Margaret Alva: ಮಾಜಿ ಕೇಂದ್ರ ಸಚಿವೆಗೆ ಮಣೆ, ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವಾ

ಮಾಜಿ ಕೇಂದ್ರ ಸಚಿವೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷಗಳ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ ನವದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ಮಹತ್ವದ ಸಭೆಯಲ್ಲಿ ಮಾರ್ಗರೇಟ್ ಆಳ್ವ ಅವರ ಹೆಸರನ್ನು ಹಿರಿಯ ರಾಜಕಾರಣಿ, ಎನ್‌ಸಿಪಿ ನಾಯಕ ಶರದ್ ಪವಾರ್ ಘೋಷಣೆ ಮಾಡಿದರು.

ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ

ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ

  • Share this:
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ (Term) ಜುಲೈ 24ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಚುನಾವಣೆ (Presidential Election) ನಡೆಯಲಿದೆ. ಬುಡಕಟ್ಟು ಸಮುದಾಯದ ನಾಯಕಿ (tribal community leader) ದ್ರೌಪದಿ ಮುರ್ಮು (Draupadi Murmu) ಹಾಗೂ ಮಾಜಿ ಕೇಂದ್ರ ಸಚಿವ (Ex Central Minister) ಯಶ್ವಂತ್ ಸಿನ್ಹಾ (Yashwanth Sinha) ಕಣದಲ್ಲಿದ್ದು, ಇಂದು ಚುನಾವಣೆ ನಡೆಯಲಿದೆ. ಮತ್ತೊಂದೆಡೆ ಉಪ ರಾಷ್ಟ್ರಪತಿ ಚುನಾವಣೆ (Vice Presidential Election) ಆಗಷ್ಟ್ 6ರಂದು ನಡೆಯಲಿದೆ. ಈಗಾಗಲೇ ಕೇಂದ್ರದ ಆಡಳಿತಾರೂಢ ಎನ್‌ಡಿಎ (NDA) ತಮ್ಮ ಅಭ್ಯರ್ಥಿಯನ್ನಾಗಿ (Candidate) ಪಶ್ಚಿಮ ಬಂಗಾಳದ ರಾಜ್ಯಪಾಲ (West Bengal Governor) ಜಗದೀಪ್ ಧನಕರ್‌ (Jagdeep Dhankar) ಅವರನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು. ಈ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ವಿಪಕ್ಷಗಳು ಮಾಜಿ ಕೇಂದ್ರ ಸಚಿವೆಗೆ ಮಣೆ ಹಾಕಿದ್ದು, ಮಾರ್ಗರೇಟ್ ಆಳ್ವಾ (Margaret Alva) ಅವರು ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

 ಮಾಜಿ ಕೇಂದ್ರ ಸಚಿವೆಗೆ ಮಣೆ

ಮಾಜಿ ಕೇಂದ್ರ ಸಚಿವೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷಗಳ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ ನವದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ಮಹತ್ವದ ಸಭೆಯಲ್ಲಿ ಮಾರ್ಗರೇಟ್ ಆಳ್ವ ಅವರ ಹೆಸರನ್ನು ಹಿರಿಯ ರಾಜಕಾರಣಿ, ಎನ್‌ಸಿಪಿ ನಾಯಕ ಶರದ್ ಪವಾರ್ ಘೋಷಣೆ ಮಾಡಿದರು.



ನಾಳೆ ನಾಮಪತ್ರ ಸಲ್ಲಿಕೆ

17 ಪಕ್ಷಗಳು ಈ ಸರ್ವಾನುಮತದ ನಿರ್ಧಾರಕ್ಕೆ ಬಂದಿವೆ. ನಮ್ಮ ಒಮ್ಮತದ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ನಾಳೆ ಅಂದರೆ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ" ಅಂತ ಶರದ್ ಪವಾರ್ ಹೇಳಿದ್ದಾರೆ. 80ರ ಹರೆಯದ ಮಾರ್ಗರೇಟ್ ಆಳ್ವಾ ಅವರು ಜುಲೈ 19 ಮಂಗಳವಾರದಂದು ನಾಮಪತ್ರ ಸಲ್ಲಿಸಲಿದ್ದು, ಆಗಸ್ಟ್ 6ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಇದನ್ನೂ ಓದಿ: Vice Presidential Election: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಜಗದೀಪ್ ಧನಕರ್‌, ವಿಪಕ್ಷಗಳಿಂದ ಹುರಿಯಾಳು ಯಾರು?

ನಿನ್ನೆಯ ಸಭೆಯಲ್ಲಿ ಪ್ರಮುಖ ನಾಯಕರು ಉಪಸ್ಥಿತಿ

ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ ಮತ್ತು ಬಿನೋಯ್ ವಿಶ್ವಂ, ಶಿವಸೇನೆಯ ಸಂಜಯ್ ರಾವುತ್, ಡಿಎಂಕೆಯ ಟಿಆರ್ ಬಾಲು ಮತ್ತು ತಿರುಚಿ ಶಿವ, ಎಸ್‌ಪಿಯ ರಾಮ್ ಗೋಪಾಲ್ ಯಾದವ್, ಎಂಡಿಎಂಕೆಯ ವೈಕೊ ಮತ್ತು ಟಿಆರ್‌ಎಸ್‌ನ ಕೆ. ಕೇಶವ ರಾವ್. ಆರ್‌ಜೆಡಿಯ ಎಡಿ ಸಿಂಗ್, ಐಎಂಯುಎಲ್‌ನ ಇಟಿ ಮೊಹಮ್ಮದ್ ಬಶೀರ್ ಮತ್ತು ಕೇರಳ ಕಾಂಗ್ರೆಸ್ (ಎಂ)ನ ಜೋಸ್ ಕೆ ಮಣಿ ಕೂಡ ನಿನ್ನೆಯ ಸಭೆಯಲ್ಲಿ ಉಪಸ್ಥಿತರಿದ್ದರು.

“ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದು ಗೌರವ ತಂದಿದೆ”

 ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ನನಗೆ ಸಂದ ವಿಶೇಷ ಗೌರವವಾಗಿದೆ ಎಂದು ಮಾರ್ಗರೇಟ್ ಆಳ್ವಾ ಪ್ರತಿಕ್ರಿಯಿಸಿದ್ದಾರೆ. 'ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ವಿಶೇಷ ಗೌರವವಾಗಿದೆ. ನನಗೆ ಸಿಕ್ಕಿರುವ ಅವಕಾಶವನ್ನು ವಿನಯದಿಂದ ಸ್ವೀಕರಿಸುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗಾಗಿ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ಮಾರ್ಗರೇಟ್ ಆಳ್ವಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Jagdeep Dhankhar: ದೀದಿ ಕಾಡಿದ ಗವರ್ನರ್ ಉಪರಾಷ್ಟ್ರಪತಿ ಆಗ್ತಾರಾ? ಜಗದೀಪ್ ಧನಕರ್ ಬಗ್ಗೆ ಇಲ್ಲಿದೆ ಮಾಹಿತಿ

 ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿಯಾದ ಜಗದೀಪ್ ಧನಕರ್‌

ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಜಗದೀಪ್ ಧನಕರ್ ಅವರ ಉಮೇದುವಾರಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ ಘೋಷಿಸಿದ್ದಾರೆ. ಬಿಜೆಪಿ ಹಾಗೂ ಮಿತ್ರಪಕ್ಷಗಳ ಎಲ್ಲ ಪರಿಗಣನೆಗಳು ಮತ್ತು ಸಮಾಲೋಚನೆಗಳ ಬಳಿಕ, ನಾವು ಜಗದೀಪ್ ಧನಕರ್ ಅವರನ್ನು ಉಪ ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲು ನಿರ್ಧರಿಸಿದ್ದೇವೆ ಎಂದಿರುವ ಜೆಪಿ ನಡ್ಡಾ, ಜಗದೀಪ್ ಧನಕರ್ ಅವರನ್ನು ರೈತನ ಮಗ ಅ್ಂತ ಕರೆದಿದ್ದಾರೆ.
Published by:Annappa Achari
First published: