ಮಾಯಾವತಿ ಮುಳುಗುತ್ತಿರುವ ಹಡಗು; ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ: ಪ್ರಧಾನಿ ಮೋದಿ

#ModiSpeaksToNews18 | ದೇಶದಲ್ಲಿ ಜ್ಯಾತತೀತ ಪಕ್ಷಗಳು ಗದ್ದಲ ಕೋಲಾಹಲ ಶುರು ಮಾಡಿವೆ. ಅವಾರ್ಡ್​​ ವಾಪ್ಸಿ ಮಾಡಿದ್ದ ಸಾಹಿತಿಗಳು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಿದ್ಧಾರೆ. ಸಾಕಷ್ಟು ಸಹಿ ಸಂಗ್ರಹ ಅಭಿಯಾನಗಳು ನಡೆಯುತ್ತಿವೆ. ಯಾಕೇ ದೇಶ ಮೌನವಾಗಿದೆ? ಇದು ರಾಷ್ಟ್ರೀಯ ಭದ್ರತೆ ವಿಚಾರ. ಹೀಗಾಗಿ ನಾವು ಈ ಬಗ್ಗೆ ಮಾತಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

Ganesh Nachikethu | news18
Updated:April 9, 2019, 3:33 PM IST
ಮಾಯಾವತಿ ಮುಳುಗುತ್ತಿರುವ ಹಡಗು; ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: April 9, 2019, 3:33 PM IST
  • Share this:
ನವದೆಹಲಿ(ಏ.09): ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಮುಳುಗುತ್ತಿರುವ ಹಡಗು, ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ ಎಂದು ಪ್ರಧಾನಿ ಮೋದಿಯವರು ನ್ಯೂಸ್​​​-18 ಎಕ್ಸ್​ಕ್ಲೂಸಿವ್​​ ಸಂದರ್ಶನದಲ್ಲಿ ವ್ಯಂಗ್ಯವಾಡಿದ್ದಾರೆ. ಮಾಯಾವತಿಯವರ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಸೋಲಿನ ಭೀತಿಯಲ್ಲಿರುವ ಇವರು ಗೆಲ್ಲಲು ಹವಣಿಸುತ್ತಿದ್ಧಾರೆ. ನನಗೆ ಈ ಜ್ಯಾತ್ಯಾತೀತ ಎಂದು ಹಣಪಟ್ಟಿ ಕಟ್ಟಿಕೊಂಡಿರುವ ಪಕ್ಷಗಳ ಭವಿಷ್ಯದ ಬಗ್ಗೆ ಚಿಂತೆ, ಆಂತಕ ಶುರುವಾಗಿದೆ ಎಂದು ಪ್ರಧಾನಿ ಕುಹಕವಾಡಿದರು.

ನ್ಯೂಸ್​​-18 ಎಕ್ಸ್​ಕ್ಲೂಸಿವ್​​ ಸಂದರ್ಶನದಲ್ಲಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಎಸ್​​ಪಿ-ಬಿಎಸ್​​​ಪಿ ಜಂಟಿ ಸಮಾವೇಶವೊಂದರಲ್ಲಿ ಮಾಯಾವತಿ ಕಾಂಗ್ರೆಸ್​​ಗೆ ಮುಸ್ಲಿಮರು ಮತ ಹಾಕಬೇಡಿ ಎಂದು ಮನವಿ ಮಾಡಿದ್ಧಾರೆ. ಕಾಂಗ್ರೆಸ್​​ ಮತ ಹಾಕುವ ಮೂಲಕ ಬಿಜೆಪಿ ಗೆಲ್ಲಲು ಅವಕಾಶ ಮಾಡಿಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಆಯೋಗ ಬಿಎಸ್​​ಪಿ ಮುಖ್ಯಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಲು, ಅವರ ಹೇಳಿಕೆ ಬಗೆಗಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಬೇಕಿರುವ ವರದಿಗಾಗಿ ಕಾಯುತ್ತಿದೆ ಎಂದರು.

ಸಾಲುಸಾಲು ಸೋಲುಗಳಿಂದ ಕಂಗೆಟ್ಟಿದ ಮಾಯಾವತಿಯವರು, ಈಗ ನಮ್ಮನ್ನು ಗೆಲ್ಲಿಸಿ ಎಂದು ಮುಸ್ಲಿಮರ ಮೊರೆ ಹೋಗಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ಧಾರೆ. ಹೀಗಾಗಿ ಬಿಎಸ್​​ಪಿ ಮುಖ್ಯಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಇದು ಸೂಕ್ತ ಸಮಯ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಇಂದು ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ರಣಕಹಳೆ

ದೇಶದಲ್ಲಿ ಜ್ಯಾತತೀತ ಪಕ್ಷಗಳು ಗದ್ದಲ ಕೋಲಾಹಲ ಶುರು ಮಾಡಿವೆ. ಅವಾರ್ಡ್​​ ವಾಪ್ಸಿ ಮಾಡಿದ್ದ ಸಾಹಿತಿಗಳು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಿದ್ಧಾರೆ. ಸಾಕಷ್ಟು ಸಹಿ ಸಂಗ್ರಹ ಅಭಿಯಾನಗಳು ನಡೆಯುತ್ತಿವೆ. ಯಾಕೇ ದೇಶ ಮೌನವಾಗಿದೆ? ಇದು ರಾಷ್ಟ್ರೀಯ ಭದ್ರತೆ ವಿಚಾರ. ಹೀಗಾಗಿ ನಾವು ಈ ಬಗ್ಗೆ ಮಾತಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಭಾನುವಾರ(ಏ.07) ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿಯ ಜಂಟಿ ಸಮಾವೇಶ ಆಯೋಜಿಸಲಾಗಿತ್ತು. ಇಲ್ಲಿ ವೇದಿಕೆ ಮೇಲೆ ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿದ್ದ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಅವರು, ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್​ಗೆ ಮತ ಚಲಾಯಿಸಿದರೆ, ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ. ಕೇಂದ್ರದಲ್ಲಿರುವ ಬಿಜೆಪಿ ಜನರಲ್ಲಿ ದ್ವೇಷ ಬಿತ್ತುತ್ತಿದೆ. ಈ ಒಂದು ಕಾರಣಕ್ಕೆ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ. ಆದರಿಂದ, ಕಾಂಗ್ರೆಸ್​ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: AFSPA ಹಿಂಪಡೆಯುವುದೂ ಒಂದೇ, ದೇಶ ಕಾಯುವ ಸೈನಿಕರನ್ನು ಗಲ್ಲಿಗೇರಿಸುವುದೂ ಒಂದೇ: ಪ್ರಧಾನಿ ಮೋದಿಹೀಗೆ ಮಾಡಿಯೇ ಕಾಂಗ್ರೆಸ್​ ಕೂಡ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಈ ಬಾರಿ ಬಿಜೆಪಿ ಕೂಡ ಗದ್ದುಗೆಯಿಂದ ಕೆಳಗಿಳಿಯಲಿದೆ. ಬಿಜೆಪಿ ತಾನು ನೀಡಿದ ಶೇ.25 ಭರವಸೆಗಳನ್ನೂ ಈಡೇರಿಸಿಲ್ಲ. 25 ವರ್ಷಗಳ ಬಳಿಕ ಕಾಂಗ್ರೆಸ್​ನ ಕನಿಷ್ಠ ಆದಾಯ ಯೋಜನೆ ಬದಲಿಗೆ ಬಡ ಕುಟುಂಬಗಳಿಗೆ ಉದ್ಯೋಗ ಖಾತ್ರಿ ನೀಡಬೇಕಿದೆ. ರೈತರನ್ನು ಸಾಲದ ಸಂಕಷ್ಟದಿಂದ ಮುಕ್ತಗೊಳಿಸಬೇಕಿದೆ. ಈ ಎರಡು ವಿಚಾರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಿಫಲವಾಗಿವೆ ಎಂದು ಆರೋಪಿಸಿದ್ದರು.

First published: April 9, 2019, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading