New Device For Online Class: ಮಕ್ಕಳಿಗೆ ಆನ್​ಲೈನ್​ ಕ್ಲಾಸ್ ಸುಲಭ ಮಾಡಲು ವಿನೂತನ ಯಂತ್ರ ಅಭಿವೃದ್ಧಿಪಡಿಸಿದ ಶಿಕ್ಷಕ ..

Online Class Struggle: "ಜೂಮ್‌ನಲ್ಲಿ ನನ್ನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲು ಕಪ್ಪು ಹಲಗೆ ಅಥವಾ ಟ್ರೈಪ್ಯಾಡ್ ಅನ್ನು ಖರೀದಿಸಲು ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ವಿದ್ಯಾರ್ಥಿಗಳಿಗೆ ಹೇಗೆ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಸುವಂತೆ ಹೇಳಿಕೊಡಬೇಕು ಎಂದು ನನಗೆ ತಿಳಿದಿರಲಿಲ್ಲ.

ಯಂತ್ರ ಅಭಿವೃದ್ಧಿ ಮಾಡಿದ ಶಿಕ್ಷಕ

ಯಂತ್ರ ಅಭಿವೃದ್ಧಿ ಮಾಡಿದ ಶಿಕ್ಷಕ

  • Share this:

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಬಹುತೇಕ ಶಾಲಾ ಕಾಲೇಜುಗಳನ್ನು ಈಗಲೂ ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿರುವುದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ.ಅನೇಕ ಶಿಕ್ಷಕರು ಈ ಆನ್‌ಲೈನ್ ತರಗತಿಗಳಿಗೆ ಹೊಸದಾಗಿ ಹೊಂದಿಕೊಳ್ಳಬೇಕಾಯಿತು. ಈ ತಂತ್ರಜ್ಞಾನದ ಬಳಕೆ ಮತ್ತು ತಮ್ಮ ವಿದ್ಯಾರ್ಥಿಗಳಿಗೆ ಹೇಗೆ ಒಂದು ವಿಷಯವನ್ನು ಪ್ರಸ್ತುತ ಪಡಿಸಬೇಕೆಂದು ತಿಳಿಯಲಾಗದೆ ತುಂಬಾ ಹೆಣಗಾಡಿರುವ ಉದಾಹರಣೆಗಳು ಸಾಕಷ್ಟಿವೆ.


ಇದು ಬರೀ ಒಂದು ರಾಜ್ಯದಲ್ಲಿರುವ ಶಿಕ್ಷಕರ ಸಮಸ್ಯೆಯಾಗಿರಲಿಲ್ಲ, ಬದಲಾಗಿ ಬಹುತೇಕ ರಾಜ್ಯಗಳಲ್ಲಿ ಗ್ರಾಮೀಣ ಭಾಗದ ಶಿಕ್ಷಕರು ಈ ಆನ್‌ಲೈನ್ ತರಗತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಂತೂ ನಿಜ.


ಆದರೆ ಈ ಸಮಸ್ಯೆ ಹಗುರಗೊಳಿಸಲು ಮತ್ತು ಅನೇಕ ಶಿಕ್ಷಕರಿಗೆ ಸಹಾಯವಾಗಲು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಜಿಲ್ಲಾ ಪರಿಷತ್ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಂತಹ 40 ವರ್ಷ ವಯಸ್ಸಿನ ಗಂಜಿ ಅಮರೇಂದರ್ ಸುಲಭವಾಗಿ ಆನ್‌ಲೈನ್ ತರಗತಿ ನಡೆಸುವಂತಹ ಸಾಧನ ಕಂಡುಹಿಡಿದಿದ್ದಾರೆ.


ಗಂಜಿ ಅವರು ಬೆಳಿಗ್ಗೆ 7 ರಿಂದ 8 ರವರೆಗೆ ನಿಯಮಿತವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಆರಂಭದಲ್ಲಿ ಅವರು ಗಣಿತ ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆಗಳನ್ನು ಮೌಖಿಕವಾಗಿ ವಿವರಿಸಲು ಪ್ರಯತ್ನಿಸಿದರು. ಆದಾಗ್ಯೂ, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟವಾಯಿತು.


"ಜೂಮ್‌ನಲ್ಲಿ ನನ್ನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲು ಕಪ್ಪು ಹಲಗೆ ಅಥವಾ ಟ್ರೈಪ್ಯಾಡ್ ಅನ್ನು ಖರೀದಿಸಲು ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ವಿದ್ಯಾರ್ಥಿಗಳಿಗೆ ಹೇಗೆ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಸುವಂತೆ ಹೇಳಿಕೊಡಬೇಕು ಎಂದು ನನಗೆ ತಿಳಿದಿರಲಿಲ್ಲ.


ಇದನ್ನೂ ಓದಿ: ಮುದ್ದಿನ ನಾಯಿಗೋಸ್ಕರ ಇಡೀ ಬ್ಯುಸಿನೆಸ್ ಕ್ಲಾಸ್ ಬುಕ್ ಮಾಡಿದ ಉದ್ಯಮಿ!

ಅದರಲ್ಲಿಯೂ ಗಣಿತ ವಿಷಯಕ್ಕೆ ಬಂದಾಗ ಒಂದು ಸಮಸ್ಯೆಯನ್ನು ಹೇಗೆ ಬಿಡಿಸಬೇಕು ಎಂಬ ಹಂತ ಹಂತವಾದ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ ಎಂದು ಶಿಕ್ಷಕರಾದ ಗಂಜಿ ಹೇಳುತ್ತಾರೆ.


ಕಡಿಮೆ ವೆಚ್ಚದ ಪ್ರೊಜೆಕ್ಷನ್ ಸಾಧನ


ಈ ಸಮಸ್ಯೆಯಿಂದ ಹೊರಬರಲು ಈ ಶಿಕ್ಷಕ ತನ್ನ ಫೋನ್ ಹಿಡಿದಿಟ್ಟುಕೊಳ್ಳುವ ಮತ್ತು ಗಣಿತದ ಸಮಸ್ಯೆಗಳನ್ನು ಒಂದು ಹಾಳೆಯ ಮೇಲೆ ವಿದ್ಯಾರ್ಥಿಗಳ ಗಮನ ಕೇಂದ್ರೀಕರಿಸುವಂತೆ ಮಾಡಲು ಕಡಿಮೆ ವೆಚ್ಚದ ಟ್ರೈಪಾಡ್ ಅನ್ನು ಕಂಡುಹಿಡಿದಿದ್ದಾರೆ.


"ನುರಿತ ಕೆಲಸಗಾರರು ಲಭ್ಯವಿಲ್ಲದ ಕಾರಣ ನಾನು ಮನೆಯಲ್ಲಿಯೇ ಎರಡು ಬಿಡಿ ಮರದ ಹಲಗೆಗಳನ್ನು ಬಳಸಿ ಮತ್ತು ಫೋಟೋ ಫ್ರೇಮ್‌ನಿಂದ ಗಾಜನ್ನು ತೆಗೆದುಕೊಂಡು ಆ ಗಾಜನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅಂಟನ್ನು ಬಳಸಿ ಮರದ ಹಲಗೆಗಳ ಮೇಲೆ ಗಾಜನ್ನು ಅಂಟಿಸಲಾಯಿತು. ನಂತರ ಅದನ್ನು 6 ಇಂಚು ಎತ್ತರದಲ್ಲಿ ಇರಿಸಲಾಯಿತು, ಇದರಿಂದ ನಾನು ಅದರ ಕೆಳಗೆ ನಾನು ಒಂದು ಹಾಳೆಯನ್ನು ಇರಿಸಿಕೊಂಡು ಗಣಿತದ ಸಮಸ್ಯೆಯನ್ನು ಬಿಡಿಸುವುದನ್ನು ನನ್ನ ವಿದ್ಯಾರ್ಥಿಗಳು ತುಂಬಾ ಸ್ಪಷ್ಟವಾಗಿ ನೋಡಬಹುದಾಗಿತ್ತು” ಎಂದು ಗಂಜಿ ಹೇಳುತ್ತಾರೆ.


ಈ ಕಡಿಮೆ ವೆಚ್ಚದ ಸಾಧನವನ್ನು ಜೂನ್ 2020ರ ಮೊದಲ ವಾರದ ವೇಳೆಗೆ ಆನ್‌ಲೈನ್ ತರಗತಿಗಳಿಗೆ ಬಳಸಲಾಯಿತು.


"ನಾನು ನನ್ನ ಮೊಬೈಲ್ ಫೋನ್ ಅನ್ನು ಗಾಜಿನ ಮೇಲೆ ಇರಿಸಿದೆ ಮತ್ತು ಉತ್ತಮ ಗುಣಮಟ್ಟಕ್ಕಾಗಿ ಕಾಗದದ ಮೇಲೆ ಗಮನ ಕೇಂದ್ರೀಕರಿಸಲು ಹಿಂದಿನ ಕ್ಯಾಮೆರಾ ಬಳಸಿದೆ. ನಾನು ನನ್ನ ಹೆಡ್‌ಫೋನ್‌ಗಳನ್ನು ಧರಿಸಿ ಮತ್ತು ಹಾಳೆಯ ಮೇಲೆ ಬರೆಯುವ ಮೂಲಕ ಗಣಿತದ ಸಮಸ್ಯೆಗಳನ್ನು ಮತ್ತು ಸೂತ್ರಗಳನ್ನು ವಿವರಿಸುತ್ತೇನೆ. ಅದನ್ನು ಗಾಜಿನ ಚೌಕಟ್ಟಿನ ಕೆಳಗೆ ಇರಿಸಲಾಗಿದೆ" ಎಂದು ಗಂಜಿ ಹೇಳುತ್ತಾರೆ. ಅವರು ಈ ಸಾಧನವನ್ನು ಬಳಸಿಕೊಂಡು ತಮ್ಮ ಯೂಟ್ಯೂಬ್ ವಿಡಿಯೋಗಳನ್ನೂ ರೆಕಾರ್ಡ್ ಮಾಡಿದ್ದಾರೆ.


ಆನ್‌ಲೈನ್ ತರಗತಿಗಳನ್ನು ಪ್ರಸ್ತುತ ಪಡಿಸಲು ಹೆಣಗಾಡುತ್ತಿದ್ದವರು ಸಹಾಯಕ್ಕಾಗಿ ಗಂಜಿಯವರನ್ನು ಭೇಟಿ ಮಾಡಿ ಮತ್ತು ಈ ಕಡಿಮೆ ವೆಚ್ಚದ ಸಾಧನ ತಯಾರಿಸಲು ವಿನಂತಿಸಿದರು.


"ಆದ್ದರಿಂದ ನಾನು ಹೆಚ್ಚಿನ ಸಾಧನಗಳನ್ನು ತಯಾರಿಸಲು ಪ್ರಾರಂಭಿಸಿದೆ ಮತ್ತು ಅವುಗಳ ಬೆಲೆ 350 ರೂಪಾಯಿ. ಶಿಕ್ಷಕರು ಗಾಜಿನ ಚೌಕಟ್ಟನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಲು ವಿವಿಧ ಎತ್ತರಗಳಲ್ಲಿ ಸೀಳುಗಳನ್ನು ತಯಾರಿಸಲಾಯಿತು. ಇಂದಿನವರೆಗೂ ನಾನು 20 ಆರ್ಡರ್‌ಗಳನ್ನು ನೀಡಿದ್ದೇನೆ" ಎಂದು ಗಂಜಿ ಹೇಳುತ್ತಾರೆ.


ಇದನ್ನೂ ಓದಿ: ಮರಣದ ದಿನವೇ ಪುನರ್ಜನ್ಮ? ಏನಿದು ನಂಬಲಾಗದ ದೈವ ಪವಾಡ ರಹಸ್ಯ!

ತೆಲಂಗಾಣ ರಾಜ್ಯ ಇನ್ನೋವೇಶನ್ ಸೆಲ್ (ಟಿಎಸ್ಐಸಿ) ನಿಂದಲೂ ಸಹ ಈ ಕಡಿಮೆ ವೆಚ್ಚದ ಸಾಧನವು ತುಂಬಾ ಪ್ರಶಂಸೆಯನ್ನು ಪಡೆಯಿತು ಮತ್ತು ಶಿಕ್ಷಕ ಗಂಜಿಯವರನ್ನು ಗುರುತಿಸಲಾಯಿತು.


Published by:Sandhya M
First published: