HOME » NEWS » National-international » MATHS AND PHYSICS NOT MADE MANDATORY FOR ENTERING ENGINEERING COURSES SNVS

ಎಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ - AICTE ಸ್ಪಷ್ಟನೆ

2010ರಲ್ಲಿ ಎಂಜಿನಿಯರಿಂಗ್ ಕೋರ್ಸ್​ಗಳ ಪ್ರವೇಶಕ್ಕೆ ಕಡ್ಡಾಯವಾಗಿದ್ದ ರಸಾಯನಶಾಸ್ತ್ರದಿಂದ ಎಐಸಿಟಿಇ ವಿನಾಯಿತಿ ಕೊಟ್ಟಿತ್ತು. ಈಗ ಇದರಲ್ಲಿ ಫಿಸಿಕ್ಸ್ ಮತ್ತು ಮ್ಯಾಥ್ಸ್ ಕೂಡ ಸೇರಿದೆ. ನಿರ್ದಿಷ್ಟಪಡಿಸಿದ 14 ವಿಷಯಗಳಲ್ಲಿ ಯಾವುದಾದರೂ 3 ವಿಷಯಗಳನ್ನ ಪಿಯುಸಿಯಲ್ಲಿ ಕಲಿತಿದ್ದರೆ ಸಾಕು.

Vijayasarthy SN | news18
Updated:March 13, 2021, 5:17 PM IST
ಎಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ - AICTE ಸ್ಪಷ್ಟನೆ
ಸಾಂದರ್ಭಿಕ ಚಿತ್ರ
  • News18
  • Last Updated: March 13, 2021, 5:17 PM IST
  • Share this:
ನವದೆಹಲಿ(ಮಾ. 13): ಪಿಯುಸಿಯಲ್ಲಿ ಫಿಸಿಕ್ಸ್, ಮ್ಯಾಥ್ಸ್ ಸಬ್ಜೆಕ್ಟ್ ತೆಗೆದುಕೊಳ್ಳದ ನೀವು ಅಥವಾ ನಿಮ್ಮ ಮಕ್ಕಳು ಈಗ ಎಂಜಿನಿಯರಿಂಗ್ ಓದಲು ತವಕಿಸುತ್ತಿದ್ದೀರಾ? ನಿಮ್ಮ ಕನಸು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಪದವಿಪೂರ್ವ ತರಗತಿಗಳಲ್ಲಿ ಅಥವಾ 12ನೇ ತರಗತಿಯಲ್ಲಿ ನೀವು ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳದಿದ್ದರೂ ಎಂಜಿನಯರಿಂಗ್ ಪ್ರವೇಶ ಪಡೆಯುವ ಅವಕಾಶ ಪಡೆಯಲಿದ್ದೀರಿ. ಇಂಥದ್ದೊಂದು ಅಂಶವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪರಿಗಣಿಸಿದ್ದು ತನ್ನ ಅಧೀನದ ಕಾಲೇಜುಗಳಿಗೆ ನೀಡಲಾದ ಮಾರ್ಗಸೂಚಿ ಹೊತ್ತಿಗೆಯಲ್ಲಿ ತಿಳಿಸಿದೆ.

ಈವರೆಗೆ ಎಂಜಿನಿಯರಿಂಗ್ ಕೋರ್ಸ್​ಗಳಿಗೆ (ಬಿಇ ಅಥವಾ ಬಿಟೆಕ್) ಪ್ರವೇಶ ಪಡೆಯಲು ಪಿಯುಸಿಯಲ್ಲಿ ಫಿಸಿಕ್ಸ್ ಮತ್ತು ಗಣಿತ ವಿಷಯಗಳನ್ನ ಕಲಿಯುವುದು ಕಡ್ಡಾಯವಾಗಿತ್ತು. ಆದರೆ, ಈ ನೀತಿಗೆ ಈಗ ತಿಲಾಂಜಲಿ ಹೇಳಲಾಗಿದೆ. ಮಂಡಳಿಯು 14 ವಿಷಯಗಳ ಪಟ್ಟಿ ನೀಡಿದ್ದು, ಅದರ ಪೈಕಿ ಯಾವುದೇ ಮೂರು ವಿಷಯಗಳನ್ನ ಪಿಯುಸಿಯಲ್ಲಿ ಆರಿಸಿಕೊಂಡಿದ್ದರೆ ಸೂಕ್ತ ಎಂಜಿನಿಯರಿಂಗ್ ಕೋರ್ಸ್​ಗಳಿಗೆ ಪ್ರವೇಶ ಪಡೆಯುವ ಅವಕಾಶ ನೀಡಲಾಗುತ್ತದೆ. ಆದರೆ, ಈ ಮೂರು ವಿಷಯಗಳಲ್ಲಿ ಕನಿಷ್ಠ 45 ಪ್ರತಿಶತದಷ್ಟು ಅಂಕಗಳನ್ನ ಪಡೆದುಕೊಂಡಿರಬೇಕು. ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಶೇ. 40ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆದಿರಬೇಕು. ಈ ನೂತನ ನೀತಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಅಳವಡಿಕೆಯಾಗಲಿದೆ.

ಇದನ್ನೂ ಓದಿ: ಕೇಂದ್ರದ ನೂತನ ಸ್ಕ್ರಾಪ್ ಪಾಲಿಸಿ: ಬೆಂಗಳೂರಿನಲ್ಲಿ ಗುಜರಿ ಸೇರಲಿವೆ 20 ಲಕ್ಷಕ್ಕೂ ಹೆಚ್ಚು ವಾಹನಗಳು

ಯಾವುವು ಈ 14 ವಿಷಯಗಳು?
1) ಫಿಸಿಕ್ಸ್,
2) ಮ್ಯಾಥಮೆಟಿಕ್ಸ್,
3) ಕೆಮಿಸ್ಟ್ರಿ,4) ಕಂಪ್ಯೂಟರ್ ಸೈನ್ಸ್,
5) ಎಲೆಕ್ಟ್ರಾನಿಕ್ಸ್,
6) ಇನ್ಫಾರ್ಮೇಶನ್ ಟೆಕ್ನಾಲಜಿ,
7) ಬಯೋಲಜಿ,
8) ಇನ್​ಫಾರ್ಮಾಟಿಕ್ಸ್ ಪ್ರಾಕ್ಟೀಸಸ್,
9) ಬಯೋಟೆಕ್ನಾಲಜಿ,
10) ಟೆಕ್ನಿಕಲ್ ವೊಕೇಶನಲ್ ಸಬ್ಜೆಕ್ಟ್,
11) ಅಗ್ರಿಕಲ್ಚರ್,
12) ಎಂಜಿನಿಯರಿಂಗ್ ಗ್ರಾಫಿಕ್ಸ್,
13) ಬ್ಯುಸಿನೆಸ್ ಸ್ಟಡೀಸ್
14) ಆಂಥ್ರಪ್ರೆನ್ಯೂರ್​ಶಿಪ್ (Entrepreneurship)

ಇದೊಂದು ವಿನೂತನ ಪ್ರಯೋಗವಾಗಿದ್ದು, ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ ಇದರ ಅಳವಡಿಕೆಯಾಗುತ್ತಿದೆ. ಮಕ್ಕಳಲ್ಲಿ ಪ್ರಯೋಗಶೀಲತೆ, ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾರ್ಗ ಅನುಸರಿಸುವುದು ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದೆ.

ಇದನ್ನೂ ಓದಿ: Bengal Assembly Elections 2021: ವಿಧಾನಸಭೆ ಚುನಾವಣೆ ಬೆನ್ನಲ್ಲೇ ಟಿಎಂಸಿ ಸೇರ್ಪಡೆಯಾದ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ

ಈಗ ಎಂಜಿನಿಯರಿಂಗ್ ಕೋರ್ಸ್​ಗಳು ವೈವಿಧ್ಯಮಯವಾಗಿವೆ. ಒಬ್ಬ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜೀವಶಾಸ್ತ್ರ ವಿಷಯಗಳ ತಿಳಿವಳಿಕೆಯೂ ಬೇಕಾಗುತ್ತದೆ. ಹಾಗೆಯೇ ತಂತ್ರಜ್ಞಾನ ಸಮಸ್ಯೆಗಳನ್ನ ಪರಿಹರಿಸಲು ಒಬ್ಬ ವಿದ್ಯಾರ್ಥಿಗೆ ತತ್ವಶಾಸ್ತ್ರ, ಮನಶಾಸ್ತ್ರ, ಸಮಾಜಶಾಸ್ತ್ರದ ಅಗತ್ಯವೂ ಬೀಳಬಹುದು. ಹಾಗಾಗಿ ಹೊಸ ಶಿಕ್ಷಣ ನೀತಿಯು ಬಹು-ವಿಷಯಾಧಾರಿತವ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ ಎಂದು ಎಐಸಿಟಿಎ ಅಧ್ಯಕ್ಷರಾದ ಅನಿಲ್ ಸಹಸ್ರಬುದ್ಧೆ ಹೇಳುತ್ತಾರೆ.

ಹಾಗಂತ ಭೌತಶಾಸ್ತ್ರ, ಗಣಿತ, ರಸಾಯನಶಾಸ್ರ ವಿಷಯಗಳನ್ನ ಕಡೆಗಣಿಸಲಾಗುವುದಿಲ್ಲ. ಈ ಮೂರು ವಿಷಯಗಳು ಅತಿ ಮುಖ್ಯವಾದವು. ಇದರ ಮಧ್ಯೆ ನಾವು ಬೇರೆ ವಿಷಯ ಕಲಿತವರಿಗೂ ತಾಂತ್ರಿಕ ಶಿಕ್ಷಣ ಕೋರ್ಸ್​ನ ಅವಕಾಶದ ಬಾಗಿಲು ತೆರೆಯುತ್ತಿದ್ದೇವೆ. ಕೆಲ ಎಂಜಿನಿಯರಿಂಗ್ ಕೋರ್ಸ್​ಗಳಿಗೆ ಗಣಿತ ಮತ್ತು ಭೌತಶಾಸ್ತ್ರದ ಅಗತ್ಯ ಇರುವುದಿಲ್ಲ. ಟೆಕ್ಸ್​ಟೈಲ್ ಎಂಜಿನಯರಿಂಗ್, ಬಯೋಟೆಕ್ನಾಲಜಿ ಇದಕ್ಕೆ ಉದಾಹರಣೆ ಎಂದು ಅನಿಲ್ ಸಹಸ್ರಬುದ್ಧ ಅಭಿಪ್ರಾಯಪಟ್ಟಿದ್ಧಾರೆ.
Published by: Vijayasarthy SN
First published: March 13, 2021, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories