ಮುರಿದು ಬಿದ್ದ ಎಸ್​​ಪಿ-ಬಿಎಸ್​​ಪಿ ಮೈತ್ರಿ: ಉಪ ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಮಾಯಾವತಿ ನಿರ್ಧಾರ

ಇನ್ನೊಂದೆಡೆ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ನಡೆಗೆ ಬೇಸತ್ತ ಮಾಜಿ ಸಿಎಂ ಅಖಿಲೇಶ್​​ ಯಾದವ್ ಕೂಡ ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಎಸ್​​ಪಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ಧಾರೆ.

Ganesh Nachikethu | news18
Updated:June 24, 2019, 4:28 PM IST
ಮುರಿದು ಬಿದ್ದ ಎಸ್​​ಪಿ-ಬಿಎಸ್​​ಪಿ ಮೈತ್ರಿ: ಉಪ ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಮಾಯಾವತಿ ನಿರ್ಧಾರ
ಮಾಯಾವತಿ ಮತ್ತು ಅಖಿಲೇಶ್​ ಯಾದವ್
  • News18
  • Last Updated: June 24, 2019, 4:28 PM IST
  • Share this:
ನವದೆಹಲಿ(ಜೂನ್​​.24): ಮಾಜಿ ಸಿಎಂ ಅಖಿಲೇಶ್​​ ಯಾದವ್​​ ನೇತೃತ್ವದ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಮುರಿದುಕೊಂಡ ಬಿಎಸ್​​ಪಿ ಪಕ್ಷವೂ, ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. "ಬಿಜೆಪಿಯನ್ನು ಮೈತ್ರಿ ಮೂಲಕ ಸೋಲಿಸಲು ಸಾಧ್ಯವಿಲ್ಲ. ಹಾಗಾಗಿ ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಏಕಾಂಗಿ ಹೋರಾಟ ಮಾಡಲಿದ್ದೇವೆ" ಎಂದು ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಪ್ರಕಟಿಸಿದ್ಧಾರೆ.

"ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಭಿನ್ನಾಭಿಪ್ರಾಯ ಬದಿಗಿಟ್ಟು ಮೈತ್ರಿ ಧರ್ಮ ಪಾಲಿಸಿದ್ದೆವು. 2012-17ರ ಅವಧಿಯಲ್ಲಿ ಎಸ್​​ಪಿ ಸರ್ಕಾರ ತೆಗೆದುಕೊಂಡಿದ್ದ ದಲಿತ ವಿರೋಧಿ ನಿರ್ಧಾರಗಳನ್ನು ಪಕ್ಕಕಿಟ್ಟು ಬಿಜೆಪಿ ಸೋಲಿಸಲು ಮುಂದಾಗಿದ್ದೆವು. ಆದರೀಗ, ಲೋಕಸಭಾ ಚುನಾವಣೆ ಬಳಿಕ ಎಸ್​​ಪಿ ವರ್ತನೆಯಿಂದಾಗಿ ನಮಗೆ ಭಾರೀ ಬೇಸರವಾಗಿದೆ. ಹೀಗಾದರೆ ಬಿಜೆಪಿ ಸೋಲಿಸಲು ಅಸಾಧ್ಯ ಎಂಬುದು ಅರಿವಾಗಿದೆ. ಈ ಕಾರಣಕ್ಕೆ ಪಕ್ಷದ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಎಸ್​​ಪಿ ಏಕಾಂಗಿಯಾಗಿ ಬಿಜೆಪಿ ವಿರುದ್ಧ ಹೋರಾಡಲಿದೆ" ಎಂದು ಟ್ವೀಟ್​​ ಮೂಲಕ ಮಾಯಾವತಿ ಘೋಷಿಸಿದ್ದಾರೆ.

ಇನ್ನೊಂದೆಡೆ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ನಡೆಗೆ ಬೇಸತ್ತ ಮಾಜಿ ಸಿಎಂ ಅಖಿಲೇಶ್​​ ಯಾದವ್ ಕೂಡ ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಎಸ್​​ಪಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ಧಾರೆ. ಈ ಮೂಲಕ ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಎದುರು ಹೀನಾಯವಾಗಿ ಸೋತ ಮಹಾಘಟಬಂಧನ್​​ಗೆ ಎಳ್ಳುನೀರು ಬಿಟ್ಟಿದ್ದಾರೆ.

ಇದನ್ನೂ ಓದಿ: ಜನಸೇನೆ ಪಕ್ಷ ಸಂಘಟನೆಗೆ ಮುಂದಾದ ಪವನ್​​ ಕಲ್ಯಾಣ್​​: ಸದ್ಯದಲ್ಲೇ ರಾಜ್ಯ ಸಮಿತಿ ವಿಸರ್ಜನೆ

ಉತ್ತರಪ್ರದೇಶದಲ್ಲಿ ಮೈತ್ರಿ ಹಿನ್ನಡೆ ಅನುಭವಿಸಿದ ಬಳಿಕ ಮಾಜಿ ಸಿಎಂ ಮಾಯಾವತಿ ಬೇಸರ ವ್ಯಕ್ತಪಡಿಸಿದ್ದರು. ಎಸ್​​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ವಿಫಲರಾಗಿದ್ದಾರೆ. ಹಾಗೆಯೇ ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತು ಹೋಗಿದ್ಧಾರೆ ಎಂದು ಬಿಎಸ್​​ಪಿ ಕಾರ್ಯಕರ್ತರ ಸಭೆಯಲ್ಲಿ ಆರೋಪ ಕಿಡಿಕಾರಿದ್ದರು.

ಇನ್ನು ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಕುರಿತು ವ್ರ ಅತೃಪ್ತಿ ಹೊರಹಾಕಿದ್ದ ಬಿಎಸ್​​ಪಿ ಮುಖ್ಯಸ್ಥೆ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ 11 ಸೀಟುಗಳಿಗೆ ಉಪಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಾಗುವಂತೆ ನೂತನ ಸಂಸದ ಮತ್ತು ಶಾಸಕರಿಗೆ ಸೂಚಿಸಿದ್ದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ವೇಳೆ ಬೃಹತ್​​ ಪೆಂಡಾಲ್​​ ಕುಸಿತ; 14 ಮಂದಿ ಸಾವುಒಮ್ಮೆ ಉಪಚುನಾವಣೆಗಾಗಿ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ವಿರುದ್ಧ ಗೆಲುವಿನ ರುಚಿಯನ್ನು ಕಂಡರು. ಬಳಿಕ ಇದೇ ಲೆಕ್ಕಚಾರದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಎಸ್‌ಪಿ-ಬಿಎಸ್​ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದರು. ಇಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗಳಿಸಿದರೆ, ಬಿಎಸ್​​ಪಿ 10 ಹಾಗೂ ಎಸ್​​ಪಿ 5 ಸ್ಥಾನ ಮಾತ್ರ ಗಳಿಸಿತ್ತು.
------------
First published: June 24, 2019, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading