Maruti Suzuki: 2018ರ ಬಳಿಕ ತಯಾರಾದ ಮಾರುತಿ ಸುಜುಕಿ ಕಾರು ನಿಮ್ಮ ಬಳಿ ಇದೆಯೇ? ಹಾಗಾದರೆ ಒಮ್ಮೆ ಈ ಸುದ್ದಿ ಓದಿ

Maruti Suzuki Recall: ಇದು 10 ತಿಂಗಳೊಳಗೆ ಮಾರುತಿ ಸುಜುಕಿ ಎರಡನೇ ಬಾರಿಗೆ ವಾಹನ ಮರುಪಡೆಯುತ್ತಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ, ದೆಹಲಿ ಮೂಲದ ಕಂಪನಿಯು ವಾಹನದ ಹೆಡ್‌ಲ್ಯಾಂಪ್‌ನಲ್ಲಿನ ಸಮಸ್ಯೆಯನ್ನು ಸರಿಪಡಿಸಲು 40,453 ಯೂನಿಟ್ ಕಾರುಗಳನ್ನು ಹಿಂಪಡೆದಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾರುತಿ ಸುಜುಕಿ (Marut i Suzuki) 1,81,754 ಯುನಿಟ್ ಪೆಟ್ರೋಲ್ ಕಾರ್​ಗಳಾದ ಸಿಯಾಜ್, ಎರ್ಟಿಗಾ, ವಿಟಾರಾ ಬ್ರಿಜಾ, ಎಸ್-ಕ್ರಾಸ್, ಮತ್ತು ಎಕ್ಸ್ ಎಲ್ 6 ಗಳನ್ನು (Ciaz, Ertiga, Vitara Brezza, S-Cross, and XL6)  ಮೋಟಾರ್ ಜನರೇಟರ್ ಗಳನ್ನು ಉಚಿತವಾಗಿ ಪರೀಕ್ಷಿಸಿ ಬದಲಿಸಲು ಮತ್ತು ಹಿಂಪಡೆಯುವುದಾಗಿ ಘೋಷಿಸಿದೆ. ಮೇ 4, 2018 ರಿಂದ ಅಕ್ಟೋಬರ್ 27, 2020 ರ ನಡುವೆ ತಯಾರಿಸಲಾದ ವಾಹನಗಳ ಹಾನಿಗೊಳಗಾದ ಭಾಗವನ್ನು ಬದಲಾಯಿಸಲಾಗುವುದು ಎಂದು ಕಂಪನಿ ಹೇಳಿದೆ. 2021 ರ ನವೆಂಬರ್ ಮೊದಲ ವಾರದಿಂದ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

    ಈ ಅವಧಿಯಲ್ಲಿ ತಯಾರಾದ ಕಾರುಗಳನ್ನು ನೀರು ತುಂಬಿರುವ ಪ್ರದೇಶಗಳಲ್ಲಿ ಚಾಲನೆ ಮಾಡದಂತೆ ಕಾರಿನ ಮಾಲೀಕರಿಗೆ ಸಂಸ್ಥೆಯ ಮುಖ್ಯಸ್ಥರು ಸೂಚಿಸಿದ್ದಾರೆ. "ಗ್ರಾಹಕರು ನೀರಿನಿಂದ ತುಂಬಿದ ಪ್ರದೇಶಗಳಲ್ಲಿ ಕಾರು ಚಾಲನೆ ಮಾಡುವುದನ್ನು ತಪ್ಪಿಸಲು ಮತ್ತು ವಾಹನಗಳಲ್ಲಿ ವಿದ್ಯುತ್/ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೇರ ನೀರಿನ ಸಿಂಪಡಣೆ ಮಾಡುವುದನ್ನು ತಪ್ಪಿಸುವಂತೆ ವಿನಂತಿಸಲಾಗಿದೆ" ಎಂದು ಮಾರುತಿ ಸುಜುಕಿ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

    2018ರ ಮೇ 4ರಿಂದ 2020 ಅಕ್ಟೋಬರ್ 27ರವರೆಗೆ ತಯಾರಾದ ಸುಮಾರು 181754 ಕಾರುಗಳನ್ನು ತಪಾಸಣೆ ನಡೆಸಲಾಗುತ್ತದೆ. ಕಂಪನಿ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ. ಹಾನಿಗೊಳಗಾದ ಮಾರುತಿ ಸುಜುಕಿ ಕಾರುಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ವರ್ಕ್​ಶಾಪ್​ಗಳಿಂದ ಪರಿಶೀಲನೆಯ ಮಾಹಿತಿ ಪಡೆಯಲಿದ್ದಾರೆ ಎಂದು ಕಾರು ತಯಾರಕಾ ಸಂಸ್ಥೆ ಹೇಳಿದೆ.

    ಬಾಧಿತ ವಾಹನ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಘಟಕಗಳಿಂದ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಅನುಮಾನಿತ ವಾಹನಗಳ ಮಾಲೀಕರು ವಾಹನದ ಚಾರ್ಸಿ ಸಂಖ್ಯೆಯನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ತಮ್ಮ ವಾಹನವು ಮರುಪಡೆಯುವಿಕೆ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಬಹುದು. ವಾಹನದ ಐಡಿ ಪ್ಲೇಟ್ ಮೇಲೆ ಚಾರ್ಸಿ ಸಂಖ್ಯೆಯನ್ನು ಹಾಕಲಾಗಿದೆ ಮತ್ತು ವಾಹನದ ಇನ್ವಾಯ್ಸ್/ನೋಂದಣಿ ದಾಖಲೆಗಳಲ್ಲಿ ಕೂಡ ನಮೂದಿಸಲಾಗಿದೆ.

    ಇದನ್ನು ಓದಿ: ಹೊಸ Royal Enfield Classic 350 ಬಿಡುಗಡೆ; ನೂತನ ಬೈಕಿನ ವಿನ್ಯಾಸ, ವೈಶಿಷ್ಟ್ಯದ ಬಗ್ಗೆ ಮಾಹಿತಿ ಇಲ್ಲಿದೆ

    ಇದು 10 ತಿಂಗಳೊಳಗೆ ಮಾರುತಿ ಸುಜುಕಿ ಎರಡನೇ ಬಾರಿಗೆ ವಾಹನ ಮರುಪಡೆಯುತ್ತಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ, ದೆಹಲಿ ಮೂಲದ ಕಂಪನಿಯು ವಾಹನದ ಹೆಡ್‌ಲ್ಯಾಂಪ್‌ನಲ್ಲಿನ ಸಮಸ್ಯೆಯನ್ನು ಸರಿಪಡಿಸಲು 40,453 ಯೂನಿಟ್ ಕಾರುಗಳನ್ನು ಹಿಂಪಡೆದಿತ್ತು. ಈ ವಾಹನಗಳನ್ನು ನವೆಂಬರ್ 4, 2019 ಮತ್ತು ಫೆಬ್ರವರಿ 25, 2020 ರ ನಡುವೆ ತಯಾರಿಸಲಾಗಿತ್ತು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: