Verdict: ಮಗು ದತ್ತು ಪಡೆಯಲು Marriage Certificate ಬೇಕಿಲ್ಲ- ಅಲಹಾಬಾದ್ ಹೈಕೋರ್ಟ್ ತೀರ್ಪು

ಮಂಗಳಮುಖಿ ರೀನಾ ಅವರ ಮಗು ದತ್ತು ಪಡೆಯುವ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಮಗು ದತ್ತು ಪಡೆಯಲು ವಿವಾಹ ಪ್ರಮಾಣ ಪತ್ರದ ಅಗತ್ಯತೆ ಇಲ್ಲ ಎಂದು ತೀರ್ಪು ನೀಡಿದೆ.

ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್

 • Share this:
  ಅಲಹಾಬಾದ್ ಹೈಕೋರ್ಟ್ (Allahabad High Court), ಮಗುವನ್ನು ದತ್ತು (Child Adopt) ತೆಗೆದುಕೊಳ್ಳಲು ಮದುವೆ ಪ್ರಮಾಣ ಪತ್ರ ( Marriage Certificate) ದ ಅಗತ್ಯತೆ ಇಲ್ಲ ಎಂದು ​ ಹೇಳಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956 ರ ಅಡಿಯಲ್ಲಿ ಒಂಟಿ ಪೋಷಕರೂ (Single Parent) ಕೂಡ ಮಗುವನ್ನು ದತ್ತು ಪಡೆಯಬಹುದು ಎಂದು ತಿಳಿಸಿದೆ. ಮಂಗಳಮುಖಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಾ. ಕೌಶಲ್​ ಜಯೇಂದ್ರ ಠಾಕೆ ಮತ್ತು ನ್ಯಾ. ವಿವೇಕ್​ ವರ್ಮಾರ ಪೀಠ ಈ ತೀರ್ಪು (Verdict) ನೀಡಿದೆ. ಮಗುವನ್ನು ದತ್ತು ತೆಗೆದುಕೊಳ್ಳಲು ಮದುವೆ ಆಗಿರಲೇ ಬೇಕು ಎಂದೆಲ್ಲ ಏನೂ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

  ಮದುವೆ ನಂತರ ಮಗು ದತ್ತು ಪಡೆಯಲು ನಿರ್ಧಾರ

  ಮಗುವನ್ನು ದತ್ತು ತೆಗೆದುಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಿದ್ದ ಮಂಗಳಮುಖಿಯ ಹೆಸರು ರೀನಾ.  ವಾರಣಾಸಿಯ ಅರ್ದಾಲಿ ಬಜಾರ್‌ನ ಮಹಾಬೀರ್ ಮಂದಿರದಲ್ಲಿ 2000ನೇ ಇಸ್ವಿಯ ಡಿಸೆಂಬರ್ 16 ರಂದು ವ್ಯಕ್ತಿಯೊಬ್ಬರನ್ನು ವಿವಾಹವಾದರು. ನಂತರ ದಂಪತಿ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆ ಶುರು ಮಾಡಿದ್ದರು. ಆದರೆ ದತ್ತು ತೆಗೆದುಕೊಳ್ಳಬೇಕು ಎಂದರೆ, ಹಿಂದು ವಿವಾಹ ಕಾಯ್ದೆಯಡಿ ವಿವಾಹ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಲಾಯಿತು.

  ವಿವಾಹ ಸರ್ಟಿಫಿಕೇಟ್​ ಗೆ ಅರ್ಜಿ ಸಲ್ಲಿಸಿದ್ದ ದಂಪತಿ

  ಹೀಗಾಗಿ 2021ರಲ್ಲಿ ದಂಪತಿ ವಾರಾಣಸಿಯ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ವಿವಾಹವನ್ನು ನೋಂದಣಿ ಮಾಡಿ, ಅದರ ಪ್ರಮಾಣ ಪತ್ರ ನೀಡುವಂತೆ ಕೋರಿದ್ದರು. ರೀನಾ ತೃತೀಯಲಿಂಗಿ ಆಗಿದ್ದರಿಂದ ಅವರ ವಿವಾಹವನ್ನು ನೋಂದಾವಣೆ ಮಾಡಲು ಸಾಧ್ಯವಿಲ್ಲ. ವಿವಾಹ ಸರ್ಟಿಫಿಕೇಟ್​ ನೀಡಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

  ಇದನ್ನೂ ಓದಿ: Tamil Nadu ULB Election: ಡಿಎಂಕೆ ಮುನ್ನಡೆ; ಚೆನ್ನೈ ವಾರ್ಡ್​ನಲ್ಲಿ ಕಿರಿಯ ಅಭ್ಯರ್ಥಿಗೆ ಒಲಿದ ಜಯ 

  ಹೈಕೋರ್ಟ್​ ಮೆಟ್ಟಿಲೇರಿದ್ದ ದಂಪತಿ

  ಅದಾದ ನಂತರ ದಂಪತಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ತಮಗೆ ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಅದಕ್ಕೆ ಸಂಬಂಧಪಟ್ಟಂತೆ ವಿವಾಹ​ ಸರ್ಟಿಫಿಕೇಟ್​ ಕೊಡುವಂತೆ ವಾರಾಣಸಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.

  ವಿವಾಹ ಪ್ರಮಾಣ ಪತ್ರದ ಅಗತ್ಯತೆ ಇಲ್ಲ- ಹೈಕೋರ್ಟ್ ತೀರ್ಪು

  ಈಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಹಿಂದು ದತ್ತು ಮತ್ತು ನಿರ್ವಹಣಾ ಕಾಯ್ದೆ 1956ರ ಸೆಕ್ಷನ್​ 7 (ದತ್ತು ತೆಗೆದುಕೊಳ್ಳಲು ಹಿಂದು ಪುರುಷನ ಸಾಮರ್ಥ್ಯ) ಮತ್ತು ಸೆಕ್ಷನ್​ 8 (ದತ್ತು ಸ್ವೀಕರಿಸಲು ಹಿಂದೂ ಮಹಿಳೆಯ ಸಾಮರ್ಥ್ಯ)ಗಳಡಿ ಮಕ್ಕಳನ್ನು ದತ್ತು ಪಡೆಯಲು ವಿವಾಹ ಪ್ರಮಾಣ ಪತ್ರದ ಅಗತ್ಯತೆ ಇಲ್ಲ ಎಂದು ತೀರ್ಪು ನೀಡಿದೆ.

  ಇನ್ನು ಕರ್ನಾಟಕದಲ್ಲಿ 2014ರಲ್ಲಿ ಕೇವಲ 77 ಮಕ್ಕಳನ್ನು ದತ್ತು ಪಡೆಯಲಾಗಿತ್ತು. ಆದರೆ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ 2005ರಲ್ಲಿ ತಂದ ನೂತನ ದತ್ತು ಮಾರ್ಗಸೂಚಿ ಕರ್ನಾಟಕದಲ್ಲಿ ಮಕ್ಕಳ ಭಾಗ್ಯದಿಂದ ವಂಚಿತರಾಗಿದ್ದ ದಂಪತಿಗಳಿಗೆ ವರದಾನವಾಯಿತು. ಮಕ್ಕಳನ್ನು ದತ್ತು ಪಡೆಯಲು ಕೆಲವು ಸಾಮಾನ್ಯ ದಾಖಲೆಗಳು ಮತ್ತು ನಿಯಮಗಳ ಪಾಲನೆ ಅಗತ್ಯವಾಗಿದೆ. ಮಕ್ಕಳನ್ನು ದತ್ತು ಪಡೆಯುವುದರಿಂದ ಅನಾಥ ಮಕ್ಕಳ ಪಾಲನೆಗೆ ಸಹಕಾರಿ.

  ಇದನ್ನೂ ಓದಿ: Pegasus Espionage Case: ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

  ಮಕ್ಕಳನ್ನು ದತ್ತು ತೆಗದುಕೊಳ್ಳುವುದು ಜನಸಂಖ್ಯೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಜೊತೆಗೆ ಅನಾಥ ಮಕ್ಕಳ ಉತ್ತಮ ಭವಿಷ್ಯ ಮತ್ತು ಮಕ್ಕಳ ಅನಾಥ ಭಾವ, ತಂದೆ ತಾಯಿ ಇಲ್ಲ ಎನ್ನುವ ನೋವು ಕಡಿಮೆಯಾಗುತ್ತದೆ. ಮಕ್ಕಳನ್ನು ದತ್ತು ಪಡೆಯುವುದು ಹೆಣ್ಣುಮಕ್ಕಳಲ್ಲಿನ ಬಂಜೆತನವನ್ನು ಕಡಿಮೆ ಮಾಡುತ್ತದೆ. ಬದಲಾದ ಆಹಾರ ಪದ್ಧತಿ ಇನ್ನಿತರೆ ಕಾರ್ಯಗಳಿಂದಾಗಿ ಕೂಡ ಬಂಜೆತನದ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಮಾಡಿಕೊಳ್ಳುವುದರಲ್ಲಿ ವಿಚ್ಛೇದನ, ವಿವಾಹ ವಿಳಂಬ, ನಾನಾ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡವರು, ಸಮಯ ಮುಂದೂಡಿಕೆ, ಆಧುನಿಕ ಜೀವನ ಶೈಲಿಯೂ ಬಂಜೆತನ ಸಮಸ್ಯೆಗೆ ಕಾರಣವಾಗಿದೆ.
  Published by:renukadariyannavar
  First published: