ಫೇಸ್ಬುಕ್​ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈಗ ವಿಶ್ವದ 3ನೇ ಶ್ರೀಮಂತ


Updated:July 7, 2018, 3:38 PM IST
ಫೇಸ್ಬುಕ್​ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈಗ ವಿಶ್ವದ 3ನೇ ಶ್ರೀಮಂತ

Updated: July 7, 2018, 3:38 PM IST
-ನ್ಯೂಸ್ 18

ನವದೆಹಲಿ(ಜು.07): ಫೇಸ್ಬುಕ್ ಸಹ ಸಂಸ್ಥಾಪಕ ಮತ್ತು ಸಿಇಓ ಮಾರ್ಕ್ ಜುಕರ್ ಬರ್ಗ್ ವಿಶ್ವದ 3ನೇ ಅತಿ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ಧಾರೆ. ಅಮೆರಿಕದ ಉದ್ಯಮ ಕ್ಷೇತ್ರದ ದಿಗ್ಗಜ ವಾರೆನ್ ಬಫೆಟ್ ಅವರನ್ನ ಹಿಂದಿಕ್ಕಿ ಜುಕರ್ ಬರ್ಗ್ ಈ ಸ್ಥಾನ ಅಲಂಕರಿಸಿದ್ದಾರೆ. ಇದೀಗ, ಜುಕರ್ ಬರ್ಗ್ 81.6 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯ ಒಡೆಯ ಎಂದು ಬ್ಲೂಬರ್ಗ್ ಮಾಡಿದೆ.

ಅಮೆಜಾನ್ ಡಾಟ್ ಕಾಮ್ ಸಂಸ್ಥಾಪಕ ಜೆಫ್ ಬೆಜೋಸ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೆಟ್ಸ್ 2ನೇ ಸ್ಥಾನದಲ್ಲಿದೆ. ಬ್ಲೂಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಶುಕ್ರವಾರ ಫೇಸ್ಬುಕ್ ಷೇರುಗಳ ಪ್ರಮಾಣ 2.6ರಷ್ಟು ಏರಿಕೆ ಕಂಡಿರುವುದೇ ಇದಕ್ಕೆ ಕಾರಣ. ಇದೇ ವರ್ಷದಲ್ಲಿ ಫೇಸ್ಬುಕ್ ಷೇರುಗಳ ಪ್ರಮಾಣ ಶೇ.15ರಷ್ಟು ಏರಿಕೆ ಕಂಡಿದೆ.

ರಾಜಕೀಯ ತಂತ್ರಗಾರಿಕೆಯ ಕಂಪನಿ ಕೇಂಬ್ರಿಡ್ಜ್ ಅನಾಲಿಟಿಕಾಗೆ ಬಳಕೆ್ದಾರರ ಮಾಹಿತಿ ಸೋರಿಕೆ ಆರೋಪದ ಬಳಿಕ ಮಾರ್ಚ್​ನಲ್ಲಿ ಕುಸಿದಿದ್ದ ಫೇಸ್ಬುಕ್ ಷೇರು ಪ್ರಮಾಣ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ರಷ್ಯಾದ ಪೋಸ್ಟ್​ಗಳು ಮತ್ತು ಅಮೆರಿಕದ ಚುನಾವಣೆಯ ಉದ್ದೇಶಿತ ಜಾಹೀರಾತಿಗಳಿಗೆ ವೇದಿಕೆ ಕಲ್ಪಿಸಿದ್ದರಿಂದ ಭಾರೀ ಟೀಕೆಗೆ ಕಾರಣವಾಗಿತ್ತು. ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಿದ ಆರೋಪಕ್ಕೆ ತುತ್ತಾಗಿತ್ತು.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂತ್ರಜ್ಞಾನ  ಕ್ಷೇತ್ರದ ಕಂಪನಿಗಳು ಟಾಪ್ 3 ಸ್ಥಾನಗಳನ್ನ ಅಲಂಕರಿಸಿವೆ. ವಿಶ್ವದ ಶ್ರೀಮಂತರ ಇಂಡೆಕ್ಸ್​ನಲ್ಲಿ ಟೆಕ್ ಕಂಪನಿಗಳ ಆಸ್ತಿಯೇ ಶೇ.20ರಷ್ಟು ಅಂದರೆ 5 ಟ್ರಿಲಿಯನ್ ಡಾಲರ್​​ನಷ್ಟು ಇದೆ. ಬೇರೆಲ್ಲ ಉದ್ಯಮಕ್ಕಿಂತಲೂ ಇದು ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಟಾಪ್ 10 ಶ್ರೀಮಂತರ ಪೈಕಿ 6 ಮಂದಿಯ ಆದಾಯ ತಂತ್ರಜ್ಞಾನ ಕ್ಷೇತ್ರದಿಂದಲೇ ಬರುತ್ತಿದೆ ಎಂಬುದು ಮತ್ತೊಂದು ವಿಶೇಷ.

 

 
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ