Lumpy Virus: ಲಂಪಿಯಿಂದ ಸಾವಿರಾರು ಜಾನುವಾರು ಸಾವು, ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ!

ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದಾಗಿ ಕಳೆದ ಮೂರು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂಬುವುದು ಗಮನಿಸಬೇಕಾದ ಸಂಗತಿ. ಇದೇ ವೇಳೆ 8 ಲಕ್ಷ ಹಸುಗಳಿಗೆ ಲಂಪಿ ಸೋಂಕು ತಗುಲಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಮುದ್ದೆ ಚರ್ಮ ರೋಗ ಹರಡಿದೆ ಎಂದು ಹೇಳಲಾಗುತ್ತಿದೆ.

ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

  • Share this:
ಜೈಪುರ(ಸೆ.20): ರಾಜಸ್ಥಾನದಲ್ಲಿ ಲಂಪಿ ಚರ್ಮ (Lumpy Virus) ರೋಗವು ಭಾರೀ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ಲಂಪಿ ವೈರಸ್‌ನಿಂದ ರಾಜ್ಯದಲ್ಲಿ ಸಾವಿರಾರು ಹಸುಗಳು (Cow) ಪ್ರಾಣ ಕಳೆದುಕೊಂಡಿವೆ. ಇದೇ ವೇಳೆ ವಿರೋಧ ಪಕ್ಷದಲ್ಲುರುವ ಬಿಜೆಪಿ ಈ ವಿಚಾರವಾಗಿ ರಾಜ್ಯದ ಗೆಹ್ಲೋಟ್ ಸರ್ಕಾರದ (Gehlot Govt) ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ರಾಜಧಾನಿ ಜೈಪುರದಲ್ಲಿ (Jaipur) ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ (BJP) ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಪುರದಲ್ಲಿ ಇಂದು ನೂರಾರು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ಪ್ರತಿಭಟನಾಕಾರರು ಗೆಹ್ಲೋಟ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ:  Street Dog: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!

ಬ್ಯಾರಿಕೇಡ್‌ಗಳ ಮೇಲೆ ಕಾರ್ಯಕರ್ತರು

ಬಿಜೆಪಿಯ ಕಾರ್ಯವೈಖರಿ ನೋಡಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಕೂಡ ಬ್ಯಾರಿಕೇಡ್ ಮೇಲೆ ಹತ್ತಿದ್ದಾರೆ. ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿಯನ್ನೂ ಪ್ರಯೋಗಿಸಿದ್ದಾರೆ.


60 ಸಾವಿರಕ್ಕೂ ಹೆಚ್ಚು ಹಸುಗಳ ಸಾವು

ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದಾಗಿ ಕಳೆದ ಮೂರು ತಿಂಗಳಲ್ಲಿ 60 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂಬುವುದು ಗಮನಿಸಬೇಕಾದ ಸಂಗತಿ. ಇದೇ ವೇಳೆ 8 ಲಕ್ಷ ಹಸುಗಳಿಗೆ ಲಂಪಿ ಸೋಂಕು ತಗುಲಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಮುದ್ದೆ ಚರ್ಮ ರೋಗ ಹರಡಿದೆ ಎಂದು ಹೇಳಲಾಗುತ್ತಿದೆ. ಲಂಪಿ ವೈರಸ್‌ನಿಂದ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿರುವುದರಿಂದ, ರಾಜ್ಯದಲ್ಲಿ ಹಾಲಿನ ಉತ್ಪಾದನೆಯೂ ಕಡಿಮೆಯಾಗಿದೆ. ಹಾಲಿನ ಕೊರತೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅದರ ಬೆಲೆ ಏರಿಕೆಯಾಗಿದೆ.

ಪ್ರಾಣಿಗಳ ಆಮದು ನಿಷೇಧ

ರಾಜಸ್ಥಾನದಲ್ಲಿ ಲಂಪಿ ವೈರಸ್ ಚರ್ಮ ರೋಗ ಹರಡುತ್ತಿರುವ ಕಾರಣ, ನೆರೆಯ ಮಧ್ಯಪ್ರದೇಶವು ರಾಜಸ್ಥಾನದಿಂದ ಪ್ರಾಣಿಗಳ ಆಮದನ್ನು ನಿಷೇಧಿಸಿದೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ದೇಪಾಲ್‌ಪುರ ಗ್ರಾಮದಲ್ಲಿ ಎರಡು ಹಸುಗಳಿಗೆ ಲಂಪಿ ವೈರಸ್ ಸೋಂಕು ತಗುಲಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಏನಿದು ಲಂಪಿ ವೈರಸ್​​ ಕಾಯಿಲೆ?

ಆಫ್ರಿಕಾದಲ್ಲಿ ಹುಟ್ಟಿಕೊಂಡ ಈ ರೋಗ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿತ್ತು. ಸೊಳ್ಳೆ, ನೊಣ ಇತ್ಯಾದಿಗಳ ಕಚ್ಚುವಿಕೆ ಅಥವಾ ನೇರ ಸಂಪರ್ಕದಿಂದ ಅಥವಾ ಕಲುಷಿತ ಆಹಾರ ಅಥವಾ ನೀರಿನ ಮೂಲಕ ಜಾನುವಾರಗಳಿಗೆ ಹರಡುತ್ತದೆ. ವೈರಸ್‌ ತಗುಲಿದ ಪ್ರಾಣಿಗಳಲ್ಲಿ ಚರ್ಮದ ಮೇಲೆ ಸಿಡುಬು, ತೀವ್ರ ಜ್ವರ ಮತ್ತು ಮೂಗು ಸೋರುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ರೋಗಕ್ಕೆ ಯಾವುದೇ ಚಿಕಿತ್ಸೆಗಳು ಇರಲಿಲ್ಲ.

ಇದನ್ನೂ ಓದಿ: Pune: ಬೀದಿ ನಾಯಿಗಳ ರಕ್ಷಣೆಗೆ ವಿಶಿಷ್ಟ ಕತ್ತು ಪಟ್ಟಿ ತಯಾರಿಸಿದ ಯುವಕ!

ಆದರೆ ಇತ್ತೀಚೆಗೆ ಆಗಸ್ಟ್ 10 ರಂದು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲಂಪಿ-ಪ್ರೊವಾಕ್ ಎಂಬ ಲಸಿಕೆಯನ್ನು ಬಿಡುಗಡೆ ಮಾಡಿ ಜಾನುವಾರುಗಳನ್ನು ವೈರಸ್‌ ನಿಂದ ರಕ್ಷಿಸಿದ್ದಾರೆ. ಲಸಿಕೆಯನ್ನು ನ್ಯಾಷನಲ್ ಎಕ್ವೈನ್ ರಿಸರ್ಚ್ ಸೆಂಟರ್, ಹಿಸಾರ್ (ಹರಿಯಾಣ) ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಇಜ್ಜತ್‌ನಗರ (ಬರೇಲಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
Published by:Precilla Olivia Dias
First published: