ಉತ್ಪಾದನೆಗೆ ಚೀನೀ ವಸ್ತುಗಳು ಅಗತ್ಯ; ‘ಬಾಯ್ಕಾಟ್ ಚೀನಾ’ ಬೆಂಬಲಕ್ಕೆ ಮಾರುತಿ, ಬಜಾಜ್ ಸಂಸ್ಥೆ ನಕಾರ

ಚೀನಾದ ವಸ್ತುಗಳಿಗೆ ಆಮದು ಸುಂಕ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಭಾರತೀಯ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಚೀನಾದ ವಸ್ತುಗಳು ವಾಹನ ತಯಾರಿಕೆಗೆ ಅಗತ್ಯವಿವೆ ಎಂದು ಭಾರತೀಯ ವಾಹನ ತಯಾರಕ ಸಂಸ್ಥೆಗಳು ಪ್ರತಿಪಾದಿಸಿವೆ.

ಕಾರು ತಯಾರಿಕೆಯ ಒಂದು ಚಿತ್ರ

ಕಾರು ತಯಾರಿಕೆಯ ಒಂದು ಚಿತ್ರ

  • News18
  • Last Updated :
  • Share this:
ನವದೆಹಲಿ(ಜೂನ್ 15): ಗಡಿಭಾಗದಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಪಾಠ ಕಲಿಸುವ ಉದ್ದೇಶದಿಂದ ಒಂದು ವರ್ಗದ ಜನರಿಂದ ‘ಬಾಯ್ಕಾಟ್ ಚೀನಾ’ ಆಂದೋಲನ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ದರ ಹೆಚ್ಚಿಸಿದೆ. ಆದರೆ, ಈ ಕ್ರಮಗಳಿಗೆ ದೇಶದ ಕೆಲ ಉದ್ಯಮ ವಲಯ ವಿರೋಧ ವ್ಯಕ್ತಪಡಿಸಿವೆ.  ಪ್ರಮುಖ ವಾಹನ ತಯಾರಕ ಸಂಸ್ಥೆಗಳಾದ ಮಾರುತಿ ಸುಜುಕಿ ಮತ್ತು ಬಜಾಜ್ ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಚೀನೀ ವಸ್ತುಗಳ ಅಗತ್ಯತೆಯ ಇರುವುದನ್ನು ಎತ್ತಿತೋರಿಸಿವೆ.

ಚೀನಾದ ವಸ್ತುಗಳಿಗೆ ಆಮದು ಸುಂಕ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಭಾರತೀಯ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಚೀನಾದ ವಸ್ತುಗಳು ವಾಹನ ತಯಾರಿಕೆಗೆ ಅಗತ್ಯವಿವೆ. ವಾಹನ ತಯಾರಕರಿಗಿಂತ ಹೆಚ್ಚಾಗಿ ವಾಹನ ಮಾರಾಟಗಾರರಿಗೆ ಚೀನೀ ಆಮದಿತ ವಸ್ತುಗಳು ಬಹಳ ಅಗತ್ಯತೆ ಇದೆ. ಸರ್ಕಾರ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು ಎಂದು ಮಾರುತಿ ಸುಜುಕಿ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಪ್ರಧಾನ ಮಂತ್ರಿಗಳು ಭಾರತದಲ್ಲಿನ ಉದ್ಯಮಪೂರಕ ವಾತಾವರಣವನ್ನು ಸಾಕಷ್ಟು ಉತ್ತಮಗೊಳಿಸಿದ್ದಾರೆ. ಆದರೆ, ವಿದೇಶಿ ಬಂಡವಾಳ (ಎಫ್​ಡಿಐ) ಹರಿದು ಬರುತ್ತಿಲ್ಲ. ಕಳೆದ 70 ವರ್ಷಗಳಲ್ಲಿ ತಯಾರಿಕಾ ಕ್ಷೇತ್ರದಲ್ಲಿ ಭಾರತಕ್ಕೆ ಯಾವುದೇ ಪ್ರಮುಖ ವಿದೇಶೀ ಬಂಡವಾಳ ಬಂದಿಲ್ಲ. ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸೂಕ್ತವಾದ ನೀತಿ ನಿಯಮಾವಳಿಗಳು ಇಲ್ಲಿಲ್ಲ ಎಂದು ಸಿಎನ್​ಬಿಸಿ-ಟಿವಿ18 ವಾಹಿನಿಗೆ ಮಾರುತಿ ಸುಜುಕಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಕೊರೋನಾ ಅಟ್ಟಹಾಸ; ಜುಲೈ ಅಂತ್ಯಕ್ಕೆ 12 ಲಕ್ಷ ಮುಟ್ಟುವ ಸಾಧ್ಯತೆ

ಇದೇ ವೇಳೆ, ದ್ವಿಚಕ್ರ ವಾಹನ ತಯಾರಕ ಬಜಾಜ್ ಸಂಸ್ಥೆ ಕೂಡ ಭಾರತೀಯ ವಾಹನ ಕ್ಷೇತ್ರಕ್ಕೆ ಚೀನೀ ವಸ್ತುಗಳ ಅಗತ್ಯತೆಯನ್ನು ವಿವರಿಸಿದರು. ಭಾರತೀಯ ವಾಹನ ಕ್ಷೇತ್ರದ ಸಪ್ಲೈ ಚೈನ್ ವ್ಯವಸ್ಥೆಗೆ ಆಮದಿತ ಬಿಡಿಭಾಗಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಬೈಕ್​ಗಳ ಅಲಾಯ್ ವೀಲ್​ಗಳು ಚೀನಾದಿಂದ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಬಜಾಜ್ ಸಂಸ್ಥೆ ಒಂದು ಸಣ್ಣ ಉದಾಹರಣೆ ಮೂಲಕ ಚೀನೀ ವಸ್ತುಗಳ ಅವಶ್ಯಕತೆಯನ್ನು ವಿವರಿಸಿದರು.

ಇದನ್ನೂ ಓದಿ: 9 ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ‌ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರಭಾರತ ಚೀನಾದಿಂದ ಬಹುದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ವಾಣಿಜ್ಯ ಸ್ಥಾಯಿ ಸಮಿತಿಯ 2019ರ ವರದಿ ಪ್ರಕಾರ ಚೀನಾದಿಂದ ಭಾರತ ಆಮದು ಮಾಡಿಕೊಳ್ಳುವ ಪ್ರಮಾಣ 50 ಬಿಲಿಯನ್ ಡಾಲರ್ (ಸುಮಾರು 3.8 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆಯಂತೆ. ಆದರೆ, ಭಾರತದಿಂದ ಚೀನಾಗೆ ಆಗುತ್ತಿರುವ ರಫ್ತು ನಗಣ್ಯವಾಗಿದೆ. ಭಾರತದ ಆಮದು ಮತ್ತು ರಫ್ತು ಮಧ್ಯೆ ಇರುವ ಬಹುದೊಡ್ಡ ಅಂತರದಲ್ಲಿ ಚೀನಾದ ಪಾಲು ದೊಡ್ಡದು.
First published: