ಪಾಟ್ನಾ: ವಿವಾಹಿತ ಮಹಿಳೆಯೊಬ್ಬಳು (Married Women) ತನ್ನ ಪ್ರಿಯಕರನೊಂದಿಗೆ (Lover) ಮನೆಯವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾಳೆ. ಇದರಿಂದ ಎರಡು ಕುಟುಂಬಗಳ ನಡುವೆ ರಂಪಾಟ ನಡೆದಿರುವ ಘಟನೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯಲ್ಲಿ (Rohtas district) ನಡೆದಿದೆ. ಬಿಹಾರದ (Bihar) ಕೈಮೂರ್ ಜಿಲ್ಲೆಯ (Kaimur district) ನಿವಾಸಿಯಾಗಿರುವ ಪ್ರಿಯಕರ ಮಹಿಳೆಯೊಂದಿಗೆ ಸಿಕ್ಕಿಬಿದ್ದ ನಂತರ ಆತನಿಗೆ ಆಕೆಯ ಸಂಬಂಧಿಕರು (Relatives) ಥಳಿಸಲು ಆರಂಭಿಸಿದ್ದಾರೆ. ಈ ವೇಳೆ ಆಕೆ ಪೊಲೀಸರಿಗೆ (Police) ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಿಯಕರನ್ನು ವಶಕ್ಕೆ ಪಡೆದು, ಟಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಮಹಿಳೆ ಖಾರ್ಘರ್ ಪೊಲೀಸ್ ಠಾಣೆ ಮುಂದೆ ಗಂಟೆಗಟ್ಟಲೆ ಹೈ ಡ್ರಾಮಾ ಮಾಡಿದ್ದಾಳೆ.
ಒಂದು ಮಗು ಕೂಡ ಹೊಂದಿರುವ ಮಹಿಳೆ
ಮಹಿಳೆಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಹೀಗಿದ್ದರೂ ಯುವಕನೊಂದಿಗೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಪ್ರಿಯಕರ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾಗ ಇಬ್ಬರ ನಡುವೆ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಇಬ್ಬರ ಮನೆಯವರು ಜಗಳವಾಡಿದ ನಂತರ ಮತ್ತೆ ಮಹಿಳೆ ಪ್ರಿಯಕರನಿಗಾಗಿ ಪೊಲೀಸ್ ಠಾಣೆಯನ್ನು ಹುಡುಕಿಕೊಂಡು ಬಂದಿದ್ದಾಳೆ.
ಠಾಣೆ ಎದುರು ಪ್ರಿಯಕರನ ಕಾರಿಗೆ ಅಡ್ಡ ಹಾಕಿದ್ಲು
ವಿವಾಹೇತರ ಸಂಬಂಧ ಪ್ರಕರಣ ಎಂದು ಪರಿಗಣಿಸಿದ ಪೊಲೀಸರು ಎರಡು ಕುಟುಂಬಸ್ಥರನ್ನು ಪೊಲೀಸ್ ಠಾಣೆಗೆ ಬರುವಂತೆ ಕರೆ ಮಾಡಿ ಸೂಚಿಸಿದರು. ಅದರಂತೆ ಠಾಣೆಗೆ ಪತಿ-ಪತ್ನಿ ಇಬ್ಬರ ಕುಟುಂಬಸ್ಥರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದಾರೆ. ಕೊನೆಗೆ ವಶಕ್ಕೆ ಪಡೆದಿದ್ದ ಪ್ರಿಯಕರನನ್ನು ಪೊಲೀಸರು ಬಿಡುಗಡೆಗೊಳಿಸಿದರು. ನಂತರ ಭಭುವಾಗೆ ಹೊರಡುತ್ತಿದ್ದ ಪ್ರಿಯಕರನ ಕಾರಿಗೆ ಅಡ್ಡ ಹಾಕಿ ಮಹಿಳೆ ರದ್ದಾಂತ ಮಾಡಿದ್ದಾಳೆ.
ಮಹಿಳೆಯನ್ನು ಮನೆಗೆ ವಾಪಸ್ ಕರೆದೊಯ್ಯಲು ಅತ್ತಿಗೆ ನಿರಾಕರಣೆ
ಸುಮಾರು 2 ಗಂಟೆಗಳ ಕಾಲ ಈ ಹೈಡ್ರಾಮಾ ಮುಂದುವರಿಯಿತು. ಕೊನೆಗೆ ಯುವಕನ ಮನೆಯವರು ಆತನನ್ನು ಹೇಗೋ ಅಲ್ಲಿಂದ ಕರೆದುಕೊಂಡು ಹೋದರು. ಇದೇ ವೇಳೆ ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಲು ಆಕೆಯ ಅತ್ತಿಗೆ ನಿರಾಕರಿಸಿದರು. ನಂತರ ಮಹಿಳೆಯ ಪೋಷಕರನ್ನು ಕರೆಸಿ ಪೊಲೀಸರು ಅವರೊಂದಿಗೆ ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.
14ರ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದ 34ರ ಆಂಟಿ
ಈ ಮುನ್ನ ಆಂಧ್ರಪ್ರದೇಶದ ಗುಡುವಾಡ ಪಟ್ಟಣದ ಗುಡ್ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದಳು. ಬಾಲಕ, ಆಂಟಿ ಮೊಬೈಲ್ ಎರಡು ಸ್ವಿಚ್ಛ್ ಆಫ್ ಆಗಿತ್ತು. ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿದ್ದಳು.
ಇದನ್ನೂ ಓದಿ: Crime News: ಪ್ರೀತಿಗೆ ಒಪ್ಪದ ಅಮ್ಮನಿಗೆ ಮುಹೂರ್ತವಿಟ್ಟ ಮಗಳು, ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದಳು!
ನಂತರ ಬಾಲಕನ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ನ್ಯೂಸ್ ಗೊತ್ತಾಯಿತು.
ತನ್ನ ಆಸೆಗೆ ಬಾಲಕನ್ನನ್ನು ಬಳಸಿಕೊಂಡಿದ್ದ ಆಂಟಿ
ಗುಡುವಾಡ ಪಟ್ಟಣದ 34 ವರ್ಷದ ಸ್ವಪ್ನಾ, ಎದುರು ಮನೆಯ 14 ವರ್ಷದ ಬಾಲಕನೊಂದಿಗೆ ಸಂಬಂಧ ಹೊಂದಿದ್ದಳು. ಬಾಲಕನನ್ನು ಮನೆಗೆ ಕರೆಸಿಕೊಂಡು, ಅನೇಕ ಬಾರಿ ಆತನನ್ನು ತನ್ನ ಆಸೆಗೆ ಬಳಸಿಕೊಂಡಿದ್ದಳಂತೆ. ಆತನ ಜೊತೆ ನಿರಂತರವಾದ ಸಂಪರ್ಕ ಹೊಂದಲು, ಬಾಲಕನನ್ನು ಕರೆದುಕೊಂಡು ಓಡಿ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ