• Home
  • »
  • News
  • »
  • national-international
  • »
  • Alaska: ಭೂಕಂಪಕ್ಕೆ ಅಕ್ಷರಶಃ ನಲುಗಿದ ಅಲಸ್ಕಾ ಜನ! ಜನರ ಉಳಿವಿಗಾಗಿ ಪ್ರಾರ್ಥನೆ

Alaska: ಭೂಕಂಪಕ್ಕೆ ಅಕ್ಷರಶಃ ನಲುಗಿದ ಅಲಸ್ಕಾ ಜನ! ಜನರ ಉಳಿವಿಗಾಗಿ ಪ್ರಾರ್ಥನೆ

ಅಲಸ್ಕಾದಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಅಲಸ್ಕಾದಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಅಲಸ್ಕಾದಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

  • Share this:

ಅಲಸ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತಕ್ಕೆ ಇಡೀ ರಾಷ್ಟ್ರ ಅಕ್ಷರಶಃ ನಲುಗಿದೆ.ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.2ರಷ್ಟು ದಾಖಲಾಗಿದ್ದು, ಸುನಾಮಿ ಸಂಭವಿಸುವ ಸಾಧ್ಯತೆಗಳ ಬಗ್ಗೆ ಅಮೆರಿಕದ ಭೂಗರ್ಭ ಸಮೀಕ್ಷೆ ಇಲಾಖೆ ಎಚ್ಚರಿಕೆ ನೀಡಿದೆ. ಪೆರ್ರಿವಿಲ್ಲೆ ನಗರದಿಂದ 91 ಕಿಲೋ ಮೀಟರ್ ದೂರದಲ್ಲಿ ಸಂಭವಿಸಿದ ಭೂಕಂಪದಿಂದ ಆಸ್ತಿಪಾಸ್ತಿಗಳು ಹಾನಿಗೊಳಗಾಗಿದ್ದು, ಜನರು ಓಡಾಡುವುದೇ ದುಸ್ತರವಾಗಿದೆ. ಹಾಗಾಗಿ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.


ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು ರಾಜ್ಯದ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ತಂದೊಡ್ಡಿದೆ. ಹವಾಯಿಯನ್ ದ್ವೀಪಗಳಿಗೆ ಸುನಾಮಿ ಸಂಭವನೀಯತೆ ಹೆಚ್ಚಿದೆ.
ಅಲಸ್ಕಾದಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ಬಿತ್ತರವಾಗುತ್ತಿದ್ದಂತೆ ಪೆರಿವಿಲ್ಲೆಯ ಜನರು ಎಚ್ಚರದಿಂದ ಇರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಳಜಿಯ ಸಂದೇಶಗಳು ಹರಿದಾಡಿದವು.


ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಸೈರನ್‍ಗಳು, ಭೂಕಂಪಕ್ಕೆ ಮನೆ ನಡುಗಿರುವುದು, ಪೊಲೀಸ್ ಕಾರುಗಳು ಗಸ್ತು ತಿರುಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ದಯವಿಟ್ಟು ಇಲ್ಲಿನ ಜನರ ಉಳಿವಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಎಂಬ ಸಂದೇಶಗಳು ಹರಿದಾಡುತ್ತಿವೆ.


8.2 ಬಲವಾದ # ಭೂಕಂಪವು ಅಲಾಸ್ಕಾದ ಕರಾವಳಿಯನ್ನು ಕಲ್ಲುಗೊಳಿಸಲಿದೆ # ಸುನಾಮಿ ಎಚ್ಚರಿಕೆ. ಅಲಾಸ್ಕಾದ ಜನರಿಗಾಗಿ ಪ್ರಾರ್ಥಿಸಿ. ದೃಢವಾಗಿರಿ. ಪ್ರಾರ್ಥನೆ, "ಎಂದು ಬಳಕೆದಾರರು ಬರೆದಿದ್ದಾರೆ."


#ಅಲಾಸ್ಕಾಗೆ ಪ್ರಾರ್ಥಿಸಿ. ರಿಕ್ಟರ್ ಮಾಪಕದಲ್ಲಿ 8.2 ಅಳತೆಯ ಬಲವಾದ # ಭೂಕಂಪನವು # ಅಲಾಸ್ಕಾದ ಕರಾವಳಿಯನ್ನು ನಡುಗಿಸಿದೆ. #ಸುನಾಮಿ ಎಚ್ಚರಿಕೆ ಎಚ್ಚರಿಕೆ. #ಭೂಕಂಪ ಎಂದು ಮತ್ತೊಬ್ಬರು ಹೇಳಿದರು.


ಅಲಾಸ್ಕಾದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಿರಿ. 8.2 ತೀವ್ರತೆಯ ಬಲವಾದ ಭೂಕಂಪವು ಅಲಾಸ್ಕಾ ಮತ್ತು ಇತರ ಪ್ರದೇಶಗಳನ್ನು ಅಪ್ಪಳಿಸಿದೆ ಎಂದು ಕೇಳಿದಾಗ ತುಂಬಾ ದುಃಖವಾಗಿದೆ. ದೇವರೇ, ದಯವಿಟ್ಟು ಅವರನ್ನು ಸುನಾಮಿಯಿಂದ ರಕ್ಷಿಸಿ ಎಂದು ಬಳಕೆದಾರರು ಬರೆದಿದ್ದಾರೆ.


ಇದನ್ನು ಓದಿ: 1 ಲಕ್ಷ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಐಟಿ ದಿಗ್ಗಜ ಕಾಗ್ನಿಜೆಂಟ್‌

ಭೂಕಂಪದ ಬಗ್ಗೆ ತಮ್ಮಲ್ಲಿ ಉಂಟಾದ ಭಾವನೆ ಬಗ್ಗೆ ವಿವರಿಸಿದ ಬಳಕೆದಾರರು, "ನನ್ನ ಜೀವನದಲ್ಲಿ ನಾನು ಎಂದಿಗೂ ಭೂಕಂಪವನ್ನು ಅನುಭವಿಸಿಲ್ಲ. 7.2 ತೀವ್ರತೆಯ ಭೂಕಂಪ ಇಡೀ ಸಾಗರದಂತೆ ಭಾಸವಾಯಿತು, ನಿಧಾನವಾಗಿ, ನಿರ್ದಾಕ್ಷಿಣ್ಯವಾಗಿ, ನಮ್ಮನ್ನು ಸಂಪೂರ್ಣವಾಗಿ ನುಂಗುತ್ತಿದೆಯೇ ಎನ್ನುವಂತೆ ಭಾಸವಾಯಿತು ಎಂದು ಹೇಳಿದರು.


ಮತ್ತೊಬ್ಬರು ಟ್ವೀಟ್ ಮಾಡಿ, ಇದು 2018ರ ನಂತರ ಉಂಟಾದ ಅತ್ಯಂತ ಭೀಕರವಾದ ಭೂಕಂಪ. ಅಲಸ್ಕಾದ ಜನರಿಗಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.


ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ, ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪಗಳಿಗೆ ಹಿಂಚಿನ್‍ಬ್ರೂಕ್ ಪ್ರವೇಶದಿಂದ ಯುನಿಮಾಕ್ ಪಾಸ್ ವರೆಗೆ ಮತ್ತು ಅಲ್ಯೂಟಿಯನ್ ದ್ವೀಪಗಳಿಗೆ, ಯುನಿಮಾಕ್ ಪಾಸ್ ನಿಂದ ಸಮಲ್ಗಾ ಪಾಸ್ ವರೆಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹವಾಯಿಗೂ ಸಹ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: