ಕೇರಳ ಪ್ರವಾಹ; 78ಕ್ಕೇರಿದ ಸಾವಿನ ಸಂಖ್ಯೆ, 58 ಮಂದಿ ಕಣ್ಮರೆ

ಮತ್ತೆ ಪ್ರವಾಹದಲ್ಲಿ ನಲುಗಿರುವ ರಾಜ್ಯದಲ್ಲಿ ಈ ಬಾರಿ ಬಕ್ರೀದ್​ ಆಚರಣೆ ಮಾಡಬಾರದು ಎಂಬ ನಿರ್ಧಾರವನ್ನು ರಾಜ್ಯದ ಜನರು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮುಸ್ಲಿರು ತಮ್ಮ ಪವಿತ್ರ ದಿನದ ಆಚರಣೆಯಿಂದ ಹಿಂದೆ ಸರಿದಿದ್ದಾರೆ.

Seema.R | news18-kannada
Updated:August 12, 2019, 11:28 AM IST
ಕೇರಳ ಪ್ರವಾಹ; 78ಕ್ಕೇರಿದ ಸಾವಿನ ಸಂಖ್ಯೆ, 58 ಮಂದಿ ಕಣ್ಮರೆ
ಕೇರಳ ಪ್ರವಾಹದ ದೃಶ್ಯ
  • Share this:
ಕೇರಳದಲ್ಲಿನ ಪ್ರವಾಹಕ್ಕೆ ಸಾವಿನ ಸಂಖ್ಯೆ 78ಕ್ಕೆ ಏರಿದ್ದು, 58ಜನರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಮನೆ ಮಠ ಕಳೆದುಕೊಂಡ 300,000 ಜನರು ಸಂತ್ರಸ್ತರ ಶಿಬಿರ ಸೇರಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಳೆ ರುದ್ರನರ್ತನ ತೋರಿದ್ದು, ಕಳೆದ ವರ್ಷದ ಪ್ರವಾಹದ ನೆನಪು ಮರುಕಳಿಸುವಂತೆ ಮಾಡಿತ್ತು. ಸೋಮವಾರ ರಾಜ್ಯದಲ್ಲಿ ಯಾವುದೇ ರೆಡ್​ ಆಲರ್ಟ್​ ಘೋಷಣೆಯಾಗಿಲ್ಲ.

ಕೇಂದ್ರದಿಂದ ರಾಜ್ಯದ ಸಂತ್ರಸ್ತರಿಗೆ ಅವಶ್ಯಕವಾದ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಗುಡ್ಡ ಕುಸಿತದಿಂದ ಸಂಪರ್ಕ ಕಳೆದುಕೊಂಡಿರುವ ರಸ್ತೆಯನ್ನು ಸರಿಪಡಿಸಲು ಇನ್ನು ಎರಡು ದಿನ ಸಮಯ ಬೇಕಾಗಲಿದೆ ಎನ್ನಲಾಗಿದೆ.

ಮತ್ತೆ ಪ್ರವಾಹದಲ್ಲಿ ನಲುಗಿರುವ ರಾಜ್ಯದಲ್ಲಿ ಈ ಬಾರಿ ಬಕ್ರೀದ್​ ಆಚರಣೆ ಮಾಡಬಾರದು ಎಂಬ ನಿರ್ಧಾರವನ್ನು ರಾಜ್ಯದ ಜನರು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮುಸ್ಲಿರು ತಮ್ಮ ಪವಿತ್ರ ದಿನದ ಆಚರಣೆಯಿಂದ ಹಿಂದೆ ಸರಿದಿದ್ದಾರೆ.

ಇದನ್ನು ಓದಿ: VIDEO: ಕಾಪಾಡಿದ ಎನ್​​ಡಿಆರ್​ಎಫ್​​​ ಸಿಬ್ಬಂದಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದು ಹೇಗೆ ಗೊತ್ತಾ?

ರಾಹುಲ್​ ಗಾಂಧಿ ಕ್ಷೇತ್ರವಾದ ವೈನಾಡು ಅತಿ ಹೆಚ್ಚು ಪ್ರವಾಹ ಹಾನಿಗೆ ಒಳಗಾಗಿದೆ. ತಮ್ಮ ಕ್ಷೇತ್ರದ ಜನರಿಗೆ ಸಾಂತ್ವನ ಹೇಳಲು ಭಾನುವಾರ ಕಾಜೀಕೋಡ್​ಗೆ ಬಂದಿಳಿದ ರಾಹುಲ್​ ಗಾಂಧಿ ಸಂತ್ರಸ್ತರನ್ನು ಭೇಟಿ ಮಾಡಿದರು.

ಕೊಚ್ಚಿ ಅಂತರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿನ ಪ್ರವಾಹಕ್ಕೆ ಈ ಬಾರಿ ಮಾನ್ಸೂನ್​ಗೆ 140 ಜನರು ಸಾವನ್ನಪ್ಪಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ನಿರ್ಗತಿಕರಾಗಿದ್ದಾರೆ.
First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading