Wife Murder: ಕತ್ತುಹಿಸುಕಿ ವಿವಾಹಿತ ಮಹಿಳೆಯ ಕೊಲೆ ಶಂಕೆ; ಗಂಡನಿಗಾಗಿ ಬಲೆ ಬೀಸಿರುವ ಪೊಲೀಸರು

ಪ್ರೀತಿಸಿ ವಿವಾಹವಾಗಿದ್ದರೂ ದಂಪತಿಗಳ ನಡುವೆ ಸಾಮರಸ್ಯವಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅದೇ ರೀತಿ ಮುತರಸನ್ ಪತ್ನಿ ಮೀನಾಳನ್ನು ಬಲವಾಗಿ ಸಂಶಯಿಸುತ್ತಿದ್ದನು ಎಂಬುದು ನೆರೆಹೊರೆಯವರಿಂದ ತಿಳಿದುಬಂದಿರುವ ಮಾಹಿತಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕತ್ತುಹಿಸುಕಿ(Strangulation) ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ 25 ರ ಹರೆಯದ ಮೀನಾ ಎಂಬ ಹೆಸರಿನ ಮಹಿಳೆಯ ಪತಿಗಾಗಿ ಇದೀಗ ಪೊಲೀಸರು(Police) ಬಲೆಬೀಸಿದ್ದಾರೆ. ಮಹಿಳೆಯ ಶವ ಶನಿವಾರ ರಾತ್ರಿ ಮಿಂಜೂರ್ ದೇವಸ್ಥಾನ(Temple)ದ ಬಳಿ ದೊರೆತಿದ್ದು ದಾರಿಹೋಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು(Dead body) ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಕೊಲೆಯ ಹಿಂದೆ ಆಕೆಯ ಪತಿ(Husband)ಯ ಕೈವಾಡ ಇರುವುದನ್ನು ಬಲವಾಗಿ ಶಂಕಿಸಿದ್ದಾರೆ.

ಕೊಲೆ ನಡೆಯಲು ಕಾರಣವೇನು?

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ ಮಹಿಳೆಯ ಮೃತದೇಹವು ಮಿಂಜೂರಿನ ಸೆಲ್ಲಿಯಮ್ಮನ್ ದೇವಸ್ಥಾನದ ಬಳಿ ಪತ್ತೆಯಾಗಿದೆ ಮತ್ತು ಆಕೆಯ ಆಭರಣಗಳು ಯಥಾಸ್ಥಿತಿಯಲ್ಲಿವೆ. ಮಹಿಳೆಯ ಸಾವಿನ ನಂತರ ಪತಿ ನಾಪತ್ತೆಯಾಗಿದ್ದು, ಕೊಲೆಯಲ್ಲಿ ಆತನ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚಿನ್ನದ ಆಭರಣಗಳು ಮೀನಾ ದೇಹದಲ್ಲಿ ಯಥಾಸ್ಥಿತಿಯಲ್ಲಿರುವುದರಿಂದ ಆಭರಣಕ್ಕಾಗಿ ಕೊಲೆ ನಡೆಸಿಲ್ಲ ಎಂಬುದು ತಿಳಿದುಬಂದಿದೆ. ಆಕೆಯ ಕುತ್ತಿಗೆಯ ಬಳಿ ಕೈಯಿಂದ ಹಿಸುಕಿರುವ ಅಂಶಗಳು ಪತ್ತೆಯಾಗಿರುವುದರಿಂದ ಆಕೆಯ ಸಾವಿನಲ್ಲಿ ಪತಿಯ ಕೈವಾಡವಿರುವುದಾಗಿ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ:Rape: ಅನ್ಯ ಜಾತಿ ಯುವಕನ ಪ್ರೀತಿ ಮಾಡಿದ್ದಕ್ಕೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ತಂದೆ

ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದೇನು?

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ವಿಚಾರವೆಂದರೆ ಕೊಲೆಯಾದ ಮೀನಾ ಕಲ್ಕತ್ತಾದ ಮುತರಸನ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಮುತರಸನ್ ಚೆನ್ನೈ ಮೂಲದವನಾಗಿದ್ದು ಕಟ್ಟಡ ಕಾಮಗಾರಿಯ ಸ್ಥಳದಲ್ಲಿ ಇವರಿಬ್ಬರಿಗೂ ಪ್ರೀತಿ ಏರ್ಪಟ್ಟು ವಿವಾಹಕ್ಕೆ ನಾಂದಿಯಾಯಿತು ಎಂಬ ಅಂಶ ಬೆಳಕಿಗೆ ಬಂದಿದೆ. ಮೀನಾಳನ್ನು ಭೇಟಿಯಾಗುವ ಸಲುವಾಗಿ ಮುತರಸನ್ ಕಲ್ಕತ್ತಾದಿಂದ ಚೆನ್ನೈಗೆ ಬಂದಿದ್ದನು ಎನ್ನಲಾಗಿದೆ.

ಲವ್​ ಮ್ಯಾರೇಜ್ ಆಗಿದ್ದ ದಂಪತಿ

ಪ್ರೀತಿಸಿ ವಿವಾಹವಾಗಿದ್ದರೂ ದಂಪತಿಗಳ ನಡುವೆ ಸಾಮರಸ್ಯವಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅದೇ ರೀತಿ ಮುತರಸನ್ ಪತ್ನಿ ಮೀನಾಳನ್ನು ಬಲವಾಗಿ ಸಂಶಯಿಸುತ್ತಿದ್ದನು ಎಂಬುದು ನೆರೆಹೊರೆಯವರಿಂದ ತಿಳಿದುಬಂದಿರುವ ಮಾಹಿತಿಯಾಗಿದೆ. ಈ ಕಾರಣಕ್ಕಾಗಿಯೇ ದಂಪತಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿತ್ತು ಹಾಗೂ ಆಗಾಗ್ಗೆ ಜಗಳ ಕೂಡ ನಡೆಯುತ್ತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಮೀನಾ ಕಾಮಗಾರಿಯ ಇತರ ಕೆಲಸಗಾರರೊಂದಿಗೆ ಅತಿಯಾಗಿ ಸಲಿಗೆಯಲ್ಲಿರುವುದು ಹಾಗೂ ಅವರೊಂದಿಗೆ ಮಾತನಾಡುವುದು ಮುತರಸನ್‌ಗೆ ಇಷ್ಟವಾಗುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ. ಇದಕ್ಕಾಗಿ ಪತಿ ಪತ್ನಿಯರಲ್ಲಿ ಜಗಳ ನಡೆಯುತ್ತಿತ್ತು ಹಾಗೂ ವಿಪರೀತ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. ಮೀನಾ ಮೃತದೇಹ ಪತ್ತೆಯಾದ ಸ್ಥಳಕ್ಕೆ ಸಮೀಪವಿರುವ ದೇವಸ್ಥಾನದಲ್ಲಿ ಇವರಿಬ್ಬರೂ ಕೊನೆಯದಾಗಿ ಪರಸ್ಪರ ಮಾತನಾಡಿದ್ದರು ಎಂಬುದಾಗಿ ವರದಿಗಳಿಂದ ತಿಳಿದುಬಂದ ಮಾಹಿತಿಯಾಗಿದೆ. ತಾನು ಹಾಗೂ ಪತಿ ಮುತರಸನ್ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗುವುದಾಗಿ ಮೀನಾ ನೆರೆಹೊರೆಯವರಲ್ಲಿ ತಿಳಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Crime News| ಕಳೆದ 20 ವರ್ಷದಲ್ಲಿ ದೇಶದಲ್ಲಿ 1888 ಲಾಕಪ್​ ಡೆತ್​; ಕೇವಲ 26 ಜನ ಪೊಲೀಸರಿಗೆ ಮಾತ್ರ ಶಿಕ್ಷೆ!

ಮಹಿಳೆಯ ಗಂಡನಿಗಾಗಿ ಹುಡುಕಾಟ

ಮೃತದೇಹವನ್ನು ಪೊನ್ನೇರಿ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಪೊಲೀಸ್ ತಂಡವು ಪತಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಆಕೆಯ ಹತ್ಯೆಯ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಮತ್ತು ಘಟನೆಗೆ ಸಂಬಂಧಿಸಿದಂತೆ ನೆರೆಹೊರೆಯವರು ಮತ್ತು ಕಾರ್ಮಿಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. 
Published by:Latha CG
First published: