಡ ದಿಲ್ಲಿ ಮುನ್ಸಿಪಲ್‌ ಮೇಯರ್‌ ಆಯ್ಕೆ ಚುನಾವಣೆ!

ಮಂಗಳವಾರವೂ ಸ್ಥಗಿತಗೊಂಡ ದಿಲ್ಲಿ ಮುನ್ಸಿಪಲ್‌ ಮೇಯರ್‌ ಆಯ್ಕೆ ಚುನಾವಣೆ!

ಕಳೆದ ಬಾರಿ ನಡೆದ ಸಭೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ನೇಮಿಸಿದ್ದ ಬಿಜೆಪಿಯ ಅಧ್ಯಕ್ಷ ಸತ್ಯ ಶರ್ಮಾ, ಎಎಪಿಯ ತೀವ್ರ ವಿರೋಧದ ಹೊರತಾಗಿಯೂ ಮೊದಲು 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಪ್ರಮಾಣ ವಚನ ಬೋಧಿಸಿದ್ದರು. ಇದಕ್ಕೆ ಆಮ್ ಆದ್ಮಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಮುಂದೆ ಓದಿ ...
  • Share this:

ದೆಹಲಿ: ದೆಹಲಿ ಮುನ್ಸಿಪಲ್‌ ಕಾರ್ಪೋರೇಷನ್‌ನ (MCD) ಮೇಯರ್ ಸ್ಥಾನಕ್ಕಾಗಿ (Mayor Election) ಬಿಜೆಪಿ ಮತ್ತು ಎಎಪಿ (BJP and AAP) ಮಧ್ಯೆ ನಡೆಯುತ್ತಿರುವ ರಾಜಕೀಯ ಹಣಾಹಣಿ ತಾರಕಕ್ಕೇರಿದ್ದು, ಮಂಗಳವಾರ ಮೇಯರ್ ಸ್ಥಾನಕ್ಕಾಗಿ ನಡೆಯಬೇಕಿದ್ದ ಚುನಾವಣೆ ಕೂಡ ಎರಡೂ ಪಕ್ಷಗಳ ಕಿತ್ತಾಟದಿಂದ ಮತ್ತೆ ಮುಂದೂಡಲ್ಪಟ್ಟಿದೆ. ಕಳೆದ ಡಿಸೆಂಬರ್ 4ರಂದು ರಾಷ್ಟ್ರ ರಾಜಧಾನಿ ದಿಲ್ಲಿಯ (Delhi) ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದರೂ ಕೂಡ ಈವರೆಗೆ ಮೇಯರ್ ಆಯ್ಕೆ ಸಾಧ್ಯವಾಗಿರಲಿಲ್ಲ.


ದಿಲ್ಲಿಯ ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನಕ್ಕಾಗಿ ಡಿಸೆಂಬರ್ ನಾಲ್ಕರಂದು ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ 7ಕ್ಕೆ ಪ್ರಕಟಗೊಂಡಿತ್ತು. ಒಟ್ಟು 250 ಸ್ಥಾನಗಳ ಪೈಕಿ 134 ಸ್ಥಾನಗಳನ್ನು ಆಮ್ ಆದ್ಮಿ ಪಾರ್ಟಿ ಗೆದ್ದಿದ್ದರೆ, 104 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 250 ಕೌನ್ಸಿಲರ್‌ಗಳು, 14 ಶಾಸಕರು ಮತ್ತು 10 ಸಂಸದರು ಮೇಯರ್ ಚುನಾವಣೆಯಲ್ಲಿ ಪಾಲು ಪಡೆದಿದ್ದು, ಕಾಂಗ್ರೆಸ್‌ನ 9 ಕೌನ್ಸಿಲರ್‌ಗಳು, ಇಬ್ಬರು ಸ್ವತಂತ್ರ ಕೌನ್ಸಿಲರ್‌ಗಳು ಇದ್ದಾರೆ.


ಇದನ್ನೂ ಓದಿ: Delhi Mayor Election: ದೆಹಲಿಯಲ್ಲಿ ಮೇಯರ್ ಚುನಾವಣೆ, ಕಾಂಗ್ರೆಸ್​ ನಡೆಯಿಂದ ಆಪ್​ಗೆ ಸಂಕಷ್ಟ?


ಮಂಗಳವಾರವೂ ಸ್ಥಗಿತಗೊಂಡ ಚುನಾವಣೆ!


ಎರಡು ವಾರಗಳ ನಂತರ ದಿಲ್ಲಿ ಮುನ್ಸಿಪಲ್‌ ಮೇಯರ್‌ ಆಯ್ಕೆಗೆ ನಡೆಸಲು ಉದ್ಧೇಶಿಸಿದ್ದ ಚುನಾವಣೆ ಇಂದು ಕೂಡ ವಿಫಲತೆಯನ್ನು ಕಂಡಿದ್ದು, ಬಿಜೆಪಿ ಮತ್ತು ಆಪ್ ಪಕ್ಷದ ಸದಸ್ಯರ ಪರಸ್ಪರ ಕಿತ್ತಾಟದಿಂದ ಎರಡನೆ ಬಾರಿಯೂ ಮುಂದೂಡಲ್ಪಟ್ಟಿದೆ. ಚುನಾವಣೆ ನಡೆದು ಒಂದು ತಿಂಗಳ ನಂತರವೂ ಮೇಯರ್ ಆಯ್ಕೆ ಚುನಾವಣೆ ಮತ್ತೆ ಅನಿರ್ದಿಷ್ಟಾವಧಿ ಅವಧಿಗೆ ಮುಂದೂಡಲ್ಪಟ್ಟಿದ್ದು, ಇದೀಗ ಮತ್ತೆ ಯಾವಾಗ ಮೇಯರ್ ಆಯ್ಕೆ ನಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.


ಬಿಜೆಪಿ-ಆಪ್ ಬೀದಿ ಜಗಳ!


ಆಲ್ಡರ್‌ಮೆನ್  ಎಂದು ಕರೆಯಲ್ಪಡುವ ನಾಮ ನಿರ್ದೇಶಿತ ಕೌನ್ಸಿಲರ್‌ಗಳ ಪ್ರಮಾಣ ವಚನಕ್ಕೆ ಸಂಬಂಧಿಸಿದಂತೆ ಎಎಪಿ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಉಂಟಾದ ಘರ್ಷಣೆ ತಾರಕಕ್ಕೇರಿ ಹೊಯ್ ಕೈ ಎನ್ನುವಷ್ಟರ ಮಟ್ಟಿಗೆ ತಲುಪಿತ್ತು. ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆಪ್‌ ಮಧ್ಯೆ ಜನವರಿ 9ರಂದು ಬೀದಿ ಜಗಳವೂ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದರು. ಎರಡೂ ಪಕ್ಷಗಳ ಸದಸ್ಯರು ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು ಮಾತ್ರವಲ್ಲದೇ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಧರಣಿ ನಡೆಸಲು ಬಂದ 2000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ದೆಹಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಹಿಮ್ಮೆಟ್ಟಿಸಿದ್ದರು.


ಬಿಜೆಪಿ-ಆಪ್ ಮಧ್ಯೆ ಗಲಾಟೆ ಏಕೆ?


ಕಳೆದ ಬಾರಿ ನಡೆದ ಸಭೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ನೇಮಿಸಿದ್ದ ಬಿಜೆಪಿಯ ಅಧ್ಯಕ್ಷ ಸತ್ಯ ಶರ್ಮಾ ಎಎಪಿಯ ತೀವ್ರ ವಿರೋಧದ ಹೊರತಾಗಿಯೂ ಮೊದಲು 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಪ್ರಮಾಣ ವಚನ ಬೋಧಿಸಿದ್ದರು. ಇದಕ್ಕೆ ಆಮ್ ಆದ್ಮಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆಲ್ಡರ್‌ಮೆನ್ ಎಂದು ಕರೆಯಲ್ಪಡುವ ಈ ಕೌನ್ಸಿಲರ್‌ಗಳಿಗೆ ಮತ ಚಲಾಯಿಸಲು ಅವಕಾಶವಿಲ್ಲ ಎಂದು ಎಎಪಿ ಹೇಳಿತ್ತು. ಚುನಾವಣೆಯಲ್ಲಿ ಸೋತ ನಂತರ ಮೇಯರ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಆರಂಭದಲ್ಲಿ ಬಿಜೆಪಿ ಹೇಳಿತ್ತಾದರೂ, ಬಳಿಕ ಮೇಯರ್ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಹೇಳಿತ್ತು. ಹೀಗಾಗಿ ಬಿಜೆಪಿ ಮತ್ತು ಆಪ್ ಮಧ್ಯೆ ಜಗಳ ಶುರುವಾಗಿ ನಿಲ್ಲಲಾರದ ಹಂತಕ್ಕೆ ತಲುಪಿದೆ.


ಇದನ್ನೂ ಓದಿ: Bangalore Metro: ಸಿಲಿಕಾನ್‌ ಸಿಟಿ ಬೆಂಗಳೂರು ಮೆಟ್ರೋಗಿಂತಲೂ ದೆಹಲಿ ಮೆಟ್ರೋ ಬೆಸ್ಟ್ ಅಂತೆ ಯಾಕೆ ಗೊತ್ತಾ?


ಈ ಬಾರಿ ಲೇಡಿ ಮೇಯರ್‌!


ಅಂದ ಹಾಗೆ ಕಳೆದ ವರ್ಷ ದೆಹಲಿ ಪಾಲಿಕೆಯ ಮೂರು ವಿಭಾಗಗಳ ವಿಲೀನದ ನಂತರ 10 ವರ್ಷಗಳಲ್ಲಿ ನಗರಕ್ಕೆ ಇದೇ ಮೊದಲ ಬಾರಿಗೆ ಮೇಯರ್ ಆಗುತ್ತಿದ್ದಾರೆ. ಅದರಲ್ಲೂ ಈ ಬಾರಿ ದೆಹಲಿಯ ಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು, ಒಬ್ಬ ಮೇಯರ್‌ಗೆ ಒಂದೇ ವರ್ಷ ಆಡಳಿತ ನಡೆಸಲು ಅವಕಾಶ ಇರೋದ್ರಿಂದ ಮೊದಲ ವರ್ಷ ಮಹಿಳೆಯರಿಗೆ ಮೀಸಲಾಗಿದ್ದರೆ, ಎರಡನೆಯ ವರ್ಷ ಮುಕ್ತ ವರ್ಗ, ಮೂರನೆಯ ವರ್ಷ ಮೀಸಲು ವರ್ಗ, ಮತ್ತೆ ಉಳಿದ ಎರಡು ಪುನಃ ಮುಕ್ತವಾಗಿ ಸ್ಪರ್ಧಿಸಲು ಅವಕಾಶ ಸಿಗಲಿದೆ.




ಯಾರ್ಯಾರು ಕಣದಲ್ಲಿ?


ಸದ್ಯ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಸ್ಥಾನಕ್ಕೆ ಆಮ್ ಆದ್ಮಿ ಪಕ್ಷವು (ಎಎಪಿ) ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಕ್ರಮವಾಗಿ ಶೆಲ್ಲಿ ಒಬೆರಾಯ್ ಮತ್ತು ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದು, ಭಾರತೀಯ ಜನತಾ ಪಕ್ಷದಿಂದ ರೇಖಾ ಗುಪ್ತಾ ಮೇಯರ್ ಸ್ಥಾನಕ್ಕೆ ಮತ್ತು ಕಮಲ್ ಬಾಗ್ರಿ ಉಪನಾಯಕರಾಗಿ ಸ್ಪರ್ಧಿಸಿದ್ದಾರೆ.

Published by:Avinash K
First published: