ರಾಹುಲ್​​ ಮೂರು ದಿನಗಳ ಕೇರಳ ಪ್ರವಾಸ: ಇಂದಿನಿಂದಲೇ ಸಾರ್ವಜನಿಕರ ಅಹವಾಲು ಸ್ವೀಕಾರ

ಕೇರಳದಲ್ಲಿ ಶೀಘ್ರದಲ್ಲೇ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ರಾಹುಲ್​​ ಗಾಂಧಿ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ ಅಲ್ಲಿನ ಕಾರ್ಯಕರ್ತರಲ್ಲಿ ಹುರುಪು ತುಂಬಲಿದೆ ಎನ್ನಲಾಗುತ್ತಿದೆ.

Ganesh Nachikethu | news18
Updated:June 8, 2019, 2:43 PM IST
ರಾಹುಲ್​​ ಮೂರು ದಿನಗಳ ಕೇರಳ ಪ್ರವಾಸ: ಇಂದಿನಿಂದಲೇ ಸಾರ್ವಜನಿಕರ ಅಹವಾಲು ಸ್ವೀಕಾರ
ರಾಹುಲ್​​ ಗಾಂಧಿ
  • News18
  • Last Updated: June 8, 2019, 2:43 PM IST
  • Share this:
ನವದೆಹಲಿ(ಜೂನ್​​.08): ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಕೇರಳಕ್ಕೆ ಭೇಟಿ ನೀಡಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದ ಮತದಾರರು ಲೋಕಸಭಾ ಚುನಾವಣೆಯಲ್ಲಿ 4.3ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ರಾಹುಲ್ ಅವರನ್ನು ಗೆಲ್ಲಿಸಿದ್ದರು. ಇವರಿಗೆ ಕೃತಜ್ಞತೆ ಸಲ್ಲಿಸಲು ರಾಹುಲ್​​ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಮೂರು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿರುವ ಕಾಂಗ್ರೆಸ್​ ಅಧ್ಯಕರಿಗೆ ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ನಡೆದ ರೋಡ್ ಶೋಗಳಲ್ಲಿ ಜನ ಅಭೂತಪೂರ್ವ ಸ್ವಾಗತ ಕೋರಿದ್ದಾರೆ.

ನಿನ್ನೆ ಶುಕ್ರವಾರವೇ ರಾಹುಲ್​​ ಗಾಂಧಿ ಇಲ್ಲಿನ ಕೋಜಿಕೋಡ್‌ಗೆ ಬಂದಿಳಿದ್ದಾರೆ. ರಾಜ್ಯಕ್ಕೆ ಆಗಮಿಸಿದ್ದ ತಮ್ಮ ನಾಯಕನನ್ನು ಸ್ವಾಗತಿಸಲು ಜನ ಕಿಕ್ಕಿರಿದು ಸೇರಿದ್ದರು. ಎಂದಿನಂತೆಯೇ ಜನರತ್ತ ಕೈಬೀಸುತ್ತಾ ರಾಹುಲ್​​ ರೋಡ್​ ಶೋನಲ್ಲಿ ಭಾಗಿಯಾಗಿದ್ದರು. ಹಾಗೆಯೇ ಮಲ್ಲಪುರಂ ಜಿಲ್ಲೆಯ ಕಲಿಕಾವು ಎಂಬಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇವರು, ಅಲ್ಲಿಯೇ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.

ಇನ್ನು ಕಾರ್ಯಕ್ರಮಕ್ಕಾಗಿ ಜಮಾಯಿಸಿದ್ದ ಅಸಂಖ್ಯಾತ ಕಾರ್ಯಕರ್ತರು ಮತ್ತು ಮಿತ್ರಪಕ್ಷಗಳ ಮುಖಂಡರು ಘೋಷಗಳೊಂದಿಗೆ ರಾಹುಲ್‍ ಗಾಂಧಿಯವರನ್ನು ಸ್ವಾಗತಿಸಿದರು. ರಾಹುಲ್ ಅವರ ಸ್ಪರ್ಧೆಯಿಂದ ಈ ಬಾರಿ ಪಕ್ಷದಲ್ಲಿ ಅತ್ಯುತ್ಸಾಹ ಹೊರ ಹೊಮ್ಮಿತ್ತು. ಇಷ್ಟು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಈವರೆಗೂ ಕಂಡಿಲ್ಲ. ಇದು ನಮ್ಮ ನೆಚ್ಚಿನ ಕಾಂಗ್ರೆಸ್ ಅಧ್ಯಕ್ಷರು ಮುಂದೆ ಪ್ರಧಾನಿ ಆಗಲಿದ್ದಾರೆ ಎಂಬ ಮುನ್ಸೂಚನೆ ನೀಡುತ್ತಿದೆ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ಸಿಗರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಕೇರಳದಲ್ಲಿ ರಾಹುಲ್​​ ಇಂದಿನಿಂದ ಅಬ್ಬರದ ಪ್ರಚಾರ; ಕಾಂಗ್ರೆಸ್​​ ಪರ ಮತಬೇಟೆ

ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್​​ ಹಾಜರಾಗಿದ್ದ ಮೊದಲ ಕಾರ್ಯಕ್ರಮ ಇದಾಗಿದೆ. ಹೀಗೆಯೇ ಭಾನುವಾರದವರೆಗೂ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸದ್ಯದಲ್ಲೇ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಈ ನಡುವೆಯೇ ರಾಹುಲ್​​ ಗಾಂಧಿಯವರು ಇಲ್ಲಿಗೆ ಭೇಟಿ ನೀಡಿರುವುದು, ನಮ್ಮಲ್ಲಿ ಹುರುಪು ತುಂಬಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಎಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.
------------
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ