HOME » NEWS » National-international » MARS MYSTERIOUS CORE OF MARS HELP NASAS INSIGHT LANDER DATA SUGGESTS STG SCT

Mars: ಮಂಗಳ ಗ್ರಹದಲ್ಲಿ ಭೂಕಂಪ; ಕೋರ್ ಪ್ರಮಾಣ ದಾಖಲಿಸಿದ ಇನ್​ಸೈಟ್ ಲ್ಯಾಂಡರ್

Mars: ನಾಸಾದ ಇನ್​ಸೈಟ್ ಲ್ಯಾಂಡರ್ ಪ್ರಸ್ತುತ ಮಂಗಳನ ಹೃದಯ ಭಾಗದಲ್ಲಿ ಏನೇನಿದೆ ಎನ್ನುವುದನ್ನು ಅಧ್ಯಯನ ಮಾಡಲು ಪ್ರಯತ್ನ ನಡೆಸಿದೆ. ಭೂಕಂಪದ ತೀವ್ರತೆ ಮತ್ತು ಮಂಗಳ ಗ್ರಹದ ವಿಸ್ತಾರವನ್ನು ಆಳವಾಗಿ ತಿಳಿಯಲು ಈ ಸಾಧನವನ್ನು ಬಳಸಲಾಗಿದೆ.

news18-kannada
Updated:March 23, 2021, 12:41 PM IST
Mars: ಮಂಗಳ ಗ್ರಹದಲ್ಲಿ ಭೂಕಂಪ; ಕೋರ್ ಪ್ರಮಾಣ ದಾಖಲಿಸಿದ ಇನ್​ಸೈಟ್ ಲ್ಯಾಂಡರ್
ಮಂಗಳಗ್ರಹ
  • Share this:
ನವದೆಹಲಿ (ಮಾ. 23): ಮಂಗಳ ಗ್ರಹವೆಂದರೆ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮತ್ತು ಖಗೋಳಾಸಕ್ತರಿಗೆ ಹೆಚ್ಚು ಕುತೂಹಲ ಮತ್ತು ಆಕರ್ಷಣೆ. ಮಂಗಳನ ಅಂಗಳದಲ್ಲಿ ಏನೇನಿದೆ ಎನ್ನುವುದನ್ನು ಬೇರೆ ಬೇರೆ ದೇಶಗಳು ಈಗಾಗಲೇ ರೋವರ್​ ಕಳುಹಿಸಿ ಅಧ್ಯಯನ ನಡೆಸುತ್ತಲೇ ಬಂದಿವೆ. ಆದರೆ ಈಗ ಈ ಅಧ್ಯಯನ ಇನ್ನಷ್ಟು ಆಳವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಾಸಾದ ಇನ್​ಸೈಟ್ ಲ್ಯಾಂಡರ್ ಪ್ರಸ್ತುತ ಮಂಗಳನ ಹೃದಯ ಭಾಗದಲ್ಲಿ ಏನೇನಿದೆ ಎನ್ನುವುದನ್ನು ಅಧ್ಯಯನ ಮಾಡಲು ಪ್ರಯತ್ನ ನಡೆಸಿದೆ. ಭೂಕಂಪದ ತೀವ್ರತೆ ಮತ್ತು ಮಂಗಳ ಗ್ರಹದ ವಿಸ್ತಾರವನ್ನು ಆಳವಾಗಿ ತಿಳಿಯಲು ಈ ಸಾಧನವನ್ನು ಬಳಸಲಾಗಿದೆ. ಇದು ನಮ್ಮ ಭೂಮಿಯ ಪಕ್ಕದ ಗ್ರಹದ ಮೇಲೆ ನಡೆದ ಮೊದಲ ಪ್ರಯೋಗವಾಗಿದೆ.

ಇನ್​ಸೈಟ್​ ಲ್ಯಾಂಡರ್ ಮಂಗಳನ​ ಅಂಗಳದಲ್ಲಿ 2018ರಿಂದ ಇದ್ದು, ಇಲ್ಲಿಯವರೆಗೆ ಸುಮಾರು 500 ಭೂಕಂಪಗಳನ್ನು ಪತ್ತೆ ಹಚ್ಚಿದೆ. ಮಂಗಳ ಗ್ರಹದಲ್ಲಿ ಭೂಕಂಪನಗಳು ಸಂಭವಿಸಿದಾಗ, ಕಂಪನದಿಂದ ಮಂಗಳ ಗ್ರಹ ನಡುಗುವಾಗ ಲ್ಯಾಂಡರ್ ಭೂಕಂಪದ ತೀವ್ರತೆಯನ್ನು ಅಳೆಯುತ್ತದೆ . ಮೊದಲು ಅಂಗಳದ ಮೇಲ್ಮೈ ಹತ್ತಿರ ಮತ್ತು ಲ್ಯಾಂಡರ್​ಗೆ ನೇರವಾಗಿ ಬಳಿಗೆ ಚಲಿಸುತ್ತದೆ. ನಂತರ ಡಿಕೆಕ್ಟರ್ಸ್ ತಲುಪುವ ಮೊದಲು ಗ್ರಹದೊಳಗೆ ಬೌನ್ಸ್​ ಆಗುವ ಪ್ರಕ್ರಿಯೆಗಳನ್ನು ಇಟ್ಟುಕೊಂಡು ಭೂ ಕಂಪದ ​ಅಳತೆಯನ್ನು ಅಳೆಯಬಹುದಾಗಿದೆ.

ಡೇಟಾಗಳ ಪ್ರಕಾರ ಈ ತರಂಗಗಳು ಮಂಗಳದ ಬೃಹತ್ ಘನಭಾಗ ಮತ್ತು ಮೇಲ್ಭಾಗದಲ್ಲಿ ಬಿಸಿಯಾದ ಪದರದಲ್ಲಿ ಪುಟಿದೇಳಬಹುದು. ಈ ಸಮಯವನ್ನು ಬಳಸಿಕೊಂಡು ತಂಡವು ಮಂಗಳನ ಕೋರ್ ರೇಡಿಯಸ್ 1810 ರಿಂದ 1860 ಕಿ.ಮೀ ಎಂದು ಲೆಕ್ಕ ಹಾಕಿದೆ. ಜ್ಯುರಿಚ್​ನ ಸ್ವಿಸ್ ಫೆಡರಲ್ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ ಯ ಸೈಮನ್ ಸ್ಟಾಹರ್ ಈ ಅಧ್ಯಯನವನ್ನು ಕೈಗೊಂಡು ವರ್ಚುವಲ್ ಲೂನಾರ್ ಮತ್ತು ಪ್ಲಾನೆಟ್ರಿ ವಿಜ್ಞಾನ ಸಮ್ಮೇಳನದಲ್ಲಿ ಫಲಿತಾಂಶವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Annamalai IPS - ಕರ್ನಾಟಕ ಸಿಂಗಂ ಅಣ್ಣಾಮಲೈ ತಮಿಳುನಾಡಿನ ಡಿಎಂಕೆ ಭದ್ರಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲಬಲ್ಲರಾ?

ಒಟ್ಟಿನಲ್ಲಿ ಈ ಎಲ್ಲಾ ಗ್ರಹಿಕೆಗಳು ಭೂಮಿಯ ಫಲಿತಾಂಶದಂತೆಯೇ ಕಂಡು ಬಂದಿದ್ದು ಈ ಮೊದಲು ಅಂದಾಜು ಮಾಡಿದ್ದಕ್ಕಿಂತ ಫಲಿತಾಂಶ ಅಧಿಕವಾಗಿದೆ. ಈ ಹಿಂದೆ ಊಹಿಸಿಕೊಂಡಿದ್ದಕ್ಕಿಂತ ಅಧಿಕವಾಗಿ ಕೋರ್​ ಆಮ್ಲಜನಕದಂತಹ ಅಂಶಗಳನ್ನು ಹೇರಳವಾಗಿ ಒಳಗೊಂಡಿರಬಹುದು ಎನ್ನುವುದು ಸ್ಟಾಹ್ಲರ್ ಅಭಿಪ್ರಾಯ. ಮಂಗಳನ ಅಂಗಳದಲ್ಲಿ ಧೂಳಿನ ಬಿರುಗಾಳಿ ಮತ್ತು ವೈರುಧ್ಯದ ವಾತಾವರಣವುಂಟಾಗಿದ್ದು, ಇನ್​ಸೈಟ್​ ರಾತ್ರಿಯ ಸಮಯದಲ್ಲಿ ವಾತಾವರಣ ಪೂರಕವಾಗಿದ್ದಾಗ ಈ ಅಂಶಗಳನ್ನು ಪತ್ತೆಹಚ್ಚುವಲ್ಲಿ ಹೆಚ್ಚು ಗ್ರಾಹ್ಯವಾಗಿರುತ್ತದೆ.

ಇನ್ನೂ ಮುಂದಿನ ತಿಂಗಳುಗಳಲ್ಲಿ ಮಂಗಳನ ಅಂಗಳದಲ್ಲಿ ಇನ್ನಷ್ಟು ಭೂಕಂಪನಗಳು ಸಂಭವಿಸುವ ಸಾಧ್ಯತೆ ಇದ್ದು, ಆಗ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬಹುದು ಎಂದು ಸಂಶೋಧನ ತಂಡವು ಭರವಸೆ ಇಟ್ಟಿದೆ.

ಇನ್​ಸೈಟ್​ ಲ್ಯಾಂಡರ್​ ನಾಸಾ ವಿಜ್ಞಾನಿಗಳ ಶ್ರಮವಾಗಿದ್ದು, ಭೂಮಿಯಿಂದ 7 ವರ್ಷಗಳು ಪ್ರಯಾಣಿಸಿ 2018 ರಲ್ಲಿ ಮಂಗಳನ ಅಂಗಳ ಪ್ರವೇಶಿಸಿತ್ತು. ಮಂಗಳ ಗ್ರಹ ಮನುಷ್ಯನ ವಾಸಕ್ಕೆ ಯೋಗ್ಯವಾಗಿದೆಯೇ ಎನ್ನುವ ನಿಟ್ಟಿನಲ್ಲಿ ಮಂಗಳ ಗ್ರಹದ ಮೇಲೆ ನಿರಂತರ ಅಧ್ಯಯನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಇನ್​ಸೈಟ್​ ಲ್ಯಾಂಡರ್​ ಮಂಗಳ ಗ್ರಹದಲ್ಲಿ ಘಟಿಸುವ ಕೌತುಕಗಳು, ಮಂಗಳ ಗ್ರಹ ಹುಟ್ಟಿಕೊಂಡ ಬಗೆ, ಅದರ ಬೆಳವಣಿಗೆ ಎಲ್ಲವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮಂಗಳ ಗ್ರಹ ತಲುಪಿದೆ.

ಇನ್ನೂ 2030 ರ ವೇಳೆಗೆ ಮಂಗಳನ ಅಂಗಳಕ್ಕೆ ಮಾನವನು ಕಾಲಿಡಲು ಸಕಲ ಸಿದ್ಧತೆಗಳನ್ನು ನಡೆಸಲು ಈ ಅಧ್ಯಯನ ನೆರವಿಗೆ ಬರುತ್ತದೆ. ಅಲ್ಲದೇ ಮಂಗಳ ಗ್ರಹದಲ್ಲಿ ಸಂಭವಿಸುವ ಭೂಕಂಪನಗಳ ಬಗ್ಗೆ , ಭೂ ಕಂಪನಗಳು ಸಂಭವಿಸುವ ಮುನ್ನವೇ ಸೂಚನೆ ಸಿಗುವುದು, ಇದೆಲ್ಲದರ ಕಾರಣದಿಂದಲೂ ಇನ್​ಸೈಟ್​ ಬಹುಮುಖ್ಯ ಪಾತ್ರ ವಹಿಸುತ್ತದೆ.
Published by: Sushma Chakre
First published: March 23, 2021, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories