ಸಲಿಂಗ ದಂಪತಿಗಳಿಗೆ ಆಶೀರ್ವಾದದ ಪ್ರಾರ್ಥನೆಗಳನ್ನು (Prayer) ಅನುಮತಿಸುವ ಪ್ರಸ್ತಾಪವನ್ನು ಚರ್ಚ್ (Church) ಆಫ್ ಇಂಗ್ಲೆಂಡ್ ಬೆಂಬಲಿಸಿದೆ. ಒಟ್ಟು 250 ಬಿಷಪ್‌ಗಳು, ಪಾದ್ರಿಗಳು ಪ್ರಸ್ತಾಪವನ್ನು ಬೆಂಬಲಿಸಿದ್ದು, 181 ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಅಂತೆಯೇ ಸೆಂಟ್ರಲ್ ಲಂಡನ್‌ನ (Landan) ಸಿನೊಡ್ ಕೂಟದಲ್ಲಿ ನಡೆದ ಮತದಾನದಲ್ಲಿ 10 ಮಂದಿ ಮತ (Vote) ಚಲಾಯಿಸಲಿಲ್ಲ ಎಂದು ವರದಿಯಾಗಿದೆ. ಲಂಡನ್‌ನಲ್ಲಿ ನಡೆದ ಸಭೆಯಲ್ಲಿ ಎರಡು ದಿನಗಳ ಕಾಲ ಎಂಟು ಗಂಟೆಗಳ ಚರ್ಚೆಯ ನಂತರ ದೇಶಾದ್ಯಂತ ಬಿಷಪ್‌ಗಳು, ಪಾದ್ರಿಗಳು ಮತ್ತು ಸಾಮಾನ್ಯ ಜನರನ್ನು ಒಳಗೊಂಡಿರುವ ಚರ್ಚ್‌ನ ಜನರಲ್ ಸಿನೊಡ್ ಇದನ್ನು ಅನುಮೋದಿಸಿತು.
ಪ್ರಸ್ತಾಪವು ಆರು ವರ್ಷಗಳಿಗಿಂತಲೂ ಅಧಿಕ ಸಮಯದವರೆಗೆ ಚರ್ಚೆಗೆ ಒಳಪಟ್ಟ ವಿಷಯವಾಗಿದ್ದು ಅದಾಗ್ಯೂ ಸಲಿಂಗ ದಂಪತಿಗಳ ವಿವಾಹಗಳಲ್ಲಿ ಆಂಗ್ಲಿಕನ್ ಪಾದ್ರಿಗಳು ಇರುವುದಿಲ್ಲ ಎಂಬ ನಿಯಮವನ್ನು ಬದಲಾಯಿಸುವುದಿಲ್ಲ ಎಂದು ವರದಿಯಾಗಿದೆ. ಈ ನಿಲುವನ್ನು ಅನುಮೋದಿಸುವ ತಿದ್ದುಪಡಿಗೆ ಸಿನೋಡ್ ಸದಸ್ಯರು ಬೆಂಬಲ ನೀಡಿದ್ದು, ಚರ್ಚ್‌ನಲ್ಲಿ ನಾಗರಿಕ ವಿವಾಹಗಳು ಅಥವಾ ನಾಗರಿಕ ಸಂಗಾತಿಗಳಿಗೆ ಆಶೀರ್ವಾದವನ್ನು ನೀಡುವ ಪ್ರಸ್ತಾಪದ ಪರ ಮತ ಚಲಾಯಿಸಿದ್ದಾರೆ.
ಸಮಾನ ಲಿಂಗಿಗಳ ವಿವಾಹಕ್ಕೆ ನಿರ್ಬಂಧ
LGBTQ ಸಮುದಾಯದ ಜನರನ್ನು ಸ್ವಾಗತಿಸಲು ಚರ್ಚ್ ಮುಂದಾಗದೇ ಇರುವುದಕ್ಕೆ ಕ್ಷಮೆಯಾಚನೆಯನ್ನು ಈ ಪ್ರಸ್ತಾಪ ಒಳಗೊಂಡಿದೆ. ವಿವಾಹವು ಒಬ್ಬ ಪುರುಷ ಹಾಗೂ ಮಹಿಳೆಯ ನಡುವೆ ಏರ್ಪಡಬೇಕಾದ ಧಾರ್ಮಿಕ ಸಿದ್ಧಾಂತವಾಗಿದೆ ಎಂಬ ತತ್ವವನ್ನು ಅನುಮೋದಿಸಿದ್ದು, ಸಮಾನ ಲಿಂಗಿಗಳನ್ನು ವಿವಾಹವಾಗುವ ಕ್ರಮವನ್ನು ಪಾದ್ರಿಗಳು ನಿರ್ಬಂಧಿಸಿದ್ದಾರೆ.
ಇದನ್ನೂ ಓದಿ: PUC Exam: ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಮರು ಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚು ಬಂದ್ರೂ ಪರಿಗಣನೆ
ಪ್ರಪಂಚದ ಅನೇಕ ಭಾಗಗಳಲ್ಲಿ ಸಲಿಂಗಿಗಳ ವಿವಾಹಕ್ಕೆ ನಿಷೇಧವಿದೆ
ಲಂಡನ್‌ನ ಬಿಷಪ್ ಸಾರಾ ಮುಲ್ಲಲ್ಲಿ ಅವರು ಬದಲಾವಣೆಗಳಿಗೆ ಸಿನೊಡ್‌ನ ಬೆಂಬಲವನ್ನು ನೀಡಿದೆ. ಬ್ರಿಟನ್ ಮತ್ತು ಅದರಾಚೆಗಿನ ಆಂಗ್ಲಿಕನ್ ಚರ್ಚ್‌ನೊಂದಿಗಿನ ಒಡಕುಗಳನ್ನು ಅಂಗೀಕರಿಸಿದ್ದಾರೆ. 2013 ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸಲಿಂಗ ವಿವಾಹವು ಕಾನೂನುಬದ್ಧವಾಗಿದೆ ಆದರೆ ಕಾನೂನು ಬದಲಾದಾಗ ಚರ್ಚ್ ಮದುವೆಯ ಬೋಧನೆಯನ್ನು ಬದಲಾಯಿಸಲಿಲ್ಲ. ಇತರ ಹಲವಾರು ದೇಶಗಳು ಸಲಿಂಗ ವಿವಾಹ ಹಾಗೂ ಒಕ್ಕೂಟಗಳನ್ನು ಕಾನೂನುಬದ್ಧಗೊಳಿಸಿದ್ದರೂ ಸಲಿಂಗಕಾಮವನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ನಿಷೇಧಿಸಲಾಗಿದೆ.
ಉಪ-ಸಹಾರನ್ ಆಫ್ರಿಕಾ ಹೆಚ್ಚು ಧಾರ್ಮಿಕ ಮತ್ತು ಸಂಪ್ರದಾಯವಾದಿ ರಾಷ್ಟ್ರಗಳನ್ನು ಒಳಗೊಂಡಿದ್ದು, 165 ದೇಶಗಳಲ್ಲಿ 43 ಚರ್ಚುಗಳ ಆಂಗ್ಲಿಕನ್ ಕಮ್ಯುನಿಯನ್ ಅನ್ನು ರೂಪಿಸಲು ನೆರವನ್ನು ನೀಡಿದೆ. ಆಂಗ್ಲಿಕನಿಸಂ ಸುಮಾರು 85 ಮಿಲಿಯನ್ ಸದಸ್ಯರನ್ನು ಹೊಂದಿದೆ ಮತ್ತು ರೋಮನ್ ಕ್ಯಾಥೋಲಿಕ್ ಮತ್ತು ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್‌ಗಳ ನಂತರ ಮೂರನೇ ಅತಿದೊಡ್ಡ ಕ್ರಿಶ್ಚಿಯನ್ ಕಮ್ಯುನಿಯನ್ ಆಗಿದೆ.
ಸಾರ್ವಜನಿಕ ಸಮೀಕ್ಷೆ
ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಗಳು ಇಂಗ್ಲೆಂಡ್‌ನಲ್ಲಿ ಬಹುಪಾಲು ಜನರು ಸಲಿಂಗ ವಿವಾಹವನ್ನು ಬೆಂಬಲಿಸುತ್ತಾರೆ ಎಂದು ತೋರಿಸುತ್ತವೆ.
ಚರ್ಚ್‌ನಲ್ಲಿ ಸಲಿಂಗ ದಂಪತಿಗಳಿಗೆ ಮುಕ್ತ ಸ್ವಾಗತ
ಬಿಷಪ್‌ಗಳು ವಿವಾಹ ಮಾರ್ಗಸೂಚಿಗಳನ್ನು ಬದಲಾಯಿಸಿದ ನಂತರ ಹಾಗೂ ಪಾದ್ರಿಗಳಿಗೆ ಪ್ರಾರ್ಥನೆಗಳನ್ನು ಒದಗಿಸಿದ ನಂತರ ಸಲಿಂಗ ಜೋಡಿಗಳಿಗೆ ಆಶೀರ್ವಚನಗಳು ಈ ವರ್ಷದ ನಂತರ ಆರಂಭವಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಸಲಿಂಗ ದಂಪತಿಗಳನ್ನು ವೈಯಕ್ತಿಕವಾಗಿ ಆಶೀರ್ವದಿಸುವುದಿಲ್ಲ
ಸಲಿಂಗ ದಂಪತಿಗಳನ್ನು ವೈಯಕ್ತಿಕವಾಗಿ ಆಶೀರ್ವದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಿಷಪ್ ವೆಲ್ಬಿ, ಪ್ರಪಂಚದಾದ್ಯಂತದ ಆಂಗ್ಲಿಕನ್ ಕಮ್ಯುನಿಯನ್‌ನ 85 ಮಿಲಿಯನ್ ಸದಸ್ಯರನ್ನು ಒಗ್ಗೂಡಿಸುವುದು ಜವಬ್ದಾರಿಯಾಗಿರುವುದರಿಂದ ಮಾತ್ರವೇ ಪುರೋಹಿತರ ಆಶೀರ್ವಾದಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಷಪ್ ವೆಲ್ಬಿ, ವೆಲ್ಬಿ ಚರ್ಚ್ ಆಫ್ ಇಂಗ್ಲೆಂಡ್ ಮತ್ತು ಜಾಗತಿಕ ಆಂಗ್ಲಿಕನ್ ಚರ್ಚ್ ಎರಡರ ಆಧ್ಯಾತ್ಮಿಕ ನಾಯಕರಾಗಿದ್ದಾರೆ.
ಮೊದಲ ಬಾರಿಗೆ, ಚರ್ಚ್ ಆಫ್ ಇಂಗ್ಲೆಂಡ್ ಸಾರ್ವಜನಿಕವಾಗಿ, ಯಾವುದೇ ನಿಯಂತ್ರಣ ಹೇರದೇ ಮತ್ತು ಸಂತೋಷದಿಂದ ಚರ್ಚ್‌ನಲ್ಲಿ ಸಲಿಂಗ ದಂಪತಿಗಳನ್ನು ಸ್ವಾಗತಿಸುತ್ತದೆ ಎಂದು ವೆಲ್ಬಿ ಚರ್ಚ್‌ನ ನಿರ್ಧಾರವನ್ನು ಅನುಮತಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ