ಮತ್ತೊಂದು ಮದುವೆಯಾಗುತ್ತಾರಾ ಶಶಿ ತರೂರ್​? ಪಾಕ್​ ಪತ್ರಕರ್ತೆ ಟ್ವೀಟ್​ನಲ್ಲಿ ಹೇಳಿದ್ದೇನು?


Updated:August 12, 2018, 7:01 PM IST
ಮತ್ತೊಂದು ಮದುವೆಯಾಗುತ್ತಾರಾ ಶಶಿ ತರೂರ್​? ಪಾಕ್​ ಪತ್ರಕರ್ತೆ ಟ್ವೀಟ್​ನಲ್ಲಿ ಹೇಳಿದ್ದೇನು?

Updated: August 12, 2018, 7:01 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.12): ಕೇರಳದ ತಿರುವನಂತಪುರಂನಿಂದ ಕಾಂಗ್ರೆಸ್​ ಸಂಸದರಾಗಿ ಆಯ್ಕೆಯಾಗಿರುವ ಶಶಿ ತರೂರ್​ ಶೀಘ್ರದಲ್ಲೇ ಪಾಕಿಸ್ತಾನದ ಖ್ಯಾತ ಪತ್ರಕರ್ತೆ ಮೆಹರ್​ ತರಾರ್​ರನ್ನು ಮದುವೆಯಾಗುತ್ತಾರಾ? ಇಂಹುದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಸಾಮಾಜಿಕ ಜಾಲಾತಾಣಗಳಲ್ಲೂ ಅಚಾನಕ್ಕಾಗಿ ಇಂತಹುದ್ದೊಂದು ವಿಚಾರ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ವಿಚಾರದಲ್ಲಿ ತಕ್ಷಣವೇ ಪ್ರತಿಕ್ರಿಯಿಸಿದ ಶಶಿ ತರೂರ್​, ಇದು ಒಂದು ಸುಳ್ಳು ವದಂತಿ ಎಂದು ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ವಾಸ್ತವವಾಗಿ ನಕಲಿ ಟ್ವಿಟರ್​ ಅಕೌಂಟ್​ನಿಂದ ಪಾಕ್​ ಪತ್ರಕರ್ತೆ ಮೆಹರ್​ ತರಾರ್​ ಶೀಘ್ರದಲ್ಲೇ ಶಶಿ ತರೂರ್​ ಜೊತೆ ಮದುವೆಯಾಗುತ್ತಿದ್ದಾರೆಂದು ಟ್ವೀಟ್​ ಮಾಡಲಾಗಿತ್ತು. "ಮದುವೆ ಓಲಗ ಊದಲಾಗುತ್ತದೆ. ಶಶಿ ತರೂರ್​ ಶೀಘ್ರದಲ್ಲೇ ಬಾಸಿಂಗ ಕಟ್ಟಿಕೊಳ್ಳಲಿದ್ದಾರೆ. ಮೆಹರ್​ ತರಾರ್​ ದುಬೈನಲ್ಲಿದ್ದಾರೆ" ಎಂದು ಈ ನಕಲಿ ಅಕೌಂಟ್​ನಿಂದ ಟ್ವೀಟ್ ಮಾಡಲಾಗಿತ್ತು.

ಈ ಟ್ವೀಟ್​ ಗಮನಿಸಿದ ಹಲವರು ಸಾಮಾಜಿಕ ಜಾಲಾತಾಣದಲ್ಲಿ ಮೆಹರ್​ ತರಾರ್​ರನ್ನು ಟ್ರೋಲ್​ ಮಾಡಲಾರಂಭಿಸಿದರು. ಆದರೆ ಮೆಹರ್​ ಇವರೆಲ್ಲರಿಗೂ ಮಾತಿನಿಂದಲೇ ಬಿಸಿ ಮುಟ್ಟಿಸಿದ್ದಾರೆ.

ನಕಲಿ ಅಕೌಂಟ್​ನಿಂದ ಟ್ವೀಟ್​ ಮಾಡಲಾಗಿದ್ದ ಆ ಸಂದೇಶವನ್ನು ರೀ ಟ್ವೀಟ್​ ಮಾಡಿದ ಮೆಹರ್​ ತರಾರ್- ಕೇವಲ 66 ಫಾಲೋವರ್ಸ್​ ಇರುವ ಈ ನಕಲಿ ಅಕೌಂಟ್​ನಿಂದ ಮಾಡಲಾದ ಟ್ವೀಟ್​ ಬಗ್ಗೆ ಜನರು ಪ್ರತಿಕ್ರಿಯಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಂದಿನ ದಿನಗಳಲ್ಲೂ ಒಂದು ವಿಚಾರದ ಕುರಿತಾದ ಸತ್ಯಾಸತ್ಯತೆ ತಿಳಿಯದೆ ಜನರು ಅದನ್ನು ನಂಬುವುದನ್ನು ನೋಡಲು ಬಹಳ ವಿಚಿತ್ರವೆನಿಸುತ್ತದೆ"
ಈ ನಕಲಿ ಅಕೌಂಟ್​ ಕೆಲ ದಿನಗಳ ಹಿಂದಷ್ಟೇ ಮಾಡಲಾಗಿದೆ. ಇನ್ನು ಟ್ವೀಟ್​ ಮಾಡಿದ್ದಂದಿನಿಂದ ಇಂದಿನವರೆಗೆ ಕೇವಲ 11 ಟ್ವೀಟ್​ಗಳನ್ನು ಮಾಡಲಾಗಿದೆ. ಶಶಿ ತರೂರ್​ ಕುರಿತಾಗಿ ಮಾಡಲಾದ ಟ್ವೀಟ್​ ಈ ನಕಲಿ ಅಕೌಂಟ್​ನಿಂದ ಮಾಡಲಾದ ಎರಡನೇ ಟ್ವೀಟ್ ಆಗಿದೆ.
Loading...

ಮೆಹರ್​ ತರಾರ್​ ಟ್ವೀಟ್​ ಬಳಿಕ ಈ ನಕಲಿ ಅಕೌಂಟ್​ ತನ್ನ ಹ್ಯಾಂಡಲ್​ ಬದಲಾಯಿಸಿಕೊಂಡಿದೆ. ಅಲ್ಲದೇ ಬಯೋ ಡಾಟಾದಲ್ಲಿ 'ಸಂಪೂರ್ಣ ನಕಲಿ' ಎಂದೂ ಬರೆದುಕೊಂಡಿದೆ. ಅಲ್ಲದೇ ಈ ಅಕೌಂಟ್​ ಯಾವುದೇ ಸುದ್ದಿ ವಾಹಿನಿ ಹಾಗೂ ಸುದ್ದಿ ತಾಣಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಒಂದು ಸಮಯದಲ್ಲಿ ಶಶಿ ತರೂರ್​ ಹಾಗೂ ಮೆಹರ್​ ತರಾರ್​ ನಡುವಿನ ಗೆಳೆತನ ಭಾರೀ ಸದ್ದು ಮಾಡಿತ್ತು. ಹಲವಾರು ಮಾಧ್ಯಮಗಳು ಶಶಿ ತರೂರ್​ ಹಾಗೂ ಸುನಂದಾ ಪುಷ್ಕರ್​ ನಡುವಿನ ಮನಸ್ತಾಪಕ್ಕೆ ಮೆಹರ್​ ಕಾರಣವೆಂದು ಸುದ್ದಿ ಮಾಡಿದ್ದವು.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ