ಹುತಾತ್ಮ ಯೋಧನ ನೆನಪು; ತೊದಲು ನುಡಿಯಲ್ಲೇ ಆರ್ಮಿಯನ್ನು ಗುಣಗಾನ ಮಾಡಿದ ವೀರಕನ್ನಡಿಗನ ಮಗಳು..!

ವಿಡಿಯೋದ ಕೊನೆಯಲ್ಲಿ ನೈನಾ ತಾಯಿ ಇದೆಲ್ಲವನ್ನು ಹೇಳಿಕೊಟ್ಟವರು ಯಾರು ಎಂದು ಕೇಳಿದಾಗ, ಮುಗ್ದತೆಯಿಂದ ನನ್ನ ಅಪ್ಪ ಎನ್ನುತ್ತಾಳೆ.

Latha CG | news18
Updated:February 12, 2019, 4:30 PM IST
ಹುತಾತ್ಮ ಯೋಧನ ನೆನಪು; ತೊದಲು ನುಡಿಯಲ್ಲೇ ಆರ್ಮಿಯನ್ನು ಗುಣಗಾನ ಮಾಡಿದ ವೀರಕನ್ನಡಿಗನ ಮಗಳು..!
ತಂದೆ ಜೊತೆ ನೈನಾ
  • News18
  • Last Updated: February 12, 2019, 4:30 PM IST
  • Share this:
ಸೈನಿಕರೆಂದರೆ ಈ ದೇಶದ ಬೆನ್ನೆಲುಬು. ಶತ್ರುಗಳಿಂದ ನಮ್ಮನ್ನು ರಕ್ಷಿಸುವ ರಕ್ಷಕರು. ಹಗಲಿರುಳೆನ್ನದೆ, ಮಳೆ ಬಿಸಿಲೆನ್ನದೆ ತಮ್ಮವರಿಂದ ದೂರ ಉಳಿದು ದೇಶ ಕಾಯುವ ವೀರ ಯೋಧರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಶತ್ರುಗಳ ಎದೆ ಸೀಳುವ ಪರಾಕ್ರಮಿಗಳು. ಇದೆಲ್ಲಾ ಹೇಳೋಕೆ, ಕೇಳೋಕೆ ಅಷ್ಟೆ ಚಂದ. ಆದರೆ ಗಡಿಯಲ್ಲಿ ದೇಶ ಕಾಯುವ ಯೋಧರ ಪಾಡು ಅವರಿಗೆ ಗೊತ್ತು. ಈ ದೇಶಕ್ಕಾಗಿ ಅದೆಷ್ಟು ಮಂದಿ ಸೈನಿಕರು ಪ್ರಾಣ ಕೊಟ್ಟಿದ್ದಾರೋ ಲೆಕ್ಕವಿಲ್ಲ. ಅವರಲ್ಲಿ 2016 ರಲ್ಲಿ ಕನ್ನಡಿಗ ಯೋಧ ಮೇಜರ್ ಅಕ್ಷಯ್​ ಗಿರೀಶ್​ ಶತ್ರುಗಳ ಜೊತೆ ಕಾದಾಡುವಾಗ ಹುತಾತ್ಮರಾಗಿದ್ದರು. ಘಟನೆ ನಡೆದು 3 ವರ್ಷಗಳಾಗಿದೆ. ಈಗ ಯಾಕೆ ಆ ವಿಷಯ ಅಂತೀರಾ..? ಮುಂದೆ ಓದಿ.

ಅಧಿಕಾರಿಗಳಿಗೆ ಭ್ರಷ್ಟಾಚಾರದ ವೈನ್​, ಸೈನಿಕರಿಗೆ ಹಾಳಾದ ವಿಮಾನ; ಮೃತ ಪೈಲಟ್​ ಸಹೋದರನ ಭಾವನಾತ್ಮಕ ಕವಿತೆ

ಮೇಜರ್ ಅಕ್ಷಯ್​ ಗಿರೀಶ್ ಮೃತಪಟ್ಟಾಗ ಅವರು ತಮ್ಮ ಹೆಂಡತಿ ಹಾಗೂ ಎರಡೂವರೆ ವರ್ಷದ ಮಗಳನ್ನು ಅಗಲಿದ್ದರು. ಮಗಳು ನೈನಾಗೆ ಈಗ 6 ವರ್ಷ. ಆಕೆ ತನ್ನ ತಂದೆ ಜೊತೆ ಮಾತನಾಡಿದ್ದ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡು ಮತ್ತೆ ತನ್ನದೇ ತೊದಲು ನುಡಿಯಲ್ಲಿ ಪುನರುಚ್ಚರಿಸಿದ್ದಾಳೆ. ಈ ವಿಡಿಯೋದಲ್ಲಿ ಭಾರತೀಯ ಸೈನ್ಯದ ಬಗ್ಗೆ ಹೆಮ್ಮೆ ಪಡುವ ವಿಷಯವನ್ನು ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.
ಆ ಪುಟ್ಟ ಹುಡುಗಿ ನೈನಾ ತನ್ನ ತೊದಲು ನುಡಿಯಲ್ಲಿಆರ್ಮಿ ಎಂದರೆ.. ಎಂದು ಮಾತು ಆರಂಭಿಸಿದೆ. "ಆರ್ಮಿ ನಮಗೆ ಸಹಾಯ ಮಾಡುತ್ತದೆ. ಆರ್ಮಿ ನಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ. ಆರ್ಮಿ ಎಂದರೆ ಕೆಟ್ಟ ಅಂಕಲ್​ಗಳ ವಿರುದ್ಧ ಹೋರಾಡುವುದು. ಆರ್ಮಿ ನಮ್ಮ ಭಯವನ್ನು ಹೋಗಲಾಡಿಸುತ್ತದೆ". ಎಂದು ಮಾತನಾಡಿದೆ. ವಿಡಿಯೋದ ಕೊನೆಯಲ್ಲಿ ನೈನಾ ತಾಯಿ ಇದೆಲ್ಲವನ್ನು ಹೇಳಿಕೊಟ್ಟವರು ಯಾರು ಎಂದು ಕೇಳಿದಾಗ, ಮುಗ್ದತೆಯಿಂದ 'ನನ್ನ ಅಪ್ಪ' ಎನ್ನುತ್ತಾಳೆ. ಜೊತೆಗೆ ಕೊನೆಯಲ್ಲಿ 'ಜೈಹಿಂದ್​' ಎಂದು ಉದ್ಘರಿಸಿದ್ದಾಳೆ. ಈ ವಿಡಿಯೋವನ್ನು ನೈನಾ ತಾಯಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ಧಾರೆ.

First published:February 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ