ಬಜೆಟ್ ಮಂಡನೆಯಾಗುತ್ತಿರುವಂತೆಯೇ ಚೇತರಿಕೆ ಕಂಡ ಸೆನ್ಸೆಕ್ಸ್; 114 ಅಂಕ ಹೆಚ್ಚಳ

Budget 2020 - Indian Stock Market - ಟೆಕ್ ಮಹೀಂದ್ರ, ಪವರ್​ಗ್ರಿಡ್, ಟಾಟಾ ಸ್ಟೀಲ್, ಎನ್​ಟಿಪಿಸಿ, ಕೋಟಕ್ ಬ್ಯಾಂಕ್, ಹೆಚ್​ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗಿವೆ. ಹಿಂದೂಸ್ತಾನ್ ಯೂನಿಲಿವರ್ ಲಿ, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ಮುಂಬೈ(ಫೆ. 01): ವಾರಾಂತ್ಯವೆನಿಸಿರುವ ಶನಿವಾರ ಮತ್ತು ಭಾನುವಾರ ಬಾಗಿಲು ಬಂದ್ ಆಗುವ ಷೇರುಪೇಟೆ ಇವತ್ತು ಬಜೆಟ್ ಮಂಡನೆ ಇರುವ ಹಿನ್ನೆಲೆಯಲ್ಲಿ ವಹಿವಾಟು ನಡೆದಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸುವ ಮುನ್ನವೇ ಇವತ್ತಿನ ಬೆಳಗಿನ ವಹಿವಾಟಿನಲ್ಲಿ 279 ಅಂಕ ಕಳೆದುಕೊಂಡಿದ್ದ ಸೆನ್ಸೆಕ್ಸ್ ನಂತರದ ಅವಧಿಯಲ್ಲಿ ಚೇತರಿಕೆ ಕಂಡು 100ಕ್ಕೂ ಹೆಚ್ಚು ಅಂಕ ಹೆಚ್ಚಳ ಕಂಡಿದೆ.

ನಿನ್ನೆ ಬೆಳಗ್ಗೆ ಉತ್ತಮ ಆರಂಭ ಕಂಡಿದ್ದ ಷೇರುಪೇಟೆ ದಿನಾಂತ್ಯದ ವೇಳೆಗೆ ಇಳಿಕೆ ಕಂಡಿತ್ತು. ಇವತ್ತು ಹಿನ್ನಡೆಯಿಂದಲೇ ಷೇರುಪೇಟೆ ಆರಂಭಗೊಂಡಿದೆ. ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ನಿಫ್ಟಿ ಬರೋಬ್ಬರಿ 200ಕ್ಕೂ ಹೆಚ್ಚು ಪಾಯಿಂಟ್ಗಳನ್ನು ಕಳೆದುಕೊಂಡಿತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 279 ಅಂಕ ಕಳೆದುಕೊಂಡಿತು. ಕೆಲ ಹೊತ್ತಿನ ಬಳಿಕ ಚೇತರಿಕೆ ಕಾಣತೊಡಗಿತು.

 

ಇದನ್ನೂ ಓದಿ: ನೋಟ್​ಬ್ಯಾನ್, ಜಿಎಸ್​​ಟಿಯಿಂದ ತಾತ್ಕಾಲಿಕ ತೊಂದರೆ ಆಗಿದೆಯೇ ವಿನಃ ದೂರದೃಷ್ಟಿಯಿಂದ ಉತ್ತಮ ಕ್ರಮ: ಐಎಂಎಫ್

ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಪ್ರಾರಂಭಕ್ಕೆ ಮುನ್ನ, ಸೆನ್ಸೆಕ್ಸ್ 114.73 ಅಂಕ ಹೆಚ್ಚಿಸಿಕೊಂಡು 40,838ರ ಮಟ್ಟ ತಲುಪಿತು. ನಿಫ್ಟಿ ಸೂಚ್ಯಂಕ ಕೂಡ 36 ಅಂಕಗಳಷ್ಟು ಲಾಭ ಮಾಡಿಕೊಂಡು 11,998 ಮಟ್ಟ ತಲುಪಿದೆ.

ಎಫ್ಎಂಸಿಜಿ, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ ಕ್ಷೇತ್ರಗಳ ಸಂಸ್ಥೆಗಳು ಇವತ್ತು ಲಾಭ ಮಾಡಿಕೊಂಡಿವೆ. ಹಿಂದೂಸ್ತಾನ್ ಯೂನಿಲಿವರ್ ಲಿ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಮಾರುತಿ, ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ.
ಟೆಕ್ ಮಹೀಂದ್ರ, ಪವರ್ಗ್ರಿಡ್, ಟಾಟಾ ಸ್ಟೀಲ್, ಎನ್ಟಿಪಿಸಿ, ಕೋಟಕ್ ಬ್ಯಾಂಕ್, ಹೆಚ್ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ತುಸು ಕಡಿಮೆ ಬೆಲೆಗೆ ಬಿಕರಿಯಾಗಿವೆ.
ಷೇರುಪೇಟೆಯಲ್ಲಿ ಬೆಳಗಿನ ಅಲುಗಾಟಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಬಜೆಟ್ನಲ್ಲಿ ವಿತ್ತೀಯ ಕೊರತೆಯ ಗುರಿಯಲ್ಲಿ ಇರಿಸಲಾಗಿದ್ದ ಮಿತಿಯನ್ನು ಹೆಚ್ಚಿಸುವ ಸೂಚನೆ ಸಿಕ್ಕಿತ್ತು. ಇದು ವಿತ್ತೀಯ ಶಿಸ್ತಿಗೆ ಧಕ್ಕೆಯಾಗುತ್ತದೆಂಬ ಭಯದಲ್ಲಿ ಕೆಲ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆದುಕೊಂಡಿದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ನಿನ್ನೆ ಬೆಳಗ್ಗೆ ಉತ್ತಮವಾಗಿ ಆರಂಭಗೊಂಡಿದ್ದ ಸೆನ್ಸೆಕ್ಸ್, ಇದೇ ಕಾರಣಕ್ಕೆ ನಿನ್ನೆ ದಿನಾಂತ್ಯದೊಳಗೆ ಹೆಚ್ಚೂಕಡಿಮೆ 200 ಅಂಕಗಳನ್ನು ಕಳೆದುಕೊಂಡಿತ್ತು.

ಹಾಗೆಯೇ, ಚೀನಾದ ಕೊರೊನಾ ವೈರಸ್ ನಿರೀಕ್ಷಿಸಿದ್ದಕ್ಕಿಂತಲೂ ಅಪಾಯಕಾರಿ ಪರಿಣಮಿಸುವ ಸೂಚನೆ ಇದೆ. ಇದರಿಂದ ವಿಶ್ವಾದ್ಯಂತ ಆರ್ಥಿಕತೆಗೆ ಧಕ್ಕೆಯಾಗಬಹುದು ಎಂಬ ಭೀತಿಯೂ ಇದೆ. ಈ ಕಾರಣಕ್ಕೆ ವಿಶ್ವಾದ್ಯಂತ ಷೇರುಪೇಟೆ ಹಿನ್ನಡೆ ಸಾಧಿಸಿದೆ. ಭಾರತದಲ್ಲೂ ಕೆಲ ಕಂಪನಿಗಳ ಷೇರು ಕೊರೊನಾ ವೈರಸ್ನಿಂದಾಗಿ ಹಿನ್ನಡೆ ಹೊಂದಿರಬಹುದು ಎನ್ನಲಾಗುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: