ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದಬ್ಬಾಳಿಕೆ ಸ್ವಲ್ಪ ಸಮಯವಷ್ಟೇ, ಜಾಸ್ತಿ ದಿನ ನಡೆಯಲ್ಲ: ಪ್ರಧಾನಿ ಮೋದಿ

PM Modi : ವಿನಾಶಕಾರಿ ಶಕ್ತಿಗಳು, ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯವನ್ನು ನಿರ್ಮಿಸುವ ಚಿಂತನೆಯು ಸ್ವಲ್ಪ ಸಮಯದವರೆಗೆ ಮಾತ್ರ ಯಶಸ್ವಿಯಾಗುತ್ತೆ. ಅಂತಹ ಅಸ್ತಿತ್ವವು ಎಂದಿಗೂ ಶಾಶ್ವತವಲ್ಲ. ಮಾನವೀಯತೆಯನ್ನು ದೀರ್ಘಕಾಲ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೆರಿಕಾ ಸೇನಾ ಬೆಂಬಲವನ್ನು ಹಿಂಪಡೆಯುತ್ತಲೇ ಅಘ್ಫಾನಿಸ್ತಾನದ ಮೇಲೆ ಮುರಿದು ಬಿದ್ದ ತಾಲಿಬಾನಿ ಉಗ್ರರು ಇಡೀ ದೇಶವನ್ನು ಈಗ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಅಧ್ಯಕ್ಷ ಅಶ್ರಮ ಘನಿ ದೇಶದಿಂದ ಪಲಾಯನ ಮಾಡಿದ್ದು, ತಾಲಿಬಾನಿಗಳು ಆಡಳಿತದ ಚುಕ್ಕಣಿ ಹಿಡಿದಿದ್ದಾರೆ. ಅಘ್ಘನ್​​​ನಲ್ಲಿ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯನ್ನು ಇಡೀ ವಿಶ್ವವೇ ನೋಡುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅಫ್ಘಾನಿಸ್ತಾನದ ಮೇಲೆ ತಾಲಿಬಾನಿಗಳು ಕೆಲ ಸಮಯದವರೆಗೆ ಪ್ರಾಬಲ್ಯ ಮೆರೆಯಬಹುದು ಆದರೆ ಅವರ ದಬ್ಬಾಳಿಕೆ ಶಾಶ್ವತವಲ್ಲ ಎಂದಿದ್ದಾರೆ.

ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮೋದಿ, ಭಯೋತ್ಪಾದನೆಯ ಆಧಾರದ ಮೇಲೆ ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು. ಆದರೆ ಅದರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ ಎಂದಿದ್ದಾರೆ. ವಿನಾಶಕಾರಿ ಶಕ್ತಿಗಳು, ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯವನ್ನು ನಿರ್ಮಿಸುವ ಚಿಂತನೆಯು ಸ್ವಲ್ಪ ಸಮಯದವರೆಗೆ ಮಾತ್ರ ಯಶಸ್ವಿಯಾಗುತ್ತೆ. ಅಂತಹ ಅಸ್ತಿತ್ವವು ಎಂದಿಗೂ ಶಾಶ್ವತವಲ್ಲ. ಮಾನವೀಯತೆಯನ್ನು ದೀರ್ಘಕಾಲ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸದ್ಯ ತಾಲಿಬಾನಿಗಳು ಯುಎಸ್ ಮತ್ತು ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡಿದ್ದ ಜನರನ್ನು ಗುರಿಯಾಗಿರಿಸಿಕೊಂಡು ಪ್ರತಿಯೊಂದು ಮನೆಗಳಲ್ಲೂ ತಡಕಾಡುತ್ತಿದೆ. ಬಂದೂಕುದಾರಿಗಳು ಅಫ್ಘನ್ನರ ಮನೆಗಳ ಬಾಗಿಲನ್ನು ಬಡಿಯುತ್ತಿದ್ದಾರೆ. ಆದರೆ ತಾಲಿಬಾನ್ ಇಂತಹ ಆರೋಪಗಳನ್ನು ನಿರಾಕರಿಸುತ್ತಿದೆ. ನಮ್ಮವರು ಖಾಸಗಿ ಮನೆಗಳಿಗೆ ನುಗ್ಗುತ್ತಿಲ್ಲ ಎಂದು ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಕಾಬೂಲ್‌ನಲ್ಲಿನ ಅವ್ಯವಸ್ಥೆಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುವಾಗ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ವರದಿಗಳಾಗಿವೆ. ಆದರೆ ತಾಲಿಬಾನ್​ ಮುಖಂಡ ಮಾತ್ರ ಮಹಿಳೆಯರು ಮತ್ತು ಪತ್ರಕರ್ತರು ನಮ್ಮ ಆಡಳಿತದಲ್ಲಿ ಭಯಪಡುವ ಅಗತ್ಯವಿಲ್ಲ ಎಂದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಫ್ಘನ್​ನಲ್ಲಿ ಸಿಲುಕಿರುವ ಭಾರತೀಯ ಹಿಂದೂಗಳು, ಸಿಖ್​ರ ಸುರಕ್ಷತೆ ಸಂಬಂಧ ಭಾರತದ ವಿದೇಶಾಂಗ ಕಾರ್ಯಾಲಯ ನಿರಂತರ ಸಂಪರ್ಕದಲ್ಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: