"Rahul Gandhiಯವರೇ, ಮೊದಲು ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ!" ತಿರುಗೇಟು ಕೊಟ್ಟ ಮಾಯಾವತಿ

"ಬಿಎಸ್‌ಪಿ ಅಂದರೆ ರಾಹುಲ್ ಗಾಂಧಿಯಂತಹ ನಾಯಕರು ಸಂಸತ್ತಿನಲ್ಲಿ ಪ್ರಧಾನಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷವಲ್ಲ" ಅಂತ ಮಾಯಾವತಿ ಹೇಳಿದ್ದಾರೆ. "ನಮ್ಮದು ಪ್ರಪಂಚದಾದ್ಯಂತ ಮೋಜು ಮಾಡುವ ಪಕ್ಷವಲ್ಲ" ಎಂದು ಅವರು ಮಾಯಾವತಿ ಕುಟುಕಿದ್ದಾರೆ.

ಮಾಯಾವತಿ-ರಾಹುಲ್ ಗಾಂಧಿ ಸಂಗ್ರಹ ಚಿತ್ರ

ಮಾಯಾವತಿ-ರಾಹುಲ್ ಗಾಂಧಿ ಸಂಗ್ರಹ ಚಿತ್ರ

  • Share this:
ಉತ್ತರ ಪ್ರದೇಶ: ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ವಿರುದ್ಧ ಉತ್ತರ ಪ್ರದೇಶ (Uttar Pradesh) ಮಾಜಿ ಮುಖ್ಯಮಂತ್ರಿಯೂ (Ex CM) ಆಗಿರುವ, ಬಹುಜನ ಸಮಾಜವಾದಿ ಪಾರ್ಟಿ (BSP) ವರಿಷ್ಠೆ ಮಾಯಾವತಿ (Mayawati) ಕಿಡಿಕಾರಿದ್ದಾರೆ. “ಮಾಯಾವತಿ ಜೀ ಅವರು ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Assembly Election) ಹೋರಾಡಲಿಲ್ಲ. ನಾವು ಕಾಂಗ್ರೆಸ್ ಮತ್ತು ಬಿಎಸ್ ಪಿ ಮೈತ್ರಿ (Alliance) ಮಾಡಿಕೊಳ್ಳುವಂತೆ ಸಂದೇಶವನ್ನು ಕಳುಹಿಸಿದ್ದೆವು. ಆದರೆ ಅವರು ಪ್ರತಿಕ್ರಿಯಿಸಲಿಲ್ಲ” ಅಂತ ಕಳೆದವಾರವಷ್ಟೇ ರಾಹುಲ್ ಗಾಂಧಿ ಆರೋಪಿಸಿದ್ದರು. ಕಾಂಗ್ರೆಸ್ ನಾಯಕನ  ಈ ಆರೋಪಕ್ಕೆ ಮಾಯಾವತಿ ಕಿಡಿಕಾರಿದ್ದಾರೆ. “ರಾಹುಲ್ ಗಾಂಧಿ ಅವರೇ, ನೀವು ನಿಮ್ಮ ಸ್ವಂತ ಮನೆಯನ್ನೇ ಮೊದಲು ಸರಿಯಾಗಿ ಕಟ್ಟಿಕೊಳ್ಳಿ, ಆ ನಂತರ ಬಿಎಸ್‌ಪಿ ಬಗ್ಗೆ ಮಾತನಾಡಿ” ಅಂತ ಖಾರವಾಗಿ ನುಡಿದಿದ್ದಾರೆ.

 ರಾಹುಲ್ ಗಾಂಧಿ ಮಾಡಿದ್ದ ಆರೋಪವೇನು?

ಕಳೆದ ವಾರವಷ್ಟೇ ಮಾತನಾಡಿದ್ದ ರಾಹುಲ್ ಗಾಂಧಿ, ಮಾಯಾವತಿ ಅವರ ವಿರುದ್ದ ಆರೋಪಿಸಿದ್ದರು.  ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರು ಹೋರಾಡಲಿಲ್ಲ. ನಾವು ಕಾಂಗ್ರೆಸ್ ಮತ್ತು ಬಿಎಸ್ ಪಿ ಮೈತ್ರಿ ಮಾಡಿಕೊಳ್ಳುವಂತೆ ಸಂದೇಶವನ್ನು ಕಳುಹಿಸಿದ್ದೆವು. ಆದರೆ ಅವರು ಪ್ರತಿಕ್ರಿಯಿಸಲಿಲ್ಲ” ಎಂದಿದ್ದರು.

“ಮಾಯಾವತಿ ದಲಿತರಿಗಾಗಿ ಹೋರಾಡಲಿಲ್ಲ”

ಅಲ್ಲದೇಹಿಂದೆ ಕಾನ್ಶಿರಾಮ್ ಜೀ ಉತ್ತರ ಪ್ರದೇಶದಲ್ಲಿ ದಲಿತರ ಪರ ಧ್ವನಿ ಎತ್ತಿದರು. ಆದರೆ ಅದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತು. ಈಗ ಸಿಬಿಐ, ಇಡಿ ಮತ್ತು ಪೆಗಾಸಸ್ ಇರುವುದರಿಂದ ಈ ಬಾರಿ ಮಾಯಾವತಿ ಅವರು ದಲಿತರ ಧ್ವನಿಗಾಗಿ ಹೋರಾಡಲಿಲ್ಲ” ಎಂದು ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: BSP ಜೊತೆ ಮೈತ್ರಿಗೆ ಸಿದ್ದವಿದ್ದೇವು, ಮಾಯಾವತಿ ಪ್ರತಿಕ್ರಿಯಿಸಲಿಲ್ಲ: ರಾಹುಲ್ ಗಾಂಧಿ

 “ನಿಮ್ಮ ಮನೆಯನ್ನು ಮೊದಲು ನೀವು ಸರಿಯಾಗಿ ಕಟ್ಟಿಕೊಳ್ಳಿ”

ರಾಹುಲ್ ಗಾಂಧಿ ಆರೋಪದಿಂದ ಮಾಯಾವತಿ ಕೆಂಡವಾಗಿದ್ದಾರೆ. ಕಾಂಗ್ರೆಸ್‌ ಹಾಗೂ ರಾಹುಲ್ ಗಾಂಧಿ ಅವರಿಗೆ ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಿಕೊಳ್ಳಲು ಆಗುತ್ತಿಲ್ಲ. ಬಿಎಸ್ ಪಿಯನ್ನು ದೂಷಿಸುತ್ತಿದ್ದಾರೆ ಅಂತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಹೇಳಿರುವುದು ಸಂಪೂರ್ಣ ಸುಳ್ಳು. ಅವರು ಇಂತಹ ಸಣ್ಣ ವಿಷಯಗಳ ಬದಲಾಗಿ ಯುಪಿ ಚುನಾವಣೆಯ ಸೋಲಿನ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

“ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಏನೂ ಮಾಡಿಲ್ಲ”

ಕಾಂಗ್ರೆಸ್ ಇಂತಹ ಟೀಕೆಗಳನ್ನು ಮಾಡುವ ಮೊದಲು 100 ಬಾರಿ ಯೋಚಿಸಬೇಕು ಅಂತ ಮಾಯಾವತಿ ಕುಟುಕಿದ್ದಾರೆ. ಅವರು ಬಿಜೆಪಿ ಎದುರು ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂತಹ ಟೀಕೆ, ದೋಷರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ಇಲ್ಲದಿರುವಾಗಲೂ ದಲಿತರಿಗಾಗಿ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.

“ಬಿಜೆಪಿ ಕಾಂಗ್ರೆಸ್‌ ಅನ್ನು ವಿರೋಧ ಮುಕ್ತವನ್ನಾಗಿ ಮಾಡುತ್ತಿದೆ"

"ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತವನ್ನು ಕೇವಲ 'ಕಾಂಗ್ರೆಸ್-ಮುಕ್ತ'ವನ್ನಾಗಿ ಮಾಡದೆ 'ವಿರೋಧ-ಮುಕ್ತ'ವನ್ನಾಗಿ ಮಾಡುತ್ತಿದೆ ಅಂತ ಮಾಯಾವತಿ ಹೇಳಿದ್ದಾರೆ. ಅಲ್ಲಿ ಭಾರತವು ಚೀನಾದ ರಾಜಕೀಯ ವ್ಯವಸ್ಥೆಯಂತೆಯೇ ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ಕೇವಲ ಒಂದು ಪ್ರಬಲ ಪಕ್ಷದೊಂದಿಗೆ ಉಳಿಯುತ್ತದೆ" ಅಂತ ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: "Dear Friend ಮೋದಿ"ಗಾಗಿ ಕಿಚಡಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ! ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ಕಾಟ್ ಮಾರಿಸನ್

ಪ್ರಧಾನಿಯನ್ನು ಬಲವಾಗಿ ತಬ್ಬಿಕೊಳ್ಳುವ ಪಕ್ಷವಲ್ಲ!

" ಬಿಎಸ್‌ಪಿ ಅಂದರೆ ರಾಹುಲ್ ಗಾಂಧಿಯಂತಹ ನಾಯಕರು ಸಂಸತ್ತಿನಲ್ಲಿ ಪ್ರಧಾನಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷವಲ್ಲ ಅಂತ ಮಾಯಾವತಿ ಹೇಳಿದ್ದಾರೆ. ನಾವು ಪ್ರಪಂಚದಾದ್ಯಂತ ಮೋಜು ಮಾಡುವ ಪಕ್ಷವಲ್ಲ" ಎಂದು ಅವರು ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Published by:Annappa Achari
First published: