ಮೇರಿ ಕೋಮ್​ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು

ಮೇರಿ ಕೋಮ್​ ಜೊತೆಯಲ್ಲಿ ಇನ್ನ 9 ಮಹಿಳಾ ಆಟಗಾರ್ತಿಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಆಟಗಾರ್ತಿಯರ ಹೆಸರನ್ನು ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿದೆ.

Seema.R | news18-kannada
Updated:September 12, 2019, 12:46 PM IST
ಮೇರಿ ಕೋಮ್​ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು
ಮೇರಿ ಕೋಮ್​- ಪಿವಿ ಸಿಂಧು
  • Share this:
ನವದೆಹಲಿ (ಸೆ.12): ಆರು ಬಾರಿ ಬಾಕ್ಸರ್​ ಚಾಂಪಿಯನ್​​ ಆಗಿರುವ ಮೇರಿ ಕೋಮ್​ಗೆ ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತ ರತ್ನದ ಬಳಿಕ ಅತ್ಯುನ್ನತ್ತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿ ಶಿಫಾರಸ್ಸುಗೊಂಡಿರುವ ಮೊದಲ ಬಾರಿ ಮಹಿಳಾ ಆಟಗಾರ್ತಿ ಇವರಾಗಿದ್ದಾರೆ.

ಮೇರಿ ಕೋಮ್​ ಜೊತೆಯಲ್ಲಿ ಇನ್ನ 9 ಮಹಿಳಾ ಆಟಗಾರ್ತಿಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಆಟಗಾರ್ತಿಯರ ಹೆಸರನ್ನು ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿದೆ.

ವಿಶ್ವ ಚಾಂಪಿಯನ್​ ಆಗಿರುವ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಅವರಿಗೆ ಭಾರತದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

2013ರಲ್ಲಿ ಪದ್ಮ ಭೂಷಣ ಮತ್ತು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಮೇರಿ ಕೋಮ್​ ಭಾಜನರಾಗಿದ್ದರು. ಇನ್ನು ಈ ಬಾರಿ ಏನಾದರೂ ಮೇರಿ ಕೋಮ್​ ಪದ್ಮವಿಭೂಷಣ ಪ್ರಶಸ್ತಿಗೆ ಭಾಜರಾದರೇ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ನಾಲ್ಕನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಈ ಹಿಂದೆ 2007ರಲ್ಲಿ ಚೆಸ್​ ಮಾಂತ್ರಿಕ ವಿಶ್ವನಾಥ್​ ಆನಂದ್​, 2008ರಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​, 2008 ಪರ್ವತಾರೋಹಿ ಸರ್​​ ಎಡ್ಮಂಡ್​ ಹಿಲರಿ ಪದ್ಮ ವಿಭೂಣ ಪ್ರಶಸ್ತಿ ಪಡೆದಿದ್ದರು.

ಇದನ್ನು ಓದಿ: ಇನ್ಮುಂದೆ ಟಿವಿ-ಮೊಬೈಲ್ ಮಾತ್ರವಲ್ಲದೆ ಇದರಲ್ಲೂ ಪ್ರಸಾರವಾಗುತ್ತೆ ಕ್ರಿಕೆಟ್; ಬಿಸಿಸಿಐಯಿಂದ ಹೊಸ ಪ್ರಯತ್ನ

ಇನ್ನು ಪಿವಿ ಸಿಂಧು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜರಾಗಿದ್ದರು.  2017ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧುರನ್ನು ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿತ್ತು ಆದರೆ, ಅವರು ಈ ಪುರಸ್ಕಾರಕ್ಕೆ ಭಾಜನರಾಗಲಿಲ್ಲ.ಗೃಹ ಇಲಾಖೆಯಲ್ಲಿನ ಪದ್ಮ ಪ್ರಶಸ್ತಿ ಸಮಿತಿಗೆ ಈ ಶಿಫಾರಸ್ಸನ್ನು ಕಳುಹಿಸಲಾಗಿದ್ದು, ಗಣರಾಜ್ಯೋತ್ಸವದಂದು ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಗುವುದು.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading