ಅಸ್ಸಾಮ್​ನಲ್ಲಿ ಭಾರೀ ಅಗ್ನಿಅವಘಡ; ಹೊತ್ತಿ ಉರಿಯುತ್ತಿರುವ ತೈಲಬಾವಿ

ಸಿಂಗಾಪುರದ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಸಂಸ್ಥೆಯ ಮೂವರು ತಜ್ಞರು ಸ್ಥಳಕ್ಕೆ ಬಂದು ದುರಸ್ತಿಯ ಪ್ರಯತ್ನದಲ್ಲಿದ್ದರು. ಈ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ತೈಲಬಾವಿಯಲ್ಲಿ ಬೆಂಕಿ ಅವಘಡ

ತೈಲಬಾವಿಯಲ್ಲಿ ಬೆಂಕಿ ಅವಘಡ

 • Share this:
  ಅಸ್ಸಾಮ್(ಜೂನ್ 09): ತೀನ್​ಸುಕಿಯಾ ಜಿಲ್ಲೆಯ ಬಾಘಜನ್ ತೈಲಬಾವಿಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದೆ. ಎಷ್ಟು ಪ್ರಯತ್ನಿಸಿದರೂ ಬೆಂಕಿಯನ್ನ ಆರಿಸಲು ಸಾಧ್ಯವಾಗುತ್ತಿಲ್ಲ. ಆಯಿಲ್ ಇಂಡಿಯಾ ಲಿ. ಸಂಸ್ಥೆಗೆ ಸೇರಿದ ಈ ತೈಲ ಬಾವಿಗೆ ತಗುಲಿರುವ ಬೆಂಕಿ ಎರಡು ಕಿಮೀ ದೂರದವರೆಗೂ ಗೋಚರಿಸುವಷ್ಟು ರೌದ್ರವಾಗಿದೆ.

  ಎರಡು ವಾರದ ಹಿಂದೆ ಈ ತೈಲಬಾವಿಯಲ್ಲಿ ಆದ ಸ್ಫೋಟದಿಂದ ಅನಿಲ ಸೋರಿಕೆ ಪ್ರಾರಂಭವಾಗಿತ್ತು. ಇದೂ ಕೂಡ ಎಷ್ಟೇ ಪ್ರಯತ್ನಿಸಿದರೂ ಸೋರಿಕೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇವತ್ತು ಸಿಂಗಾಪುರದ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಸಂಸ್ಥೆಯ ಮೂವರು ತಜ್ಞರು ಸ್ಥಳಕ್ಕೆ ಬಂದು ದುರಸ್ತಿಯ ಪ್ರಯತ್ನದಲ್ಲಿದ್ದರು. ಕೆಲ ಉಪಕರಣಗಳನ್ನ ಹೊರತೆಗೆಯಲು ಪ್ರಯತ್ನಿಸುತ್ತಿದ್ದರೆನ್ನಲಾಗಿದೆ. ಈ ವೇಳೆ, ಮಧ್ಯಾಹ್ನದ ಸುಮಾರಿಗೆ ಬೆಂಕಿ ತಗುಲಿದೆ. ಆದರೆ ಇದಕ್ಕೆ ಕಾರಣ ಏನು ಕಾರಣ ಎಂಬುದು ಇನ್ನೂ ಗೊತ್ತಾಗಿಲ್ಲ.

  ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಗಾಯವಾದ ವರದಿಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ಆರಿಸಲು ನಿರಂತರ ಪ್ರಯತ್ನವಾಗುತ್ತಿದೆ. ಸಂಜೆಯಾದರೂ ಬೆಂಕಿಯ ರೌದ್ರತೆ ಕಡಿಮೆಯಾಗಿಲ್ಲ.

  ಇದನ್ನೂ ಓದಿ: ’ಸಿಎಎ’ ವಿರೋಧಿಸಿದ್ದಕ್ಕಾಗಿ ಬಂಗಾಳದ ಜನ ಮಮತಾರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ; ಅಮಿತ್‌ ಶಾ ಸವಾಲು

  ದಿಬ್ರು-ಸೈಖೋವಾ ನ್ಯಾಷನಲ್ ಪಾರ್ಕ್​ನ ಸಮೀಪ ಇರುವ ಬಾಘಜನ್​ನಲ್ಲಿ 2 ವಾರದ ಹಿಂದೆ ಅನಿಲ ಸೋರಿಕೆ ಪ್ರಾರಂಭವಾದ ಬಳಿಕ ಸುತ್ತಮುತ್ತ ವಾಸವಿದ್ದ ಸಾವಿರಾರು ಜನರನ್ನು ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿತ್ತು.

  ಇದೇ ವೇಳೆ, ಅಸ್ಸಾಮ್ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ದೂರವಾಣಿಯಲ್ಲಿ ಮಾತನಾಡಿ ದುರ್ಘಟನೆಯ ವಿವರ ನೀಡಿದ್ದಾರೆ. ಹಾಗೆಯೇ, ಅವಘಡ ಸಂಭವಿಸಿದ ತೈಲಬಾವಿಯ ಬಳಿ ತುರ್ತು ಸೇವಾ ತಂಡಗಳನ್ನ ನಿಯೋಜಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

  First published: