ರೈತ ಹೋರಾಟದ ಹೆಸರಿನಲ್ಲಿ ಚುನಾವಣಾ ರಾಜಕಾರಣ; ಘೋರ ಅನ್ಯಾಯ ಎಂದ ಮಾಯಾವತಿ

ಮುಂದಿನ ಪಂಜಾಬ್​ ವಿಧಾನಸಭೆಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಎಸ್​ಪಿ ಈಗಿನಿಂದಲೇ ಪಂಜಾಬಿನ ಬೆಳವಣಿಗೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಹಿಂದೊಮ್ಮೆ ಬಿಜೆಪಿ ಮಿತ್ರ ಪಕ್ಷವಾಗಿದ್ದ ಅಕಾಲಿದಳದ ಜೊತೆ ಕೈ ಜೋಡಿಸಿರುವ ಬಿಎಸ್​ಪಿ ಪಂಜಾಬಿನಲ್ಲಿ ಕಿಂಗ್​ ಮೇಕರ್​ ಆಗಲು ಬಯಸುತ್ತಿದೆ.

ಮಾಯಾವತಿ

ಮಾಯಾವತಿ

  • Share this:
    ಕಳೆದ ವರ್ಷದಿಂದ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್‌ ಸಿಂಗ್ ಅವರು ಬರೆದ ಪತ್ರದ ಬಗ್ಗೆ ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು. ರೈತ ಆಂದೋಲನದ ಹೆಸರಿನಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯವಾಗಿದೆ ಎಂದು ಪಂಜಾಬಿನ ಕಾಂಗ್ರೆಸ್​ ಸರ್ಕಾರ ಹಾಗೂ ರೈತ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರವ

    ಮುಂದಿನ ಪಂಜಾಬ್​ ವಿಧಾನಸಭೆಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಎಸ್​ಪಿ ಈಗಿನಿಂದಲೇ ಪಂಜಾಬಿನ ಬೆಳವಣಿಗೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಹಿಂದೊಮ್ಮೆ ಬಿಜೆಪಿ ಮಿತ್ರ ಪಕ್ಷವಾಗಿದ್ದ ಅಕಾಲಿದಳದ ಜೊತೆ ಕೈ ಜೋಡಿಸಿರುವ ಬಿಎಸ್​ಪಿ ಪಂಜಾಬಿನಲ್ಲಿ ಕಿಂಗ್​ ಮೇಕರ್​ ಆಗಲು ಬಯಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    “ಪಂಜಾಬಿನ ಕಾಂಗ್ರೆಸ್‌ ಮುಖ್ಯಮಂತ್ರಿ ರೈತರ ಆಂದೋಲನದ ಬಗ್ಗೆ  ಆತಂಕಗಳನ್ನು ವ್ಯಕ್ತಪಡಿಸುತ್ತಾ ಪ್ರಧಾನಿಗೆ ಬರೆದಿರುವ ಪತ್ರವು, ಹೊಸ ಕಾನೂನನ್ನು ರದ್ದು ಮಾಡಲು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಿರುವ ರೈತರ ಆಂದೋಲನವನ್ನು ಕೆಣಕುವ ಸಂಚಾಗಿದೆ. ರೈತ ಆಂದೋಲನದ ಹೆಸರಿನಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯವಾಗಿದೆ” ಎಂದು ಹೇಳಿದ್ದಾರೆ.

    “ಪಂಚ ನದಿಗಳ ರಾಜ್ಯವಾದ ಪಂಜಾಬ್ ಸರ್ಕಾರವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಂಭೀರವಾಗಿರುವ ಮೂಲಕ ಒಕ್ಕೂಟ ಸರ್ಕಾರದ ಸಹಕಾರವನ್ನು ತೆಗೆದುಕೊಳ್ಳುವುದು ಅಸಮಂಜಸವಲ್ಲ. ಆದರೆ ಇದರ ಸೋಗಿನಲ್ಲಿ, ರೈತರ ಚಳವಳಿಯ ಅಪಖ್ಯಾತಿ ಮಾಡುವ ಮತ್ತು ಚುನಾವಣಾ ಹಿತಾಸಕ್ತಿಯ ರಾಜಕೀಯದ ಬಗ್ಗೆ ಜನರಿಗೆ ಅರ್ಥವಾಗುತ್ತದೆ. ಇದನ್ನು ಮಾಡುವುದರಿಂದ ಕಾಂಗ್ರೆಸ್ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿ ಅಮರಿಂದರ್‌ ಅವರು, ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಐಎಸ್ಐ ಬೆಂಬಲಿತ ಗುಂಪುಗಳ ಗಡಿಯಾಚೆಗಿನ ಬೆದರಿಕೆಯನ್ನು ಉಲ್ಲೇಖಿಸಿ ತಕ್ಷಣವೇ ರೈತರೊಂದಿಗೆ ಮಾತುಕತೆ ಪುನರಾರಂಭಿಸಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದರು.

    ಅಮರಿಂದರ್‌‌‌ ಅವರು ಪತ್ರದಲ್ಲಿ, ಗಡಿಯಾಚೆ ಹೆಚ್ಚುತ್ತಿರುವ ಬೆದರಿಕೆ ಮತ್ತು ಐಎಸ್ಐ ಬೆಂಬಲಿತ ಗುಂಪುಗಳಿಂದ ಹೆಚ್ಚಿದ ಡ್ರೋನ್ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಜೊತೆಗೆ ಅವರೊಂದಿಗೆ ಕೆಲವು ರೈತ ಮುಖಂಡರನ್ನು ಗುರಿಯಾಗಿಸಿ ಖಾಲಿಸ್ತಾನಿ ಸಂಘಟನೆಗಳೂ ಸೇರಿವೆ ಎಂದು ಹೇಳಿದ್ದರು.

    ಇದನ್ನೂ ಓದಿ: ಯುಪಿಯಲ್ಲಿ ಕನ್ವರ್ ಯಾತ್ರೆ ಇಲ್ಲ : ಸರ್ಕಾರದ ಮೇಲ್ಮನವಿಯ ನಂತರ ರದ್ದುಗೊಳಿಸಲು ಮುಂದಾದ ಒಕ್ಕೂಟಗಳು

    ಈ ಶಕ್ತಿಗಳು ಗಡಿಯುದ್ದಕ್ಕೂ ಇರುವ ನಮ್ಮ ಹೆಮ್ಮೆಯ, ಪ್ರಾಮಾಣಿಕ ಮತ್ತು ಕಷ್ಟಪಟ್ಟು ದುಡಿಯುವ ರೈತರ ಭಾವನೆಗಳೊಂದಿಗೆ ಆಟವಾಡಲು ಪ್ರಯತ್ನಿಸಬಹುದು ಎಂದು ಅವರು ಪ್ರಧಾನಿಗೆ ಎಚ್ಚರಿಸಿದ್ದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: