ಲಕ್ನೋ: ದಿನೇ ದಿನೇ ದೇಶದಲ್ಲಿ ಅನೈತಿಕ ಸಂಬಂಧ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದಲ್ಲಿ (Uttar Pradesh) ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಮದುವೆಯಾದ ವ್ಯಕ್ತಿಯೋರ್ವ ತನ್ನ ಸಂಸಾರ ಉಳಿಸಿಕೊಳ್ಳಲು ಹೋಗಿ, ಮಾಜಿ ಗೆಳತಿಯ (Girl Friend) ಕತ್ತು ಸೀಳಿ ಹತ್ಯೆಗೈದಿದ್ದಾನೆ. ಆರೋಪಿಯ ಮೊದಲ ಪತ್ನಿ (Wife) ಆತನಿಂದ ದೂರವಾಗಿದ್ದಳು. ಇದಾದ ಬಳಿಕ ಎರಡನೇ ಮದುವೆಯಾಗಿದ್ದ (Marriage), ಹೀಗಿದ್ದರೂ ಹಳೆ ಗರ್ಲ್ಫ್ರೆಂಡ್ ಭೇಟಿಯಾಗುವಂತೆ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಪ್ರಿಯಕರ ಪ್ರೇಯಸಿಯನ್ನೇ (Lover) ಕೊಲೆ (Murder) ಮಾಡಿದ್ದಾನೆ. ಆರೋಪಿಯನ್ನು ಸಿರಾಜ್ ಎಂದು ಗುರುತಿಸಲಾಗಿದ್ದು, ಈ ಘಟನೆ ಬಾಚ್ರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ 1 ರಂದು ಸಲ್ಮಾ ಎಂಬ ಯುವತಿಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸಲ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಸಿರಾಜ್
ನಂತರ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಪಡಿಸಿಕೊಂಡ ಪೊಲೀಸರು, ಆಕೆಯ ಮೊಬೈಲ್ ಫೋನ್, ಸಿಸಿಟಿವಿ ಮತ್ತು ಸಿಡಿಆರ್ ಅನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿರಾಜ್ ಎಂಬ ವ್ಯಕ್ತಿಯ ಹೆಸರು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಮೃತ ಸಲ್ಮಾ ಜೊತೆ ಸಿರಾಜ್ ಅನೈತಿಕ ಸಂಬಂಧ ಹೊಂದಿದ್ದ. ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ಸಿರಾಜ್ ಪರಾರಿಯಾಗಿದ್ದನು.
ಪೊಲೀಸ್ ನೋಡಿ ಓಡಲಾರಂಭಿಸಿದ ಆರೋಪಿಗಳು
ಹೀಗೆ ತಲೆಮರೆಸಿಕೊಂಡಿದ್ದ ಹಂತಕ ಸಿರಾಜ್ ತನ್ನ ಸ್ನೇಹಿತ ಮೊಹರಂ ಬುಧವಾರ ರಾತ್ರಿ ಆಲ್ಟೊ ಕಾರಿನಲ್ಲಿ ಬಚ್ರವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಪ್ರತಿನಿತ್ಯದಂತೆ ಪೊಲೀಸರು ತಪಾಸಣೆ ನಡೆಸುತ್ತಿದ್ದರು.
ನಂತರ ಕಾರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಆಗ ಗಾಬರಿಗೊಂಡ ಇಬ್ಬರೂ ಪೊಲೀಸರನ್ನು ಕಂಡು ಕಾರಿನಿಂದ ಇಳಿದು ಓಡಲಾರಂಭಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದಾರೆ. ನಂತರ ಸಿರಾಜ್ ಮತ್ತು ಆತನ ಸ್ನೇಹಿತ ಇಬ್ಬರ ಕಾಲಿಗೂ ಗುಂಡು ಹಾರಿಸಿದ್ದಾರೆ. ಬಳಿಕ ಇಬ್ಬರನ್ನು ವಶಪಡಿಸಿಕೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ಇಬ್ಬರೂ ಸಲ್ಮಾ ಹಂತಕರು ಎಂದು ತಿಳಿದು ಬಂದಿದೆ.
ಇಬ್ಬರನ್ನು ಮದುವೆಯಾದ್ರೂ ಭೇಟಿಯಾಗುವಂತೆ ಸಲ್ಮಾ ಒತ್ತಾಯ
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸಿರಾಜ್, ಸಲ್ಮಾ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಷ್ಟರಲ್ಲಿ ಮತ್ತೋರ್ವ ಯುವತಿಯನ್ನು ಮದುವೆಯಾದ. ಆದರೆ, ಮದುವೆಯಾದ ಬಳಿಕ ಕೂಡ ಸಿರಾಜ್ ಅನ್ನು ಭೇಟಿಯಾಗುವಂತೆ ಸಲ್ಮಾ ಪೀಡಿಸುತ್ತಿದ್ದಳು.
ಈ ವಿಚಾರ ಆತನ ಪತ್ನಿಗೆ ತಿಳಿದು, ಸಿರಾಜ್ ಜೊತೆಗಿನ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ. ನಂತರ ಸಿರಾಜ್ ಕುಟುಂಬಸ್ಥರು ಆತನಿಗೆ ಮರುಮದುವೆ ಮಾಡಿದ್ದಾರೆ. ಹೀಗಿದ್ದರೂ ಕೂಡ ಸಲ್ಮಾ ಸಿರಾಜ್ನನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದಳು. ಈಗಾಗಲೇ ಸಲ್ಮಾ ಜೊತೆಗಿನ ಅನೈತಿಕ ಸಂಬಂಧದಿಂದಾಗಿ ಮೊದಲ ಪತ್ನಿಯಿಂದ ದೂರವಾಗಿದ್ದ ಸಿರಾಜ್, ಎಲ್ಲಿ ಎರಡನೇ ಪತ್ನಿಯನ್ನು ಕೂಡ ಕಳೆದುಕೊಳ್ಳುತ್ತೇನೋ ಎಂಬ ಭಯದಲ್ಲಿ ಸಲ್ಮಾಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದನು.
ಶವವನ್ನು ಬಾವಿಗೆ ಎಸೆದಿದ್ದ ಪ್ರೇಮಿ
ಪ್ಲ್ಯಾನ್ನಂತೆ ಸಿರಾಜ್ ಆಲ್ಟೊ ಕಾರಿನಲ್ಲಿ ಲಕ್ನೋಗೆ ಹೊರಡುತ್ತಾನೆ. ಹೊಸ ವರ್ಷದಂದು ಹೊಸ ವರ್ಷದ ದಿನದಂದು ಸಲ್ಮಾಳನ್ನು ಕೂಡ ಲಕ್ನೋಗೆ ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಸಿರಾಜ್ ಸಹಚರರಾದ ಮೊಹರಮ್ ಅಲಿ ಮತ್ತು ಅನಿಲ್ ಕೂಡ ಜೊತೆಗಿದ್ದರು. ಮೊದಲಿಗೆ ಸಲ್ಮಾಳನ್ನು ಕತ್ತು ಹಿಸುಕಿ ಸಿರಾಜ್ ಕೊಂದಿದ್ದಾನೆ.
ಇದನ್ನೂ ಓದಿ: Bengaluru: ಪ್ರಿಯಕರನನ್ನು ಸರಿ ದಾರಿಗೆ ತರಲು ಯತ್ನಿಸಿದ್ದೇ ತಪ್ಪಾಯ್ತಾ – ಪ್ರೀತಿಸಿದವಳ ಬೈಕನ್ನೇ ಸುಟ್ಟ ಪಾಗಲ್ ಪ್ರೇಮಿ
ನಂತರ ಬ್ಲೇಡ್ನಿಂದ ಆಕೆಯ ಕತ್ತು ಕೊಯ್ದು ಲಕ್ನೋ ಬಳಿಯ ಬಚ್ರವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾವಿಯೊಂದರಲ್ಲಿ ಶವವನ್ನು ಎಸೆದಿದ್ದಾನೆ. ಇದೀಗ ಪೊಲೀಸರು ಅನಿಲ್ ಎಂಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿರಾಜ್ ಮತ್ತು ಮೊಹರಂ ಅಲಿಯನ್ನು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ