National Highway: ಗುತ್ತಿಗೆದಾರರ ನಿರ್ಲಕ್ಷ್ಯ: ಹೆದ್ದಾರಿ ನಿರ್ಮಾಣಕ್ಕಾಗಿ ಹಕ್ಕಿಗಳ ಮಾರಣಹೋಮ!

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆ ಗುರುವಾರ ನಡೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ಎಂಬ ನಗರದಿಂದ ವೈರಲ್ ಆಗಿರುವ ವೀಡಿಯೊದಲ್ಲಿ, ನೂರಾರು ಪಕ್ಷಿಗಳು ಮತ್ತು ಅವುಗಳ ಮರಿಗಳು ದೊಡ್ಡ ಹುಣಸೆ ಮರದಡಿ ಸಿಲುಕಿ ಸಾವನ್ನಪ್ಪಿವೆ.

ಹೆದ್ದಾರಿ ನಿರ್ಮಾಣಕ್ಕಾಗಿ ಹಕ್ಕಿಗಳ ಮಾರಣಹೋಮ

ಹೆದ್ದಾರಿ ನಿರ್ಮಾಣಕ್ಕಾಗಿ ಹಕ್ಕಿಗಳ ಮಾರಣಹೋಮ

  • Share this:
ತಿರುವನಂತಪುರಂ(ಸೆ.02): ಕೇರಳದ ಮಲಪ್ಪುರಂ(Kerala's Malappuram District) ಜಿಲ್ಲೆಯ ತಿರುರಂಗಡಿಯಿಂದ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ನಿರ್ಲಕ್ಷ್ಯದಿಂದ ದೊಡ್ಡ ಹುಣಸೆ ಮರವನ್ನು ಕಡಿದು ನೂರಾರು ಪಕ್ಷಿಗಳು ಮತ್ತು ಅವುಗಳ ಮರಿಗಳು ಸಾವನ್ನಪ್ಪಿವೆ. ಸದ್ಯ ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗುತ್ತಿಗೆದಾರರ (Contractors) ನಿರ್ಲಕ್ಷ್ಯದಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆ ಗುರುವಾರ ನಡೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ಎಂಬ ನಗರದಿಂದ ವೈರಲ್ ಆಗಿರುವ ವೀಡಿಯೊದಲ್ಲಿ, ನೂರಾರು ಪಕ್ಷಿಗಳು ಮತ್ತು ಅವುಗಳ ಮರಿಗಳು ದೊಡ್ಡ ಹುಣಸೆ ಮರದಡಿ ಸಿಲುಕಿ ಸಾವನ್ನಪ್ಪಿವೆ.

ಹೌದು ಹಕ್ಕಿಗಳ ಸಮೂಹ ದೊಡ್ಡ ಮರದಲ್ಲಿ ಗೂಡುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದವು. ಆದರೀಗ ಹೆದ್ದಾರಿ ನಿರ್ಮಾಣಕ್ಕಾಗಿ ಈ ಮರವನ್ನು ಧರೆಗುರುಳಿಸಿದ್ದಾರೆ. ಹೀಗಿರುವಾಗ ಏಕಾಏಕಿ ಮರ ಕಡಿದ ಪರಿಣಾಮ ಹಕ್ಕಿಗಳೆಲ್ಲಾ ಮರದ ಟೊಂಗೆಯಡಿ ಸಿಲುಕಿ ಸಾವನ್ನಪ್ಪಿವೆ. ರಸ್ತೆಯೆಲ್ಲಾ ಸತ್ತ ಹಕ್ಕಿಗಳ ರಾಶಿ ಬಿದ್ದಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮರಗಳನ್ನು ಕಡಿಯುವಾಗ ಪಕ್ಷಿಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಒಂದು ನಿರ್ಲಕ್ಷ್ಯ ನೂರಾರು ಪಕ್ಷಿಗಳ ಜೀವ ಹಿಂಡಿತು

ಮಲಪ್ಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ವೇಳೆ ಈ ಘಟನೆ ನಡೆದಿದೆ. ಪಕ್ಷಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅರಣ್ಯ ಇಲಾಖೆ ಅನ್ವಯ ಗುತ್ತಿಗೆದಾರರು ನಿಯಮವನ್ನು ಉಲ್ಲಂಘಿಸಿದ್ದಾರೆ. ನಿಯಮಗಳ ಅನ್ವಯ ಹಕ್ಕಿಗಳ ಮೊಟ್ಟೆಯೊಡೆದು ಮರಿಗಳಾದ ಬಳಿಕವೇ ಮರ ಕಡಿಯಬೇಕು. ಇದರಿಂದ ಮರ ಬೀಳುವ ವೇಳೆ ಅವು ಹಾರುವಷ್ಟು ಸಮರ್ಥವಾಗಿರುತ್ತವೆ.


ಜೆಸಿಬಿ ಚಾಲಕನ ಬಂಧನ

ತಿರುರಂಗಡಿಯ ವಿಕೆ ಪಾಡಿ ಪ್ರದೇಶದಲ್ಲಿ ಈ ಬೃಹತ್ ಮರವನ್ನು ಉರುಳಿಸಲು ಜೆಸಿಬಿ ಯಂತ್ರವನ್ನು ಕರೆಯಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಈ ಮರವನ್ನು ಕಡಿಯಲಾಗಿದೆ ಎಂದು ತಿಳಿದು ಬಂದಿದೆ. ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ.

ಹೆದ್ದಾರಿ ನಿರ್ಮಾಣಕ್ಕಾಗಿ ಹಕ್ಕಿಗಳ ಮಾರಣಹೋಮ


ಮರದ ಕೊಂಬೆಗಳು ಬಿದ್ದು ಪಕ್ಷಿಗಳು ಹೇಗೆ ಸಾವನ್ನಪ್ಪಿವೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮರದ ಮೇಲೆ ಶಿಳ್ಳೆ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಇತರ ಪಕ್ಷಿಗಳು ಗೂಡುಕಟ್ಟಿದ್ದವು. ವೀಡಿಯೊ ಕಾಣಿಸಿಕೊಂಡ ತಕ್ಷಣ, ನೆಟ್ಟಿಗರು ಪಕ್ಷಿಗಳ ಜೀವನದ ಬಗ್ಗೆ ಗಮನ ಹರಿಸದವರ ಮೇಲೆ ಕೋಪಗೊಂಡಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಯಾವುದೇ ಪರ್ಯಾಯ ಮಾರ್ಗಗಳಿಲ್ಲದೆ ಮರವನ್ನು ಕಡಿಯಲಾಯಿತು. ಈ ವಿಚಾರವಾಗಿ ವನ್ಯಜೀವಿ ಪ್ರಿಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರ ಗ್ದ್ಲವೆಬ್ಬಿಸುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.
Published by:Precilla Olivia Dias
First published: