Indian Railways: ಭಾರತೀಯ ರೈಲ್ವೆ ವಿರುದ್ಧ 22 ವರ್ಷ ಹೋರಾಡಿ ಗೆದ್ದ ಮಥುರಾ ನಿವಾಸಿ!

ಇಂದಿನ ದಿನಗಳಲ್ಲಿ ಕಪಟ, ಮೋಸಗಳು ಬರಿ ಕಳ್ಳಕಾಕರಿಂದ ಮಾತ್ರವಲ್ಲದೆ ಜನಸಾಮಾನ್ಯರಿಗೆ ಆಸರೆಯಾಗಿರುವ ಅದೆಷ್ಟೋ ಇಲಾಖೆ, ಸಂಸ್ಥೆಗಳಿಂದಲೂ ನಡೆಯುತ್ತಿರುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ. ಭಾರತೀಯ ರೈಲ್ವೆಯು 1999 ರಲ್ಲಿ ಟಿಕೆಟ್‌ಗೆ ರೂ 20 ಅನ್ನು ಹೆಚ್ಚುವರಿ ಶುಲ್ಕವಾಗಿ ವಿಧಿಸಿರುವುದರ ವಿರುದ್ಧ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇಲಾಖೆಯ ವಿರುದ್ಧ ಬರೋಬ್ಬರಿ 22 ವರ್ಷಗಳ ಕಾಲ ಹೂಡಿದ್ದ ಸುದೀರ್ಘ ಕಾನೂನು ಹೋರಾಟವನ್ನು ಗೆದ್ದಿದ್ದಾರೆ. 

ಭಾರತೀಯ ರೈಲ್ವೇ ವಿರುದ್ಧ  22 ವರ್ಷಗಳ ಕಾನೂನು ಸಮರ ಗೆದ್ದ ಮಥುರಾ ನಿವಾಸಿ

ಭಾರತೀಯ ರೈಲ್ವೇ ವಿರುದ್ಧ 22 ವರ್ಷಗಳ ಕಾನೂನು ಸಮರ ಗೆದ್ದ ಮಥುರಾ ನಿವಾಸಿ

  • Share this:

ಭಾರತೀಯ ರೈಲ್ವೆಯು (Indian Railways) 1999 ರಲ್ಲಿ ಟಿಕೆಟ್‌ಗೆ ರೂ 20 ಅನ್ನು ಹೆಚ್ಚುವರಿ ಶುಲ್ಕವಾಗಿ ವಿಧಿಸಿರುವುದರ ವಿರುದ್ಧ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇಲಾಖೆಯ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾರೆ. ಬರೋಬ್ಬರಿ 22 ವರ್ಷಗಳ ಕಾಲ ಹೋರಾಡಿ ಸುದೀರ್ಘ ಕಾನೂನು ಹೋರಾಟವನ್ನು (Legal fight) ಗೆದ್ದಿದ್ದಾರೆ.  ಮಥುರಾದ ವಕೀಲ (Advocate of Mathura) ವೃತ್ತಿಯಲ್ಲಿರುವ ತುಂಗನಾಥ್ ಚತುರ್ವೇದಿಯವರು ಡಿಸೆಂಬರ್ 1999 ರಲ್ಲಿ ಮೊರಾದಾಬಾದ್‌ಗೆ ಎರಡು ಟಿಕೆಟ್‌ಗಳನ್ನು (Ticket) ಖರೀದಿಸಿದ್ದರು. ಟಿಕೆಟ್‌ನ ಬೆಲೆ ರೂ 70 ಆಗಿದ್ದರೂ ಇಲಾಖೆಯು ಅವರಿಗೆ ರೂ 90 ಅನ್ನು ವಿಧಿಸಿತ್ತು. ಟಿಕೆಟ್ ಖರೀದಿಯ ಸಮಯದಲ್ಲಿ ಚತುರ್ವೇದಿಯವರು ರೂ 100 ನೀಡಿ ಎರಡು ಟಿಕೆಟ್‌ಗಳನ್ನು ಖರೀದಿಸಿದ್ದರು.


 ಮೊರಾದಾಬಾಲ್‌ಗೆ ಇದ್ದ ಶುಲ್ಕ ರೂ 70 ಆಗಿದ್ದರಿಂದ ರೂ 30 ಅನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದರು ಆದರೆ ಅವರಿಗೆ ರೂ 10 ಅನ್ನು ಹಿಂತಿರುಗಿಸಲಾಗಿತ್ತು.


ಟಿಕೆಟ್​ ದರವನ್ನು ಪ್ರಶ್ನಿಸಿ ಗೆದ್ದ ಚತುರ್ವೇದಿ

ವಿಶ್ವದಲ್ಲೇ ಭಾರತೀಯ ರೈಲ್ವೆಗೆ ಹೆಸರಿದೆ. ಜನಸಾಮಾನ್ಯ ಕೂಡ ಓಡಾಡಬಹುದುದಾದ ಸಂಪರ್ಕ ವ್ಯವಸ್ಥೆಯೆಂದರೆ ಅದು ರೈಲ್ವೆ. ಆದರೆ ಅಂದು ಮಾಡಿದ ಯಡವಟ್ಟಿನಿಂದ ಈಗ ಪ್ರಯಾಣಿಕರೊಬ್ಬರಿಗೆ ಗೆಲುವಾಗಿದೆ. ಟಿಕೆಟ್​ ದರ ಹೆಚ್ಚು ಪಡೆದಿದ್ದನ್ನು ಕೋರ್ಟ್​ನಲ್ಲಿ ಪ್ರಶ್ನಿಸಿ ವ್ಯಕ್ತಿಯೊಬ್ಬರು ಗೆದ್ದಿದ್ದಾರೆ.

ನ್ಯಾಯಾಲಯದ ಮೊರೆ ಹೋಗಿದ್ದ ಚತುರ್ವೇದಿ
70 ರೂ.ಗಳ ಟಿಕೆಟ್‌ಗೆ ರೂ 90 ಪಡೆದುಕೊಂಡಿದ್ದನ್ನು ನೋಡಿ ಚತುರ್ವೇದಿಯವರು ಟಿಕೆಟ್ ಗುಮಾಸ್ತನನ್ನು ಮತ್ತು  ಸ್ಟೇಷನ್ ಮಾಸ್ಟರ್ ಅನ್ನು ವಿಚಾರಿಸಿದ್ದರು. ಆದರೆ ಯಾರೊಬ್ಬರೂ ಅವರಿಗೆ ಸಹಾಯ ಮಾಡಲಿಲ್ಲ. ಹೀಗಾಗಿ ಕಾನೂನು ಪರಿಹಾರವನ್ನು ಪಡೆಯುವ ನಿರ್ಧಾರಕ್ಕೆ ಬಂದರು.


ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಕಾನೂನು ಜ್ಞಾನ ನನಗಿತ್ತು ಎಂದು ಚತುರ್ವೇದಿಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ರೈಲ್ವೆಯು ಯಾರಾದರೂ ಪ್ರಯಾಣಿಕರಿಗೆ ನ್ಯಾಯವಾದ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ವಿಧಿಸಿದಲ್ಲಿ ಗ್ರಾಹಕ ಜಿಲ್ಲಾ ಪರಿಹಾರ ವೇದಿಕೆಯ ಮೂಲಕ ಇಲಾಖೆಯ ವಿರುದ್ಧ ಕ್ರಮಕೈಗೊಳ್ಳಬಹುದು.


ಇದನ್ನೂ ಓದಿ: Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

ಜುಲ್ಮಾನೆ ವಿಧಿಸಿದ ನ್ಯಾಯಾಲಯ
22 ವರ್ಷಗಳ ಸುದೀರ್ಘ ಹೋರಾಟದಲ್ಲಿ ನಾನು ಗೆದ್ದಿರುವೆ ಅಂತಾ ತಿಳಿಸಿದ್ದಾರೆ. ರೈಲ್ವೆ ಇಲಾಖೆಯು ನನಗೆ ರೂ 15,000 ಗಳನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ. ಒಂದು ತಿಂಗಳಿನೊಳಗೆ ಈ ಮೊತ್ತವನ್ನು ಇಲಾಖೆಯು ನನಗೆ ಪಾವತಿಸಬೇಕು ಇಲ್ಲದಿದ್ದರೆ ಒಟ್ಟು ಮೊತ್ತದ ಮೇಲೆ 15% ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ ಎಂದು ಚತುರ್ವೇದಿ ಹೇಳಿದ್ದಾರೆ.


ಛಲ ಬಿಡದ ತ್ರಿವಿಕ್ರಮ
ಕೇಸ್ ಹಿಂದಕ್ಕೆ ಪಡೆಯುವಂತೆ ಚತುರ್ವೇದಿಯವರ ಕುಟುಂಬ ಹಾಗೂ ಸ್ನೇಹಿತರು ಹೇಳಿದ್ದರೂ ನ್ಯಾಯವನ್ನು ಪಡೆಯಬೇಕೆಂಬ ಹಂಬಲದಿಂದ ಅವರು ಕಾನೂನು ಹೋರಾಟಕ್ಕೆ ಇಳಿದರು. ಇನ್ನು ಹೆಚ್ಚಿನ ಅಧಿಕಾರಿಗಳು ಕೇಸ್ ಅನ್ನು ವಜಾಗೊಳಿಸಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ 100 ಕ್ಕಿಂತ ಹೆಚ್ಚಿನ ವಾದ ಪ್ರತಿವಾದಗಳ ನಂತರ ನ್ಯಾಯ ದೊರಕಿದೆ ಎಂಬುದು ಚತುರ್ವೇದಿಯವರ ಮಾತಾಗಿದೆ.


ಇದನ್ನೂ ಓದಿ:  Viral Photo: ಮಗಳು ಡಾಕ್ಟರೇಟ್ ಪದವಿ ಪಡೆದ ಖುಷಿಗೆ ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ

ವ್ಯಯಿಸಿದ ಶ್ರಮಕ್ಕೆ ಬೆಲೆಕಟ್ಟಲಾಗುವುದಿಲ್ಲ
ಈ 22 ವರ್ಷಗಳಲ್ಲಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿರುವೆ. ಸಾಕಷ್ಟು ಪರಿಶ್ರಮಗಳನ್ನು ಪಟ್ಟಿರುವೆ. ನಾನು ವ್ಯಯಿಸಿದ ಸಮಯ ಮತ್ತು ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದು ಚತುರ್ವೇದಿಯವರ ಅಭಿಪ್ರಾಯವಾಗಿದೆ.


ಸಾಮಾನ್ಯವಾಗಿ ಜನಸಾಮಾನ್ಯರು ಓಡಾಡಲು ರೈಲನ್ನೇ ಬಳಸ್ತಾರೆ. ಸುಲಭ ಪ್ರಯಾಣ, ಆರೋಗ್ಯ ಹಿತದೃಷ್ಟಿಯಿಂದ ಇದಕ್ಕೆ ಹೆಚ್ಚು ಒತ್ತುಕೊಡ್ತಾರೆ. ಆದರೆ ಯಾರೋ ಒಬ್ಬರು ಮಾಡೋ ಯಡವಟ್ಟಿಗೆ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರ್ತಿರೋದಂತು ಸತ್ಯ.
Published by:Ashwini Prabhu
First published: