PVC Pipe: ಗೋದಾಮಿನಲ್ಲಿ ಅಗ್ನಿ ದುರಂತ: 5 ಕಿ.ಮೀ.ವರೆಗೆ ವ್ಯಾಪಿಸಿದ ಹೊಗೆ; ಜನರ ಸ್ಥಳಾಂತರ

ಅಗ್ನಿ ದುರಂತದ ಪರಿಣಾಮ ಗೋಡಾನ್ ಸಮೀಪದಲ್ಲಿರುವ ಕೆಲ ಮನೆಗಳಿಗೆ ಹಾನಿಯುಂಟಾಗಿದೆ. ಮನೆಗಳಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮ ಅಂದಾಜು ಹಾನಿ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿರುವುದು

ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿರುವುದು

 • Share this:
  ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ (Mohan Nagar, Ratlam) ನಲ್ಲಿ ಗುರುವಾರ ಪೈಪ್ ಗೋದಾಮಿನಲ್ಲಿ ಭೀಕರ ಅಗ್ನಿ ದುರಂತ (Massive Fire In Godown) ಸಂಭವಿಸಿದೆ. ಅಗ್ನಿ ಅವಘಡ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಏಳೆಂದು ಅಗ್ನಿಶಾಮಕ ವಾಹನಗಳು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಪ್ಲಾಸ್ಟಿಕ್ ಪೈಪ್ ಗೋದಾಮು ಮೋಹನ ನಗರ ವ್ಯಾಪ್ತಿಯ ಪೆಟ್ರೋಲ್ ಪಂಪ್ (Petrol Pump) ಬಳಿಯಲ್ಲಿರೋದು ಆತಂಕಕ್ಕೆ ಕಾರಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗೋದಾಮಿನ ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ತಜ್ಞರು ಜನರ ವಾಸಸ್ಥಾನಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಪ್ರವೇಶ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

  5 ಕಿ.ಮೀ.ವರೆಗೆ ಆವರಿಸಿದ ಹೊಗೆ:
  ಅಗ್ನಿ ದುರಂತದ ಪರಿಣಾಮ ಗೋಡಾನ್ ಸಮೀಪದಲ್ಲಿರುವ ಕೆಲ ಮನೆಗಳಿಗೆ ಹಾನಿಯುಂಟಾಗಿದೆ. ಮನೆಗಳಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮ ಅಂದಾಜು ಹಾನಿ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸುಮಾರು 5 ಕಿಲೋ ಮೀಟರ್ ದೂರದವರೆಗೆ ಹೊಗೆ ಆವರಿಸಿತ್ತು. ಪಗಾರಿಯಾ ಟ್ರೇಡರ್ಸ್ ಒಡೆತನದ ಗೋಡಾನ್ ಇದಾಗಿದ್ದು, ಇಲ್ಲಿ ಕೃಷಿಗೆ ಬಳಸಲಾಗುವ ಪಿವಿಸಿ ಪೈಪ್ ಮತ್ತು ಕೇಬಲ್ ಗಳನ್ನು ಇರಿಸಲಾಗಿತ್ತು.

  ಎರಡು ಗಂಟೆಯ ಕಾರ್ಯಾಚರಣೆ:
  ಗೋದಾಮು ಬಳಿಯಲ್ಲಿ ಪೆಟ್ರೋಲ್ ಪಂಪ್ ಮತ್ತು ಜನವಸತಿ ಪ್ರದೇಶಗಳತ್ತ ಬೆಂಕಿ ಪಸರಿಸದಂತೆ ತಡೆಯಲು ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ತಲುಪಿದ ಎರಡು ಗಂಟೆ ನಿರಂತರವಾಗಿ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ನಿರತರಾಗಿದ್ದರು. ಒಂದು ಕಡೆ ಬೆಂಕಿ ನಂದಿಸಲು ಅಧಿಕಾರಿಗಳು ನಿರತರಾಗಿದ್ರೆ, ಮತ್ತೊಂದು ಕಡೆ ಜನರನ್ನು ಸ್ಥಳಾಂತರಿಸುವ ಕೆಲಸ ಅತ್ಯಂತ ವೇಗದಿಂದ ನಡೆಯುತ್ತಿತ್ತು. ಈ ಸಮಯದಲ್ಲಿ ಡಿಡಿ ನಗರ ಠಾಣೆಯ ಪ್ರಭಾರಿ ನಿನಾಮ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಅಧಿಕಾರಿಗಳ ಪ್ರಕಾರ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ. ಆದ್ರೆ ಈ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

  ಇದನ್ನು ಓದಿ: ಅಷ್ಟಮಿಯ ದಿನದಿಂದ ಮಗಳ ಫೋಟೋ ಹಂಚಿಕೊಂಡ ನಟಿ ಅನುಷ್ಕಾ

  ಜನವಸತಿ ಪ್ರದೇಶದಲ್ಲಿ ಗೋದಾಮು?
  ವಸತಿ ಪ್ರದೇಶದ ಸಮೀಪದಲ್ಲಿ ಯಾವುದೇ ರೀತಿಯ ಗೋದಾಮು ಆರಂಭಿಸಲು ಅನುಮತಿ ನೀಡಲು ಆಗಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ. ಗೋದಾಮು ಬಳಿಯಲ್ಲಿದ್ದ ಕಸದ ರಾಶಿಗೆ ಬೆಂಕಿ ಹಾಕಲಾಗಿತ್ತು. ಕಸದ ರಾಶಿಯಲ್ಲಿನ ಬೆಂಕಿಯಿಂದಲೇ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ. ಗೋದಾಮು ಮಾಲೀಕರು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಬರುವಂತೆ ಮೌಖಿಕ ಸೂಚನೆ ನೀಡಲಾಗಿದೆ. ಇನ್ನು ಗೋದಾಮು ಕೂಗಳತೆಯ ದೂರದಲ್ಲಿರುವ ಕೆಲ ಮನೆಗಳಿಗೆ ಹಾನಿಯುಂಟಾಗಿದ್ದು, ಪೀಠೋಪಕರಣ ಸೇರಿದಂತೆ ಇನ್ನಿತರ ಗೃಹಪಯೋಗಿ ವಸ್ತುಗಳು ಬೆಂಕಿಗೆ ಆಹುತಿ ಆಗಿರುವ ಬಗ್ಗೆ ತಿಳಿದು ಬಂದಿದೆ ಎಂದು ರತ್ಲಾಮ್ ಜಿಲ್ಲಾಧಿಕಾರಿ ಅಭಿಷೇಕ್ ಗೆಹ್ಲೊಟ್ ಮಾಹಿತಿ ನೀಡಿದ್ದಾರೆ.

  ಇದನ್ನು ಓದಿ: ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ; ವಿಐಪಿಗಳೇ ಈಕೆಯ ಗುರಿ

  2020ರಲ್ಲಿ ಬೆಂಗಳೂರಿನ ಅಗ್ನಿ ದುರಂತ
  ಬೆಂಗಳೂರಿನ ಬಾಪೂಜಿ ನಗರದ ಗುಡ್ಡದಹಳ್ಳಿ ಒಂದನೇ ಕ್ರಾಸ್ ನಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಫೈಯರ್ ಬ್ಲಾಸ್ಟ್ ಆಗಿ, ಕ್ಷಣ ಮಾತ್ರದಲ್ಲಿ ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿತ್ತು. ಪರಿಣಾಮ ಆಕಾಶದೆತ್ತರಕ್ಕೆ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಈ ಕೆಮಿಕಲ್ ಕಾರ್ಖಾನೆ ಜನನಿಬಿಡ ಪ್ರದೇಶದಲ್ಲೇ ಇದ್ದು ಕಾರ್ಖಾನೆ ಅಕ್ಕಪಕ್ಕದ ಮನೆಯ ಜನ ಮನೆ ಖಾಲಿ ಮಾಡಿ ಬಯಲಿಗೆ ಬಂದಿದ್ದರು. ಪ್ರಾಣ ಉಳಿಸಿಕೊಂಡ ಜನರು ಪ್ರೀತಿಯ ಮನೆಯನ್ನು ಕಳೆದುಕೊಂಡಿದ್ದರು. ಬೆಂಕಿಗೆ ಆಹುತಿಯಾಗಿದ್ದ ಮನೆಗಳು ಮಾಲೀಕರು ಇಂದಿಗೂ ಕಣ್ಣೀರು ಇಡುತ್ತಿದ್ದಾರೆ.

  ಮಹ್ಮದ್​ ರಫೀಕ್ ಕೆ
  Published by:Seema R
  First published: