'ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸೋತರೆ ದೇಶ ತೊರೆಯುತ್ತೇನೆ'; ಡೊನಾಲ್ಡ್​ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಕೆಟ್ಟ ಅಭ್ಯರ್ಥಿಯ ವಿರುದ್ಧ ಸ್ಫರ್ಧಿಸಿರುವುದು ನನ್ನ ಮೇಲೆ ಒತ್ತಡ ಉಂಟುಮಾಡಿದೆ. ನಾನು ಸೋಲಬಹುದೆಂದು ನೀವು ಊಹಿಸಬಲ್ಲಿರಾ? ಹಾಗೇನಾದರೂ ನಾನು ಸೋತರೆ ಏನು ಮಾಡಲಿ? ಬಹುಶಃ ನಾನು ದೇಶ ಬಿಡಬಹುದು ಎಂದು ಡೊನಾಲ್ಡ್​ ಟ್ರಂಪ್ ತಿಳಿಸಿದ್ದಾರೆ.

ಡೊನಾಲ್ಡ್​ ಟ್ರಂಪ್.

ಡೊನಾಲ್ಡ್​ ಟ್ರಂಪ್.

 • Share this:
  ಜಾರ್ಜಿಯಾ: ಇಡೀ ವಿಶ್ವವೇ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಕೇವಲ 15 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಡೋನಾಲ್ಡ್​ ಟ್ರಂಪ್ ನಡುವೆ ಅಧ್ಯಕ್ಷ ಸ್ಥಾನ್ಕಕೆ ಭಾರೀ ಪೈಪೋಟಿ ನಡೆಯುತ್ತಿದ್ದು ಇಬ್ಬರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಚುನಾವಣಾ ರ‍್ಯಾಲಿಯಲ್ಲಿ ಡೊನಾಲ್ಡ್​ ಟ್ರಂಪ್ ಆಡಿರುವ ಮಾತು ಇಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ಜಾರ್ಜಿಯಾದ ಮ್ಯಾಕನ್​ ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, "ಈ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದರೆ ನೀವು ನನ್ನನ್ನು ಮತ್ತೆ ನೋಡಬಹುದು, ಅಕಸ್ಮಾತ್​ ನಾನು ಸೋಲನುಭವಿಸಿದರೆ ಭಾಗಶಃ ಈ ದೇಶವನ್ನೇ ತೊರೆಯಬೇಕಾಗುತ್ತದೆ" ಎಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಚುನಾವಣಾ ಪ್ರಚಾರದ ವೇಳೆ ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎನ್​ಎನ್​ ವರದಿ ಮಾಡಿದೆ.

  ಕೊರೊನಾ ಸೋಂಕಿನಿಂದ ಗುಣಮುಖರಾಗಿ ಫ್ಲೋರಿಡಾ ಮತ್ತು ಜಾರ್ಜಿಯಾದಲ್ಲಿ ನಡೆದ ರ್‍ಯಾಲಿಗಳಲ್ಲಿ ಮಾತನಾಡಿರುವ ಡೊನಾಲ್ಡ್​ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೋ ಬಿಡನ್ ಅಮೆರಿಕಾದಲ್ಲಿ ಕಮ್ಯುನಿಸಮ್ ಮತ್ತು ಪ್ರವಾಹೋಪಾದಿಯಲ್ಲಿ ಕ್ರಿಮಿನಲ್ ವಲಸಿಗರನ್ನು ತುಂಬಲಿದ್ದಾರೆ ಎಂದು ಆರೋಪಿಸಿದ್ದಾರೆ.  ನಾನು ಅಂದುಕೊಂಡಂತೆ ಯಾವುದು ನಡೆಯುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಡೊನಾಲ್ಡ್​ ಟ್ರಂಪ್, "ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಕೆಟ್ಟ ಅಭ್ಯರ್ಥಿಯ ವಿರುದ್ಧ ಸ್ಫರ್ಧಿಸಿರುವುದು ನನ್ನ ಮೇಲೆ ಒತ್ತಡ ಉಂಟುಮಾಡಿದೆ. ನಾನು ಸೋಲಬಹುದೆಂದು ನೀವು ಊಹಿಸಬಲ್ಲಿರಾ? ಹಾಗೇನಾದರೂ ನಾನು ಸೋತರೆ ಏನು ಮಾಡಲಿ? ಬಹುಶಃ ನಾನು ದೇಶ ಬಿಡಬಹುದು" ಎಂದಿದ್ದಾರೆ.

  ಅಮೆರಿಕದಲ್ಲಿ ಚುನಾವಣೆ ಜೊತೆಗೆ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದರಿಂದ ಟ್ರಂಪ್ ತಮ್ಮ ಗಮನವನ್ನು ಸಂಪೂರ್ಣವಾಗಿ ಪ್ರಮುಖ ರಿಪಬ್ಲಿಕನ್ ನೆಲೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಅಲ್ಲಿಂದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

  ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಮತ್ತೊಂದು ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ; ಹಣೆಗೆ ಗನ್ ಇಟ್ಟು ಹೇಯ ಕೃತ್ಯ!

  ಇತ್ತ, ಬಿಡೆನ್ ತಮ್ಮ ಚುನಾವಣಾ ಪ್ರಚಾರದಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೋನಾ ವೈರಸ್ ನಿಯಂತ್ರಣ ಮಾಡದ ವಿಚಾರವನ್ನು ಅಭಿಯಾನದ ಪ್ರಬಲ ವಿಷಯವನ್ನಾಗಿ ಇಟ್ಟುಕೊಂಡಿದ್ದಾರೆ.  ’ಈ ವೈರಸ್ ಪವಾಡದಂತೆ ಕಣ್ಮರೆಯಾಗಲಿದೆ ಎಂದು ಅವರು ನಮಗೆ ಹೇಳುತ್ತಲೇ ಇರುತ್ತಾರೆ ಆದರೆ ವಾಸ್ತವವಾಗಿ ಅದು ಮತ್ತಷ್ಟು ಹೆಚ್ಚುತ್ತಿದೆ’ ಎಂದು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

  ಅಲ್ಲದೆ, ಚುನಾವಣಾ ರ್‍ಯಾಲಿಗಳಲ್ಲಿ ಏಕತೆಯ ಮತ್ತು ಸಹಭಾಗಿತ್ವದ ಮಾತುಗಳನ್ನು ಆಡುತ್ತಿರುವ ಜೋ ಬಿಡೆನ್, "ನಾವು ಭಯದ ಬದಲು ಭರವಸೆಯನ್ನು, ವಿಭಜನೆಯ ಬದಲು ಏಕತೆಯನ್ನು, ಕಲ್ಪನೆಗೆ ಬದಲು ವಿಜ್ಞಾನವನ್ನು, ಜೊತೆಗೆ ಸುಳ್ಳಿನ ಬದಲು ಸತ್ಯವನ್ನು ಆರಿಸಿಕೊಳ್ಳುತ್ತೇವೆ" ಎಂದು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ.
  Published by:MAshok Kumar
  First published: