ಮಥುರಾ(ಡಿ.03): ಮಥುರಾದ (Mathura) ಠಾಣಾ ಮಹಾವನ್ ವ್ಯಾಪ್ತಿಯ ಇಸ್ಲಾಂಪುರ ರಾಮನಗರ ಗ್ರಾಮದಲ್ಲಿ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ (Minor Girl) ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಹತ್ಯೆಗೈದ (Rape And Murder) ಘಟನೆ ಕೋಲಾಹಲ ಸೃಷ್ಟಿಸಿದೆ. ಸಾಮೂಹಿಕ ಅತ್ಯಾಚಾರದ ಸುದ್ದಿ ತಿಳಿದ ಪೊಲೀಸರು ಬೆಚ್ಚಿ ಬೀಳುವಂತೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಏರಿಯಾ ಪೊಲೀಸರಿಂದ ಹಿಡಿದು ಎಸ್ಎಸ್ಪಿ ಶೈಲೇಶ್ ಪಾಂಡೆವರೆಗೂ ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆಯ ನಂತರ, ಶುಕ್ರವಾರ ತಡರಾತ್ರಿ ಸಂತ್ರಸ್ತೆಯ ಮೃತ ದೇಹವು ಹೊಲದಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ಎಸ್ಎಸ್ಪಿ ಹೇಳಿದ್ದಾರೆ.
ಮೃತದೇಹದ ಪಂಚನಾಮೆ ನಡೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅತ್ಯಾಚಾರದ ನಂತರ ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂಬ ಆತಂಕವನ್ನು ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಸ್ಥಳದಿಂದ ಇಬ್ಬರು ಆರೋಪಿಗಳನ್ನು ಜನರು ಕೂಡ ಹಿಡಿದಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಇದನ್ನೂ ಓದಿ: Kalaburagi: ರೇಪ್ ಆಂಡ್ ಮರ್ಡರ್ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ
ಆರೋಪಿಗಳನ್ನು ಹಿಡದ ಗ್ರಾಮಸ್ಥರು
ಮತ್ತೊಂದೆಡೆ ಘಟನೆ ಬಗ್ಗೆ ವಿವರಿಸಿರುವ ಕುಟುಂಬ ಸದಸ್ಯರು ಮಗಳು ಮಲವಿಸರ್ಜನೆಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಕುಕೃತ್ಯ ನಡೆದಿದೆ. ಅತ್ಯಾಚಾರದ ನಂತರ ಆರೋಪಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಘಟನೆ ನಡೆಸಿದ ಆರೋಪಿಗಳು ಗ್ರಾಮದವರೇ ಆಗಿದ್ದಾರೆ. ಇನ್ನು ಸ್ಥಳದಲ್ಲಿದ್ದ ಬಾಲಕಿಯ ಚಿಕ್ಕಪ್ಪ ಮಾತನಾಡಿ ನಮ್ಮ ಮಗಳು ಮಲವಿಸರ್ಜನೆ ಮಾಡಿ ಬರುತ್ತಿದ್ದಳು, ಈ ವೇಳೆ ಮೂವರು ಸೇರಿ ಆಕೆಯ ಅತ್ಯಾಚಾರಗೈದಿದ್ದಾರೆ. ನಾನು ಇಬ್ಬರನ್ನು ನೋಡಿ ಹಿಡಿದೆ. ಕೃತ್ಯ ಎಸಗಿದ ಆರೋಪಿಗಳು ತಮ್ಮ ಬಳಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಸ್ಥಳೀಯ ಶಾಸಕರು
ಘಟನೆಯ ಬಗ್ಗೆ ಒ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಪೂರ್ಣ ಪ್ರಕಾಶ್ ಕೂಡ ಸ್ಥಳಕ್ಕೆ ಆಗಮಿಸಿ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬೈಕ್ ಬುಕ್ ಮಾಡಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್
ನವೆಂಬರ್ 25ರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಶುಕ್ರವಾರ ರಾತ್ರಿ ಬಿಟಿಎಂ ಲೇಔಟ್ (BTM Layout) ನಿಂದ ನೀಲಾದ್ರಿ ನಗರಕ್ಕೆ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾರೆ.
ಇದನ್ನೂ ಓದಿ: Accident: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ! ಬಾಲಕಿ ಮೇಲೆ ಹರಿದ ಬಸ್
ರ್ಯಾಪಿಡ್ ಬೈಕ್ (Rapido Bike) ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ ತಲುಪಿಸದೇ ಸ್ನೇಹಿತನ ರೂಮ್ಗೆ ಕರೆದೊಯ್ದಿದ್ದಾನೆ.
ಸ್ನೇಹಿತನ ಜೊತೆ ಸೇರಿ ಅತ್ಯಾಚಾರ
ಬೈಕ್ ಸವಾರ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ ರೂಮ್ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ರ್ಯಾಪಿಡೋ ಬೈಕ್ ಸವಾರ ಮತ್ತು ಸ್ನೇಹಿತನಿಂದ ರೇಪ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ