ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ಭಾರೀ ಬೆಂಕಿ; ಎನ್​ಡಿಆರ್​ಎಫ್, ಅಗ್ನಿಶಾಮಕ ಸಿಬ್ಬಂದಿಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ; ಅರುಣ್ ಜೇಟ್ಲಿ ಸುರಕ್ಷಿತ

ಕೇಂದ್ರದ ಮಾಜಿ ಸಚಿವ ಅರುಣ್​ ಜೇಟ್ಲಿ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಬೇರೆ ಕಟ್ಟಡದಲ್ಲಿ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

Seema.R | news18-kannada
Updated:August 17, 2019, 10:40 PM IST
ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ಭಾರೀ ಬೆಂಕಿ; ಎನ್​ಡಿಆರ್​ಎಫ್, ಅಗ್ನಿಶಾಮಕ ಸಿಬ್ಬಂದಿಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ; ಅರುಣ್ ಜೇಟ್ಲಿ ಸುರಕ್ಷಿತ
ಏಮ್ಸ್​ ಆಸ್ಪತ್ರೆ
  • Share this:
ನವದೆಹಲಿ (ಆ.17): ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​) ಆಸ್ಪತ್ರೆಯ ಆವರಣದ ಕಟ್ಟಡವೊಂದಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿದೆ. ಅಗ್ನಿಶಾಮಕ ವಾಹನಗಳು ಹಾಗೂ ಎನ್​ಡಿಆರ್​ಎಫ್ ಸಿಬ್ಬಂದಿಯಿಂದ ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳೆಲ್ಲರನ್ನೂ ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಅದೃಷ್ಟಕ್ಕೆ ಯಾವುದೇ ಸಾವುಂಟಾದ ವರದಿಯಾಗಿಲ್ಲ.

ಏಮ್ಸ್ ಆಸ್ಪತ್ರೆಯ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಅಗ್ನಿ ಅವಘಡವೆನ್ನಲಾಗಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ ಐದನೇ ಮಹಡಿಯಲ್ಲಿ ಎಸಿ ಕಂಪ್ರೆಸ್ಸರ್ ಸ್ಫೋಟಗೊಂಡು ಅಲ್ಲಿಯೂ ಬೆಂಕಿ ಬುಗಿಲೆದ್ದಿದೆ. ಐದನೇ ಮಹಡಿಯಲ್ಲೇ ಅತೀ ಹೆಚ್ಚು ಬೆಂಕಿಯ ಕೆನ್ನಾಲಿಗೆ ಚಾಚಿದೆ.
ಕೇಂದ್ರದ ಮಾಜಿ ಸಚಿವ ಅರುಣ್​ ಜೇಟ್ಲಿ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಅವರು ಇದೇ ಆವರಣದಲ್ಲಿರುವ ಬೇರೆ ಕಟ್ಟಡದಲ್ಲಿ ದಾಖಲಾಗಿದ್ದಾರೆ. ಅವರಿಗೆ ಯಾವುದೇ ಅಪಾಯವಿಲ್ಲ. ಅವರಿರುವ ಕಟ್ಟಡಕ್ಕೆ ಬೆಂಕಿ ಹರಡುವ ಸಾಧ್ಯತೆ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಇದನ್ನು ಓದಿ: ಜೀವಕ್ಕೆ ಕುತ್ತು ತಂದ ಗಾಳಿಪಟದ ದಾರ; ಯುವಕ ಸಾವು

ಬೆಂಕಿ ಹೊತ್ತಿಕೊಂಡಿರುವ ಆಸ್ಪತ್ರೆ ಕಟ್ಟಡದಲ್ಲಿ ತುರ್ತು ಘಟಕದಲ್ಲಿದ್ದ ರೋಗಿಗಳನ್ನ ದೆಹಲಿಯ ಸಫ್ದಾರ್​ಜಂಗ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: August 17, 2019, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading